ಗಾಜಾದ ಶಾಲೆ ಮೇಲೆ ಇಸ್ರೇಲ್ ವೈಮಾನಿಕ ದಾಳಿ, ಮಕ್ಕಳು ಸೇರಿ 20 ಮಂದಿ ಸಾವು
ಗಾಜಾದ ಶಾಲೆಯೊಂದರ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಪರಿಣಾಮ ಮಕ್ಕಳು ಸೇರಿ 20 ಮಂದಿ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಮಧ್ಯ ಇಸ್ರೇಲ್ನ ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ ನಡೆಸಿದ್ದು, ನಾಲ್ವರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ.
ಗಾಜಾದ ಶಾಲೆಯೊಂದರ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಪರಿಣಾಮ ಮಕ್ಕಳು ಸೇರಿ 20 ಮಂದಿ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಮಧ್ಯ ಇಸ್ರೇಲ್ನ ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ ನಡೆಸಿದ್ದು, ನಾಲ್ವರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ.
ಬೈರುತ್‌ನಲ್ಲಿ 22 ಜನರನ್ನು ಕೊಂದ ಇಸ್ರೇಲಿ ದಾಳಿಗೆ ಪ್ರತೀಕಾರವಾಗಿ ಲೆಬನಾನ್ ಮೂಲದ ಹಿಜ್ಬುಲ್ಲಾ ಬಿನ್ಯಾಮಿನಾ ನಗರದ ಬಳಿ ದಾಳಿಗಳನ್ನು ನಡೆಸಿತು. ದಾಳಿಯಲ್ಲಿ ಗಾಯಗೊಂಡವರು 61. ಹಿಜ್ಬುಲ್ಲಾ ಹಾಗೂ ಇಸ್ರೇಲ್ ಕಳೆದ ಒಂದು ವರ್ಷದಿಂದ ನಿತ್ಯವೂ ಒಂದಲ್ಲಾ ಒಂದು ದಾಳಿಯನ್ನು ನಡೆಸುತ್ತಲೇ ಇದೆ.
ಇಸ್ರೇಲಿ ವಾಯುದಾಳಿಯು ಭಾನುವಾರ ರಾತ್ರಿ ಶಾಲೆಯೊಂದರಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 20 ಜನರನ್ನು ಕೊಂದಿತು. ನುಸಿರಾತ್‌ನಲ್ಲಿರುವ ಶಾಲೆಯು ಯುದ್ಧದಿಂದ ಸ್ಥಳಾಂತರಗೊಂಡ ಅನೇಕ ಪ್ಯಾಲೆಸ್ತೀನಿಯನ್ನರಿಗೆ ಆಶ್ರಯ ನೀಡುತ್ತಿತ್ತು. ದೇರ್ ಅಲ್-ಬಾಲಾಹ್‌ನಲ್ಲಿರುವ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಯ ಹೊರಗೆ ಸೋಮವಾರ ಮುಂಜಾನೆ ಸ್ಫೋಟಗಳು ಸಂಭವಿಸಿದ್ದವು.
ಈ ಭಾಗದ ಆಸ್ಪತ್ರೆಗಳಲ್ಲಿನ ರೋಗಿಗಳೂ ಸ್ಥಳಾಂತರಗೊಳ್ಳಬೇಕು ಎಂದೂ ಇಸ್ರೇಲ್ ತಿಳಿಸಿದೆ. ಆದರೆ, ಯಾವ ದಿನಾಂಕದಲ್ಲಿ ಪ್ರಕ್ರಿಯೆ ನಡೆಯಬೇಕು ಎಂಬುದನ್ನು ಖಚಿತವಾಗಿ ತಿಳಿಸಿಲ್ಲ. ನಮ್ಮನ್ನು ಇಲ್ಲಿಂದ ಓಡಿಸಿ, ತಮ್ಮ ಸೇನಾ ನೆಲೆ ಸ್ಥಾಪಿಸಿ, ಯಹೂದಿಗಳನ್ನು ಇಲ್ಲಿ ನೆಲೆಯೂರಿಸಬೇಕು ಎಂದು ಇಸ್ರೇಲ್ ಬಯಸಿದೆ’ ಎಂದು ಪ್ಯಾಲೆಸ್ತೀನಿಯನ್ನರು ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: Lebanon: ಬೈರುತ್‌ನಲ್ಲಿ ಇಸ್ರೇಲ್ ವೈಮಾನಿಕ ದಾಳಿ, 22 ಮಂದಿ ಸಾವು, 117 ಜನರಿಗೆ ಗಾಯ
ಮೃತದೇಹಗಳನ್ನು ನುಸೈರಾತ್‌ನ ಅಲ್-ಅವ್ದಾ ಆಸ್ಪತ್ರೆಗೆ ಮತ್ತು ದೇರ್ ಅಲ್ ಬಲಾಹ್‌ನಲ್ಲಿರುವ ಅಲ್-ಅಕ್ಸಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಇಸ್ರೇಲ್ ಲೆಬನಾನ್ ಮೇಲೆ ಭೂ ದಾಳಿ ಮಾಡಿದ ನಂತರ ಹಿಜ್ಬುಲ್ಲಾ ಕಡೆಯಿಂದ ನಡೆದ ಈ ದಾಳಿ ಅತ್ಯಂತ ದೊಡ್ಡದು ಎಂದು ವಿಶ್ಲೇಷಿಸಲಾಗಿದೆ.
ಇನ್ನೊಂದೆಡೆ ಗಾಜಾಪಟ್ಟಿಯ ಉತ್ತರ ಭಾಗವನ್ನು ಹಾಗೂ ಗಾಜಾ ನಗರವನ್ನು ಸಂಪೂರ್ಣವಾಗಿ ತೆರವು ಮಾಡುವಂತೆ ಇಸ್ರೇಲ್ ಸೇನೆಯು ಪ್ಯಾಲೆಸ್ಟೀನಿಯನ್ನರಿಗೆ ಹೊಸ ಆದೇಶ ಹೊರಡಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