AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics 2020: 41 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ ಭಾರತ

India vs Great Britain: 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಕೊನೆಯ ಸ್ಥಾನ ಅಲಂಕರಿಸುವ ಮೂಲಕ ಭಾರೀ ಅವಮಾನಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಭರ್ಜರಿ ಪ್ರದರ್ಶನದೊಂದಿಗೆ ಮುನ್ನುಗ್ಗಿರುವ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿದೆ.

Tokyo Olympics 2020: 41 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ ಭಾರತ
Indian Hockey team
TV9 Web
| Edited By: |

Updated on:Aug 01, 2021 | 7:08 PM

Share

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಭಾನುವಾರ ನಡೆದ ಎಂಟರಘಟ್ಟದ ಹಣಾಹಣಿಯಲ್ಲಿ ಬಿಟ್ರನ್ ತಂಡವನ್ನು 3-1 ಅಂತರದಿಂದ ಮಣಿಸುವ ಮೂಲಕ ಟೀಮ್ ಇಂಡಿಯಾ ಸೆಮಿ ಫೈನಲ್ ಪ್ರವೇಶಿಸಿದೆ. ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಸೆಮಿ ಫೈನಲ್​ ಪಂದ್ಯದಲ್ಲಿ ಭಾರತ ಮೊದಲ ಗೋಲು ದಾಖಲಿಸಿತು. ಪಂದ್ಯ ಶುರುವಾದ 9 ನಿಮಿಷದಲ್ಲೇ ಪ್ರಥಮ ಗೋಲು ದಾಖಲಿಸಿ ದಿಲ್​ಪ್ರೀತ್ ಸಿಂಗ್ ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು.

ಆ ಬಳಿಕ ಮತ್ತಷ್ಟು ಆಕ್ರಮಣಕಾರಿ ಆಟವಾಡಿದ ಭಾರತ ಸತತವಾಗಿ ಬ್ರಿಟನ್ ಗೋಲ್​ನತ್ತ ದಾಳಿ ನಡೆಸಿತು. ಪಂದ್ಯದ 21 ನಿಮಿಷದಲ್ಲಿ ಸಿಕ್ಕ ಮತ್ತೊಂದು ಅವಕಾಶವನ್ನು ಬಳಸಿಕೊಂಡ ಗುಜರಂತ್ ಸಿಂಗ್ ಚೆಂಡನ್ನು ಗೋಲ್ ಬಲೆಯೊಳಗೆ ತಲುಪಿಸಿದರು. ಅದರಂತೆ ಮೊದಲಾರ್ಧ ಮುಕ್ತಾಯದ ವೇಳೆಗೆ ಭಾರತ 2-0 ಮುನ್ನಡೆ ಪಡೆದುಕೊಂಡಿತು.

ಆದರೆ ಮೂರನೇ ಕ್ವಾರ್ಟರ್​ನಲ್ಲಿ ಕಂಬ್ಯಾಕ್ ಮಾಡಿದ ಬ್ರಿಟನ್ ಅಟ್ಯಾಕಿಂಗ್ ಆಟದ ಮೂಲಕ ಭಾರತದ ರಕ್ಷಣಾ ಪಡೆಯನ್ನು ಬೇಧಿಸುವ ಸತತ ಪ್ರಯತ್ನ ಮಾಡಿದರು. ಪರಿಣಾಮ 45ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್​ನಲ್ಲಿ ಗೋಲು ದಾಖಲಿಸಿ  ಅಂತರವನ್ನು 2-1ಕ್ಕೆ ಇಳಿಸಿದರು.

ಇನ್ನು ನಾಲ್ಕನೇ ಕ್ವಾರ್ಟರ್​ನಲ್ಲಿ ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬಂತು. ಅದರಲ್ಲೂ ಬ್ರಿಟನ್ ತಂಡ ಮೇಲುಗೈ ಸಾಧಿಸಿದರೂ ಭಾರತದ ರಕ್ಷಣಾ ಆಟಗಾರರನ್ನು ತಪ್ಪಿಸಿ ಗೋಲು ದಾಖಲಿಸಲು ಸಾಧ್ಯವಾಗಿಲ್ಲ. ಆಟ ಇನ್ನೇನು ಮುಗಿಯುವಷ್ಟರಲ್ಲಿ ಹಾರ್ದಿಕ್ ಸಿಂಗ್ ಮತ್ತೊಂದು ಗೋಲು ದಾಖಲಿಸಿ ಮೂಲಕ ಭಾರತಕ್ಕೆ 3-1 ಅಂತರದ ಭರ್ಜರಿ ಜಯ ತಂದುಕೊಟ್ಟರು.

ಈ ಜಯದೊಂದಿಗೆ ಭಾರತ 41 ವರ್ಷಗಳ ಬಳಿಕ ಸೆಮಿಫೈನಲ್​ಗೇರಿದೆ. 1980 ರ ಮಾಸ್ಕೋ ಒಲಿಂಪಿಕ್ಸ್​ನಲ್ಲಿ ಭಾರತ ಕಡೆಯ ಬಾರಿ ಪದಕ ಜಯಿಸಿತ್ತು. ಆ ಬಳಿಕ ಪ್ರಮುಖ ಘಟ್ಟ ತಲುಪುವಲ್ಲಿ ಇಂಡಿಯನ್ ಹಾಕಿ ಟೀಮ್ ವಿಫಲವಾಗಿತ್ತು.

ಅದರಲ್ಲೂ 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಕೊನೆಯ ಸ್ಥಾನ ಅಲಂಕರಿಸುವ ಮೂಲಕ ಭಾರೀ ಅವಮಾನಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಭರ್ಜರಿ ಪ್ರದರ್ಶನದೊಂದಿಗೆ ಮುನ್ನುಗ್ಗಿರುವ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ ಭಾರತಕ್ಕೆ 9ನೇ ಬಾರಿ ಸ್ವರ್ಣ ಪದಕ ಗೆದ್ದುಕೊಡುವ ವಿಶ್ವಾಸದಲ್ಲಿದೆ ಭಾರತೀಯ ಹಾಕಿ ತಂಡ.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

ಇದನ್ನೂ ಓದಿ: LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ

(Tokyo olympics 2020 india won Againist Great Britain and Enters Semi final)

Published On - 7:01 pm, Sun, 1 August 21

Follow Us
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?