AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಆರ್ಡರ್ ತಲುಪಿಸಲು ಬಂದ ಡೆಲಿವರಿ ಬಾಯ್‌ಗೆ ಸರ್ಪ್ರೈಸ್ ನೀಡಿದ ಮನೆ ಮಂದಿ 

ಕಷ್ಟ ಪಟ್ಟು ದುಡಿಯುವ ವ್ಯಕ್ತಿಗಳ ಮುಖದಲ್ಲಿ ನಗು ಮೂಡಿಸಿದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಆರ್ಡರ್ ತಲುಪಿಸಲು ಬಂದ ಡೆಲಿವರಿ ಬಾಯ್‌ಗೆ ಮನೆ ಮಂದಿ ಸೇರಿ ವ್ಯಾಲೆಟ್ ಉಡುಗೊರೆ ನೀಡಿ ಯುವಕನ ಮೊಗದಲ್ಲಿ ನಗು ತರಿಸಿದ್ದಾರೆ. ಡೆಲಿವರಿ ಬಾಯ್‌ನ ಶ್ರಮವನ್ನು ಶ್ಲಾಘಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಆರ್ಡರ್ ತಲುಪಿಸಲು ಬಂದ ಡೆಲಿವರಿ ಬಾಯ್‌ಗೆ ಸರ್ಪ್ರೈಸ್ ನೀಡಿದ ಮನೆ ಮಂದಿ 
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 01, 2026 | 5:53 PM

Share

ಡೆಲಿವರಿ ಬಾಯ್ (delivery boy) ಆಗಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವೇ ಕೆಲವು ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಿದ ಫುಡ್ ಬರುವುದರ ಹಿಂದೆ ಆಹಾರ ವಿತರಕರ ಶ್ರಮವಿರುತ್ತದೆ. ಆದರೆ ಇದೀಗ ಅಮೆಜಾನ್ ಡೆಲಿವರಿ ಬಾಯ್ ಆಗಿರುವ ಯುವಕನಿಗೆ ಗ್ರಾಹಕನ ಕುಟುಂಬವೊಂದು ಸರ್ಪ್ರೈಸ್ ನೀಡಿದೆ. ಆರ್ಡರ್ ತಲುಪಿಸಲು ಮನೆಬಾಗಿಲಿಗೆ ಬಂದ ಯುವಕನಿಗೆ ಉಡುಗೊರೆ ನೀಡಿ ಖುಷಿ ಪಡಿಸಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡೆಲಿವರಿ ಬಾಯ್‌ಗೆ ಸರ್ಪ್ರೈಸ್ ನೀಡಿದ ಮನೆ ಮಂದಿ

ಸುಭಾಷ್ ವ್ಲಾಗ್‌ (Subashvologs) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಆರ್ಡರ್ ತಲುಪಿಸಲು ಮನೆ ಬಾಗಿಲಿಗೆ ಬಂದ ಡೆಲಿವರಿ ಬಾಯ್‌ಗೆ ಗ್ರಾಹಕನ ಜತೆಗೆ ಆತನ ಕುಟುಂಬದವರು ಸೇರಿ ಸರ್ಪ್ರೈಸ್ ನೀಡಿದ್ದಾರೆ. ಮನೆಯೊಳಗೆ ಕರೆಸಿಕೊಂಡು ಡೆಲಿವರಿ ಬಾಯ್ ಶಾಲು ಹೊದಿಸಿ ಪರ್ಸ್‌ನ್ನು ಉಡುಗೊರೆ ನೀಡಿರುವುದನ್ನು ಕಾಣಬಹುದು. ಇದೆಲ್ಲಾ ಯಾಕೆ ಎಂದು ಡೆಲಿವರಿ ಬಾಯ್ ಕೇಳಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by subash vlogs (@subashvlogs)

