AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಎದುರಾಳಿಗಳನ್ನು ಎದುರಿಸಿದ ತಂಡ ಯಾವುದು ಗೊತ್ತಾ?

ಕ್ರಿಕೆಟ್ ಜಗತ್ತಿನ ಬಲಿಷ್ಠ ತಂಡಗಳು ಕೇವಲ ಕೆಲವು ಪ್ರಮುಖ ದೇಶಗಳ ವಿರುದ್ಧವಷ್ಟೇ ದ್ವಿಪಕ್ಷೀಯ ಸರಣಿಗಳನ್ನು ಆಡಲು ಇಷ್ಟಪಡುತ್ತವೆ. ಆದರೆ, ಕ್ರಿಕೆಟ್‌ನ ಜಾಗತೀಕರಣದಲ್ಲಿ ಸಣ್ಣ ಮತ್ತು ಉದಯೋನ್ಮುಖ ರಾಷ್ಟ್ರಗಳ ಪಾತ್ರ ದೊಡ್ಡದಾಗಿದೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಭಿನ್ನ ದೇಶಗಳ ವಿರುದ್ಧ ಕಣಕ್ಕಿಳಿದು ದಾಖಲೆ ಬರೆದ ಪ್ರಮುಖ ಪೂರ್ಣಾವಧಿ ಸದಸ್ಯ ರಾಷ್ಟ್ರಗಳ ವಿವರ ಇಲ್ಲಿದೆ.

ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಎದುರಾಳಿಗಳನ್ನು ಎದುರಿಸಿದ ತಂಡ ಯಾವುದು ಗೊತ್ತಾ?
T20 CricketImage Credit source: GettyImages
ಝಾಹಿರ್ ಯೂಸುಫ್
|

Updated on: Sep 23, 2026 | 3:04 PM

Share

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡವು ಹೊಸದೊಂದು ಮೈಲಿಗಲ್ಲನ್ನು ತಲುಪಿದೆ. ಜಪಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ಕ್ರಿಕೆಟ್ ಮಾದರಿಯಲ್ಲಿ ಟೀಮ್ ಇಂಡಿಯಾ ತನ್ನ 20ನೇ ಭಿನ್ನ ಎದುರಾಳಿಯನ್ನು ಎದುರಿಸಿದಂತಾಗಿದೆ. ಭಾರತ ಮತ್ತು ಜಪಾನ್ ದೇಶಗಳ ನಡುವಿನ 75 ವರ್ಷಗಳ ರಾಜತಾಂತ್ರಿಕ ಬಾಂಧವ್ಯದ ನೆನಪಿಗಾಗಿ ಆಯೋಜಿಸಲಾದ ಈ ಐತಿಹಾಸಿಕ ಪಂದ್ಯವು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ.

ಸಾಮಾನ್ಯವಾಗಿ ಭಾರತ, ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್‌ನಂತಹ ಅಗ್ರಮಾನ್ಯ ತಂಡಗಳು ಹೆಚ್ಚಾಗಿ ದ್ವಿಪಕ್ಷೀಯ ಸರಣಿಗಳಲ್ಲಿ ಪ್ರಮುಖ ದೇಶಗಳ ವಿರುದ್ಧವೇ ಹೆಚ್ಚು ಪಂದ್ಯಗಳನ್ನು ಆಡುತ್ತವೆ. ಹೀಗಾಗಿ ಇಷ್ಟು ವರ್ಷಗಳ ಟಿ20 ಇತಿಹಾಸವಿದ್ದರೂ ಭಾರತಕ್ಕೆ ಇದು ಕೇವಲ 20ನೇ ವಿಭಿನ್ನ ಎದುರಾಳಿಯಾಗಿದೆ.

