AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾಗೆ ಭಾರತವೇ ಆಸರೆ, ಡ್ರೋನ್ ದಾಳಿಯಿಂದ ತತ್ತರಿಸಿ ಪೆಟ್ರೋಲ್ ಖರೀದಿಗೆ ಮುಂದಾದ ಪುಟಿನ್ ಸರ್ಕಾರ

ರಷ್ಯಾದ ಪ್ರಮುಖ ತೈಲ ಸಂಸ್ಕರಣಾಗಾರಗಳ ಮೇಲೆ ಉಕ್ರೇನ್‌ನ ಡ್ರೋನ್ ದಾಳಿಗಳಿಂದ ದೇಶದಲ್ಲಿ ಪೆಟ್ರೋಲ್ ಕೊರತೆ ತೀವ್ರವಾಗಿದೆ. ಈ ಬಿಕ್ಕಟ್ಟನ್ನು ನೀಗಿಸಲು ರಷ್ಯಾ ಭಾರತದಿಂದ ಪೆಟ್ರೋಲ್ ಆಮದು ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ, ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು ಸಂಸ್ಕರಿಸಿ, ಅದೇ ರಷ್ಯಾಕ್ಕೆ ಪೆಟ್ರೋಲ್ ರೂಪದಲ್ಲಿ ಮಾರಾಟ ಮಾಡುತ್ತಿರುವುದು ವಿಶಿಷ್ಟ ಆರ್ಥಿಕ ಚಕ್ರವಾಗಿದೆ.

ರಷ್ಯಾಗೆ ಭಾರತವೇ ಆಸರೆ, ಡ್ರೋನ್ ದಾಳಿಯಿಂದ ತತ್ತರಿಸಿ ಪೆಟ್ರೋಲ್ ಖರೀದಿಗೆ ಮುಂದಾದ ಪುಟಿನ್ ಸರ್ಕಾರ
ಹಡಗು
ನಯನಾ ರಾಜೀವ್
|

Updated on: Jul 02, 2026 | 10:49 AM

Share

ಮಾಸ್ಕೋ, ಜುಲೈ 02: ಜಾಗತಿಕ ರಾಜಕಾರಣದಲ್ಲಿ ಅತ್ಯಂತ ಅಪರೂಪದ ವಿದ್ಯಮಾನವೊಂದು ನಡೆದಿದೆ. ಜಗತ್ತಿನ ಅತಿ ದೊಡ್ಡ ತೈಲ ಉತ್ಪಾದಕ ದೇಶಗಳಲ್ಲಿ ಒಂದಾದ ರಷ್ಯಾ(Russia), ಇದೀಗ ತನ್ನ ದೇಶದಲ್ಲಿ ಉಂಟಾಗಿರುವ ಭೀಕರ ಪೆಟ್ರೋಲ್ ಕೊರತೆಯನ್ನು ನೀಗಿಸಲು ಭಾರತದಿಂದ ಸಮುದ್ರದ ಮಾರ್ಗವಾಗಿ ಪೆಟ್ರೋಲ್ (ಗ್ಯಾಸೋಲಿನ್) ಆಮದು ಮಾಡಿಕೊಳ್ಳಲು ಆರಂಭಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉಕ್ರೇನ್ ನಡೆಸುತ್ತಿರುವ ನಿರಂತರ ಡ್ರೋನ್ ದಾಳಿಗಳು ರಷ್ಯಾದ ಪ್ರಮುಖ ತೈಲ ಸಂಸ್ಕರಣಾಗಾರಗಳನ್ನು (Refineries) ಧ್ವಂಸಗೊಳಿಸಿವೆ.ಇದರಿಂದಾಗಿ ರಷ್ಯಾದ 11 ಟೈಮ್ ಝೋನ್‌ಗಳ ವ್ಯಾಪ್ತಿಯಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು, ಪಂಪ್‌ಗಳಲ್ಲಿ ಇಂಧನ ಸಿಗದೆ ಚಾಲಕರು ಕಿಲೋಮೀಟರ್ ಗಟ್ಟಲೆ ಕ್ಯೂ ನಿಲ್ಲುವಂತಾಗಿದೆ.

