AUS vs PAK: ‘ನಾನು ಹೆಸರಿಗೆ ಮಾತ್ರ ಕ್ಯಾಪ್ಟನ್’; ಐತಿಹಾಸಿಕ ಸರಣಿ ಗೆದ್ದ ಬಳಿಕ ಸ್ಫೋಟಕ ಹೇಳಿಕೆ ನೀಡಿದ ರಿಜ್ವಾನ್

AUS vs PAK: ಪಾಕಿಸ್ತಾನ ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದು 22 ವರ್ಷಗಳ ನಂತರ ಇತಿಹಾಸ ನಿರ್ಮಿಸಿದೆ. ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ಪಾಕಿಸ್ತಾನದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದು, ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿದರು. ಬ್ಯಾಟ್ಸ್‌ಮನ್‌ಗಳು ಸಹ ಉತ್ತಮ ಪ್ರದರ್ಶನ ನೀಡಿ ಸರಣಿ ಗೆಲುವು ಸಾಧಿಸಿದರು. ರಿಜ್ವಾನ್ ಅವರು ತಮ್ಮ ಆಟಗಾರರನ್ನು ಹೊಗಳಿದ್ದು, ಗೆಲುವಿನ ಶ್ರೇಯವನ್ನು ಬೌಲರ್‌ಗಳಿಗೆ ನೀಡಿದ್ದಾರೆ.

AUS vs PAK: ‘ನಾನು ಹೆಸರಿಗೆ ಮಾತ್ರ ಕ್ಯಾಪ್ಟನ್’; ಐತಿಹಾಸಿಕ ಸರಣಿ ಗೆದ್ದ ಬಳಿಕ ಸ್ಫೋಟಕ ಹೇಳಿಕೆ ನೀಡಿದ ರಿಜ್ವಾನ್
ಪಾಕ್ ತಂಡ
Follow us
|

Updated on: Nov 10, 2024 | 4:25 PM

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ ಇತಿಹಾಸ ನಿರ್ಮಿಸಿದೆ. ಮೊದಲ ಪಂದ್ಯವನ್ನು ಸೋತ ನಂತರ, ಅದ್ಭುತ ಪುನರಾಗಮನವನ್ನು ಮಾಡಿದ ಪಾಕಿಸ್ತಾನ, ಸತತ 2 ಪಂದ್ಯಗಳನ್ನು ಗೆದ್ದು ಸರಣಿಯನ್ನು ಗೆದ್ದುಕೊಂಡಿತು. ಇದರೊಂದಿಗೆ ಪಾಕಿಸ್ತಾನ 22 ವರ್ಷಗಳ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದ ಇತಿಹಾಸ ನಿರ್ಮಿಸಿದೆ. ವಾಸ್ತವವಾಗಿ ಈ ಸರಣಿಗೂ ಮುನ್ನ ಮೊಹಮ್ಮದ್ ರಿಜ್ವಾನ್ ಅವರನ್ನು ಪಾಕ್ ತಂಡದ ಸೀಮಿತ ಓವರ್​ಗಳ ನಾಯಕನನ್ನಾಗಿ ಮಾಡಲಾಗಿತ್ತು. ಇದೀಗ ರಿಜ್ವಾನ್, ನಾಯಕನಾಗಿ ಮೊದಲ ಸರಣಿಯಲ್ಲೇ ದಾಖಲೆಯ ಗೆಲುವು ಸಾಧಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯವನ್ನು ಗೆದ್ದ ನಂತರ ಮಾತನಾಡಿದ ರಿಜ್ವಾನ್, ಪಾಕಿಸ್ತಾನ ತಂಡವನ್ನು ಅಪಾರವಾಗಿ ಹೊಗಳಿದರು.

ರಿಜ್ವಾನ್ ಹೇಳಿದ್ದೇನು?

