ಇನ್ಮುಂದೆ ಬಲ್ಕ್ ಸಿಮ್​ಗಳು ಸಿಗಲ್ಲ; ಸಿಮ್ ಡೀಲರ್​ಗಳಿಗೆ ಪೊಲೀಸ್ ವೆರಿಫಿಕೇಶನ್ ಕಡ್ಡಾಯ; 52,000 ಸಿಮ್ ಕನೆಕ್ಷನ್ಸ್ ರದ್ದು

|

Updated on: Aug 17, 2023 | 4:48 PM

Telecom Reforms: ಸುಲಭಕ್ಕೆ ಸಿಗುವ ಸಿಮ್ ಕಾರ್ಡ್​ಗಳು ದುರ್ಬಳಕೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಅದನ್ನು ತಡೆಯಲು ಕೇಂದ್ರ ಎರಡು ಕ್ರಮಗಳನ್ನು ಕೈಗೊಂಡಿದೆ. ಬಲ್ಕ್ ಸಿಮ್​ಗಳನ್ನು ವಿತರಿಸದಂತೆ ನಿರ್ಬಂಧ ಹಾಕಿದೆ. ಹಾಗೆಯೇ ಸಿಮ್ ಡೀಲರ್​ಗಳು ಪೊಲೀಸ್ ವೆರಿಫಿಕೇಶನ್ ಪಡೆಯುವುದನ್ನೂ ಕಡ್ಡಾಯಪಡಿಸಲಾಗಿದೆ.

ಇನ್ಮುಂದೆ ಬಲ್ಕ್ ಸಿಮ್​ಗಳು ಸಿಗಲ್ಲ; ಸಿಮ್ ಡೀಲರ್​ಗಳಿಗೆ ಪೊಲೀಸ್ ವೆರಿಫಿಕೇಶನ್ ಕಡ್ಡಾಯ; 52,000 ಸಿಮ್ ಕನೆಕ್ಷನ್ಸ್ ರದ್ದು
ಸಿಮ್ ಕನೆಕ್ಷನ್
Follow us on

ನವದೆಹಲಿ, ಆಗಸ್ಟ್ 17: ಕೇಂದ್ರ ಸರ್ಕಾರ ಟೆಲಿಕಾಂ ಕ್ಷೇತ್ರದಲ್ಲಿ ಎರಡು ಹೊಸ ಸುಧಾರಣೆಗಳನ್ನು (Telecom sector reforms) ಕೈಗೊಂಡಿದೆ. ಬಲ್ ಸಿಮ್​ಗಳನ್ನು ಕನೆಕ್ಷನ್​ಗಳನ್ನು ನೀಡುವುದನ್ನು ನಿಲ್ಲಿಸಲಾಗಿದೆ. ಹಾಗೆಯೇ, ಸಿಮ್ ಕಾರ್ಡ್​ಗಳನ್ನು ಮಾರುವ ಡೀಲರ್​ಗಳು ಪೊಲೀಸ್ ವೆರಿಫಿಕೇಶನ್ ಪಡೆಯಬೇಕು. ಹೀಗೆ ಎರಡು ಕ್ರಮಗಳನ್ನು ಸರ್ಕಾರ ಪ್ರಕಟಿಸಿದೆ. ಡಿಜಿಟಲ್ ವಹಿವಾಟು ಹೆಚ್ಚಿರುವ ಈ ಸಂದರ್ಭದಲ್ಲಿ ಮೊಬೈಲ್ ಗ್ರಾಹಕರ ಹಿತರಕ್ಷಿಸುವ ನಿಟ್ಟಿನಲ್ಲಿ ಈ ಕ್ರಮ ಜಾರಿ ಮಾಡಲಾಗಿರುವುದು ತಿಳಿದುಬಂದಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಎ ವೈಷ್ಣವ್ (Union Minister Ashwini Vaishnaw) ಅವರು ಈ ವಿಷಯ ತಿಳಿಸಿದ್ದಾರೆ.

ಬಲ್ಕ್ ಸಿಮ್ ಬದಲು ಬ್ಯುಸಿನೆಸ್ ಸಿಮ್

ಬಲ್ಕ್ ಸಿಮ್ ಕನೆಕ್ಷನ್​ಗಳು ಇನ್ಮುಂದೆ ಸಿಕ್ಕುವುದಿಲ್ಲ. ಈ ರೀತಿ ಪಡೆದ ಸಿಮ್​ಗಳಲ್ಲಿ ಹೆಚ್ಚಿನವರು ನೈಜವಾಗಿ ಉಪಯೋಗವಾಗುವುದಕ್ಕಿಂತ ದುರ್ಬಳಕೆ ಆಗುವುದೇ ಹೆಚ್ಚು ಎಂಬುದು ಅಧ್ಯಯನಗಳಿಂದ ಗೊತ್ತಾದ ಹಿನ್ನೆಲೆಯಲ್ಲಿ ಬಲ್ಕ್ ಸಿಮ್ ನೀಡುವುದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.

