AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿ ಬಾರಿಸಿದ ಆ 2 ಸಿಕ್ಸರ್​ಗಳು ಇಡೀ ಕ್ರಿಕೆಟ್​ ಲೋಕವನ್ನೇ ನಿಬ್ಬೇರಗಾಗಿಸಿದವು..! ವಿಡಿಯೋ

ಅಕ್ಟೋಬರ್ 23, 2022 ರಂದು ಮೆಲ್ಬೋರ್ನ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ T20 ವಿಶ್ವಕಪ್ ಪಂದ್ಯ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ಕ್ಷಣವಾಗಿ ದಾಖಲಾಗಿದೆ. ವಿರಾಟ್ ಕೊಹ್ಲಿಯ ಅಜೇಯ 82 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಮತ್ತು ಕೊನೆಯ ಓವರ್‌ನ ನಾಟಕೀಯತೆ ಭಾರತಕ್ಕೆ ರೋಚಕ ಜಯ ತಂದುಕೊಟ್ಟಿತು. ಕೇವಲ 31/4 ಸ್ಥಿತಿಯಿಂದ ಗೆಲುವಿನ ದಡ ಮುಟ್ಟಿಸಿದ ಕೊಹ್ಲಿ, ಅಭಿಮಾನಿಗಳಿಗೆ ಸದಾ ಸ್ಮರಣೀಯ ಅನುಭವ ನೀಡಿದರು.

ಕೊಹ್ಲಿ ಬಾರಿಸಿದ ಆ 2 ಸಿಕ್ಸರ್​ಗಳು ಇಡೀ ಕ್ರಿಕೆಟ್​ ಲೋಕವನ್ನೇ ನಿಬ್ಬೇರಗಾಗಿಸಿದವು..! ವಿಡಿಯೋ
vImage Credit source: RCB X
ಪೃಥ್ವಿಶಂಕರ
|

Updated on:Oct 23, 2026 | 5:50 PM

Share

ಅಕ್ಟೋಬರ್ 23, 2022 ರ ರಾತ್ರಿ ಭಾರತೀಯ ಕ್ರಿಕೆಟ್​ನಲ್ಲಿ ಮರೆಯಲಾರದ ಕ್ಷಣಕ್ಕೆ ಸಾಕ್ಷಿಯಾಯಿತು. ಇನ್ನೇನೂ ಗೆದ್ದೇ ಬಿಟ್ಟೆವು ಎಂದು ಬೀಗುತ್ತಿದ್ದ ಪಾಕಿಗಳಿಗೆ ಸೋಲಿನ ಶಾಕ್ ನೀಡಿದ್ದ ಕಿಂಗ್ ಕೊಹ್ಲಿ ಭಾರತೀಯ ಅಭಿಮಾನಿಗಳು ಹುಚ್ಚೇದ್ದು ಕುಣಿಯುವಂತೆ ಮಾಡಿದ್ದರು. ವಾಸ್ತವವಾಗಿ ಆ ರಾತ್ರಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ20 ವಿಶ್ವಕಪ್‌ನ ರೋಚಕ ಪಂದ್ಯ ನಡೆದಿತ್ತು. ಪಾಕಿಸ್ತಾನ ನೀಡಿದ್ದ 160 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 31 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಆದರೆ, ವಿರಾಟ್ ಕೊಹ್ಲಿ ಮಾತ್ರ ಕೊನೆಯವರೆಗೂ ಹೋರಾಟ ಬಿಡಲಿಲ್ಲ.

ಹಾರ್ದಿಕ್ ಪಾಂಡ್ಯ ಜೊತೆಗೂಡಿದ ಕೊಹ್ಲಿ ಐದನೇ ವಿಕೆಟ್‌ಗೆ 113 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು. ಈ ಜೋಡಿ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿತು. ಪಂದ್ಯದ ಕೊನೆಯ ಹಂತದಲ್ಲಿ ವಿರಾಟ್ ಕೊಹ್ಲಿ ಹೊಡೆದ ಆ ಎರಡು ಸಿಕ್ಸರ್‌ಗಳು ಕ್ರಿಕೆಟ್ ಇತಿಹಾಸದಲ್ಲೇ ಮರೆಯಲಾಗದ ಹೊಡೆತಗಳಾಗಿ ಉಳಿದಿವೆ.

