Galaxy M34 5G: ಜುಲೈ 7 ರಂದು ಗ್ಯಾಲಕ್ಸಿ M34 5G ಸ್ಮಾರ್ಟ್​ಫೋನ್ ಬಿಡುಗಡೆ: ಇದರಲ್ಲಿದೆ 6,000mAh ಬ್ಯಾಟರಿ ಸಾಮರ್ಥ್ಯ

ಗ್ಯಾಲಕ್ಸಿ M33 5G ಫೋನಿಗಿಂತ ಗ್ಯಾಲಕ್ಸಿ M34 ಸಾಕಷ್ಟು ಅಭಿವೃದ್ದಿ ಹೊಂದಿದೆ. ಇದರಲ್ಲಿ 120Hz ನ ಸೂಪರ್ ಅಮೊಲೊಡ್ ಡಿಸ್ ಪ್ಲೇ ನೀಡಲಾಗಿದೆ. 50 ಮೆಗಾ ಪಿಕ್ಸೆಕ್ ಪ್ರೈಮರಿ ಸೆನ್ಸಾರ್​ನ ಕ್ಯಾಮೆರಾ ನೀಡಲಾಗಿದೆ.

Galaxy M34 5G: ಜುಲೈ 7 ರಂದು ಗ್ಯಾಲಕ್ಸಿ M34 5G ಸ್ಮಾರ್ಟ್​ಫೋನ್ ಬಿಡುಗಡೆ: ಇದರಲ್ಲಿದೆ 6,000mAh ಬ್ಯಾಟರಿ ಸಾಮರ್ಥ್ಯ
Samsung Galaxy M34 5G
Follow us
Vinay Bhat
|

Updated on: Jun 27, 2023 | 3:35 PM

ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಟೆಕ್ ಸಂಸ್ಥೆ ಸ್ಯಾಮ್​ಸಂಗ್ (Samsung) ತನ್ನ ಹೊಸ ಗ್ಯಾಲಕ್ಸಿ ಎಮ್​34 5ಜಿ ಸ್ಮಾರ್ಟ್​ಫೋನ್​ನ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದೆ. ಬರೋಬ್ಬರಿ 6,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್​ಫೋನ್ (Smartphone) ಇದೇ ಜುಲೈ 7 ರಂದು ಭಾರತದ ಮಾರುಕಟ್ಟೆಗೆ ಅಪ್ಪಳಿಸುತ್ತಿದೆ. ನೀವು ಈ ಫೋನನ್ನು ಸತತವಾಗಿ ಉಪಯೋಗಿಸುತ್ತಿದ್ದರೂ ಎರಡು ದಿನಗಳ ಕಾಲ ಬ್ಯಾಟರಿ ಬ್ಯಾಕಪ್ ಬರಲಿದೆ ಎಂದು ಕಂಪನಿ ಖಚಿತವಾಗಿ ಹೇಳಿದೆ. ಗ್ಯಾಲಕ್ಸಿ M34 5G (Galaxy M34 5G) ಸ್ಮಾರ್ಟ್​ಫೋನ್ ಸ್ಯಾಮ್​ಸಂಗ್​ನ ಭಾರತದ ಅಧಿಕೃತ ವೆಬ್​ಸೈಟ್ ಮತ್ತು ಅಮೆಜಾನ್ ಮೂಲಕ ಸೇಲ್ ಕಾಣಲಿದೆಯಂತೆ.

ಗ್ಯಾಲಕ್ಸಿ M33 5G ಫೋನಿಗಿಂತ ಗ್ಯಾಲಕ್ಸಿ M34 ಸಾಕಷ್ಟು ಅಭಿವೃದ್ದಿ ಹೊಂದಿದೆ. ಇದರಲ್ಲಿ 120Hz ನ ಸೂಪರ್ ಅಮೊಲೊಡ್ ಡಿಸ್ ಪ್ಲೇ ನೀಡಲಾಗಿದೆ. 50 ಮೆಗಾ ಪಿಕ್ಸೆಕ್ ಪ್ರೈಮರಿ ಸೆನ್ಸಾರ್​ನ ಕ್ಯಾಮೆರಾ ನೀಡಲಾಗಿದೆ. ವಿಶೇಷ ಎಂದರೆ ಈ ಫೋನ್​ನಲ್ಲಿ ಫೋಟೋ ತೆಗೆಯುವಾಗ ಅಥವಾ ವಿಡಿಯೋ ಮಾಡುವಾಗ ಕೈ ಶೇಕ್ ಆದರೂ ಅದ್ಭುತವಾಗಿ ಸೆರೆ ಹಿಡಿಯುತ್ತಂತೆ. ನೈಟೋಗ್ರಫಿ ಎಂಬ ವಿಶೇಷ ಆಯ್ಕೆ ಕೂಡ ನೀಡಲಾಗಿದ್ದು, ರಾತ್ರಿಯಲ್ಲಿ ಉತ್ತಮ ಫೋಟೋ ಕ್ಲಿಕ್ ಮಾಡಬಹುದು. ಈ ಭಾರಿ ಕಂಪನಿ ಗ್ಯಾಲಕ್ಸಿ M34 ನಲ್ಲಿ ಕ್ಯಾಮೆರಾಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿದೆ.

