ಚಳಿಗಾಲದಲ್ಲಿ ಫ್ರಿಡ್ಜ್ ಅನ್ನು ಯಾವ ತಾಪಮಾನದಲ್ಲಿ ಇಡಬೇಕು?: ಎಚ್ಚರ ವಹಿಸಿ

ಹೆಚ್ಚಿನ ತಾಪಮಾನದಲ್ಲಿ ಫ್ರಿಡ್ಜ್ ನಲ್ಲಿಟ್ಟ ವಸ್ತುಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಏತನ್ಮಧ್ಯೆ, ರೆಫ್ರಿಜರೇಟರ್ ಅನ್ನು ಹೊರಗಿನ ತಾಪಮಾನಕ್ಕೆ ತಕ್ಕಂತೆ ಬದಲಾಯಿಸುವುದು ಕೂಡ ಅತ್ಯಗತ್ಯ. ಎಲ್ಲವಾದರೆ ಹಸಿರು ತರಕಾರಿಗಳು ಮತ್ತು ಬೇಯಿಸಿದ ಆಹಾರವು ಹಾಳಾಗಬಹುದು.

ಚಳಿಗಾಲದಲ್ಲಿ ಫ್ರಿಡ್ಜ್ ಅನ್ನು ಯಾವ ತಾಪಮಾನದಲ್ಲಿ ಇಡಬೇಕು?: ಎಚ್ಚರ ವಹಿಸಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2024 | 12:17 PM

ಚಳಿಗಾಲ ಹತ್ತಿರವಾಗುತ್ತಿದೆ. ದೀಪಾವಳಿಯ ನಂತರ ಹವಾಮಾನವು ತಣ್ಣಗಾಗಲು ಪ್ರಾರಂಭಿಸುತ್ತದೆ. ಸದ್ಯ ಬೆಳಗ್ಗೆ ಮತ್ತು ಸಂಜೆ ಚಳಿಯ ವಾತಾವರಣ ಇದೆ. ಈ ಕಾರಣದಿಂದಾಗಿ, ಅನೇಕ ಜನರು ರೆಫ್ರಿಜರೇಟರ್ ಬಳಕೆಯನ್ನು ಕಡಿಮೆ ಮಾಡುತ್ತಾರೆ. ಕೆಲವರು ತಂಪಾದ ವಾತಾವರಣ ಇರುವುದರಿಂದ ಕೆಲವು ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದಿಲ್ಲ. ಹೀಗಿರುವಾಗ ಚಳಿಗಾಲದಲ್ಲಿ ರೆಫ್ರಿಜರೇಟರ್ ಎಷ್ಟು ಶಕ್ತಿಯಿಂದ ಕಾರ್ಯನಿರ್ವಹಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಹೆಚ್ಚಿನ ತಾಪಮಾನದಲ್ಲಿ ಫ್ರಿಡ್ಜ್ ನಲ್ಲಿಟ್ಟ ವಸ್ತುಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಏತನ್ಮಧ್ಯೆ, ರೆಫ್ರಿಜರೇಟರ್ ಅನ್ನು ಹೊರಗಿನ ತಾಪಮಾನಕ್ಕೆ ತಕ್ಕಂತೆ ಬದಲಾಯಿಸುವುದು ಕೂಡ ಅತ್ಯಗತ್ಯ. ಎಲ್ಲವಾದರೆ ಹಸಿರು ತರಕಾರಿಗಳು ಮತ್ತು ಬೇಯಿಸಿದ ಆಹಾರವು ಹಾಳಾಗಬಹುದು.

ತಾಪಮಾನವನ್ನು ಹೊಂದಿಸುವ ಅನುಕೂಲಗಳು:

ಚಳಿಗಾಲದಲ್ಲಿ ರೆಫ್ರಿಜರೇಟರ್ ಅನ್ನು ಸರಿಯಾದ ತಾಪಮಾನದಲ್ಲಿ ಹೊಂದಿಸುವುದು ಬಹಳ ಮುಖ್ಯ. ಇದರಿಂದ ಆಹಾರ ತಾಜಾವಾಗಿರುತ್ತದೆ. ವಿದ್ಯುತ್ ಉಳಿತಾಯವೂ ಆಗುತ್ತದೆ. ತಾಪಮಾನವನ್ನು ಸರಿಯಾಗಿ ನಿರ್ವಹಿಸದಿದ್ದರೆ ಆಹಾರವು ಹಾಳಾಗಬಹುದು. ಹೀಗಾಗಿ ಚಳಿಗಾಲದಲ್ಲಿ ರೆಫ್ರಿಜರೇಟರ್ ಅನ್ನು ಯಾವ ಸ್ಟೇಜ್​ನಲ್ಲಿ ಇಡಬೇಕು ಎಂಬುದನ್ನು ತಿಳಿಯುವುದು ಮುಖ್ಯ.

