AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಜಾವೆಲಿನ್ ಮಿಸೈಲ್ ಸಿಸ್ಟಂ ಖರೀದಿಸಲು ಭಾರತ ಮುಂದು; ಈ ಕ್ಷಿಪಣಿಗಳ ಶಕ್ತಿ ಎಂಥದ್ದು ಗೊತ್ತಾ?

India to buy US built Javelin missile system: ಫೈರ್ ಅಂಡ್ ಫರ್ಗೆಟ್ ಸಾಮರ್ಥ್ಯದ ಅಮೆರಿಕ ನಿರ್ಮಿತ ಜಾವೆಲಿನ್ ಮಿಸೈಲ್ ಸಿಸ್ಟಂ ಅನ್ನು ಭಾರತ ಖರೀದಿಸಲಿದೆ ಎಂದು ಅಮೆರಿಕದ ರಾಯಭಾರಿ ತಿಳಿಸಿದ್ದಾರೆ. ಕಳೆದ ವರ್ಷ ಅಮೆರಿಕ ಸರ್ಕಾರ ಈ ಕ್ಷಿಪಣಿಯನ್ನು ಭಾರತಕ್ಕೆ ಮಾರಲು ಸಮ್ಮತಿ ನೀಡಿತ್ತು. 45 ಮಿಲಿಯನ್ ಡಾಲರ್ ಮೌಲ್ಯದ ಈ ಕ್ಷಿಪಣಿ ಸಿಸ್ಟಂ ಬಹಳ ಶಕ್ತಿಶಾಲಿ ಎನಿಸಿದೆ.

ಅಮೆರಿಕದ ಜಾವೆಲಿನ್ ಮಿಸೈಲ್ ಸಿಸ್ಟಂ ಖರೀದಿಸಲು ಭಾರತ ಮುಂದು; ಈ ಕ್ಷಿಪಣಿಗಳ ಶಕ್ತಿ ಎಂಥದ್ದು ಗೊತ್ತಾ?
ಅಮೆರಿಕದ ಜಾವೆಲಿನ್ ಕ್ಷಿಪಣಿImage Credit source: Ukrinform/NurPhoto via Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 28, 2026 | 6:49 PM

Share

ನವದೆಹಲಿ, ಆಗಸ್ಟ್ 28: ಅಮೆರಿಕದ ಬಲಿಷ್ಠ ಜಾವೆಲಿನ್ (Javelin) ಕ್ಷಿಪಣಿಗಳನ್ನು ಖರೀದಿಸಲು ಭಾರತ ಯೋಜಿಸಿದೆ. ಈ ಮಾಹಿತಿಯನ್ನು ರಾಯಭಾರಿ ಸೆರ್ಗಿಯೋ ಗೋರ್ ಬಹಿರಂಗಪಡಿಸಿದ್ದಾರೆ. ಈ ಎಫ್​ಜಿಎಂ-148 ಜಾವೆಲಿನ್ ಎಂದು ಹೆಸರಿಸಲಾಗಿರುವ ಇದು ಟ್ಯಾಂಕ್ ಧ್ವಂಸಕ ಕ್ಷಿಪಣಿ ಸಿಸ್ಟಂ (Anti-Tank Guided Missile System) ಎಂದು ಹೇಳಲಾದರೂ ಅದಕ್ಕಿಂತಲೂ ಹೆಚ್ಚಿನ ಮಟ್ಟದ ಶಕ್ತಿ, ಸಾಮರ್ಥ್ಯ, ಉಪಯುಕ್ತತೆಯನ್ನು ಹೊಂದಿದೆ. ಅಮೆರಿಕದ ಲಾಕ್​ಹೀಡ್ ಮಾರ್ಟಿನ್ ಮತ್ತು ಆರ್​ಟಿಎಕ್ಸ್ ಕಾರ್ಪೊರೇಶನ್ ಸಂಸ್ಥೆಗಳು ಜಂಟಿಯಾಗಿ ತಯಾರಿಸುವ ಈ ಕ್ಷಿಪಣಿಯು ಶತ್ರುಗಳ ಪಾಲಿಗೆ ಸಿಂಹಸ್ವಪ್ನ ಎನಿಸಬಲ್ಲುದು.

ಜಾವೆಲಿನ್ ಕ್ಷಿಪಣಿ ತಯಾರಿಕೆಯಲ್ಲಿ ಭಾರತದ್ದೂ ಇರಲಿದೆಯಾ ಪಾತ್ರ?