ನಿಮ್ಮ ಶ್ರಮಕ್ಕೆ ನಮ್ಮದು ಈ ಸಣ್ಣ ಉಡುಗೊರೆ

ಮನೆಯ ಸದಸ್ಯರೊಬ್ಬರು ಉತ್ತರಿಸಿದ್ದು, ನನಗೆ ಕನ್ನಡ ಅಷ್ಟಾಗಿ ಬರುವುದಿಲ್ಲ. ನಾವು ಗ್ರಾಹಕರಾಗಿ ಮಾತ್ರ ಯೋಚನೆ ಮಾಡ್ತೇವೆ. ಆದರೆ ಡೆಲಿವರಿ ಬಾಯ್ ಆಗಿ ಏನೆಲ್ಲಾ ಸವಾಲುಗಳಿರುತ್ತವೆ ಎಂಬುದನ್ನು ಯೋಚನೆ ಮಾಡಲ್ಲ. ಅದಕ್ಕಾಗಿ ನಮ್ಮ ಕಡೆಯಿಂದ ನಿಮ್ಮ ಶ್ರಮಕ್ಕೆ ಸಣ್ಣ ಉಡುಗೊರೆ ಎಂದು ಹೇಳಿದ್ದಾರೆ. ಅಲ್ಲೇ ಇದ್ದ ಮತ್ತೊಬ್ಬರು ವ್ಯಕ್ತಿ ಅಮೆಜಾನ್ ಕಂಪನಿ ಇಷ್ಟು ಅಭಿವೃದ್ಧಿಯಾಗಲು ನಿಮ್ಮ ಶ್ರಮವೇ ಕಾರಣ. ನಾವು ಅಮೆಜಾನ್‌ನಲ್ಲಿ ಕೆಲಸ ಮಾಡ್ತಾ ಇದ್ರು ನಿಮ್ಮ ಶ್ರಮ ತುಂಬಾನೇ ಇದೆ ಎಂದಿದ್ದಾರೆ.

ನಿಮ್ಮ ಕೊಡುವ ಗೌರವಕ್ಕೆ ಧನ್ಯವಾದ ಎಂದ ಡೆಲಿವರಿ ಬಾಯ್

ಸರ್ಪ್ರೈಸ್ ನೀಡಿದ ಬಳಿಕ ಪುಟ್ಟ ಹುಡುಗಿ ಡೆಲಿವರಿ ಬಾಯ್ ನ್ನು ನಿಮಗೆ ಈ ಸರ್ಪ್ರೈಸ್ ಹೇಗೆ ಫೀಲ್ ಆಗಿದೆ ಎಂದು ಕೇಳಿದ್ದು, ಈ ರೀತಿ ಸರ್ಪ್ರೈಸ್ ಇದೇ ಮೊದಲು. ನಿಮ್ಮ ಕಡೆಯಿಂದ ಈ ಸರ್ಪ್ರೈಸ್ ಸಿಕ್ಕಿದೆ. ಮೂರು ನಾಲ್ಕು ನಿಮಿಷ ಮುಂಚಿತವಾಗಿ ಡೆಲಿವರಿ ತಲುಪಿಸಿದಾಗ ನೀವು ಕೊಡುವ ಗೌರವಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ ಪಾರ್ಸೆಲ್‌ನೊಳಗಿತ್ತು ಚೀಟಿ, ಗ್ರಾಹಕನಿಗೆ ಮನವಿ ಮಾಡಿದ ಮಾರಾಟಗಾರ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ವಿಡಿಯೋ ನನ್ನ ದಿನವನ್ನು ಅತ್ಯುತ್ತಮವಾಗಿಸಿತು ಎಂದಿದ್ದಾರೆ. ಇನ್ನೊಬ್ಬರು, ಗುಡ್ ಜಾಬ್ ಎಂದು ಹೇಳಿದರೆ, ಮತ್ತೊಬ್ಬರು, ಎಲ್ಲರ ಮನಸ್ಥಿತಿ ಈ ರೀತಿ ಇರಲ್ಲ. ಐದು ಹತ್ತು ನಿಮಿಷ ತಡವಾದರೆ ಡೆಲಿವರಿ ಬಾಯ್ ಗಳಿಗೆ ಬಾಯಿಗೆ ಬಂದಂತೆ ಬೈಯುವವರು ಇದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಸಿಎಂ ಫಡ್ನವೀಸ್ ನೇತೃತ್ವದಲ್ಲಿ ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ರ್‍ಯಾಲಿ
ಸಿಎಂ ಫಡ್ನವೀಸ್ ನೇತೃತ್ವದಲ್ಲಿ ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ರ್‍ಯಾಲಿ
ಬಾಗಲಕೋಟೆಯಲ್ಲಿ ಬಡವರ ಸ್ವಂತ ಮನೆಯ ಕನಸು ಭಗ್ನ
ಬಾಗಲಕೋಟೆಯಲ್ಲಿ ಬಡವರ ಸ್ವಂತ ಮನೆಯ ಕನಸು ಭಗ್ನ
ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್: ಗೊಂದಲಕ್ಕೆ ಸಿಲುಕಿದ ರಾಜ್ಯ ಸರ್ಕಾರ!
ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್: ಗೊಂದಲಕ್ಕೆ ಸಿಲುಕಿದ ರಾಜ್ಯ ಸರ್ಕಾರ!
ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: 3,600 ದರಕ್ಕೆ ತೃಪ್ತಿಪಟ್ಟ ರೈತರು
ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: 3,600 ದರಕ್ಕೆ ತೃಪ್ತಿಪಟ್ಟ ರೈತರು
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್