ತಾಪಮಾನ ಸರಿಯಾಗಿಲ್ಲದಿದ್ದರೆ ಸಮಸ್ಯೆ:

ರೆಫ್ರಿಜರೇಟರ್ ತಾಪಮಾನವು ತುಂಬಾ ಕಡಿಮೆಯಿದ್ದರೆ, ಹೆಚ್ಚಿನ ಕೋಲ್ಡ್​ನಿಂದಾಗಿ ತರಕಾರಿಗಳು ಮತ್ತು ಹಣ್ಣುಗಳು ಹಾಳಾಗಬಹುದು. ಇದಲ್ಲದೆ, ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತದೆ. ತಾಪಮಾನವು ತುಂಬಾ ಹೆಚ್ಚಿದ್ದರೆ, ಆಹಾರವು ಸರಿಯಾಗಿ ತಣ್ಣಗಾಗುವುದಿಲ್ಲ. ಬೇಗ ಹಾಳಾಗಬಹುದು. ಇದು ಆರೋಗ್ಯಕ್ಕೆ ಹಾನಿಕಾರಕ. ವಿಶೇಷವಾಗಿ ಹಾಲು ಮತ್ತು ಮಾಂಸ ಉತ್ಪನ್ನಗಳ ವಿಷಯದಲ್ಲಿ ಜಾಗರೂಕರಾಗಿರಬೇಕು.

ಇದನ್ನೂ ಓದಿ: ಅದ್ಭುತ ವೈಶಿಷ್ಟ್ಯಗಳೊಂದಿಗೆ 2 ಹೊಸ ರೀಚಾರ್ಜ್ ಪ್ಲಾನ್ ತಂದ ಜಿಯೋ

ಚಳಿಗಾಲದಲ್ಲಿ ರೆಫ್ರಿಜರೇಟರ್ ತಾಪಮಾನ:

ಚಳಿಗಾಲದಲ್ಲಿ ರೆಫ್ರಿಜರೇಟರ್ ತಾಪಮಾನವನ್ನು 2C ನಿಂದ 5C (35F ನಿಂದ 41F) ನಡುವೆ ಇಡುವುದು ಉತ್ತಮ. ಈ ತಾಪಮಾನವು ಆಹಾರವನ್ನು ಸುರಕ್ಷಿತವಾಗಿರಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಇದರೊಂದಿಗೆ, ತರಕಾರಿಗಳು 10 ರಿಂದ 15 ದಿನಗಳವರೆಗೆ ತಾಜಾವಾಗಿರುತ್ತವೆ.

ಇನ್ನು ಸಮಯಕ್ಕೆ ಫ್ರಿಡ್ಜ್ ಅನ್ನು ಡಿಫ್ರಾಸ್ಟ್ ಮಾಡುವುದು ಬಹಳ ಮುಖ್ಯ. ಅನೇಕರು ಇದನ್ನು ಕಡೆಗಣಿಸುತ್ತಾರೆ. ಇದರಿಂದಾಗಿ ಫ್ರಿಡ್ಜ್‌ನೊಳಗೆ ಮಂಜುಗಡ್ಡೆ ಸಂಗ್ರಹವಾಗುತ್ತದೆ, ಫ್ರಿಡ್ಜ್‌ನ ಉಷ್ಣತೆಯು ಕಡಿಮೆಯಾಗುತ್ತದೆ ಮತ್ತು ಆಹಾರ ಪದಾರ್ಥಗಳು ಹಾಳಾಗಬಹುದು. ಇದಲ್ಲದೇ ಫ್ರಿಡ್ಜ್ ನ ಕಂಪ್ರೆಸರ್ ಹೆಚ್ಚು ಕೆಲಸ ಮಾಡುವುದರಿಂದ ಫ್ರಿಡ್ಜ್ ಬೇಗ ಹಾಳಾಗುತ್ತದೆ. ದೊಡ್ಡ ಸಮಸ್ಯೆ ಎಂದರೆ ಮಂಜುಗಡ್ಡೆಯ ಶೇಖರಣೆಯಿಂದಾಗಿ ರೆಫ್ರಿಜರೇಟರ್ ಬಾಗಿಲು ತೆರೆಯಲು ಕಷ್ಟವಾಗುತ್ತದೆ. ಇದು ಆಹಾರ ಪದಾರ್ಥಗಳು ಹಾಳಾಗಲು ಕಾರಣವಾಗಬಹುದು ಮತ್ತು ರೆಫ್ರಿಜರೇಟರ್ ಹಾನಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್