ಭಾರತದಿಂದ ಪೂರೈಕೆ: ಈ ತಲ್ಲಣವನ್ನು ನೀಗಿಸಲು ಭಾರತದಿಂದ ಈಗಾಗಲೇ ಕನಿಷ್ಠ 60,000 ಮೆಟ್ರಿಕ್ ಟನ್ ಪೆಟ್ರೋಲ್ ಹೊತ್ತ ಬೃಹತ್ ಹಡಗುಗಳು ರಷ್ಯಾಕ್ಕೆ ರವಾನೆಯಾಗಿವೆ. ಇಂಧನ ಬಿಕ್ಕಟ್ಟು ತಗ್ಗಿಸಲು ರಷ್ಯಾ ಪ್ರತಿ ತಿಂಗಳು ಬೇರೆ ಬೇರೆ ದೇಶಗಳಿಂದ 4 ಲಕ್ಷ ಟನ್ ಪೆಟ್ರೋಲ್ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

ಮತ್ತಷ್ಟು ಓದಿ: ಪುಟಿನ್ ಭೇಟಿ ಭಾರತ-ರಷ್ಯಾ ಬಾಂಧವ್ಯಕ್ಕೆ ಚೈತನ್ಯ ತುಂಬಲಿದೆ; ಪ್ರಧಾನಿ ಮೋದಿ

ಭಾರತಕ್ಕೆ ರಷ್ಯಾ ತೈಲವೇ ಪ್ರಧಾನ, ಜೂನ್‌ನಲ್ಲಿ ಹೊಸ ದಾಖಲೆ ಒಂದೆಡೆ ಭಾರತ ರಷ್ಯಾದಿಂದ ಪೆಟ್ರೋಲ್ ಖರೀದಿಸುತ್ತಿದ್ದರೆ, ಮತ್ತೊಂದೆಡೆ ಭಾರತದ ಸಂಸ್ಕರಣಾಗಾರಗಳು ಜೂನ್ ತಿಂಗಳಿನಲ್ಲಿ ರಷ್ಯಾದಿಂದ ದಾಖಲೆಯ ಪ್ರಮಾಣದ ಕಚ್ಚಾ ತೈಲವನ್ನು (Crude Oil) ಆಮದು ಮಾಡಿಕೊಂಡಿವೆ.

ಹಡಗು ಟ್ರ್ಯಾಕಿಂಗ್ ಡೇಟಾ ಪ್ರಕಾರ, ಜೂನ್‌ನಲ್ಲಿ ಭಾರತವು ದಿನಕ್ಕೆ ಬರೋಬ್ಬರಿ 27 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸಿದೆ. ಇದು ಭಾರತದ ಒಟ್ಟು ತೈಲ ಆಮದಿನ ಶೇಕಡಾ 50 ಕ್ಕಿಂತ ಹೆಚ್ಚಾಗಿದೆ. ಮಧ್ಯಪ್ರಾಚ್ಯದ ‘ಹಾರ್ಮುಜ್ ಜಲಸಂಧಿ’ ಮುಚ್ಚಲ್ಪಟ್ಟಿದ್ದರಿಂದ ಗಲ್ಫ್ ದೇಶಗಳಿಂದ ತೈಲ ತರುವುದು ಕಷ್ಟವಾಗಿತ್ತು. ಈ ವೇಳೆ ರಷ್ಯಾ ರಿಯಾಯಿತಿ ದರದಲ್ಲಿ (ಡಿಸ್ಕೌಂಟ್) ತೈಲ ನೀಡಿದ್ದರಿಂದ ಭಾರತಕ್ಕೆ ಭಾರಿ ವರದಾನವಾಗಿದೆ.

ಈ ಇಡೀ ವಿದ್ಯಮಾನವು ಒಂದು ವಿಶಿಷ್ಟ ಆರ್ಥಿಕ ಚಕ್ರಕ್ಕೆ ಸಾಕ್ಷಿಯಾಗಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಅದೇ ಕಚ್ಚಾ ತೈಲವನ್ನು ಶುದ್ಧೀಕರಿಸುವ ಭಾರತೀಯ ಕಂಪನಿಗಳು, ಈಗ ಉಕ್ರೇನ್ ದಾಳಿಯಿಂದ ಕಂಗೆಟ್ಟಿರುವ ರಷ್ಯಾ ದೇಶಕ್ಕೇ ಮರಳಿ ಪೆಟ್ರೋಲ್ ರೂಪದಲ್ಲಿ ಮಾರಾಟ ಮಾಡುತ್ತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us