ಬೆಂಗಳೂರಿನ ಐಐಎಸ್​ಸಿ ಹಿಂದೆ ಸ್ವಾಮಿ ವಿವೇಕಾನಂದ, ಟಾಟಾ ಫ್ಯಾಮಿಲಿ, ಒಡೆಯರ್, ನವಾಬರ ಪಾತ್ರ ಏನಿತ್ತು?

Indian Institute of Science, Bangalore: ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಯ ಹಿಂದಿನ ಕಥೆ ಕುತೂಹಲಕಾರಿಯಾಗಿದೆ. ಉಕ್ಕು ಉದ್ಯಮವನ್ನು ಭಾರತದಲ್ಲಿ ಸ್ಥಾಪಿಸುವ ಇರಾದೆಯಲ್ಲಿದ್ದ ಜಮ್​ಶೆಡ್​ಜಿ ಟಾಟಾ ಅವರು ವಿಜ್ಞಾನ ಸಂಶೋಧನಾ ಕೇಂದ್ರವನ್ನೂ ಸ್ಥಾಪಿಸಿದ್ದರು. ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದ ಟಾಟಾ ಅವರು ತಮ್ಮ ಯೋಜನೆಗೆ ಆ ಯೋಗಿಯ ಬೆಂಬಲ ಕೋರಿದ್ದರು.

ಬೆಂಗಳೂರಿನ ಐಐಎಸ್​ಸಿ ಹಿಂದೆ ಸ್ವಾಮಿ ವಿವೇಕಾನಂದ, ಟಾಟಾ ಫ್ಯಾಮಿಲಿ, ಒಡೆಯರ್, ನವಾಬರ ಪಾತ್ರ ಏನಿತ್ತು?
ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 10, 2024 | 3:00 PM

ಬೆಂಗಳೂರು, ಅಕ್ಟೋಬರ್ 10: ಸಿಲಿಕಾನ್ ಸಿಟಿಯ ಹೆಗ್ಗುರುತುಗಳಲ್ಲಿ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ಕೂಡ ಒಂದು. ಇದು ರತನ್ ಟಾಟಾ ಅವರ ತಾತ ಜಮ್​ಶೆಟ್​ಜಿ ಟಾಟಾ ಬೆಂಗಳೂರಿಗೆ ಮತ್ತು ಭಾರತಕ್ಕೆ ಇತ್ತ ಅಮೋಘ ಕೊಡುಗೆ. ಈ ವಿಶ್ವಪ್ರಸಿದ್ಧ ಐಐಎಸ್​ಸಿ ಸ್ಥಾಪನೆಯ ಕಥೆಯೂ ಬಹಳ ಕುತೂಹಲಕಾರಿಯಾಗಿದೆ. ಜಮ್​ಶೆಡ್​ಜಿ ಮಾತ್ರವಲ್ಲ, ಸ್ವಾಮಿ ವಿವೇಕಾನಂದ, ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್, ನಿಜಾಮ ಉಸ್ಮಾನ್ ಅಲಿ ಖಾನ್ ಮೊದಲಾದವರ ಕೊಡುಗೆ ಐಐಎಸ್​ಸಿಗೆ ಇದೆ. ಸ್ವಾಮಿ ವಿವೇಕಾನಂದರದ್ದು ಇಲ್ಲಿ ನೇರ ಪಾತ್ರ ಇಲ್ಲದಿದ್ದರೂ ಭಾವನಾತ್ಮಕವಾಗಿ ಜೋಡಿತವಾಗಿದೆ.

