AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: 30 ದಿನಗಳ ಈ ಪ್ಲ್ಯಾನ್ ಅನುಸರಿಸಿದ್ರೆ ಬೆಂಗಳೂರಿನಲ್ಲಿ ಬದುಕೋದು ಸುಲಭ ಎಂದ ಮಹಿಳೆ

ಬೆಂಗಳೂರು ಜೀವನ ಅಷ್ಟು ಸುಲಭವಲ್ಲ. ಹೊಸಬರು ಇಲ್ಲಿಗೆ ಬಂದರೆ ಈ ನಗರಕ್ಕೆ ಹೊಂದಿಕೊಳ್ಳೋದು ಕಷ್ಟವಾಗುತ್ತದೆ. ಆದರೆ ಇದೀಗ ಬೆಂಗಳೂರಿನಲ್ಲಿ ವಾಸಿಸುವ ಬಂಗಾಳಿ ಮಹಿಳೆಯೊಬ್ಬರು ನಗರಕ್ಕೆ ಹೊಸದಾಗಿ ಬಂದವರಿಗೆ 30 ದಿನಗಳಲ್ಲಿ ಹೇಗೆ ಹೊಂದಿಕೊಳ್ಳೋದು ಎಂದು ವಿವರಿಸಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: 30 ದಿನಗಳ ಈ ಪ್ಲ್ಯಾನ್ ಅನುಸರಿಸಿದ್ರೆ ಬೆಂಗಳೂರಿನಲ್ಲಿ ಬದುಕೋದು ಸುಲಭ ಎಂದ ಮಹಿಳೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Apr 05, 2026 | 7:24 PM

Share

ಬೆಂಗಳೂರು, ಏಪ್ರಿಲ್ 05 : ಬೆಂಗಳೂರು (Bengaluru) ಅಂದ್ರೆ ಈಗಿನ ಯುವಕ ಯುವತಿಯರಿಗೆ ಅದೇನೋ ಸೆಳೆತ. ಹೀಗಾಗಿ ಓದು ಮುಗಿಯುತ್ತಿದ್ದಂತೆ ಅದೆಷ್ಟೋ ಯುವಕ ಯುವತಿಯರು ಉದ್ಯೋಗ ಅರಸುತ್ತಾ ನಗರಕ್ಕೆ ಬರ್ತಾರೆ. ಹೀಗೆ ಬಂದವರಿಗೆ ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳೋದು ಕಷ್ಟವಾಗಬಹುದು. ಆದರೆ, ಬೆಂಗಳೂರಿನಲ್ಲಿ ವಾಸಿಸುವ ಬಂಗಾಳಿ ಮಹಿಳೆಯೊಬ್ಬರು ನಗರಕ್ಕೆ ಬರುವ ಹೊಸಬರಿಗೆ 30 ದಿನಗಳ ಪ್ಲ್ಯಾನ್ ಹಂಚಿಕೊಂಡಿದ್ದಾರೆ. ಕೇವಲ ಮೂವತ್ತು ದಿನಗಳಲ್ಲಿ ಈ ಹೊಸ ನಗರಕ್ಕೆ ಹೊಂದಿಕೊಂಡು ಮೊದಲ ಕೆಲವು ವಾರಗಳಲ್ಲಿ ಆತಂಕವಿಲ್ಲದೆ ಜೀವನ ನಡೆಸಬಹುದು ಎಂದು ವಿವರಿಸಿದ್ದಾರೆ. ಈ ಮಹಿಳೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಸಲಹೆಯನ್ನು ಮೆಚ್ಚಿಕೊಂಡಿದ್ದಾರೆ.

