AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂವತ್ತೈದು ವರ್ಷಗಳ ನಂತರ ಕುಟುಂಬದಲ್ಲಿ ಹೆಣ್ಣು ಮಗು ಜನನ; ತಾಯಿ ಮಗುವನ್ನು ಹೆಲಿಕಾಪ್ಟರ್​ನಲ್ಲಿ ಮನೆಗೆ ಕರೆದೊಯ್ದ ಕುಟುಂಬಸ್ಥರು

ಕುಟುಂಬದಲ್ಲಿ 35 ವರ್ಷಗಳ ಬಳಿಕ ಹೆಣ್ಣು ಮಗು ಜನಿಸಿದ್ದಕ್ಕೆ ಖುಷಿಗೊಂಡ ಕುಟುಂಬಸ್ಥರು ಈ ನಿರ್ಧಾರ ತಳೆದಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಕೆಲ ಮೂಲಗಳ ಪ್ರಕಾರ ಹೆಲಿಕಾಪ್ಟರ್​ ಬಾಡಿಗೆಗೆ ಪಡೆಯಲು ಕುಟುಂಬಸ್ಥರು ಸುಮಾರು ₹4.5 ಲಕ್ಷ ಖರ್ಚು ಮಾಡಿದ್ದಾರೆ.

ಮೂವತ್ತೈದು ವರ್ಷಗಳ ನಂತರ ಕುಟುಂಬದಲ್ಲಿ ಹೆಣ್ಣು ಮಗು ಜನನ; ತಾಯಿ ಮಗುವನ್ನು ಹೆಲಿಕಾಪ್ಟರ್​ನಲ್ಲಿ ಮನೆಗೆ ಕರೆದೊಯ್ದ ಕುಟುಂಬಸ್ಥರು
ಮಗುವನ್ನು ಮನೆಗೆ ಕರೆತರಲು ಹೆಲಿಕಾಪ್ಟರ್​ ಬುಕ್​ ಮಾಡಿದ ಕುಟುಂಬಸ್ಥರು
Skanda
| Edited By: |

Updated on: Apr 23, 2021 | 11:52 AM

Share

ಜೈಪುರ: ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನಮಾನವಿದೆ. ಆದರೂ, ಇಂದಿಗೂ ಹೆಚ್ಚಿನ ಮನೆಗಳಲ್ಲಿ ಹೆಣ್ಣು ಮಗುವಿಗಿಂತಲೂ ಗಂಡು ಮಗು ಹುಟ್ಟಿದರೆ ಒಳ್ಳೆಯದು ಎಂದು ಭಾವಿಸುವವರಿದ್ದಾರೆ. ಹೆಣ್ಣು ಎಂಬ ಕಾರಣಕ್ಕೆ ಮಗುವನ್ನು ಮಾರಾಟ ಮಾಡುವ, ಬೀದಿಪಾಲು ಮಾಡುವ ದುರುಳರೂ ಇದ್ದಾರೆ. ಇಂತಹವರ ಮಧ್ಯೆ ರಾಜಸ್ಥಾನದ ಕುಟುಂಬವೊಂದು ಹೆಣ್ಣು ಮಗು ಹುಟ್ಟಿದ ಸಂತೋಷದಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಕೆಲಸ ಮಾಡಿದ್ದಾರೆ. ಬರೋಬ್ಬರಿ ಮೂವತ್ತೈದು ವರ್ಷಗಳ ನಂತರ ಕುಟುಂಬದಲ್ಲಿ ಹೆಣ್ಣು ಮಗು ಜನನವಾದ ಕಾರಣ ತಾಯಿ-ಮಗುವನ್ನು ಮನೆಗೆ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ.

ಹನುಮಾನ್ ಪ್ರಜಾಪತ್ ಮತ್ತು ಚುಕಿ ದೇವಿ ದಂಪತಿಗೆ ಕಳೆದ ತಿಂಗಳು ಹೆಣ್ಣುಮಗು ಜನಿಸಿದೆ. ರಾಜಸ್ಥಾನದ ನಾಗ್ಪುರ ಜಿಲ್ಲಾಸ್ಪತ್ರೆಯಲ್ಲಿ ಮಗು ಜನಿಸಿದ್ದು, ಅಲ್ಲಿಂದ ಬಾಣಂತಿಯನ್ನು ಆಕೆಯ ತವರು ಮನೆಗೆ ಕರೆದುಕೊಂಡು ಹೋಗಲಾಗಿದೆ. ಕೆಲದಿನಗಳ ನಂತರ ತಾಯಿ-ಮಗು ಇಬ್ಬರನ್ನೂ ಸುಮಾರು 40 ಕಿ.ಮೀ ದೂರದಲ್ಲಿರುವ ಮನೆಗೆ ಕರೆದುಕೊಂಡು ಬರಲು ನಿರ್ಧರಿಸಿದ ಕುಟುಂಬಸ್ಥರು ಅವರಿಗಾಗಿ ಹೆಲಿಕಾಪ್ಟರ್​ ಬಾಡಿಗೆಗೆ ಪಡೆದಿದ್ದಾರೆ.

ಕುಟುಂಬದಲ್ಲಿ 35 ವರ್ಷಗಳ ಬಳಿಕ ಹೆಣ್ಣು ಮಗು ಜನಿಸಿದ್ದಕ್ಕೆ ಖುಷಿಗೊಂಡ ಕುಟುಂಬಸ್ಥರು ಈ ನಿರ್ಧಾರ ತಳೆದಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಕೆಲ ಮೂಲಗಳ ಪ್ರಕಾರ ಹೆಲಿಕಾಪ್ಟರ್​ ಬಾಡಿಗೆಗೆ ಪಡೆಯಲು ಕುಟುಂಬಸ್ಥರು ಸುಮಾರು ₹4.5 ಲಕ್ಷ ಖರ್ಚು ಮಾಡಿದ್ದು, ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಲು ಸಂಭ್ರಮದ ಕ್ಷಣಗಳನ್ನು ಚಿತ್ರೀಕರಿಸಿದ್ದಾರೆ. ಈ ಯೋಚನೆಯು ಮಗುವಿನ ತಾತ ಮದನ್​ ಲಾಲ್ ಕುಮಾರ್ ಅವರದ್ದಾಗಿದ್ದು ತನ್ನ ಮೊಮ್ಮಗಳನ್ನು ಮನೆಗೆ ಅದ್ದೂರಿಯಾಗಿ ಕರೆತರಲು ಹೀಗೆ ಮಾಡಿದ್ದಾರೆ ಎಂದು ಮಗುವಿನ ತಂದೆ ಪ್ರಜಾಪತ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಿಂದ ಹೊರಟಿದ್ದ ವಿಮಾನದಲ್ಲಿ ಮಹಿಳೆಗೆ ಹೆರಿಗೆ; ಆಗಸದಲ್ಲಿ ಹುಟ್ಟಿದ ಪುಟ್ಟ ಮಗುವಿನ ಫೋಟೋ ಶೇರ್​ ಮಾಡಿದ ಇಂಡಿಗೋ 

ಆರೋಗ್ಯ ಕವಚದಲ್ಲಿ ಅವಳಿ ಹೆಣ್ಣು ಮಕ್ಕಳ ಜನನ; ವಿಜಯಪುರ ಮಾರ್ಗಮಧ್ಯೆ ಆಂಬುಲೆನ್ಸ್​ನಲ್ಲೇ ಹೆರಿಗೆ

Follow Us
Skanda
Skanda
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್