ವಿಜ್ಞಾನ ಮತ್ತು ವ್ಯವಹಾರ ಎರಡಕ್ಕೂ ಒತ್ತು ಕೊಟ್ಟಿದ್ದ ಜಮ್​ಶೆಡ್​ಜಿ

ಜಮ್​ಶೆಡ್​ಜಿ ಟಾಟಾ ಅವರಿಗೆ ಭಾರತದಲ್ಲಿ ಉಕ್ಕು ತಯಾರಿಸುವ ಘಟಕ ಸ್ಥಾಪಿಸುವ ಆಲೋಚನೆ ಬಂದಿತ್ತು. ಭಾರತದಲ್ಲಿ ಆಗ ಅದರ ತಂತ್ರಜ್ಞಾನ ಇರಲಿಲ್ಲ. ಅಮೆರಿಕದ ಪ್ರತಿಭಾನ್ವಿತ ಎಂಜಿನಿರುಗಳಲ್ಲಿ ಒಬ್ಬರಾದ ಚಾರ್ಲ್ಸ್ ಪೇಜ್ ಪೆರಿನ್ ಅವರನ್ನು ಭಾರತಕ್ಕೆ ಬರುವಂತೆ ಮನವೊಲಿಸಿ, ಉಕ್ಕು ಕಾರ್ಖಾನೆ ಸ್ಥಾಪಿಸಿದ್ದರು. ಜಮ್​ಶೆಡ್​ಪುರ್​ನಲ್ಲಿ ಟಾಟಾ ಸ್ಟೀಲ್ ಘಟಕ ಅದು.

ಭಾರತದಲ್ಲಿ ವಿಜ್ಞಾನದ ತಳಹದಿ ಭದ್ರಗೊಳಿಸುವ ಆಲೋಚನೆ ಹೊಂದಿದ್ದ ಜಮ್​ಶೆಡ್​ಜಿ 1898ರಲ್ಲಿ ವಿಜ್ಞಾನ ಸಂಶೋಧನೆ ಮತ್ತು ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಪ್ರಸ್ತಾಪವನ್ನು ಅಂದಿನ ವೈಸ್​ರಾಯ್ ಜಾರ್ಜ್ ಕರ್ಜನ್ ಅವರ ಮುಂದಿಟ್ಟರು. ಆಗ ವೈಸ್​ರಾಯ್ ಅವರು ಬೆಂಗಳೂರು ಸ್ಥಳವನ್ನು ಸೂಚಿಸಿದರು.

ಇದನ್ನೂ ಓದಿ: ಫೋನಿಲ್ಲ, ಸಿಂಪಲ್ ಲೈಫ್.. ರತನ್ ಟಾಟಾ ಸಹೋದರ ಜಿಮ್ಮಿಯದ್ದು ಎಲ್ಲಾ ಇದ್ದೂ ಏನೂ ಇಲ್ಲದಂಥ ಜೀವನ

ಮಹಾರಾಜ ಒಡೆಯರ್ ಪಾತ್ರ…

ಬೆಂಗಳೂರಿನಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕೆಂದು ನಿರ್ಧಾರವಾದಾಗ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 371 ಎಕರೆ ಜಾಗವನ್ನು ದಾನವಾಗಿ ಕೊಟ್ಟರು. ಅಂದಿನ ಕಾಲಕ್ಕೆ ಈ ಕೇಂದ್ರ ನಿರ್ಮಾಣಕ್ಕೆ 5 ಲಕ್ಷ ರೂ ದೇಣಿಗೆ ಕೊಟ್ಟರು. ಅಷ್ಟು ಮಾತ್ರವಲ್ಲ, ವರ್ಷಕ್ಕೆ 50,000 ರೂ ಹಣವನ್ನೂ ಕೊಟ್ಟರು. ಅದೇ ವೇಳೆ ನಿಜಾಮ ಉಸ್ಮಾನ್ ಅಲಿ ಖಾನ್ ಒಟ್ಟಾರೆಯಾಗಿ 3 ಲಕ್ಷ ರೂ ಹಣವನ್ನು ಕೊಡುಗೆಯಾಗಿ ನೀಡಿದ್ದರು. ಟಾಟಾ ಸಂಸ್ಥೆ ಈ ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಹಲವು ಕಟ್ಟಡಗಳನ್ನು ನಿರ್ಮಿಸಿತು.

ಸ್ವಾಮಿ ವಿವೇಕಾನಂದರ ಪಾತ್ರವೇನು?