ಪ್ರಿಯಾಂಕಾ ಮಂಡಲ್ (priyankablrdairy) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಈ ಮಹಿಳೆ, ಬೆಂಗಳೂರಿನಲ್ಲಿ ಕಷ್ಟಪಡುವುದು ಸರ್ವೇ ಸಾಮಾನ್ಯ. ಆದರೆ ನೀವು ಈ 30 ದಿನಗಳ ಯೋಜನೆಯನ್ನು ಅನುಸರಿಸಿದರೆ, ಇಲ್ಲಿನ ಜೀವನ ಇನ್ನು ಸುಲಭವಾಗಿಸಬಹುದು. ಮೊದಲ ವಾರದಲ್ಲಿ, ಮನೆಯನ್ನು ತಕ್ಷಣ ಹುಡುಕುವ ಬದಲು ತಾತ್ಕಾಲಿಕ ವಾಸ್ತವ್ಯದತ್ತ ಗಮನ ಹರಿಸಿ. ಎರಡನೇ ವಾರದಲ್ಲಿ, ನಿಮ್ಮ ದೈನಂದಿನ ಪ್ರಯಾಣಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಇದುವೇ ನಿಮ್ಮ ದೈನಂದಿನ ಜೀವನದಲ್ಲಿ ನಿಜವಾದ ಬದಲಾವಣೆ ತರಬಹುದು ಎಂದು ಹೇಳಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಮೂರನೇ ವಾರದ ವೇಳೆಗೆ, ನಿಮ್ಮ ಆಹಾರ, ದಿನಸಿ ಮತ್ತು ದೈನಂದಿನ ಅಭ್ಯಾಸಗಳನ್ನು ವಿಂಗಡಿಸುವ ಮೂಲಕ ದಿನಚರಿಯನ್ನು ನಿರ್ಮಿಸಲು ಪ್ರಾರಂಭಿಸಿ. ಇವು ಮಾಡಿದಿದ್ದಲ್ಲಿ ತಿಂಗಳು ಅಸ್ತವ್ಯಸ್ತವಾಗಿರಬಹುದು. ಕೊನೆಯ ವಾರದಲ್ಲಿ, ನಗರವನ್ನು ಅನ್ವೇಷಿಸಲು ಮತ್ತು ಹೊಸ ಜನರನ್ನು ಭೇಟಿ ಮಾಡಲು ಸಮಯ ತೆಗೆದುಕೊಳ್ಳಿ. ಈ ಕೆಲಸ ಮಾಡದೇ ಹೋದರೆ ಈ ನಗರವು ಎಂದಿಗೂ ನಿಮ್ಮದೇ ಎಂದು ಅನಿಸುವುದಿಲ್ಲ. ಬೆಂಗಳೂರು ಸವಾಲಿನದ್ದಾಗಿರಬಹುದು, ಆದರೆ ಸರಿಯಾದ ಯೋಜನೆಯೊಂದಿಗೆ, ನ್ಯಾವಿಗೇಟ್ ಮಾಡಲು ಹಾಗೂ ಆನಂದಿಸಲು ತುಂಬಾ ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 2BHK ಮನೆಗೆ 70 ಸಾವಿರ ರೂ. ಬಾಡಿಗೆ!, ಭಯಾನಕ ಅನುಭವ ಬಿಚ್ಚಿಟ್ಟ ವ್ಯಕ್ತಿ

ಈ ವಿಡಿಯೋ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರಿನಲ್ಲಿ ಪ್ರಯಾಣವೇ ಸರ್ವಸ್ವ, ನೀವು ಈ ತಪ್ಪು ಮಾಡಿದರೆ ನಿಮ್ಮ ದೈನಂದಿನ ಜೀವನವು ಒತ್ತಡದಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಾನು ನಿಮ್ಮ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದಿದ್ದಾರೆ. ಮತ್ತೊಬ್ಬರು, ಶಾಶ್ವತ ಮನೆಯನ್ನು ಹುಡುಕಲು ಆತುರಪಡದಿರುವುದು ವಾಸ್ತವವಾಗಿ ತುಂಬಾ ಪ್ರಾಯೋಗಿಕ ಸಲಹೆಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Follow Us