Laptop Slow: ಲ್ಯಾಪ್​ಟಾಪ್ ಸ್ಲೋ ಆಗಿದ್ದರೆ ಈ ಟ್ರಿಕ್ಸ್ ಬಳಸಿ ಸೂಪರ್ ಫಾಸ್ಟ್ ಮಾಡಿ

ಇದನ್ನೂ ಓದಿ
Image
Nothing Phone 2: ನಥಿಂಗ್ ಫೋನ್ 2 ಮೇಲೆ ಕಣ್ಣಿಟ್ಟವರಿಗೆ ಭರ್ಜರಿ ಸುದ್ದಿ: ಜೂನ್ 29 ರಿಂದ ಪ್ರೀ ಆರ್ಡರ್​ಗೆ ಲಭ್ಯ
Image
Asus Zenfone 10: 200MP ಕ್ಯಾಮೆರಾದ ಈ ಬೊಂಬಾಟ್ ಸ್ಮಾರ್ಟ್​ಫೋನ್ ಬಿಡುಗಡೆಗೆ ಎರಡನೇ ದಿನ ಬಾಕಿ
Image
Samsung Galaxy S23 Ultra: ಬಿಸಿ ದೋಸೆಯಂತೆ ಸೇಲ್ ಆಗುತ್ತಿದೆ ಸ್ಯಾಮ್​ಸಂಗ್ ಪ್ರೀಮಿಯಂ ಸ್ಮಾರ್ಟ್​ಫೋನ್
Image
WhatsApp Tips: ಬ್ಯಾನ್ ಆದ ವಾಟ್ಸ್​ಆ್ಯಪ್ ಖಾತೆಯನ್ನು ಮರಳಿ ಪಡೆಯುವುದು ಹೇಗೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಸ್ಮಾರ್ಟ್‌ಫೋನ್​ನ ಬೆಲೆ ಎಷ್ಟಿರಬಹುದು ಎಂಬುದು ಬಹಿರಂಗವಾಗಿಲ್ಲ. ಆದರೆ, ಒಟ್ಟು ಎರಡು ಸ್ಟೋರೆಜ್ ಮಾದರಿಯಲ್ಲಿ ಬಿಡುಗಡೆ ಆಗಲಿದೆ. 8GB RAM ಮತ್ತು 128GB ಸ್ಟೋರೇಜ್ ಮತ್ತು 8GB RAM ಮತ್ತು 256GB ಸ್ಟೋರೇಜ್ ಆವೃತ್ತಿಯಲ್ಲಿ ಬರುವ ನಿರೀಕ್ಷೆಯಿದೆ. ಈ ಫೋನಿನ ಬೆಲೆ 30,000 ರೂ. ಇರಬಹುದು ಎನ್ನಲಾಗಿದೆ.

ಈ ಫೋನಿನ ಫೀಚರ್ಸ್ ಬಗ್ಗೆ ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ, 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಸೂಪರ್ ಅಮೊಲೊಡ್ ಡಿಸ್‌ಪ್ಲೇ ಹೊಂದಿರಲಿದೆ. 120Hz ರಿಫ್ರೆಶ್​ರೇಟ್​ನಿಂದ ಕೂಡಿರಲಿದೆ. ಸ್ಯಾಮ್‌ಸಂಗ್‌ ಎಕ್ಸಿನೋಸ್‌ 1280 SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿರಲಿದ್ದು, ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಬರಬಹುದು. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಇರಲಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿದೆ. ಇದಲ್ಲದೆ ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಒಳಗೊಂಡಿರಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಸ್ಮಾರ್ಟ್‌ಫೋನ್​ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 6,000mAh ಸಾಮರ್ಥ್ಯದ ಬ್ಯಾಟರಿ ಇದೆ. ಇದು 25W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದುಕೊಂಡಿದೆ. ಉಳಿದಂತೆ Wi-Fi, ಬ್ಲೂಟೂತ್, GPS, ಹಾಟ್‌ಸ್ಪಾಟ್‌, ಯುಎಸ್‌ಬಿ ಟೈಪ್‌ ಸಿ ಪೊರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