Paralympics 2024: ಹೈ ಜಂಪ್​ನಲ್ಲಿ ಬೆಳ್ಳಿ, ಕಂಚಿನ ಪದಕ ಗೆದ್ದ ಶರದ್, ಮರಿಯಪ್ಪನ್

Paralympics 2024: 2020 ರಲ್ಲಿ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ 54 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ವೇಳೆ 5 ಚಿನ್ನದ ಪದಕ, 8 ಬೆಳ್ಳಿ ಪದಕ ಮತ್ತು 6 ಕಂಚಿನ ಪದಕ ಗೆಲ್ಲುವಲ್ಲಿ ಭಾರತೀಯರು ಯಶಸ್ವಿಯಾಗಿದ್ದರು. ಈ ಬಾರಿ 84 ಕ್ರೀಡಾಪಟುಗಳು ಭಾಗವಹಿಸಿರುವುದರಿಂದ ಭಾರತವು ಹೆಚ್ಚಿನ ಪದಕಗಳ ನಿರೀಕ್ಷೆಯಲ್ಲಿದೆ.

Paralympics 2024: ಹೈ ಜಂಪ್​ನಲ್ಲಿ ಬೆಳ್ಳಿ, ಕಂಚಿನ ಪದಕ ಗೆದ್ದ ಶರದ್, ಮರಿಯಪ್ಪನ್
Sharad Kumar - Mariyappan Thangavelu
Follow us
|

Updated on:Sep 04, 2024 | 8:17 AM

ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಹೈಜಂಪ್ ಟಿ63 ಸ್ಪರ್ಧೆಯಲ್ಲಿ ಭಾರತದ ಶದರ್ ಕುಮಾರ್ ಹಾಗೂ ಮರಿಯಪ್ಪನ್ ತಂಗವೇಲು ಪದಕಗಳನ್ನು ಗೆದ್ದಿದ್ದಾರೆ. 1.88 ಮೀಟರ್ ಎತ್ತರ ಜಿಗಿತದೊಂದಿಗೆ ಶರದ್ ಕುಮಾರ್ ಬೆಳ್ಳಿ ಪದಕ ಗೆದ್ದರೆ, 1.85 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಮರಿಯಪ್ಪನ್ ತಂಗವೇಲು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ಟಿ63 ವಿಭಾಗದಲ್ಲಿ ವಿಶ್ವ ದಾಖಲೆ ಹೊಂದಿರುವ ಅಮೆರಿಕದ ಎಜ್ರಾ ಫ್ರೆಚ್ ಅವರು 1.94 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಪ್ಯಾರಾಲಿಂಪಿಕ್ಸ್​​ನಲ್ಲಿ ಹೊಸ ದಾಖಲೆಯನ್ನು ಬರೆದು, ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು.

2016 ರಲ್ಲಿ ರಿಯೊ ಡಿ ಜನೈರೊದಲ್ಲಿ ಚಿನ್ನ ಮತ್ತು ಟೋಕಿಯೊದಲ್ಲಿ ಬೆಳ್ಳಿ ಗೆದ್ದಿದ್ದ ಮರಿಯಪ್ಪನ್ ಈ ಬಾರಿ ಕೂಡ ಪದಕವನ್ನು ಗೆದ್ದಿರುವುದು ವಿಶೇಷ. ಇದರೊಂದಿಗೆ ಮೂರು ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ವಿಶೇಷ ಸಾಧನೆ ಮಾಡಿದರು.

ಈ ಎರಡು ಪದಕಗಳೊಂದಿಗೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪದಕಗಳ ಸಂಖ್ಯೆ 20 ಕ್ಕೇರಿದೆ. ಇದು ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತೀಯರ ಶ್ರೇಷ್ಠ ಸಾಧನೆ ಎಂಬುದು ವಿಶೇಷ.2020 ರಲ್ಲಿ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ 54 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ವೇಳೆ 5 ಚಿನ್ನದ ಪದಕ, 8 ಬೆಳ್ಳಿ ಪದಕ ಮತ್ತು 6 ಕಂಚಿನ ಪದಕಗಳೊಂದಿಗೆ ಭಾರತೀಯರು ಒಟ್ಟು 19 ಪದಕಗಳನ್ನು ಗೆದ್ದಿದ್ದರು. ಆದರೆ ಈ ಬಾರಿ ಈಗಾಗಲೇ 20 ಪದಕಗಳನ್ನು ಗೆಲ್ಲುವಲ್ಲಿ ಭಾರತೀಯ ಕ್ರೀಡಾಪಟುಗಳು ಯಶಸ್ವಿಯಾಗಿದ್ದಾರೆ.

