AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rates 25 September: ಚಿನ್ನದ ಬೆಲೆ ಅಲ್ಪ ಏರಿಕೆ; ಮತ್ತೆ 14,000 ರೂ ಗಡಿಯಾಚೆ

Gold Price 25 September 2026: ಚಿನ್ನದ ಬೆಲೆ ಶುಕ್ರವಾರ 15 ರೂ ಹೆಚ್ಚಿದರೆ, ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. 22 ಕ್ಯಾರಟ್ ಚಿನ್ನದ ಬೆಲೆ 13,995 ರುನಿಂದ 14,010 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 15,284 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 245 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 250 ರೂ ಇದೆ.

Gold Rates 25 September: ಚಿನ್ನದ ಬೆಲೆ ಅಲ್ಪ ಏರಿಕೆ; ಮತ್ತೆ 14,000 ರೂ ಗಡಿಯಾಚೆ
ಚಿನ್ನImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 25, 2026 | 12:50 PM

Share

ನವದೆಹಲಿ, ಸೆಪ್ಟೆಂಬರ್ 25: ನಿನ್ನೆ ಸಖತ್ ಇಳಿದಿದ್ದ ಚಿನ್ನದ ಬೆಲೆ ಇವತ್ತು ಶುಕ್ರವಾರ ಅಲ್ಪ ಹೆಚ್ಚಳ ಕಂಡಿದೆ. ಗ್ರಾಮ್​ಗೆ 15 ರೂ ಏರಿಕೆಯಾಗಿದೆ. ಆಭರಣ ಚಿನ್ನದ ಬೆಲೆ ಮತ್ತೆ 14,000 ರೂ ಗಡಿ ದಾಟಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ತುಸು ಕಡಿಮೆ ಆಗಿದೆ. ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳೂ ತುಸು ಇಳಿದಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,840 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,40,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 25ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,284
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,010
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,463
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,010 ರೂ
  • ಚೆನ್ನೈ: 14,010 ರೂ
  • ಮುಂಬೈ: 14,010 ರೂ
  • ದೆಹಲಿ: 14,025
  • ಕೋಲ್ಕತಾ: 14,010 ರೂ
  • ಕೇರಳ: 14,010 ರೂ
  • ಅಹ್ಮದಾಬಾದ್: 14,015 ರೂ
  • ಜೈಪುರ್: 14,025
  • ಲಕ್ನೋ: 14,025
  • ಭುವನೇಶ್ವರ್: 14,010 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 137. 52 ಡಾಲರ್ (13,187 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 2.052 ಡಾಲರ್ (196 ರುಪಾಯಿ)

ಇದನ್ನೂ ಓದಿ: ‘ಮೇಕ್ ಇನ್ ಇಂಡಿಯಾ’ಗೆ 12 ವರ್ಷ: ಮ್ಯಾನುಫ್ಯಾಕ್ಚರಿಂಗ್ ಪ್ರಯಾಣದಲ್ಲಿ ಭಾರತ ಕಂಡ ಯಶಸ್ಸು, ಭವಿಷ್ಯದ ಕನಸು

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 15,284 ರುಪಾಯಿ
  • ಮಲೇಷ್ಯಾ: 575 ರಿಂಗಿಟ್ (13,530 ರುಪಾಯಿ)
  • ದುಬೈ: 514.25 ಡಿರಾಮ್ (13,435 ರುಪಾಯಿ)
  • ಅಮೆರಿಕ: 141.50 ಡಾಲರ್ (13,568 ರುಪಾಯಿ)
  • ಸಿಂಗಾಪುರ: 186.70 ಸಿಂಗಾಪುರ್ ಡಾಲರ್ (13,997 ರುಪಾಯಿ)
  • ಕತಾರ್: 513.50 ಕತಾರಿ ರಿಯಾಲ್ (13,506 ರೂ)
  • ಸೌದಿ ಅರೇಬಿಯಾ: 530 ಸೌದಿ ರಿಯಾಲ್ (13,533 ರುಪಾಯಿ)
  • ಓಮನ್: 54.60 ಒಮಾನಿ ರಿಯಾಲ್ (13,596 ರುಪಾಯಿ)
  • ಕುವೇತ್: 42.56 ಕುವೇತಿ ದಿನಾರ್ (13,260 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 245 ರೂ
  • ಚೆನ್ನೈ: 250 ರೂ
  • ಮುಂಬೈ: 245 ರೂ
  • ದೆಹಲಿ: 245 ರೂ
  • ಕೋಲ್ಕತಾ: 245 ರೂ
  • ಕೇರಳ: 250 ರೂ
  • ಅಹ್ಮದಾಬಾದ್: 245 ರೂ
  • ಜೈಪುರ್: 245 ರೂ
  • ಲಕ್ನೋ: 245 ರೂ
  • ಭುವನೇಶ್ವರ್: 250 ರೂ
  • ಪುಣೆ: 245

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಜನರ ನಡುವೆ ಬೆರೆಯಿರಿ, ಭಾರತದ ವೈವಿಧ್ಯತೆಯನ್ನು ಹತ್ತಿರದಿಂದ ಅರಿಯಿರಿ: ಮೋದಿ
ಜನರ ನಡುವೆ ಬೆರೆಯಿರಿ, ಭಾರತದ ವೈವಿಧ್ಯತೆಯನ್ನು ಹತ್ತಿರದಿಂದ ಅರಿಯಿರಿ: ಮೋದಿ
ಕರ್ನಾಟಕದ ಖಾಸಗಿ ಕಂಪನಿಯ ನೇಮಕಾತಿ ನೀತಿಗೆ ಬಿಜೆಪಿ ಆಕ್ಷೇಪ
ಕರ್ನಾಟಕದ ಖಾಸಗಿ ಕಂಪನಿಯ ನೇಮಕಾತಿ ನೀತಿಗೆ ಬಿಜೆಪಿ ಆಕ್ಷೇಪ
ನಕಲಿ ಪನೀರ್‌ ಹಾವಳಿಗೆ ಬ್ರೇಕ್ ಹಾಕಲು FSSAI ಬಿಗ್ ಪ್ಲಾನ್
ನಕಲಿ ಪನೀರ್‌ ಹಾವಳಿಗೆ ಬ್ರೇಕ್ ಹಾಕಲು FSSAI ಬಿಗ್ ಪ್ಲಾನ್
ವೀಕೆಂಡ್ ಎಪಿಸೋಡ್​ನಲ್ಲಿ ಮತ್ತಿಬ್ಬರು ಹೊರ ಹೋಗ್ತಾರೆ; ಬಿಗ್ ಬಾಸ್ ಸೂಚನೆ
ವೀಕೆಂಡ್ ಎಪಿಸೋಡ್​ನಲ್ಲಿ ಮತ್ತಿಬ್ಬರು ಹೊರ ಹೋಗ್ತಾರೆ; ಬಿಗ್ ಬಾಸ್ ಸೂಚನೆ
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ಬಿಜೆಪಿ ನಾಯಕಿ ಮಾಧವಿ ಲತಾಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಬಿಜೆಪಿ ನಾಯಕಿ ಮಾಧವಿ ಲತಾಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್