Hyundai Creta N Line: ಸಖತ್ ಫೀಚರ್ಸ್ ಮತ್ತು ಪರ್ಫಾಮೆನ್ಸ್ ನೊಂದಿಗೆ ಹ್ಯುಂಡೈ ಕ್ರೆಟಾ ಎನ್ ಲೈನ್ ಬಿಡುಗಡೆ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಕ್ರೆಟಾ ಎನ್ ಲೈನ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಆವೃತ್ತಿಯು ಸಾಮಾನ್ಯ ಆವೃತ್ತಿಗಿಂತಲೂ ಹೆಚ್ಚು ಫೀಚರ್ಸ್ ಮತ್ತು ಪರ್ಫಾಮೆನ್ಸ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ದೇಶದ ಎರಡನೇ ಅತಿದೊಡ್ಡ ಕಾರು ಕಂಪನಿಯಾಗಿರುವ ಹ್ಯುಂಡೈ ಇಂಡಿಯಾ (Hyudai India) ತನ್ನ ಬಹುನೀರಿಕ್ಷಿತ ಕ್ರೆಟಾ ಎನ್ ಲೈನ್ (Creta N Line) ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಆವೃತ್ತಿಯು ಪ್ರಮುಖ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಆರಂಭಿಕ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 16.82 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 20.30 ಲಕ್ಷ ಬೆಲೆ ಹೊಂದಿದೆ.
ಹೊಸ ಕ್ರೆಟಾ ಎನ್ ಲೈನ್ ಆವೃತ್ತಿ ವಿಶೇಷ ಫೀಚರ್ಸ್ ಗಳೊಂದಿಗೆ ಸಾಮಾನ್ಯ ಆವೃತ್ತಿಗಿಂತಲೂ ಹೆಚ್ಚು ಸ್ಪೋರ್ಟಿ ಯಾಗಿ ಮತ್ತು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ನೀಡಲಿದ್ದು, ಇದು ಸಾಮಾನ್ಯ ಕ್ರೆಟಾ ಮಾದರಿಗಿಂತಲೂ ಬೆಲೆಯಲ್ಲಿ ರೂ. 30 ಸಾವಿರದಷ್ಟು ದುಬಾರಿ ಎನ್ನಿಸಲಿದೆ. ದುಬಾರಿ ಬೆಲೆಗೆ ತಕ್ಕಂತೆ ಹೊಸ ಕಾರಿನಲ್ಲಿ ಹೆಚ್ಚುವರಿ ಫೀಚರ್ಸ್ ಮತ್ತು ಸ್ಪೋರ್ಟಿ ವಿನ್ಯಾಸ ನೀಡಲಾಗಿದ್ದು, ಇದು ಸಾಮಾನ್ಯ ಕ್ರೆಟಾಗಿಂತಲೂ ನೋಡಲು ಆಕರ್ಷಕವಾಗಿರಲಿದೆ.
ಇದನ್ನೂ ಓದಿ: ಭಾರತದಲ್ಲಿ ರೀ ಎಂಟ್ರಿಗೆ ಸಜ್ಜಾದ ಫೋರ್ಡ್ ಹೊಸ ಕಾರುಗಳು ಹೇಗಿರಲಿವೆ?
