ಕೊರೊನಾ ಆಯ್ತು, ಈಗ ಗಡಿ ಕ್ಯಾತೆ.. ಭಾರತದ ಜೊತೆ ಯುದ್ಧಕ್ಕೆ ಸಿದ್ಧವಾಗಿದೆಯಾ ಚೀನಾ?
ದೆಹಲಿ: ಭಾರತ ಮತ್ತು ಚೀನಾ ಮಧ್ಯೆ ಯುದ್ಧ ನಡೆಯುತ್ತಾ? ಗಡಿಯಲ್ಲಿ ಯುದ್ಧಕ್ಕೆ ತಯಾರಿ ನಡೆದಿದೆಯಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಅಂದಹಾಗೆ ಒಂದ್ಕಡೆ ಚೀನಾ ಕೊಟ್ಟ ಗಿಫ್ಟ್ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಕಾಡುತ್ತಿದ್ರೆ, ಇನ್ನೊಂದ್ಕಡೆ ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯೋಕೆ ಡ್ರ್ಯಾಗನ್ ರಾಷ್ಟ್ರ ಸಿದ್ಧವಾಗಿದೆ. ಇದು ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಿದೆ. ಅಷ್ಟಕ್ಕೂ ಚೀನಾ ತೆಗೆದಿರುವ ತಗಾದೆಯಾದ್ರೂ ಏನು? ಇಲ್ಲಿದೆ ಡೀಟೇಲ್ಸ್. ಚೀನಾಗೆ ಟೈಂ ಬಂದಿದೆ ಕಣ್ರೀ. ಹಾಗೇ ಚೀನಾದ ಅಹಂಕಾರಕ್ಕೆ ಕೊನೆ […]
ದೆಹಲಿ: ಭಾರತ ಮತ್ತು ಚೀನಾ ಮಧ್ಯೆ ಯುದ್ಧ ನಡೆಯುತ್ತಾ? ಗಡಿಯಲ್ಲಿ ಯುದ್ಧಕ್ಕೆ ತಯಾರಿ ನಡೆದಿದೆಯಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಅಂದಹಾಗೆ ಒಂದ್ಕಡೆ ಚೀನಾ ಕೊಟ್ಟ ಗಿಫ್ಟ್ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಕಾಡುತ್ತಿದ್ರೆ, ಇನ್ನೊಂದ್ಕಡೆ ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯೋಕೆ ಡ್ರ್ಯಾಗನ್ ರಾಷ್ಟ್ರ ಸಿದ್ಧವಾಗಿದೆ. ಇದು ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಿದೆ. ಅಷ್ಟಕ್ಕೂ ಚೀನಾ ತೆಗೆದಿರುವ ತಗಾದೆಯಾದ್ರೂ ಏನು? ಇಲ್ಲಿದೆ ಡೀಟೇಲ್ಸ್.
ಚೀನಾಗೆ ಟೈಂ ಬಂದಿದೆ ಕಣ್ರೀ. ಹಾಗೇ ಚೀನಾದ ಅಹಂಕಾರಕ್ಕೆ ಕೊನೆ ಹಾಡುವ ಸಮಯವೂ ಹತ್ತಿರವಾದಂತೆ ಕಾಣ್ತಿದೆ. ಅಂದಹಾಗೆ ಇಡೀ ಜಗತ್ತಿಗೇ ಕೊರೊನಾ ಅನ್ನೋ ವಿಷ ವ್ಯೂಹವನ್ನು ಅಂಟಿಸಿ, ಆಟ ನೋಡ್ತಿರೋ ಡ್ರ್ಯಾಗನ್ ರಾಷ್ಟ್ರಕ್ಕೆ ಭಾರತದ ಜೊತೆ ಕ್ಯಾತೆ ತೆಗೆಯದೇ ಇದ್ರೆ ನಿದ್ದೆ ಬರುವ ಲಕ್ಷಣಗಳೇ ಕಾಣ್ತಿಲ್ಲ. ಅಷ್ಟಕ್ಕೂ ಈ ಪೀಠಿಕೆ ಯಾಕೆ ಅಂದ್ರೆ, ಲಡಾಖ್ನ ಗಲ್ವಾನಾ ವ್ಯಾಲಿ ಮತ್ತು ಡೆಮ್ಚೊಕ್ ಪ್ರದೇಶಗಳಲ್ಲಿ ಚೀನಾ ಹಾಗೂ ಭಾರತೀಯ ಸೇನೆಗಳ ಮಧ್ಯೆ ಘರ್ಷಣೆ ನಡೆದ ನಂತರ, ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರ ಬಿಗಡಾಯಿಸುತ್ತಲೇ ಸಾಗಿದೆ.
