AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Startups: ದೇಶದಲ್ಲಿವೆ 86 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್​​ಗಳು; ಮುಂಚೂಣಿಯಲ್ಲಿ ಐಟಿ ಕ್ಷೇತ್ರ

ದೇಶದಾದ್ಯಂತ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಸರ್ಕಾರ ‘ಸ್ಟಾರ್ಟಪ್ ಇಂಡಿಯಾ’ ಯೋಜನೆ ಅಡಿಯಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ರಾಜ್ಯ ಖಾತೆ ಸಚಿವ ಸೋಮ ಪ್ರಕಾಶ್ ತಿಳಿಸಿದ್ದಾರೆ.

Startups: ದೇಶದಲ್ಲಿವೆ 86 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್​​ಗಳು; ಮುಂಚೂಣಿಯಲ್ಲಿ ಐಟಿ ಕ್ಷೇತ್ರ
ಸಾಂದರ್ಭಿಕ ಚಿತ್ರ
Ganapathi Sharma
|

Updated on:Feb 09, 2023 | 11:20 AM

Share

ನವದೆಹಲಿ: ದೇಶದಲ್ಲಿ ಸ್ಟಾರ್ಟಪ್​​ಗಳ (Startups) ಸಂಖ್ಯೆ ಗಣನೀಯವಾಗಿ ವೃದ್ಧಿಯಾಗಿವೆ. 2022ರ ವೇಳೆಗೆ ಒಟ್ಟು 86,713 ಸ್ಟಾರ್ಟಪ್​​ಗಳು ನೋಂದಣಿಯಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2016ರಲ್ಲಿ ದೇಶದಲ್ಲಿ ಕೇವಲ 445 ಸ್ಟಾರ್ಟಪ್​ಗಳಿದ್ದವು. ಅವುಗಳ ಸಂಖ್ಯೆ ಈಗ ಗಣನೀಯವಾಗಿ ವೃದ್ಧಿಯಾಗಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ರಾಜ್ಯ ಖಾತೆ ಸಚಿವ ಸೋಮ ಪ್ರಕಾಶ್ (Som Prakash) ಮಾಹಿತಿ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ (IT sector) ಸುಮಾರು 10 ಸಾವಿರದಷ್ಟು ಸ್ಟಾರ್ಟಪ್​​​ಗಳು ಸ್ಥಾಪನೆಯಾಗಿದ್ದರೆ, ಆರೋಗ್ಯ ಮತ್ತು ಜೀವ ವಿಜ್ಞಾನ ಕ್ಷೇತ್ರದಲ್ಲಿ (Healthcare and Life Science) ಸುಮಾರು 8,000 ಸ್ಟಾರ್ಟಪ್​ಗಳು ನೋಂದಣಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

ದೇಶದಾದ್ಯಂತ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಸರ್ಕಾರ ‘ಸ್ಟಾರ್ಟಪ್ ಇಂಡಿಯಾ’ ಯೋಜನೆ ಅಡಿಯಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಕೇವಲ ಗೌತಮ್ ಅದಾನಿ, ಮುಕೇಶ್ ಅಂಬಾನಿಯಂಥ ಸಿರಿವಂತ ಉದ್ಯಮಿಗಳಿಗೆ ಮಾತ್ರ ಪ್ರೋತ್ಸಾಹ, ಸೌಲಭ್ಯಗಳನ್ನು ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಅಂಥ ದೊಡ್ಡ ಉದ್ಯಮಿಗಳ ಹಿತ ಕಾಯುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿರುವ ಸಂದರ್ಭದಲ್ಲೇ ಸ್ಟಾರ್ಟಪ್​​ಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಆ ಮೂಲಕ, ಸರ್ಕಾರವು ಹೊಸ ಉದ್ಯಮಿಗಳ ಬೆನ್ನಿಗೂ ನಿಂತಿದೆ. ಸ್ಟಾರ್ಟಪ್​​ಗಳ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದು ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ ಎಂಬ ಸಂದೇಶವನ್ನು ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Mahila Samman Savings: ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್; ಮಹಿಳೆಯರಿಗೆ ಎಫ್​ಡಿಗಿಂತಲೂ ಇದುವೇ ಬೆಸ್ಟ್

ಯುನಿಕಾರ್ನ್​ಗಳು ಎಂದರೇನು?

ದೇಶದಲ್ಲಿ ಅನೇಕ ಸ್ಟಾರ್ಟಪ್​​ಗಳಿವೆ. ಆದರೆ ಕೆಲವನ್ನು ಮಾತ್ರ ಯುನಿಕಾರ್ನ್​ಗಳು ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವೇನು? ಸಾಮಾನ್ಯವಾಗಿ ಸಾಹಸೋದ್ಯಮ ಬಂಡವಾಳ ಅಥವಾ ವೆಂಚರ್ ಕ್ಯಾಪಿಟಲ್ ಇಂಡಸ್ಟ್ರೀಯಲ್ಲಿ 100 ಕೋಟಿ ಡಾಲರ್ (ಅಂದಾಜು 8,263 ಕೋಟಿ ರೂಪಾಯಿ) ತಲುಪಿದ ಉದ್ಯಮಗಳನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. ಅಮೆರಿಕದ ಕೌಬಾಯ್ ವೆಂಚರ್ಸ್​​ನ ಸ್ಥಾಪಕಿ ಐಲೀನ್ ಲೀ ಮೊದಲ ಬಾರಿಗೆ ಯುನಿಕಾರ್ನ್ ಪದ ಬಳಕೆ ಮಾಡಿದ್ದರು ಎಂದು ಹೇಳಲಾಗಿದೆ.

‘ಉದ್ಯೋಗ ಸೃಷ್ಟಿಯ ತಾಣವಾಗುತ್ತಿದೆ ಭಾರತ’

ಭಾರತದ ಯುವಕರು ಕೆಲಸ ಹುಡುಕುವುದರ ಬದಲಾಗಿ ಉದ್ಯೋಗ ಸೃಷ್ಟಿಸುವವರಾಗಲು ಬಯಸುತ್ತಾರೆ. ಭಾರತವು ಉದ್ಯೋಗ ಸೃಷ್ಟಿಸುವವರ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ ಇತ್ತೀಚೆಗೆ ಹೇಳಿದ್ದರು. ದೇಶದಲ್ಲಿ ಸುಮಾರು 86,000ಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟಪ್​ಗಳಿವೆ. 100ಕ್ಕೂ ಹೆಚ್ಚು ಯೂನಿಕಾರ್ನ್​​ ಕಂಪನಿಗಳಿವೆ. ಇವುಗಳ ಮೌಲ್ಯ ಸುಮಾರು 350 ಶತಕೋಟಿ ಡಾಲರ್ ಆಗಿದೆ. ಈ ವಿಚಾರದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಸಚಿವರು ಹೈದರಾಬಾದ್​ನಲ್ಲಿ ಇತ್ತೀಚೆಗೆ ನಡೆದ ‘ಜಿ-20 ಸ್ಟಾರ್ಟ್​​ಅಪ್ 20 ಎಂಗೇಜ್​​ಮೆಂಟ್​​ ಗ್ರೂಪ್​’ನಲ್ಲಿ ತಿಳಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:19 am, Thu, 9 February 23