2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಪದಕ ವಿಜೇತರು
ಸಂ. ಕ್ರೀಡಾಪಟು ಕ್ರೀಡೆ ಈವೆಂಟ್ ಪದಕ
1 ಅವನಿ ಲೇಖನಾ ಶೂಟಿಂಗ್ ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಚಿನ್ನ
2 ಮೋನಾ ಅಗರ್ವಾಲ್ ಶೂಟಿಂಗ್ ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಕಂಚು
3 ಪ್ರೀತಿ ಪಾಲ್ ಅಥ್ಲೆಟಿಕ್ಸ್ ಮಹಿಳೆಯರ 100ಮೀ ಟಿ35 ಕಂಚು
4 ಮನೀಶ್ ನರ್ವಾಲ್ ಶೂಟಿಂಗ್ ಪುರುಷರ 10 ಮೀ ಏರ್ ಪಿಸ್ತೂಲ್ SH1 ಬೆಳ್ಳಿ
5 ರುಬಿನಾ ಫ್ರಾನ್ಸಿಸ್ ಶೂಟಿಂಗ್ ಮಹಿಳೆಯರ 10ಮೀ ಏರ್ ಪಿಸ್ತೂಲ್ SH1 ಕಂಚು
6 ಪ್ರೀತಿ ಪಾಲ್ ಅಥ್ಲೆಟಿಕ್ಸ್ ಮಹಿಳೆಯರ 200ಮೀ ಟಿ35 ಕಂಚು
7 ನಿಶಾದ್ ಕುಮಾರ್ ಅಥ್ಲೆಟಿಕ್ಸ್ ಪುರುಷರ ಎತ್ತರ ಜಿಗಿತ T47 ಬೆಳ್ಳಿ
8 ಯೋಗೇಶ್ ಕಥುನಿಯಾ ಅಥ್ಲೆಟಿಕ್ಸ್ ಪುರುಷರ ಡಿಸ್ಕಸ್ ಥ್ರೋ F56 ಬೆಳ್ಳಿ
9 ನಿತೇಶ್ ಕುಮಾರ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ಚಿನ್ನ
10 ತುಳಸಿಮತಿ ಮುರುಗೇಶನ್ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ SU5 ಬೆಳ್ಳಿ
11 ಮನಿಷಾ ರಾಮದಾಸ್ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ SU5 ಕಂಚು
12 ಸುಹಾಸ್ ಯತಿರಾಜ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL4 ಬೆಳ್ಳಿ
13 ರಾಕೇಶ್ ಕುಮಾರ್ / ಶೀತಲ್ ದೇವಿ ಬಿಲ್ಲುಗಾರಿಕೆ ಮಿಶ್ರ ತಂಡ ಕಂಚು
14 ಸುಮಿತ್ ಆಂಟಿಲ್ ಅಥ್ಲೆಟಿಕ್ಸ್ ಜಾವೆಲಿನ್ ಎಸೆತ F64 ಚಿನ್ನ
15 ನಿತ್ಯ ಶ್ರೀ ಶಿವನ್ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ SH6 ಕಂಚು
16 ದೀಪ್ತಿ ಜೀವನಜಿ ಅಥ್ಲೆಟಿಕ್ಸ್ ಮಹಿಳೆಯರ 400 ಮೀ ಟಿ20 ಕಂಚು
17 ಮರಿಯಪ್ಪನ್ ತಂಗವೇಲು ಅಥ್ಲೆಟಿಕ್ಸ್ ಪುರುಷರ ಎತ್ತರ ಜಿಗಿತ T63 ಕಂಚು
18 ಶರದ್ ಕುಮಾರ್ ಅಥ್ಲೆಟಿಕ್ಸ್ ಪುರುಷರ ಎತ್ತರ ಜಿಗಿತ T63 ಬೆಳ್ಳಿ
19 ಅಜೀತ್ ಸಿಂಗ್ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಎಸೆತ F46 ಬೆಳ್ಳಿ
20 ಸುಂದರ್ ಸಿಂಗ್ ಗುರ್ಜರ್ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಎಸೆತ F46 ಕಂಚು

Published On - 8:17 am, Wed, 4 September 24

ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು