AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಲಾರ್ಡ್ಸ್‌ನಲ್ಲಿ ಬುಮ್ರಾ ಬಿರುಗಾಳಿಗೆ ತತ್ತರಿಸಿದ ಇಂಗ್ಲೆಂಡ್‌; 387 ರನ್​ಗಳಿಗೆ ಆಲೌಟ್

India vs England, Lords Test: ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ 387 ರನ್ ಗಳಿಸಿ ತನ್ನ ಮೊದಲ ಇನ್ನಿಂಗ್ಸ್ ಅನ್ನು ಮುಗಿಸಿತು. ತಂಡದ ಪರ ಜೋ ರೂಟ್ ಶತಕ ಮತ್ತು ಜೇಮಿ ಸ್ಮಿತ್ ಹಾಗೂ ಬ್ರೆಂಡನ್ ಕಾರ್ಸೆ ಅರ್ಧಶತಕ ಗಳಿಸಿದರು. ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ 5 ವಿಕೆಟ್‌ಗಳನ್ನು ಪಡೆದು ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ನಿತೀಶ್ ರೆಡ್ಡಿ ಮತ್ತು ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್‌ಗಳನ್ನು ಪಡೆದರು.

IND vs ENG: ಲಾರ್ಡ್ಸ್‌ನಲ್ಲಿ ಬುಮ್ರಾ ಬಿರುಗಾಳಿಗೆ ತತ್ತರಿಸಿದ ಇಂಗ್ಲೆಂಡ್‌; 387 ರನ್​ಗಳಿಗೆ ಆಲೌಟ್
Jasprit Bumrah
ಪೃಥ್ವಿಶಂಕರ
|

Updated on:Jul 11, 2025 | 8:14 PM

Share

ಲಾರ್ಡ್ಸ್‌ನಲ್ಲಿ (Lords Test) ನಡೆಯತ್ತಿರುವ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೆಯ ಇಂಗ್ಲೆಂಡ್‌ 387 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. 251 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಮೊದಲ ದಿನದಾಟ ಮುಗಿಸಿದ್ದ ಇಂಗ್ಲೆಂಡ್‌ ತಂಡ ಇಲ್ಲಿಂದ ತನ್ನ ಎರಡನೇ ದಿನದಾಟವನ್ನು ಮುಂದುವರೆಸಿತು. ಎರಡನೇ ದಿನದಂದು ಮಾಜಿ ನಾಯಕ ಜೋ ರೂಟ್ (Joe Root) ತಮ್ಮ ಶತಕವನ್ನು ಪೂರ್ಣಗೊಳಿಸಿದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೇಮೀ ಸ್ಮಿತ್, ಕೆಎಲ್ ರಾಹುಲ್ ನೀಡಿದ ಜೀವದಾನದ ಲಾಭ ಪಡೆದು ಅರ್ಧಶತಕದ ಇನ್ನಿಂಗ್ಸ್ ಆಡಿದರು. ಹಾಗೆಯೇ ವೇಗಿ ಬ್ರೈಡನ್ ಕಾರ್ಸೆ ಕೂಡ 56 ರನ್​ಗಳ ಕಾಣಿಕೆ ನೀಡಿದರು. ಉಳಿದಂತೆ ಯಾರೂ ಸಹ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಇತ್ತ ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲಿ ಮಿಂಚಿದ ಜಸ್ಪ್ರೀತ್ ಬುಮ್ರಾ (Jasprit Bumrah) 5 ವಿಕೆಟ್​ಗಳ ಗೊಂಚಲು ಪಡೆದರೆ, ನಿತೀಶ್ ರೆಡ್ಡಿ ಮತ್ತು ಸಿರಾಜ್ 2 ವಿಕೆಟ್ ಪಡೆದರು. ಉಳಿದಂತೆ ಜಡೇಜಾ 1 ವಿಕೆಟ್​ ಪಡೆದರು.

ಮೊದಲ ಸೆಷನ್​ನಲ್ಲಿ 3 ವಿಕೆಟ್

ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಹೀಗಾಗಿ ಮೊದಲ ಸೆಷನ್​ನಲ್ಲಿಯೇ ಆತಿಥೇಯರು 3 ವಿಕೆಟ್ ಕಳೆದುಕೊಂಡರು. ಈ ಮೂರು ವಿಕೆಟ್​ ಬುಮ್ರಾ ಪಾಲಾದವು. ಬುಮ್ರಾ ಕೆಲವೇ ನಿಮಿಷಗಳ ಅಂತರದಲ್ಲಿ ಬೆನ್ ಸ್ಟೋಕ್ಸ್ (44), ಜೋ ರೂಟ್ (104) ಮತ್ತು ಕ್ರಿಸ್ ವೋಕ್ಸ್ (0) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇದರ ನಂತರ, ಜೇಮೀ ಸ್ಮಿತ್ ಮತ್ತು ಬ್ರೈಡನ್ ಕಾರ್ಸ್ ಸ್ಫೋಟಕ ಜೊತೆಯಾಟ ಕಟ್ಟಿದರು. ಇವರಿಬ್ಬರು ಎಂಟನೇ ವಿಕೆಟ್‌ಗೆ 80 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿದರು. ಈ ವೇಳೆ ದಾಳಿಗಿಳಿದ ಸಿರಾಜ್, 56 ಎಸೆತಗಳಲ್ಲಿ 51 ರನ್ ಬಾರಿಸಿದ್ದ ಜೇಮೀ ಸ್ಮಿತ್ ಅವರನ್ನು ಬಲಿಪಡೆದರು.

IND vs ENG: 3ನೇ ಪಂದ್ಯದಲ್ಲೂ ಅದೇ ಕಥೆ; ಕ್ಯಾಚ್ ಹಿಡಿಯುವುದನ್ನು ಮರೆತಿರುವ ಟೀಂ ಇಂಡಿಯಾ

ಸ್ಮಿತ್- ಕಾರ್ಸ್ ಅರ್ಧಶತಕ

ಇದರ ನಂತರ ಬುಮ್ರಾ, ಜೋಫ್ರಾ ಆರ್ಚರ್ ರೂಪದಲ್ಲಿ ಇಂಗ್ಲೆಂಡ್‌ಗೆ ಒಂಬತ್ತನೇ ಹೊಡೆತ ನೀಡಿದರು. ಆದಾಗ್ಯೂ ವೇಗಿ ಬ್ರೈಡನ್ ಕಾರ್ಸ್ ಭಾರತದ ವಿರುದ್ಧ ತಮ್ಮ ಮೊದಲ ಅರ್ಧಶತಕವನ್ನು ಪೂರೈಸುವಲ್ಲಿ ಯಶಸ್ವಿಯಾದರು. ಅವರು 83 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿ ಸಿರಾಜ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಇಂಗ್ಲೆಂಡ್ ಇನ್ನಿಂಗ್ಸ್ ಕೂಡ ಅಂತ್ಯವಾಯಿತು.ಉಳಿದಂತೆ ಪಂದ್ಯದ ಆರಂಭಿಕ ದಿನದಂದು ಜ್ಯಾಕ್ ಕ್ರೌಲಿ 18, ಬೆನ್ ಡಕೆಟ್ 23, ಓಲಿ ಪೋಪ್ 44 ರನ್​ಗಳ ಕಾಣಿಕೆ ನೀಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Fri, 11 July 25

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ
ಸುದೀಪ್ ಪಾರ್ಟಿಗೆ ಬರ್ತಿಲ್ಲ; ದೂರಿದ ನಲಪಾಡ್
ಸುದೀಪ್ ಪಾರ್ಟಿಗೆ ಬರ್ತಿಲ್ಲ; ದೂರಿದ ನಲಪಾಡ್
ಸರ್ಕಾರಿ ಔಷಧಿ ಉಗ್ರಾಣದಲ್ಲಿ ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಔಷಧಿ ಪತ್ತೆ
ಸರ್ಕಾರಿ ಔಷಧಿ ಉಗ್ರಾಣದಲ್ಲಿ ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಔಷಧಿ ಪತ್ತೆ
ಸುದೀಪ್ ಎದುರು ಕಳಚಲಿದೆ ಗುಳ್ಳೆನರಿ ಯಶಸ್ ಮುಖವಾಡ
ಸುದೀಪ್ ಎದುರು ಕಳಚಲಿದೆ ಗುಳ್ಳೆನರಿ ಯಶಸ್ ಮುಖವಾಡ