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡ ಬಳಿಕ ಮಾತನಾಡಿದ ರಿಜ್ವಾನ್, ತಮ್ಮ ಆಟಗಾರರನ್ನು ಅಪಾರವಾಗಿ ಹೊಗಳಿದರು. ಈ ಐತಿಹಾಸಿಕ ಸರಣಿ ಗೆಲುವು ನನಗೆ ಬಹಳ ವಿಶೇಷವಾದ ಕ್ಷಣವಾಗಿದೆ ಎಂದು ಹೇಳಿದರು. ಇಂದು ಇಡೀ ದೇಶದಲ್ಲೇ ಸಂಭ್ರಮ ಮನೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದರೆ ಇದೀಗ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ನಾನು ನೂತನ ನಾಯಕನಾಗಿದ್ದರೂ, ನಾನು ಟಾಸ್ ಮತ್ತು ಪ್ರೆಸೆಂಟೇಷನ್​ಗೆ ಮಾತ್ರ ನಾಯಕ. ಉಳಿದಂತೆ ಪ್ರತಿಯೊಬ್ಬ ಆಟಗಾರನೂ ನನಗೆ ಫೀಲ್ಡಿಂಗ್, ಬ್ಯಾಟಿಂಗ್ ಮತ್ತು ಬೌಲಿಂಗ್‌ ಬಗ್ಗೆ ಸಲಹೆ ನೀಡುತ್ತಾರೆ. ಈ ಗೆಲುವಿನ ಶ್ರೇಯ ಪಾಕಿಸ್ತಾನದ ಬೌಲರ್‌ಗಳಿಗೆ ಸಲ್ಲುತ್ತದೆ ಎಂದಿದ್ದಾರೆ.

ಪಂದ್ಯ ಹೀಗಿತ್ತು

ಪರ್ತ್‌ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಮೊಹಮ್ಮದ್ ರಿಜ್ವಾನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡ ಪಾಕ್ ಬೌಲರ್​ಗಳು ಮತ್ತೊಮ್ಮೆ ಆಸೀಸ್ ಬ್ಯಾಟಿಂಗ್‌ ವಿಭಾಗವನ್ನು ಛಿದ್ರಗೊಳಿಸಿದರು. ಇತ್ತ ಪಾಕ್ ವೇಗಿಗಳ ದಾಳಿಗೆ ನಲುಗಿದ ಆಸೀಸ್ ತಂಡ ಕೇವಲ 31.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 140 ರನ್‌ಗಳಿಸಲಷ್ಟೇ ಶಕ್ತವಾಯಿತು. ಆಸೀಸ್ ಪರ ಸೀನ್ ಅಬಾಡ್ ಅತ್ಯಧಿಕ 30 ರನ್ ಕಲೆಹಾಕಿದರೆ, ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ. ಪಾಕ್ ಪರ ಬೌಲಿಂಗ್​ನಲ್ಲಿ ಮಿಂಚಿದ ಶಾಹೀನ್ ಮತ್ತು ನಸೀಮ್ ತಲಾ 3 ವಿಕೆಟ್ ಪಡೆದರೆ, ಹಾರಿಸ್ ರೌಫ್ 7 ಓವರ್‌ಗಳಲ್ಲಿ ಕೇವಲ 24 ರನ್ ನೀಡಿ 2 ವಿಕೆಟ್ ಪಡೆದರು.

140 ರನ್​​ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭಿಕರಾದ ಅಬ್ದುಲ್ಲಾ ಶಫೀಕ್ ಮತ್ತು ಸ್ಯಾಮ್ ಅಯೂಬ್ 84 ರನ್‌ಗಳ ಪ್ರಬಲ ಆರಂಭ ನೀಡಿದರು. ಆದರೆ, ಇದಾದ ಬಳಿಕ ಆರಂಭಿಕರಿಬ್ಬರೂ ಕೇವಲ 1 ರನ್ ಅಂತರದಲ್ಲಿ ಔಟಾದರು. ಶಫೀಕ್ 37 ರನ್ ಮತ್ತು ಸ್ಯಾಮ್ 42 ರನ್​ಗಳ ಇನ್ನಿಂಗ್ಸ್ ಆಡಿದರು. ಇದಾದ ಬಳಿಕ ಬಾಬರ್ ಆಝಂ 28 ರನ್ ಹಾಗೂ ನಾಯಕ ರಿಜ್ವಾನ್ 30 ರನ್‌ಗಳ ಇನಿಂಗ್ಸ್‌ ಆಡಿ 26.5 ಓವರ್‌ಗಳಲ್ಲಿಯೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಊಟ ಮಾಡುವಾಗ ಅರ್ಧಕ್ಕೆ ಎದ್ದು ಹೋಗಬಾರದು ಯಾಕೆ? ವಿಡಿಯೋ ನೋಡಿ
ಊಟ ಮಾಡುವಾಗ ಅರ್ಧಕ್ಕೆ ಎದ್ದು ಹೋಗಬಾರದು ಯಾಕೆ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