ಗಡಿಯಲ್ಲಿ ನೆಮ್ಮದಿ ಕೆಡಿಸಿ ಸಂಧಾನಕ್ಕೆ ಸಿದ್ಧ ಎಂದ ಚೀನಾ! ಎಲ್ಲರಿಗೂ ಗೊತ್ತಿರುವಂತೆ ಗಡಿಯಲ್ಲಿ ಮೊದಲಿಗೆ ಕ್ಯಾತೆ ತೆಗೆಯೋದೇ ಚೀನಾ. ಆದರೆ ಹೀಗೆ ಕ್ಯಾತೆ ತೆಗೆಯೋ ಚೀನಾ, ನಂತರ ತಾನು ಏನೂ ಮಾಡೇ ಇಲ್ಲ ಅಂತಾನೆ ಪೋಸ್ ಕೊಡುತ್ತೆ. ಹೀಗೆ ಮತ್ತೊಮ್ಮೆ ನೌಟಂಕಿ ಮಾಡೋಕೆ ಚೀನಾ ಸಜ್ಜಾಗಿದೆ. ಲಡಾಖ್ನ ಗಲ್ವಾನಾ ವ್ಯಾಲಿ ಮತ್ತು ಡೆಮ್ಚೊಕ್ ಪ್ರದೇಶದಲ್ಲಿ ಗಲಾಟೆ ನಡೆಸಿರುವ ಚೀನಾ ಸೈನಿಕರು, ನಂತರ ಅದನ್ನ ಭಾರತೀಯ ಸೇನೆಯ ಮೇಲೆ ಎತ್ತಿಹಾಕಲು ಸಿದ್ಧರಾಗಿದ್ದಾರೆ. ಅಲ್ಲದೆ ಮಾಡೋದೆಲ್ಲವನ್ನೂ ಮಾಡಿ ಸಂಧಾನಕ್ಕೆ ಸಿದ್ಧ ಅಂತಾ ರಾಗ ಎಳೆಯುತ್ತಿದ್ದಾರೆ. ಈ ಮಧ್ಯೆ ಪರಿಸ್ಥಿತಿಯ ಲಾಭ ಪಡೆಯಲು ಕಾದು ಕುಳಿತಿರುವ ಅಮೆರಿಕ, ತಾನು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುತ್ತೇನೆ ಅಂತಾ ದಾಳ ಉರುಳಿಸಿದೆ.
ಭಾರತ ಮತ್ತು ಚೀನಾ ಮಧ್ಯೆ ಯುದ್ಧ ನಡೆಯುತ್ತಾ? ಹೌದು, ಇಷ್ಟೆಲ್ಲದರ ಮಧ್ಯೆ ಕಾಡ್ತಿರೋ ಪ್ರಶ್ನೆ ಭಾರತದ ಜೊತೆ ಚೀನಾ ಯುದ್ಧಕ್ಕೆ ಸಜ್ಜಾಗಿದೆಯಾ ಅನ್ನೋದು. ಯಾಕಂದ್ರೆ ಗಡಿಯಲ್ಲಿ ಚೀನಾ ಮಾಡ್ತಿರೋ ಕಿರಿಕ್ ನೋಡ್ತಿದ್ರೆ ಭವಿಷ್ಯದಲ್ಲಿ ಯುದ್ಧ ನಡೆಯೋ ಸಾಧ್ಯತೆ ತಳ್ಳಿಹಾಕುವ ಹಾಗೆ ಇಲ್ಲ. ಯಾಕಂದ್ರೆ ಪದೇ ಪದೆ ಭಾರತದ ತಂಟೆಗೆ ಬರೋ ಚೀನಾ, ಈಗ ಯುದ್ಧ ದಾಹದಲ್ಲಿದೆ. ಇಡೀ ವಿಶ್ವವೇ ‘ಕೊರೊನಾ’ ವೈರಸ್ ವಿಚಾರದಲ್ಲಿ ಚೀನಾವನ್ನು ದೂರುತ್ತಿರುವಾಗ, ಡ್ರ್ಯಾಗನ್ ಕುಡಿ ನೆರೆಯ ರಾಷ್ಟ್ರಗಳ ಜೊತೆ ಕಿರಿಕ್ ಮಾಡಲು ಸಜ್ಜಾಗಿದೆ. ಇದು ಇಡೀ ವಿಶ್ವವನ್ನೇ ಭಾರತ ಹಾಗೂ ಚೀನಾ ಗಡಿಯತ್ತ ತಿರುಗಿ ನೋಡವಂತೆ ಮಾಡಿದೆ.
ಒಟ್ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಮುಂದಿನ ದಿನಗಳಲ್ಲಿ ಭಾರತ ಹಾಗೂ ಚೀನಾ ಗಡಿ ಇನ್ನಷ್ಟು ಗಂಭೀರವಾಗಿ ಬದಲಾಗಲೂಬಹುದು. ಆದ್ರೆ ಇದಕ್ಕೆಲ್ಲಾ ಭಾರತ ಹೇಗೆ ಉತ್ತರಿಸಲಿದೆ ಅನ್ನೋದನ್ನ ಕಾದು ನೋಡ್ಬೇಕು.
Published On - 7:11 am, Thu, 28 May 20