AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ನಿಜಕ್ಕೂ ಶಾಕಿಂಗ್: ಇಮ್ರಾನ್ ಖಾನ್ ಪರ ಧ್ವನಿಯೆತ್ತಿದ ಭಾರತದ ಮಾಜಿ ಕ್ರಿಕೆಟಿಗ

ರಾಜಕೀಯ ವೈರತ್ವದ ಗಡಿಗಳನ್ನು ಮೀರಿ ನಿಲ್ಲುವ ಮಾನವೀಯತೆಗೆ ಕ್ರೀಡಾ ಜಗತ್ತಿನಲ್ಲಿ ಯಾವಾಗಲೂ ವಿಶೇಷ ಸ್ಥಾನವಿದೆ. ಇದೀಗ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ದಿಗ್ಗಜ ಇಮ್ರಾನ್ ಖಾನ್ ಅವರ ಜೈಲು ವಾಸದ ಭೀಕರ ಪರಿಸ್ಥಿತಿಯ ಕುರಿತು ಭಾರತದ ಮಾಜಿ ಮುಖ್ಯ ಕೋಚ್ ಮತ್ತು ಖ್ಯಾತ ಕ್ರಿಕೆಟಿಗ ರವಿಶಾಸ್ತ್ರಿ ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇದು ನಿಜಕ್ಕೂ ಶಾಕಿಂಗ್: ಇಮ್ರಾನ್ ಖಾನ್ ಪರ ಧ್ವನಿಯೆತ್ತಿದ ಭಾರತದ ಮಾಜಿ ಕ್ರಿಕೆಟಿಗ
Imran Khan Image Credit source: AP
ಝಾಹಿರ್ ಯೂಸುಫ್
|

Updated on:Oct 06, 2026 | 1:18 PM

Share

ಪಾಕಿಸ್ತಾನ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಜೈಲು ವಾಸದ ಪರಿಸ್ಥಿತಿಯ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಪಾಕಿಸ್ತಾನ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದು ಅತ್ಯಂತ ಶಾಕಿಂಗ್!

ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ರವಿ ಶಾಸ್ತ್ರಿ, ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ನಡೆಸಿಕೊಳ್ಳುತ್ತಿರುವ ರೀತಿ “ಅತ್ಯಂತ ಶಾಕಿಂಗ್ ಮತ್ತು ಅಮಾನವೀಯ” ಎಂದು ಬಣ್ಣಿಸಿದ್ದಾರೆ. “ಮಾನವೀಯತೆಯ ದೃಷ್ಟಿಯಿಂದ ಯಾವುದೇ ವ್ಯಕ್ತಿಯನ್ನು ಈ ರೀತಿ ನಡೆಸಿಕೊಳ್ಳಬಾರದು. ಅವರಿಗೆ ತಕ್ಷಣವೇ ಉತ್ತಮ ಸೌಲಭ್ಯ ಹಾಗೂ ಸೂಕ್ತ ವೈದ್ಯಕೀಯ ನೆರವು ನೀಡಬೇಕು” ಎಂದು ಅವರು ಮನವಿ ಮಾಡಿದ್ದಾರೆ.

ಅತ್ಯಂತ ಪ್ರಸಿದ್ಧ ಪಾಕಿಸ್ತಾನಿ:

“ನನಗೆ ಅಲ್ಲಿನ ರಾಜಕೀಯ ಅರ್ಥವಾಗುವುದಿಲ್ಲ. ಆದರೆ ಇಮ್ರಾನ್ ಖಾನ್ ಜಾಗತಿಕವಾಗಿ ಅತ್ಯಂತ ಹೆಚ್ಚು ಗುರುತಿಸಲ್ಪಟ್ಟ ಪಾಕಿಸ್ತಾನಿ ಮುಖ. ನೀವು ಅವರನ್ನು ಇಷ್ಟಪಡಿ ಅಥವಾ ಬಿಡಿ, ಅದು ನನ್ನ ವೈಯಕ್ತಿಕ ಅಭಿಪ್ರಾಯ, ಆದರೆ ಅವರು ಇಂತಹ ಸಣ್ಣ ಜೈಲಿನ ಕೊಠಡಿಯಲ್ಲಿ ಕೂರಲು ಖಂಡಿತ ಅರ್ಹರಲ್ಲ” ಎಂದು ರವಿ ಶಾಸ್ತ್ರಿ ನೇರವಾಗಿ ಹೇಳಿದ್ದಾರೆ.

