FIDE World Chess Championship 2024: ಡಿಂಗ್ vs ಗುಕೇಶ್: ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ

FIDE World Chess Championship 2024: ವಿಶ್ವ ಚಾಂಪಿಯನ್​ ಅನಾಟೊಲಿ ಕಾರ್ಪೋವ್ ವಿರುದ್ಧ ಗೆಲ್ಲುವ ಮೂಲಕ 22 ವಯಸ್ಸಿನ ಗ್ಯಾರಿ ಕಾಸ್ಪರೋವ್ ಈ ದಾಖಲೆ ನಿರ್ಮಿಸಿದ್ದರು. ಇದೀಗ 17ನೇ ವಯಸ್ಸಿನಲ್ಲೇ ವಿಶ್ವ ಚಾಂಪಿಯನ್​ಗೆ ಸವಾಲೆಸೆಯುವ ಅವಕಾಶ ಪಡೆದಿರುವ ಡಿ ಗುಕೇಶ್, ಡಿಂಗ್ ಲಿರೆನ್ ವಿರುದ್ಧ ಗೆದ್ದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ.

FIDE World Chess Championship 2024: ಡಿಂಗ್ vs ಗುಕೇಶ್: ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ
D Gukesh vs Ding Liren
Follow us
ಝಾಹಿರ್ ಯೂಸುಫ್
|

Updated on: Nov 25, 2024 | 12:11 PM

ವಿಶ್ವ ಚೆಸ್ ಚಾಂಪಿಯನ್‌ಶಿಪ್​ ಚಾಲೆಂಜರ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಸಿಂಗಾಪುರದಲ್ಲಿ ನಡೆಯಲಿರುವ ಚದುರಂಗಾಟದಲ್ಲಿ ಭಾರತದ ಡಿ ಗುಕೇಶ್ ಹಾಗೂ ಚೀನಾದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಮುಖಾಮುಖಿಯಾಗಲಿದ್ದಾರೆ. ಟೊರೆಂಟೊದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ ಚಾಂಪಿಯನ್ ಅಗಿ ಹೊರಹೊಮ್ಮಿದ್ದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಚೆಸ್ ಚತುರ ಎನಿಸಿಕೊಂಡಿದ್ದರು.

ಅಲ್ಲದೆ ಕ್ಯಾಂಡಿಡೇಟ್ ಚೆಸ್ ಸ್ಪರ್ಧೆಯನ್ನು ಗೆದ್ದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೂ ಗುಕೇಶ್ ಪಾತ್ರರಾಗಿದ್ದರು. ಇದಕ್ಕೂ ಮುನ್ನ 2014 ರಲ್ಲಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಈ ಸಾಧನೆ ಮಾಡಿದ್ದರು. ಈ ಸಾಧನೆಯನ್ನು ಸರಿಗಟ್ಟುವ ಮೂಲಕ ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ ಚಾಲೆಂಜರ್ ಪಂದ್ಯವಾಡಲು ಅವಕಾಶ ಪಡೆದಿದ್ದರು.

ಗುಕೇಶ್ ಗೆದ್ದರೆ ಹೊಸ ಇತಿಹಾಸ:

ವಿಶ್ವ ಚೆಸ್ ಚಾಂಪಿಯನ್​ಶಿಪ್ ಗೆದ್ದರೆ ಈ ಪ್ರಶಸ್ತಿ ಪಡೆದ ವಿಶ್ವದ ಅತ್ಯಂತ ಕಿರಿಯ ಚೆಸ್ ಚತುರನೆಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಲಿದ್ದಾರೆ. ಸದ್ಯ ಈ ದಾಖಲೆ ರಷ್ಯಾದ ಚೆಸ್ ಚಾಣಕ್ಯ ಎನಿಸಿಕೊಂಡಿರುವ ಗ್ಯಾರಿ ಕಾಸ್ಪರೋವ್ ಹೆಸರಿನಲ್ಲಿದೆ.

1984 ರಲ್ಲಿ ವಿಶ್ವ ಚಾಂಪಿಯನ್​ ಅನಾಟೊಲಿ ಕಾರ್ಪೋವ್ ವಿರುದ್ಧ ಗೆಲ್ಲುವ ಮೂಲಕ 22 ವಯಸ್ಸಿನ ಗ್ಯಾರಿ ಕಾಸ್ಪರೋವ್ ಈ ದಾಖಲೆ ನಿರ್ಮಿಸಿದ್ದರು. ಇದೀಗ 17ನೇ ವಯಸ್ಸಿನಲ್ಲೇ ವಿಶ್ವ ಚಾಂಪಿಯನ್​ಗೆ ಸವಾಲೆಸೆಯುವ ಅವಕಾಶ ಪಡೆದಿರುವ ಡಿ ಗುಕೇಶ್ ಡಿಂಗ್ ಲಿರೆನ್ ವಿರುದ್ಧ ಗೆದ್ದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ.

