ಕಚೇರಿಯಲ್ಲಿ ಹೆಚ್ಚು ಹೊತ್ತು ಬ್ರೇಕ್​ ತೆಗೆದುಕೊಳ್ತಾರೆ ಎಂದು ಮಹಿಳಾ ಸಹೋದ್ಯೋಗಿಯನ್ನು ಕೊಂದ ವ್ಯಕ್ತಿ

 ಕಚೇರಿಯಲ್ಲಿ ಹೆಚ್ಚು ಹೊತ್ತು ಬ್ರೇಕ್​ ತೆಗೆದುಕೊಳ್ಳುತ್ತಾರೆ ಎಂದು ಕೋಪಗೊಂಡ ವ್ಯಕ್ತಿಯೊಬ್ಬ ಮಹಿಳಾ ಸಹೋದ್ಯೋಗಿಯನ್ನು ಕೊಲೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಟ್ರಾವಿಸ್ ಮೆರಿಲ್ ಎಂಬಾತ ತಮ್ಹರಾ ಕೊಲಾಜೋ ಎಂಬುವವರನ್ನು ಹತ್ಯೆ ಮಾಡಿದ್ದಾರೆ. ಕೊಲಾಜೋ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Follow us
ನಯನಾ ರಾಜೀವ್
|

Updated on:Oct 24, 2024 | 8:13 PM

ಆಫೀಸ್ ಎಂದ ಮೇಲೆ ಕೆಲವರು ಕೆಡಿಮೆ ಹೊತ್ತು, ಇನ್ನೂ ಕೆಲವರು ಹೆಚ್ಚು ಹೊತ್ತು ಬ್ರೇಕ್​ಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ, ಕೆಲವರು ಊಟ ಮಾಡಿ ಕೂಡಲೇ ತಮ್ಮ ಸ್ಥಳಕ್ಕೆ ಬಂದರೆ ಇನ್ನೂ ಕೆಲವರು ವಾಕಿಂಗ್ ಮಾಡುವ ಅಭ್ಯಾಸವೂ ಇರುತ್ತದೆ. ಆದರೆ ಅದೇ ಕಾರಣಕ್ಕೆ ಒಂದು ಕೊಲೆಯೇ ನಡೆಯುತ್ತದೆ ಎಂದರೆ ಅದು ಆಶ್ಚರ್ಯಕರ ಸಂಗತಿ.

ಕಚೇರಿಯಲ್ಲಿ ಹೆಚ್ಚು ಹೊತ್ತು ಬ್ರೇಕ್​ ತೆಗೆದುಕೊಳ್ಳುತ್ತಾರೆ ಎಂದು ಕೋಪಗೊಂಡ ವ್ಯಕ್ತಿಯೊಬ್ಬ ಮಹಿಳಾ ಸಹೋದ್ಯೋಗಿಯನ್ನು ಕೊಲೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಟ್ರಾವಿಸ್ ಮೆರಿಲ್ ಎಂಬಾತ ತಮ್ಹರಾ ಕೊಲಾಜೋ ಎಂಬುವವರನ್ನು ಹತ್ಯೆ ಮಾಡಿದ್ದಾರೆ. ಕೊಲಾಜೋ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೆರಿಲ್‌ನನ್ನು ಬಂಧಿಸಿ ಕೊಲಾಜೊ ಅವರ ಜೀವವನ್ನು ಉಳಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆಕೆ ಹೆಚ್ಚೆಚ್ಚು ಹೊತ್ತು ಬ್ರೇಕ್​ ತೆಗೆದುಕೊಳ್ಳುವುದು ಮತ್ತು ಕೆಲಸದ ಮೇಲೆ ಗಮನ ಕಡಿಮೆಯಾಗಿದ್ದರ ಹಿನ್ನೆಲೆಯಲ್ಲಿ ಕೋಪಗೊಂಡು ತಾನು ಈ ಕೆಲಸ ಮಾಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.

ಅಷ್ಟೇ ಅಲ್ಲದೆ ಬ್ರೇಕ್ ತೆಗೆದುಕೊಂಡು ಊಟಕ್ಕೆ ಹೋದಾಗಲೂ ಕೂಡ ಆತ ಆಕೆಯನ್ನೇ ನೋಡುತ್ತಾ ಕುಳಿತಿರುತ್ತಿದ್ದ ಹೀಗಾಗಿ ಆಕೆ ಒಮ್ಮೆ ಬೈದಿದ್ದಳು. ಅಷ್ಟೇ ಅಲ್ಲದೆ ಎಚ್​ಆರ್ ಬಳಿ ದೂರು ಕೂಡ ನೀಡಿದ್ದಳು. ಆತನಿಗೆ ಎಚ್​ಆರ್​ ಬೈದಿದ್ದ ಕಾರಣ ಕೋಪಗೊಂಡ ಆತ ಗನ್ ಖರೀದಿಸಿ ಮನೆಯಲ್ಲೇ ಪ್ರಾಕ್ಟೀಸ್ ಕೂಡ ಮಾಡಿದ್ದ.

ಕೊಲಾಜೋ ಊಟಕ್ಕೆ ಹೋಗುವಾಗ ಆತ ಕೂಡ ಆಕೆಯನ್ನು ಹಿಂಬಾಲಿಸಿದ್ದ, ಜತೆಗೆ ಕೂತು ಊಟ ಮಾಡಿದ್ದಾರೆ, ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಬಂದೂಕಿನಿಂದ ಹಲವು ಬಾರಿ ಗುಂಡು ಹಾರಿಸಿದ್ದಾನೆ. ಆತನನ್ನು ಪೊಲೀಸರು ಕೂಡಲೇ ಬಂಧಿಸಿದ್ದು, ಜೈಲಿಗೆ ಕಳುಹಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:13 pm, Thu, 24 October 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