ಬಲ್ಕ್ ಬದಲು ಬ್ಯುಸಿನೆಸ್ ಸಿಮ್ ಕನೆಕ್ಷನ್​ಗಳನ್ನು ಮಾತ್ರ ನೀಡಲಾಗುತ್ತದೆ. ಆದರೆ ಬ್ಯುಸಿನೆಸ್ ಸಿಮ್ ಪಡೆಯಬೇಕಾದರೆ ಆ ಬ್ಯುಸಿನೆಸ್ ಅಥವಾ ಕಾರ್ಪೊರೇಟ್ ಸಂಸ್ಥೆಯಿಂದ ಕೆವೈಸಿ ಪಡೆಯಬೇಕು. ಈ ಸಂಸ್ಥೆಗಳು ನೊಂದಾಯಿತವಾಗಿರುವುದರಿಂದ ಅವುಗಳ ಜಿಎಸ್​ಟಿ ರಿಜಿಸ್ಟ್ರೇಶನ್, ಪ್ಯಾನ್, ಐಟಿ ರಿಜಿಸ್ಟ್ರೇಶನ್ ಇವುಗಳ ವಿವರ ಸಿಕ್ಕುತ್ತದೆ.

ಇದನ್ನೂ ಓದಿ: Fake IRCTC App: ಐಆರ್​ಸಿಟಿಸಿ ಆ್ಯಪ್ ಗುರಿ ಮಾಡಿದ ಸೈಬರ್ ಕೇಡಿಗಳು; ಜನಸಾಮಾನ್ಯರ ಬ್ಯಾಂಕ್ ಡೀಟೇಲ್ಸ್ ಲಪಟಾಯಿಸಲು ಹುನ್ನಾರ

ಸಿಮ್ ಡೀಲರ್​ಗಳ ಪೊಲೀಸ್ ವೆರಿಫಿಕೇಶನ್

ಸಿಮ್ ಮಾರುವ ಡೀಲರ್​ಗಳು ಪೊಲೀಸ್ ವೆರಿಫಿಕೇಶನ್ ಪಡೆಯುವುದು ಕಡ್ಡಾಯವಾಗಿದೆ. ಪೊಲೀಸ್ ವೆರಿಫೀಕೇಶನ್ ಮಾತ್ರವಲ್ಲ ಬಯೋಮೆಟ್ರಿಕ್ ವೆರಿಫಿಕೇಶನ್ ಕೂಡ ಮಾಡಿಸಬೇಕು. ಸಿಮ್​ಗಳ ದುರ್ಬಳಕೆ ಆದರೆ ಅದಕ್ಕೆ ಡೀಲರ್​ಗಳನ್ನೂ ಹೊಣೆಗಾರರನ್ನಾಗಿಸುವುದು ಸರ್ಕಾರ ಉದ್ದೇಶ. ಸಿಮ್ ಡೀಲರ್​ಗಳ ಮೂಲಕ ಸಮಾಜಘಾತುಕ ಶಕ್ತಿಗಳು ಸಿಮ್​ಗಳನ್ನು ಪಡೆಯುತ್ತಿರುವ ಬಗ್ಗೆ ವರದಿಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

52 ಲಕ್ಷ ಸಿಮ್ ಕನೆಕ್ಷನ್​ಗಳ ರದ್ದು

ಈ ವರ್ಷದ ಮೇ ತಿಂಗಳಲ್ಲಿ ಸರ್ಕಾರ ಸಂಚಾರ್ ಸಾಥಿ (Sanchar Saathi) ಎಂಬ ಪೋರ್ಟಲ್ ಆರಂಭಿಸಿತ್ತು. ಈವರೆಗೆ 52 ಲಕ್ಷ ಸಿಮ್ ಕನೆಕ್ಷನ್​ಗಳನ್ನು ರದ್ದುಮಾಡಲಾಗಿದೆ. ನಕಲಿ ದಾಖಲೆಗಳನ್ನು ಬಳಸಿ ಇವುಗಳನ್ನು ತೆರೆಯಲಾಗಿತ್ತು.

ಇದನ್ನೂ ಓದಿ: ಮಕ್ಕಳಿಗೆಂದೇ ಪ್ರತ್ಯೇಕ ಬ್ಯಾಂಕ್; ಗುಜರಾತ್​ನ ಬಾಲ ಗೋಪಾಲ್ ಬ್ಯಾಂಕ್; 17,000 ಮಕ್ಕಳ ಖಾತೆ, 16 ಕೋಟಿ ಠೇವಣಿ

ಹಾಗೆಯೇ, 67,000 ಸಿಮ್ ಡೀಲರ್​ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. 17,000 ಮೊಬೈಲ್ ಹ್ಯಾಂಡ್​ಸೆಟ್​​ಗಳನ್ನು ಬ್ಲಾಕ್ ಮಾಡಲಾಗಿದೆ. 300 ಎಫ್​ಐಆರ್​ಗಳನ್ನು ಹಾಕಲಾಗಿದೆ.

ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ ಟಾಟಾ ಕರ್ವ್ ಕಾರಿನ ವಿಶೇಷತೆಗಳೇನು?
ಹ್ಯಾಪಿ ಬರ್ತ್ ಡೇ MSD
ಹ್ಯಾಪಿ ಕಟುಂಬದ ಫೋಟೋ ಹಂಚಿಕೊಂಡ ಸೋನು ಗೌಡ 

ಅಷ್ಟೇ ಅಲ್ಲ, ಸ್ಪ್ಯಾಮಿಂಗ್​ನಲ್ಲಿ ನಿರತವಾಗಿದ್ದ 66,000 ವಾಟ್ಸಾಪ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. 8 ಲಕ್ಷ ವ್ಯಾಲಟ್ ಅಕೌಂಟ್​ಗಳನ್ನೂ ಬ್ಲಾಕ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:46 pm, Thu, 17 August 23