ಕ್ರೆಟಾ ಎನ್ ಲೈನ್ ಮಾದರಿಗಾಗಿ ವಿಶೇಷವಾದ ಬ್ಲ್ಯೂ ಮತ್ತು ಮ್ಯಾಟೆ ಗ್ರೇ ಬಣ್ಣದ ಆಯ್ಕೆ ನೀಡಲಾಗಿದ್ದು, ಎನ್ ಲೈನ್ ಬ್ಯಾಡ್ಜ್ ಸೇರಿದಂತೆ ಸ್ಪೋರ್ಟಿಯಾಗಿರುವ ಗ್ರಿಲ್ ಮತ್ತು ಬಂಪರ್ ನೀಡಲಾಗಿದೆ. ಜೊತೆಗೆ ಸೈಡ್ ಸ್ಕರ್ಟ್, ರೆಡ್ ಆಕ್ಸೆಂಟ್ ಮತ್ತು ರೆಡ್ ಬ್ರೇಕ್ ಕ್ಯಾಲಿಪರ್ ಗಳನ್ನು ಸಹ ನೀಡಲಾಗಿದ್ದು, ಇದರೊಂದಿಗೆ ಟ್ವಿನ್ ಟಿಪ್ಸ್ ಹಾಗೂ ಸ್ಪೋರ್ಟಿಯಾಗಿರುವ ಎಕ್ಸಾಸ್ಟ್, 18 ಇಂಚಿನ ಅಲಾಯ್ ವ್ಹೀಲ್ ಗಳು ಗಮನಸೆಳೆಯುತ್ತವೆ.
ಹೊಸ ಕಾರಿನ ಒಳಭಾಗದಲ್ಲಿ ಪ್ರೀಮಿಯಂ ಡ್ರೈವ್ ಅನುಭವಕ್ಕಾಗಿ ಆಲ್ ಬ್ಲ್ಯಾಕ್ ಥೀಮ್ ನೊಂದಿಗೆ ಕ್ಯಾಬಿನ್, ಎನ್ ಲೈನ್ ಸ್ಪೆಕ್ ಸ್ಟೀರಿಂಗ್ ವ್ಹೀಲ್ ಮತ್ತು ಮೆಟಲ್ ಪೆಡಲ್ ನೀಡಲಾಗಿದೆ. ಇನ್ನುಳಿದಂತೆ ಹೊಸ ಎನ್ ಲೈನ್ ಕಾರು ಸಾಮಾನ್ಯ ಕ್ರೆಟಾದಂತೆ ಬಹುತೇಕ ಫೀಚರ್ಸ್ ಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ 160 ಹಾರ್ಸ್ ಪವರ್ ಹೊಂದಿರುವ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ. ಇದು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಪಡೆದುಕೊಂಡಿದೆ. ಇದಲ್ಲದೆ ಹೊಸ ಕಾರಿನಲ್ಲಿ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್ ಗಳೊಂದಿಗೆ ಸ್ನೋ, ಸ್ಯಾಂಡ್ ಮತ್ತು ಮಡ್ ಟ್ರಾಕ್ಷನ್ ಮೋಡ್ ಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಆಕರ್ಷಕ ಬೆಲೆಯೊಂದಿಗೆ ಭರ್ಜರಿ ಮೈಲೇಜ್ ನೀಡುವ ಬಿವೈಡಿ ಸೀಲ್ ಇವಿ ಬಿಡುಗಡೆ
ಹ್ಯುಂಡೈ ಕಂಪನಿ ಹೊಸ ಕ್ರೆಟಾ ಎನ್ ಲೈನ್ ಕಾರಿನಲ್ಲಿ ಹಲವಾರು ಸುರಕ್ಷಾ ಫೀಚರ್ಸ್ ಗಳನ್ನು ಜೋಡಣೆ ಮಾಡಿದೆ. ಹೊಸ ಕಾರಿನಲ್ಲಿ ಸಂಭಾವ್ಯ ಅಪಘಾತಗಳನ್ನು ತಡೆಯಬಲ್ಲ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವಾರು ಸುರಕ್ಷಾ ಫೀಚರ್ಸ್ ನೀಡಲಾಗಿದೆ. ಇದರಲ್ಲಿ ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್ ಗಳ ಜೊತೆ 360 ಡಿಗ್ರಿ ಕ್ಯಾಮೆರಾ ಸೇರಿ ಹಲವು ಫೀಚರ್ಸ್ ಗಳಿದ್ದು, ಪರ್ಫಾಮೆನ್ಸ್ ಇಷ್ಟಪಡುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ.
Published On - 8:12 pm, Mon, 11 March 24