AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನದ ಬೆಲೆ ಮತ್ತೆ ಇಳಿಕೆ; ಎರಡು ದಿನದಲ್ಲಿ ಗ್ರಾಮ್​ಗೆ 230 ರೂ ಕುಸಿತ

ಚಿನ್ನದ ಬೆಲೆ ಸೋಮವಾರ ಗ್ರಾಮ್​ಗೆ 60 ರೂ ಇಳಿದಿದೆ. ಎರಡು ದಿನಗಳಿಂದ ಬೆಲೆ 230 ರೂ ತಗ್ಗಿದೆ. ಆಭರಣ ಚಿನ್ನದ ಬೆಲೆ 14,190 ರೂನಿಂದ 14,130 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 15,415 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 250 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 255 ರೂ ಇದೆ.

ಚಿನ್ನದ ಬೆಲೆ ಮತ್ತೆ ಇಳಿಕೆ; ಎರಡು ದಿನದಲ್ಲಿ ಗ್ರಾಮ್​ಗೆ 230 ರೂ ಕುಸಿತ
ಚಿನ್ನImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Sep 07, 2026 | 11:42 AM

Share

ಮುಖ್ಯಾಂಶಗಳು

  • ಚಿನ್ನದ ಬೆಲೆ ಸೋಮವಾರ ಗ್ರಾಮ್​ಗೆ 60 ರೂ ಇಳಿದಿದೆ.
  • ಆಭರಣ ಚಿನ್ನದ ಬೆಲೆ 14,190 ರೂನಿಂದ 14,130 ರೂಗೆ ಇಳಿದಿದೆ.
  • ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 250 ರೂ ಇದೆ.

ನವದೆಹಲಿ, ಸೆಪ್ಟೆಂಬರ್ 7: ಚಿನ್ನದ ಬೆಲೆ ಇವತ್ತೂ ಕಡಿಮೆಗೊಂಡಿದೆ. ವಾರಾಂತ್ಯದಲ್ಲಿ 170 ರೂ ಕಡಿಮೆಯಾಗಿದ್ದ ಬಂಗಾರದ ದರ ಇವತ್ತು ಸೋಮವಾರ 60 ರೂ ತಗ್ಗಿದೆ. ಅಂತಾರಾಷ್ಟ್ರೀಯ ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳೂ ಇಳಿದಿವೆ. ಆದರೆ, ಹೆಚ್ಚಿನ ದೇಶಗಳಲ್ಲಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 25,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 7ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,415
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,130
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,561
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,130 ರೂ
  • ಚೆನ್ನೈ: 14,130 ರೂ
  • ಮುಂಬೈ: 14,130 ರೂ
  • ದೆಹಲಿ: 14,145
  • ಕೋಲ್ಕತಾ: 14,130 ರೂ
  • ಕೇರಳ: 14,130 ರೂ
  • ಅಹ್ಮದಾಬಾದ್: 14,135 ರೂ
  • ಜೈಪುರ್: 14,145
  • ಲಕ್ನೋ: 14,145
  • ಭುವನೇಶ್ವರ್: 14,130 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 141.36 ಡಾಲರ್ (13,357 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 2.111 ಡಾಲರ್ (199 ರುಪಾಯಿ)

ಇದನ್ನೂ ಓದಿ: ಭಾರತದ ಫಾರೆಕ್ಸ್ ನಿಧಿ 740 ಬಿಲಿಯನ್ ಡಾಲರ್; ಹೊಸ ಸಾರ್ವಕಾಲಿಕ ದಾಖಲೆ; ಒಂದೇ ವಾರದಲ್ಲಿ ಲಕ್ಷ ಕೋಟಿ ರೂ ಹೆಚ್ಚಳ

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 15,415 ರುಪಾಯಿ
  • ಮಲೇಷ್ಯಾ: 588 ರಿಂಗಿಟ್ (13,710 ರುಪಾಯಿ)
  • ದುಬೈ: 533.75 ಡಿರಾಮ್ (13,723 ರುಪಾಯಿ)
  • ಅಮೆರಿಕ: 146 ಡಾಲರ್ (13,781 ರುಪಾಯಿ)
  • ಸಿಂಗಾಪುರ: 191 ಸಿಂಗಾಪುರ್ ಡಾಲರ್ (14,233 ರುಪಾಯಿ)
  • ಕತಾರ್: 533.50 ಕತಾರಿ ರಿಯಾಲ್ (13,817 ರೂ)
  • ಸೌದಿ ಅರೇಬಿಯಾ: 549 ಸೌದಿ ರಿಯಾಲ್ (13,803 ರುಪಾಯಿ)
  • ಓಮನ್: 56.70 ಒಮಾನಿ ರಿಯಾಲ್ (13,904 ರುಪಾಯಿ)
  • ಕುವೇತ್: 44.18 ಕುವೇತಿ ದಿನಾರ್ (13,588 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 255 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 255 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 255 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:39 am, Mon, 7 September 26

Follow Us