ಹ್ಯಾರಿಸ್ ರೌಫ್‌ಗೆ ಸಿಕ್ಸರ್‌ಗಳ ಶಾಕ್

ಪಂದ್ಯ ರೋಚಕ ಘಟ್ಟ ತಲುಪಿತ್ತು. ಭಾರತದ ಗೆಲುವಿಗೆ ಕೊನೆಯ ಎಂಟು ಎಸೆತಗಳಲ್ಲಿ 28 ರನ್‌ಗಳ ಅಗತ್ಯವಿತ್ತು. ಈ ವೇಳೆ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಬೌಲಿಂಗ್‌ಗೆ ಬಂದರು. ಎದುರಿಗೆ ಇದ್ದದ್ದು, ರನ್ ಚೇಸಿಂಗ್ ಸಾಮ್ರಾಟ ವಿರಾಟ್ ಕೊಹ್ಲಿ. ರೌಫ್ ಎಸೆದ 19ನೇ ಓವರ್‌ನ ಐದನೇ ಎಸೆತವನ್ನು ಬ್ಯಾಕ್‌ಫುಟ್‌ನಲ್ಲಿ ಆಡಿದ ಕೊಹ್ಲಿ ನೇರವಾಗಿ ಸಿಕ್ಸರ್‌ಗೆ ಅಟ್ಟಿದರು. ಮುಂದಿನ ಎಸೆತದಲ್ಲೇ ಫೈನ್ ಲೆಗ್ ಮೇಲಿಂದ ಮತ್ತೊಂದು ಸಿಕ್ಸರ್ ಸಿಡಿಸಿದರು. ಸತತ ಎರಡು ಎಸೆತಗಳಲ್ಲಿ 12 ರನ್‌ಗಳು ಹರಿದುಬಂದವು. ಇದರಿಂದ ಪಂದ್ಯದ ಚಿತ್ರಣವೇ ಬದಲಾಯಿತು. ಮೈದಾನದಲ್ಲಿದ್ದ ಸಾವಿರಾರು ಅಭಿಮಾನಿಗಳು ಸಂಭ್ರಮದಲ್ಲಿ ಮುಳುಗಿದರೆ, ಟಿವಿ ಮುಂದೆ ಕುಳಿತಿದ್ದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ರೋಮಾಂಚನಗೊಂಡರು.

ಕೊನೆಯ ಓವರ್‌ನಲ್ಲಿ ನಡೆದಿದ್ದೇನು?

ಭಾರತಕ್ಕೆ ಕೊನೆಯ ಓವರ್‌ನಲ್ಲಿ ಗೆಲ್ಲಲು 16 ರನ್‌ಗಳ ಅಗತ್ಯವಿತ್ತು. ಮೊಹಮ್ಮದ್ ನವಾಜ್ ಬೌಲಿಂಗ್‌ಗೆ ಬಂದರು. ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಔಟಾದರು. ನಂತರದ ಎರಡು ಎಸೆತಗಳಲ್ಲಿ ಭಾರತ ಮೂರು ರನ್ ಗಳಿಸಿತು. ನಾಲ್ಕನೇ ಎಸೆತ ನೋ-ಬಾಲ್ ಆಗಿತ್ತು. ಕೊಹ್ಲಿ ಆ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಫ್ರೀ-ಹಿಟ್ ಎಸೆತದಲ್ಲಿ ಕೊಹ್ಲಿ ಬೌಲ್ಡ್ ಆದರೂ, ಚೆಂಡು ಸ್ಟಂಪ್‌ಗೆ ತಾಗಿ ದೂರ ಹೋಯಿತು. ಇದರ ಲಾಭ ಪಡೆದ ಭಾರತೀಯ ಬ್ಯಾಟರ್‌ಗಳು ಮೂರು ರನ್ ಓಡಿದರು.

ಐದನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸ್ಟಂಪ್ ಔಟಾದರು. ಭಾರತಕ್ಕೆ ಗೆಲ್ಲಲು ಎರಡು ರನ್‌ಗಳು ಬೇಕಿದ್ದವು. ಕೊನೆಯ ಎಸೆತ ಎದುರಿಸಲು ರವಿಚಂದ್ರನ್ ಅಶ್ವಿನ್ ಕ್ರೀಸ್‌ಗೆ ಬಂದರು. ನವಾಜ್ ಎಸೆದ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಹೋದ ಕಾರಣ ಅಂಪೈರ್ ವೈಡ್ ನೀಡಿದರು. ಇದರೊಂದಿಗೆ ಪಂದ್ಯ ಟೈ ಆಯಿತು. ಗೆಲುವಿಗೆ ಕೇವಲ ಒಂದು ರನ್ ಬೇಕಿದ್ದಾಗ, ಅಶ್ವಿನ್ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದರು. ಕೊನೆಯ ಎಸೆತವನ್ನು ಫೀಲ್ಡರ್‌ಗಳ ಮೇಲಿಂದ ಹೊಡೆದು ಭಾರತಕ್ಕೆ ನಾಲ್ಕು ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು.

‘ಅಹಂಕಾರಿ ಮತ್ತು ಗರ್ವಿಷ್ಠ’; ಕೊಹ್ಲಿಯ ಬಗ್ಗೆ ಡಿವಿಲಿಯರ್ಸ್ ಅಚ್ಚರಿಯ ಹೇಳಿಕೆ..!

ಕೊಹ್ಲಿಯ ಅಜೇಯ 82 ರನ್‌ಗಳ ಮ್ಯಾಜಿಕ್

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. ಅಸಾಧ್ಯವೆನಿಸಿದ್ದ ಪಂದ್ಯವನ್ನು ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಭಾರತದ ಪರವಾಗಿ ತಿರುಗಿಸಿದ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Fri, 23 October 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