ಆದರೆ, ಪೂರ್ಣಾವಧಿ ಸದಸ್ಯ ರಾಷ್ಟ್ರಗಳ ಪಟ್ಟಿಯನ್ನು ನೋಡಿದರೆ ಈ ವಿಷಯದಲ್ಲಿ ಝಿಂಬಾಬ್ವೆ ಎಲ್ಲರಿಗಿಂತ ಬಹುದೂರ ಮುಂದೆ ನಿಂತಿದೆ. ಝಿಂಬಾಬ್ವೆ ತಂಡವು ಇದುವರೆಗೆ ಬರೋಬ್ಬರಿ 32 ವಿಭಿನ್ನ ದೇಶಗಳ ವಿರುದ್ಧ ಟಿ20 ಪಂದ್ಯಗಳನ್ನು ಆಡಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಐಸಿಸಿ ಪ್ರಾದೇಶಿಕ ಅರ್ಹತಾ ಪಂದ್ಯಗಳು ಹಾಗೂ ಅಸೋಸಿಯೇಟ್ ದೇಶಗಳ ವಿರುದ್ಧದ ಟೂರ್ನಿಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದರಿಂದ ಝಿಂಬಾಬ್ವೆ ಮತ್ತು ಐರ್ಲೆಂಡ್‌ನಂತಹ ತಂಡಗಳು ಹೆಚ್ಚು ಭಿನ್ನ ಎದುರಾಳಿಗಳನ್ನು ಎದುರಿಸಲು ಸಾಧ್ಯವಾಗಿದೆ.

ಭಿನ್ನ ಎದುರಾಳಿಗಳನ್ನು ಎದುರಿಸಿದ ಪ್ರಮುಖ ತಂಡಗಳ ಪಟ್ಟಿ:

ಪೂರ್ಣ ಸದಸ್ಯ ರಾಷ್ಟ್ರ ಎದುರಿಸಿದ ತಂಡಗಳ ಸಂಖ್ಯೆ
ಝಿಂಬಾಬ್ವೆ 32
ಐರ್ಲೆಂಡ್ 27
ಪಾಕಿಸ್ತಾನ್ 21
ಬಾಂಗ್ಲಾದೇಶ್ 21
ಭಾರತ 20
ನ್ಯೂಝಿಲೆಂಡ್ 19
ಅಫ್ಘಾನಿಸ್ತಾನ್ 19
ಇಂಗ್ಲೆಂಡ್ 18
ಸೌತ್ ಆಫ್ರಿಕಾ 18
ಶ್ರೀಲಂಕಾ 18
ವೆಸ್ಟ್ ಇಂಡೀಸ್ 18
ಆಸ್ಟ್ರೇಲಿಯಾ 15

ಇದನ್ನೂ ಓದಿ: ಅಸಮರ್ಪಕ ವೇಳಾಪಟ್ಟಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಅಲಭ್ಯ!

ಭಾರತವು ಜಪಾನ್ ವಿರುದ್ಧ ಆಡುವ ಮೂಲಕ ತನ್ನ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದರೆ, ಕ್ರಿಕೆಟ್ ಜಾಗತೀಕರಣಕ್ಕೆ ಝಿಂಬಾಬ್ವೆ ನೀಡಿದ ಕೊಡುಗೆಯನ್ನು ಈ ಅಂಕಿ-ಅಂಶಗಳು ಸಾಬೀತುಪಡಿಸುತ್ತವೆ. ಬಲಿಷ್ಠ ತಂಡಗಳು ಕೇವಲ ಟಾಪ್ ತಂಡಗಳಿಗಷ್ಟೇ ಸೀಮಿತವಾಗದೆ, ಉದಯೋನ್ಮುಖ ದೇಶಗಳೊಂದಿಗೂ ಹೆಚ್ಚು ಪಂದ್ಯಗಳನ್ನು ಆಡಿದರೆ ಕ್ರಿಕೆಟ್ ಜಗತ್ತು ಮತ್ತಷ್ಟು ಬೆಳೆಯಲು ಸಹಕಾರಿಯಾಗಲಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More