ಬೆಂಗಳೂರಿನ ಐಐಎಸ್​ಸಿ ನಿರ್ಮಾಣದ ಹಿಂದೆ ಸ್ವಾಮಿ ವಿವೇಕಾನಂದರದ್ದು ನೇರ ಪಾತ್ರ ಇರಲಿಲ್ಲ. ಆದರೆ, 1893ರಲ್ಲಿ ಜಮ್​ಶೆಟ್​ಜಿ ಟಾಟಾ ಮತ್ತು ಸ್ವಾಮಿ ವಿವೇಕಾನಂದ ಅವರು ಜಪಾನ್​ನಿಂದ ಚಿಕಾಗೋಗೆ ಹಡಗಿನಲ್ಲಿ ಪ್ರಯಾಣಿಸುವಾಗ ಭೇಟಿಯಾಗಿದ್ದರು. ಆಗ ಉಕ್ಕು ಉದ್ಯಮವನ್ನು ಭಾರತದಲ್ಲಿ ಸ್ಥಾಪಿಸುವ ತಮ್ಮ ಕನಸನ್ನು ವಿವೇಕಾನಂದರ ಬಳಿ ಟಾಟಾ ಹಂಚಿಕೊಂಡಿದ್ದರಂತೆ.

ಇದನ್ನೂ ಓದಿ: ರತನ್ ನಂತರ ಟಾಟಾ ಗ್ರೂಪ್ ವಾರಸುದಾರರು ಯಾರು? ಮಾಯಾ, ಲಿಯಾ, ನೆವಿಲ್ಲೆ ಟಾಟಾ ಪೈಕಿ ಯಾರಿಗೆ ಸಿಗುತ್ತೆ ಮುಂದಾಳತ್ವ?

ಐದು ವರ್ಷದ ಬಳಿಕ, ಅಂದರೆ 1898ರಲ್ಲಿ ಬೆಂಗಳೂರಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸುವ ಪ್ರಸ್ತಾವವನ್ನು ವೈಸ್​ರಾಯ್​ಗೆ ಸಲ್ಲಿಸುವ ಸಂದರ್ಭದಲ್ಲಿ ಜಮ್​ಶೆಟ್​ಜಿ ಅವರು ಸ್ವಾಮಿ ವಿವೇಕಾನಂದರಿಗೆ ಪತ್ರ ಬರೆದು, ತಮ್ಮ ಇಂಗಿತವನ್ನು ತೋರ್ಪಡಿಸಿದ್ದರು.

ಸ್ವಾಮಿ ವಿವೇಕಾನಂದರಿಗೆ ವಿಜ್ಞಾನದ ಬಗ್ಗೆ ಇದ್ದ ಧೋರಣೆ ಮತ್ತು ಅವರ ನಾಯಕತ್ವದ ಸಾಮರ್ಥ್ಯವು ಜಮ್​ಶೆಡ್​ಜಿಗೆ ಇಷ್ಟವಾಗಿತ್ತು. ತಮ್ಮ ವಿಜ್ಞಾನ ಕೇಂದ್ರ ಸ್ಥಾಪನೆಯ ಅಭಿಯಾನಕ್ಕೆ ಮಾರ್ಗದರ್ಶನ ನೀಡುವಂತೆ ವಿವೇಕಾನಂದರನ್ನು ಕೋರಿದರು. ವಿವೇಕಾನಂದರೂ ಕೂಡ ಟಾಟಾ ಯೋಜನೆಯಿಂದ ಉತ್ಸಾಹಿತರಾಗಿ ಬೆಂಬಲ ನೀಡಿದರು. ಅಂತಿಮವಾಗಿ ಬೆಂಗಳೂರಿನಲ್ಲಿ 1909ರಲ್ಲಿ ಟಾಟಾ ವಿಜ್ಞಾನ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ ಸ್ಥಾಪನೆಯಾಯಿತು. ನಂತರದಲ್ಲಿ ಇದೇ ಸಂಸ್ಥೆಯ ಹೆಸರನ್ನು ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ಎಂದು ಬದಲಿಸಲಾಯಿತು. ಈಗಲೂ ಕೂಡ ಟಾಟಾ ಗ್ರೂಪ್ ಸಂಸ್ಥೆ ವತಿಯಿಂದ ಈ ಸಂಸ್ಥೆಗೆ ದೇಣಿಗೆ ಬರುವುದು ಮುಂದುವರಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್