ವಿಶ್ವ ಚೆಸ್ ಚಾಂಪಿಯನ್‌ಶಿಪ್ 2024 ರ ಸಂಪೂರ್ಣ ವೇಳಾಪಟ್ಟಿ:

ವಿಶ್ವ ಚೆಸ್ ಚಾಂಪಿಯನ್​ಶಿಪ್ ನವೆಂಬರ್ 25 ರಿಂದ ಡಿಸೆಂಬರ್ 12 ರವರೆಗೆ ನಡೆಯಲಿದೆ.  14 ದಿನಗಳ ಕಾಲ ನಡೆಯಲಿರುವ ಈ ಚಾಂಪಿಯನ್​ಶಿಪ್​ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

  • ನವೆಂಬರ್ 25 (ಸೋಮವಾರ): ಗೇಮ್ 1
  • ನವೆಂಬರ್ 26 (ಮಂಗಳವಾರ): ಗೇಮ್ 2
  • ನವೆಂಬರ್ 27 (ಬುಧವಾರ): ಗೇಮ್ 3
  • ನವೆಂಬರ್ 28: ವಿಶ್ರಾಂತಿ ದಿನ
  • ನವೆಂಬರ್ 29 (ಶುಕ್ರವಾರ): ಗೇಮ್ 4
  • ನವೆಂಬರ್ 30 (ಶನಿವಾರ): ಗೇಮ್ 5
  • ಡಿಸೆಂಬರ್ 1 (ಭಾನುವಾರ): ಗೇಮ್ 6
  • ಡಿಸೆಂಬರ್ 2 (ಸೋಮವಾರ): ವಿಶ್ರಾಂತಿ ದಿನ
  • ಡಿಸೆಂಬರ್ 3 (ಮಂಗಳವಾರ): ಗೇಮ್ 7
  • ಡಿಸೆಂಬರ್ 4 (ಬುಧವಾರ): ಗೇಮ್ 8
  • ಡಿಸೆಂಬರ್ 5 (ಗುರುವಾರ): ಗೇಮ್ 9
  • ಡಿಸೆಂಬರ್ 6 (ಶುಕ್ರವಾರ): ವಿಶ್ರಾಂತಿ ದಿನ
  • ಡಿಸೆಂಬರ್ 7 (ಶನಿವಾರ): ಗೇಮ್ 10
  • ಡಿಸೆಂಬರ್ 8 (ಭಾನುವಾರ): ಗೇಮ್ 11
  • ಡಿಸೆಂಬರ್ 9 (ಸೋಮವಾರ): ಗೇಮ್ 12
  • ಡಿಸೆಂಬರ್ 10 (ಮಂಗಳವಾರ): ವಿಶ್ರಾಂತಿ ದಿನ
  • ಡಿಸೆಂಬರ್ 11 (ಬುಧವಾರ): ಗೇಮ್ 13
  • ಡಿಸೆಂಬರ್ 12 (ಬುಧವಾರ): ಗೇಮ್ 14
  • ಡಿಸೆಂಬರ್ 13 (ಗುರುವಾರ): ಟೈ ಬ್ರೇಕರ್ (ಅಗತ್ಯವಿದ್ದರೆ)

ಎಲ್ಲಾ ಗೇಮ್​ಗಳು ಸ್ಥಳೀಯ ಸಮಯ 17:00 ಕ್ಕೆ (2:30 pm IST) ಪ್ರಾರಂಭವಾಗುತ್ತವೆ.

ಇದನ್ನೂ ಓದಿ: ಟ್ರೋಫಿ ಗೆದ್ದು ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಸಂಭ್ರಮಿಸಿದ ಭಾರತೀಯ ಚೆಸ್ ಚತುರರು

ವಿಶ್ವ ಚೆಸ್ ಚಾಂಪಿಯನ್‌ಶಿಪ್ ಅನ್ನು ವೀಕ್ಷಿಸುವುದು ಹೇಗೆ?

ಡಿ ಗುಕೇಶ್ ಮತ್ತು ಡಿಂಗ್ ಲಿರೆನ್ ನಡುವಿನ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯವನ್ನು FIDE ಯೂಟ್ಯೂಬ್ ಚಾನೆಲ್​ನಲ್ಲಿ ವೀಕ್ಷಿಸಬಹುದು. ಹಾಗೆಯೇ twitch.tv ವೆಬ್​ಸೈಟ್​ನಲ್ಲೂ ಲೈವ್ ಸ್ಟೀಮಿಂಗ್ ಇರಲಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್