AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟು ಕೆಟ್ಟ ತಂಡವನ್ನು ನಾ ನೋಡಿಲ್ಲ: CSK ವಿರುದ್ಧ ತಿರುಗಿ ನಿಂತ ಸುರೇಶ್ ರೈನಾ

IPL 2025 CSK: ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಮೊದಲಾರ್ಧದಲ್ಲಿ ಆಡಿದ 7 ಪಂದ್ಯಗಳಲ್ಲಿ ಸಿಎಸ್​ಕೆ ತಂಡ ಗೆದ್ದಿದ್ದು ಕೇವಲ 2 ಮ್ಯಾಚ್ ಮಾತ್ರ. ಇದೀಗ ದ್ವಿತೀಯಾರ್ಧದಲ್ಲಿ ಸಿಎಸ್​ಕೆ ತಂಡ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಈ ಸೋಲಿನ ಬೆನ್ನಲ್ಲೇ ಸುರೇಶ್ ರೈನಾ ಸಿಎಸ್​ಕೆ ಫ್ರಾಂಚೈಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಷ್ಟು ಕೆಟ್ಟ ತಂಡವನ್ನು ನಾ ನೋಡಿಲ್ಲ: CSK ವಿರುದ್ಧ ತಿರುಗಿ ನಿಂತ ಸುರೇಶ್ ರೈನಾ
Suresh Raina
Follow us
ಝಾಹಿರ್ ಯೂಸುಫ್
|

Updated on: Apr 21, 2025 | 1:32 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಸದಾ ಬೆಂಬಲಿಸುತ್ತಾ ಬಂದವರಲ್ಲಿ ಸುರೇಶ್ ರೈನಾ (Suresh Raina) ಕೂಡ ಒಬ್ಬರು. ಸಿಎಸ್​ಕೆ ತಂಡದ ಮಾಜಿ ಆಟಗಾರನಾಗಿರುವ ರೈನಾ, ಧೋನಿ ಪಡೆಯನ್ನು ಗುರಿಯಾಗಿಸಿ ಯಾವುದೇ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಆದರೆ ಈ ಬಾರಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ನೋಡಿ  ರೈನಾ ಹರಿಹಾಯ್ದಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 9 ವಿಕೆಟ್​ಗಳಿಂದ ಹೀನಾಯವಾಗಿ ಸೋತಿದೆ. ಇದೀಗ ಸಿಎಸ್​ಕೆ ತಂಡದ ಪ್ಲೇಆಫ್ ಹಾದಿ ತೂಗುಯ್ಯಾಲೆಯಲ್ಲಿದೆ. ಇತ್ತ ಆಡಿರುವ 8 ಪಂದ್ಯಗಳಲ್ಲಿ 6 ಮ್ಯಾಚ್​ಗಳಲ್ಲಿ ಸೋತಿರುವ ಸಿಎಸ್​ಕೆ ತಂಡವನ್ನು ಸುರೇಶ್ ರೈನಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಖಾಸಗಿ ಚಾನೆಲ್ ಚರ್ಚೆಯಲ್ಲಿ ಮಾತನಾಡಿದ ಸುರೇಶ್ ರೈನಾ, ಇಂತಹದೊಂದು ಕೆಟ್ಟ ತಂಡವನ್ನು ನಾನು ಇದುವರೆಗೆ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ತಂಡದ ಆಡಳಿತ ಮಂಡಳಿಯು ಹರಾಜನ್ನು ಸರಿಯಾಗಿ ನಡೆಸಲಿಲ್ಲ. ಈಗ ಅದರ ಪರಿಣಾಮಗಳನ್ನು ಅನುಭವಿಸಬೇಕಾಗಿದೆ.

ಇದನ್ನೂ ಓದಿ
Image
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
Image
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
Image
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
Image
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಸಿಎಸ್​ಕೆ ಫ್ರಾಂಚೈಸಿಯು ಮೆಗಾ ಹರಾಜಿನಲ್ಲಿ ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರನ್ನು ಬಿಟ್ಟಿದ್ದರು. ಮುಖ್ಯ ಕೋಚ್ ಸೇರಿದಂತೆ ತಂಡದ ಆಡಳಿತ ಮಂಡಳಿಯು ಉತ್ತಮ ಆಟಗಾರರನ್ನು ಹಿಂಬಾಲಿಸಲಿಲ್ಲ.

ಹರಾಜಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರು ಲಭ್ಯವಿದ್ದರೂ ಸಿಎಸ್​ಕೆ ಮಾತ್ರ ಆ ಆಟಗಾರರ ಖರೀದಿಗೆ ಆಸಕ್ತಿ ತೋರಲಿಲ್ಲ. ಇದರಿಂದಾಗಿಯೇ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೆಣಗಾಡುತ್ತಿದೆ ಎಂದು ಸುರೇಶ್ ರೈನಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಸಿಎಸ್​ಕೆ ತಂಡದಲ್ಲಿ ಆಕ್ರಮಣಕಾರಿ ಕ್ರಿಕೆಟ್ ಕೊರತೆ ಎದ್ದು ಕಾಣುತ್ತಿದೆ. ಅಲ್ಲದೆ ತಂಡ ಉದ್ದೇಶದ ಕೊರತೆಯಿಂದಾಗಿ ಪಂದ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮೆಗಾ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಸಹಿ ಮಾಡುವಲ್ಲಿ ವಿಫಲರಾಗಿರುವುದು. ಪ್ರಸ್ತುತ ತಂಡದ ಪ್ರದರ್ಶನ ನಿಜಕ್ಕೂ ನಿರಾಶಾದಾಯಕ ಎಂದು ಸುರೇಶ್  ರೈನಾ ಬೇಸರ ಹೊರಹಾಕಿದ್ದಾರೆ.

ಅಂದಹಾಗೆ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾಗ ಎಂದಿಗೂ ವಿಫಲವಾಗಿರಲಿಲ್ಲ ಎಂಬುದು ವಿಶೇಷ. ಅಂದರೆ ರೈನಾ ಕಣಕ್ಕಿಳಿದ ಸೀಸನ್​ಗಳಲ್ಲಿ ಸಿಎಸ್​ಕೆ ಪ್ಲೇಆಫ್​ ಹಂತಕ್ಕೇರಿದೆ.

ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ಪರ 11 ಸೀಸನ್​ಗಳನ್ನು ಆಡಿದ್ದರು. ಈ ಹನ್ನೊಂದು ಸೀಸನ್​ಗಳಲ್ಲೂ ಸಿಎಸ್​ಕೆ ತಂಡವು ಪ್ಲೇಆಫ್​ಗೆ ಎಂಟ್ರಿ ಕೊಟ್ಟಿತ್ತು. ಅಲ್ಲದೆ ಈ ವೇಳೆ 4 ಬಾರಿ ಚಾಂಪಿಯನ್ ಪಟ್ಟವನ್ನು ಸಹ ಅಲಂಕರಿಸಿದ್ದರು. ಇದೀಗ ಸುರೇಶ್ ರೈನಾ ಅವರಂತಹ ಮ್ಯಾಚ್ ವಿನ್ನರ್ ಕೊರತೆಯಿಂದ ಸಿಎಸ್​ಕೆ ತಂಡ ಸಂಕಷ್ಟಕ್ಕೆ ಸಿಲುಕಿದೆ.

ಇದನ್ನೂ ಓದಿ: ಕೇಂದ್ರೀಯ ಒಪ್ಪಂದದಿಂದ ಐವರು ಆಟಗಾರರನ್ನು ಕೈಬಿಟ್ಟ ಬಿಸಿಸಿಐ

ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇನ್ನೂ 6 ಪಂದ್ಯಗಳಿದ್ದು, ಈ ಎಲ್ಲಾ ಮ್ಯಾಚ್​ಗಳಲ್ಲಿ ಜಯ ಸಾಧಿಸಿ ಪ್ಲೇಆಫ್ ಹಂತಕ್ಕೇರಲಿದೆಯಾ ಕಾದು ನೋಡಬೇಕಿದೆ.