ಭಾರತಕ್ಕೆ ಜಾವೆಲಿನ್ ಕ್ಷಿಪಣಿ ಸಿಸ್ಟಂ ನೀಡಲು ಅಮೆರಿಕ ಸರ್ಕಾರ ಕಳೆದ ವರ್ಷವೇ ಅನುಮೋದನೆ ನೀಡಿದೆ. ಅಂದಾಜು 45.7 ಮಿಲಿಯನ್ ಡಾಲರ್ (ಸುಮಾರು 440 ಕೋಟಿ ರೂ) ಮೌಲ್ಯದ ಈ ಈ ಒಪ್ಪಂದದಲ್ಲಿ ಉಡಾವಣೆಗೆ ಸಿದ್ಧವಾದ ಕ್ಷಿಪಣಿ, 100 ಜಾವೆಲಿನ್ ಸುತ್ತುಗಳು, 25 ಲಾಂಚ್ ಯುನಿಟ್​ಗಳು, ಜೊತೆಗೆ ತರಬೇತಿ ಇತ್ಯಾದಿ ವಿವಿಧ ಸಪೋರ್ಟ್ ಸಿಸ್ಟಂಗಳು ಒಳಗೊಂಡಿವೆ. ಈ ಒಪ್ಪಂದದ ಮೂಲಕ ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಒಪ್ಪಂದಗಳು ಮತ್ತಷ್ಟು ಬಲಗೊಳ್ಳಲಿದ್ದು, ಭಾರತದಲ್ಲೇ ಈ ಕ್ಷಿಪಣಿಗಳ ಜಂಟಿ ಉತ್ಪಾದನೆಗೆ (Co-Production) ದಾರಿ ಮಾಡಿಕೊಡಲಿದೆ ಎಂದು ವರದಿಗಳು ಹೇಳುತ್ತವೆ. ಈ ಕ್ಷಿಪಣಿಯ ಸಾಮರ್ಥ್ಯಗಳು ಈ ಕೆಳಕಂಡಂತಿವೆ:

ಇದನ್ನೂ ಓದಿ: ಅಮೆರಿಕ ಸರ್ಕಾರ vs ಆಂಥ್ರೋಪಿಕ್; ಎಐ ದಿಗ್ಗಜನ ಪರವಾಗಿ ಕೋರ್ಟ್ ತೀರ್ಪು

  • ಫೈರ್ ಅಂಡ್ ಫರ್ಗೆಟ್: ಜಾವೆಲಿನ್ ಒಂದು ‘ಫೈರ್ ಅಂಡ್ ಫರ್ಗೆಟ್’ (Fire-and-Forget) ತಂತ್ರಜ್ಞಾನ ಹೊಂದಿರುವ ಕ್ಷಿಪಣಿಯಾಗಿದೆ. ಎಂದರೆ, ಸೈನಿಕನು ಗುರಿಯನ್ನು ಲಾಕ್ ಮಾಡಿ ಕ್ಷಿಪಣಿ ಹಾರಿಸಿದರೆ ಸಾಕು, ಕ್ಷಿಪಣಿಯೇ ತನ್ನ ಇನ್ಫ್ರಾರೆಡ್ ಸೀಕರ್ ಮೂಲಕ ಗುರಿಯನ್ನು ಬೆನ್ನಟ್ಟಿ ನಾಶಪಡಿಸುತ್ತದೆ.
  • ಟಾಪ್-ಅಟ್ಯಾಕ್ ಸಾಮರ್ಥ್ಯ: ಆಧುನಿಕ ಯುದ್ಧ ಟ್ಯಾಂಕ್‌ಗಳ ಮೇಲ್ಭಾಗದ ಕವರ್ ಅತ್ಯಂತ ತೆಳುವಾಗಿರುತ್ತದೆ (ದುರ್ಬಲವಾಗಿರುತ್ತದೆ). ಜಾವೆಲಿನ್ ಕ್ಷಿಪಣಿಯು ಹಾರಿದ ನಂತರ ಸುಮಾರು 150 ಮೀಟರ್ ಎತ್ತರಕ್ಕೆ ಏರಿ, ಟ್ಯಾಂಕ್‌ನ ಮೇಲ್ಭಾಗಕ್ಕೆ ನೇರವಾಗಿ ಅಪ್ಪಳಿಸಿ (Top Attack) ಸೆಕೆಂಡುಗಳಲ್ಲಿ ಸಂಪೂರ್ಣ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.
  • ಸುಲಭ ಸಾಗಣೆ: ಇದನ್ನು ಒಬ್ಬನೇ ಯೋಧ ತನ್ನ ಹೆಗಲ ಮೇಲೆ ಇರಿಸಿಕೊಂಡು (Shoulder-fired / Man-portable) ಕಟ್ಟಡಗಳು ಅಥವಾ ಬಂಕರ್‌ಗಳ ಒಳಗಿಂದಲೂ ಸುಲಭವಾಗಿ ಹಾರಿಸಬಹುದಾಗಿದೆ.

ಇದನ್ನೂ ಓದಿ: ಎಚ್​ಡಿಎಫ್​ಸಿ ಬ್ಯಾಂಕ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ; ಭಾರತದಲ್ಲಾದ ಅಪರಾಧಕ್ಕೆ ಅಮೆರಿಕದಲ್ಲಿ ಕಾನೂನು ಕ್ರಮ ಯಾಕೆ? ಇಲ್ಲಿದೆ ಮಾಹಿತಿ

ಭಾರತೀಯ ಸೇನೆಗೆ ಈ ತಂತ್ರಜ್ಞಾನ ಸೇರ್ಪಡೆಯಾಗುವುದರಿಂದ ಗಡಿ ಭಾಗಗಳಲ್ಲಿ ಶತ್ರುಪಡೆಗಳ ಶಸ್ತ್ರಸಜ್ಜಿತ ಟ್ಯಾಂಕ್‌ಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us