ವಿಶ್ವ ಕ್ರಿಕೆಟ್ ಇಮ್ರಾನ್ ಪರವಾಗಿದೆ:

“ನಾನು ಕೇವಲ ನನ್ನೊಬ್ಬನ ಪರವಾಗಿ ಮಾತನಾಡುತ್ತಿಲ್ಲ. ವಿಶ್ವದಾದ್ಯಂತ ಇರುವ ಹಲವಾರು ಕ್ರಿಕೆಟಿಗರು ನನ್ನದೇ ಅಭಿಪ್ರಾಯ ಮತ್ತು ಕಳವಳವನ್ನು ಹೊಂದಿದ್ದಾರೆ” ಎನ್ನುವ ಮೂಲಕ ಇಮ್ರಾನ್ ಖಾನ್ ಪರವಾಗಿ ಜಾಗತಿಕ ಕ್ರಿಕೆಟ್ ಸಮುದಾಯ ಒಗ್ಗಟ್ಟಿನಿಂದ ನಿಂತಿದೆ ಎಂಬುದನ್ನು ರವಿ ಶಾಸ್ತ್ರಿ ಸ್ಪಷ್ಟಪಡಿಸಿದ್ದಾರೆ.

ಅದ್ಭುತ ಆಟಗಾರ ಮತ್ತು ನಾಯಕ:

“ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ ಎನ್ನುವುದು ತುಂಬಾ ಸಣ್ಣ ಮಾತು, ಅವರು ಅದ್ಭುತ ಆಲ್‌ರೌಂಡರ್ ಆಗಿದ್ದರು. ಅವರು ಕೇವಲ ಒಬ್ಬ ಕ್ರಿಕೆಟಿಗನಾಗಿರಲಿಲ್ಲ, ಯುವ ಆಟಗಾರರಲ್ಲಿ ಉತ್ಸಾಹ ತುಂಬಿ ಮುನ್ನಡೆಸುತ್ತಿದ್ದ ಒಬ್ಬ ಅದ್ಭುತ ನಾಯಕರಾಗಿದ್ದರು. 40ನೇ ವಯಸ್ಸಿನಲ್ಲಿ ಅತ್ಯಂತ ಯುವ ತಂಡವನ್ನು ಕಟ್ಟಿಕೊಂಡು ಅವರು ಪಾಕಿಸ್ತಾನಕ್ಕೆ 1992ರ ವಿಶ್ವಕಪ್ ಗೆದ್ದುಕೊಟ್ಟ ರೀತಿ ಅಸಾಮಾನ್ಯವಾದದ್ದು” ಎಂದು ಇದೇ ವೇಳೆ ರವಿ ಶಾಸ್ತ್ರಿ ನೆನಪಿಸಿಕೊಂಡಿದ್ದಾರೆ.

ಗೌರವದ ಹಿನ್ನೆಲೆಯುಳ್ಳ ವೈರತ್ವ:

ಭಾರತ ಮತ್ತು ಪಾಕಿಸ್ತಾನ್ ನಡುವಿನ ಹಳೆಯ ಕ್ರಿಕೆಟ್ ಪೈಪೋಟಿಯನ್ನು ನೆನೆದ ಶಾಸ್ತ್ರಿ, “ನಮ್ಮ ನಡುವಿನ ವೈರತ್ವ ಕೇವಲ ಮೈದಾನಕ್ಕೆ ಸೀಮಿತವಾಗಿತ್ತು, ಆದರೆ ಪರಸ್ಪರರ ಮೇಲೆ ಅಪಾರ ಗೌರವವಿತ್ತು” ಎಂದು ಹೇಳಿದ್ದಾರೆ.

ಇಮ್ರಾನ್ ಕಂಬ್ಯಾಕ್ ಮಾಡುವ ಭರವಸೆ:

ಕೊನೆಯದಾಗಿ, “ಇಮ್ರಾನ್ ಖಾನ್ ಅವರು ಕ್ರಿಕೆಟ್‌ಗೆ ನೀಡಿದ ಕೊಡುಗೆ ಅತ್ಯಂತ ವಿಶೇಷವಾದದ್ದು. ಅವರು ಶೀಘ್ರದಲ್ಲೇ ಜೈಲಿನಿಂದ ಹೊರಬಂದು, ಅವರಿಗೆ ಉತ್ತಮ ಸೌಲಭ್ಯ ಸಿಗುವಂತಾಗಲಿ ಮತ್ತು ಅವರು ಮತ್ತೆ ಕಂಬ್ಯಾಕ್ ಮಾಡಲಿ ಎಂದು ನಾನು ಆಶಿಸುತ್ತೇನೆ” ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಹದಗೆಡುತ್ತಿರುವ ಇಮ್ರಾನ್ ಖಾನ್ ಆರೋಗ್ಯ:

73 ವರ್ಷದ ಇಮ್ರಾನ್ ಖಾನ್ ಅವರು 2023 ರಿಂದ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಜೈಲಿನಲ್ಲಿ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಇತ್ತೀಚಿನ ಮಾಹಿತಿ ಪ್ರಕಾರ, ಕತ್ತಲೆಯ ಕೋಣೆಯಲ್ಲಿ ದೀರ್ಘಕಾಲ ಇಟ್ಟಿದ್ದರಿಂದಾಗಿ ಅವರು ತಮ್ಮ ಬಲಗಣ್ಣಿನ ದೃಷ್ಟಿಯನ್ನು ಬಹುಪಾಲು ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ಜಾಗತಿಕ ಮಟ್ಟದಲ್ಲಿ ಭಾರಿ ಆತಂಕ ಮೂಡಿಸಿದೆ.

ಕ್ರಿಕೆಟ್ ನಾಯಕರ ಒಗ್ಗಟ್ಟಿನ ಧ್ವನಿ:

ಕೇವಲ ರವಿಶಾಸ್ತ್ರಿ ಮಾತ್ರವಲ್ಲದೆ, ಇಮ್ರಾನ್ ಖಾನ್ ಪರವಾಗಿ ಜಗತ್ತಿನಾದ್ಯಂತ ಹಲವು ದಿಗ್ಗಜ ಕ್ರಿಕೆಟಿಗರು ಧ್ವನಿ ಎತ್ತಿದ್ದಾರೆ. ಭಾರತದ ಮಾಜಿ ನಾಯಕರಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್, ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್ ಮತ್ತು ಇಂಗ್ಲೆಂಡ್‌ನ ನಾಸಿರ್ ಹುಸೇನ್ ಸೇರಿದಂತೆ 20 ಕ್ಕೂ ಹೆಚ್ಚು ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್ ನಾಯಕರು ಜಂಟಿಯಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದಾರೆ. ಇಮ್ರಾನ್ ಖಾನ್ ಅವರಿಗೆ ಗೌರವದ ಜೈಲು ವಾಸ ಹಾಗೂ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಈ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ: ತಂದೆಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ: ಇಮ್ರಾನ್ ಖಾನ್ ಮಕ್ಕಳ ಗಂಭೀರ ಆರೋಪ!

ಒಟ್ಟಾರೆಯಾಗಿ ಹೇಳುವುದಾದರೆ, ಕ್ರೀಡೆ ಎನ್ನುವುದು ಕೇವಲ ಗೆಲುವು-ಸೋಲುಗಳಿಗೆ ಸೀಮಿತವಾಗಿರದೆ, ದೇಶಗಳ ಗಡಿಗಳನ್ನು ಮೀರಿ ನಿಲ್ಲುವ ಮಾನವೀಯ ಸಂಬಂಧ ಮತ್ತು ಪರಸ್ಪರ ಗೌರವದ ಪ್ರತೀಕ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ರಾಜಕೀಯ ಸಿದ್ಧಾಂತಗಳು ಮತ್ತು ಭಾರತ-ಪಾಕಿಸ್ತಾನf ನಡುವಿನ ಸಾಂಪ್ರದಾಯಿಕ ವೈರತ್ವ ಏನೇ ಇದ್ದರೂ, ಒಬ್ಬ ಶ್ರೇಷ್ಠ ಕ್ರೀಡಾಪಟುವಿಗೆ ಕನಿಷ್ಠ ಮಾನವೀಯ ಹಕ್ಕುಗಳು ಮತ್ತು ಗೌರವ ಸಿಗಬೇಕು ಎಂದು ರವಿಶಾಸ್ತ್ರಿ ಸೇರಿದಂತೆ ಜಾಗತಿಕ ಕ್ರಿಕೆಟ್ ಲೋಕದ ದಿಗ್ಗಜರು ಏಕಕಂಠದಿಂದ ಧ್ವನಿ ಎತ್ತಿರುವುದು ಶ್ಲಾಘನೀಯ.

Published On - 1:12 pm, Tue, 6 October 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