Share Trading: ಷೇರುಪೇಟೆ ಸಹವಾಸ ಬೇಡ ಅಂತ ಬಿಟ್ಟವರ ಸಂಖ್ಯೆ 9 ತಿಂಗಳಲ್ಲಿ 53 ಲಕ್ಷ; ಷೇರುಗಳಿಗೆ ಹೂಡಿಕೆಯೂ ಕಡಿಮೆ; ಎಲ್ಲಿ ಹರಿದುಹೋಗುತ್ತಿದೆ ದುಡ್ಡು?

53 Lakh Traders Exit Share Market: ಜೂನ್ 2022ರಲ್ಲಿ ಎನ್​ಎಸ್​ಇನಲ್ಲಿ ಷೇರು ಹೂಡಿಕೆದಾರರ ಸಂಖ್ಯೆ 3.8 ಕೋಟಿ ಇತ್ತು. 2023 ಮಾರ್ಚ್ ತಿಂಗಳಲ್ಲಿ ಇವರ ಸಂಖ್ಯೆ 3.27 ಕೋಟಿಗೆ ಇಳಿದುಹೋಗಿದೆ. ಅಂದರೆ 9 ತಿಂಗಳಲ್ಲಿ 53 ಲಕ್ಷದಷ್ಟು ಹೂಡಿಕೆದಾರರು ಷೇರುಪೇಟೆಯಿಂದಲೇ ಹೊರಬಿದ್ದಿದ್ದಾರೆ. ಇವರು ಟ್ರೇಡಿಂಗ್ ಸಹವಾಸ ಸಾಕು ಎಂದು ಹೊರಬಂದಿದ್ದು ಯಾಕೆ?

Share Trading: ಷೇರುಪೇಟೆ ಸಹವಾಸ ಬೇಡ ಅಂತ ಬಿಟ್ಟವರ ಸಂಖ್ಯೆ 9 ತಿಂಗಳಲ್ಲಿ 53 ಲಕ್ಷ; ಷೇರುಗಳಿಗೆ ಹೂಡಿಕೆಯೂ ಕಡಿಮೆ; ಎಲ್ಲಿ ಹರಿದುಹೋಗುತ್ತಿದೆ ದುಡ್ಡು?
ಷೇರು ವಹಿವಾಟು
Follow us
|

Updated on:Apr 20, 2023 | 10:47 AM

ಷೇರುಪೇಟೆ (Share Market) ಎಂಬ ಮಾಯಾಬಜಾರ್​ನಲ್ಲಿ ಹಣ ಹಾಕಿದರೆ ಭರ್ಜರಿ ಲಾಭ ಬರುತ್ತದೆ ಎನ್ನುವಂತಹ ಹಲವು ಸುದ್ದಿಗಳನ್ನು ಕೇಳಿರುತ್ತೇವೆ. ಮಾಧ್ಯಮಗಳಲ್ಲೂ ಇಂಥ ಹೈರಿಟರ್ನ್ ಸ್ಟಾಕುಗಳ ಬಗ್ಗೆ ಸುದ್ದಿ ಓದಿರುತ್ತೇವೆ. ಅವೆಲ್ಲವೂ ನಿಜ. ಆದರೆ, ಅದೇ ಷೇರಿನ ಮೇಲೆ ಯಾರಾದರೂ ಹೂಡಿಕೆ ಮಾಡಿದರೆ ಅಷ್ಟೇ ಲಾಭ ಸಿಗುತ್ತೆ ಎಂದು ಯಾರೂ ಖಚಿತವಾಗಿ ಹೇಳಲು ಆಗೊಲ್ಲ. ಅಂತೆಯೇ ಷೇರುಪೇಟೆ ಎಂಬುದು ಮಾಯಾಬಜಾರು. ಇಲ್ಲಿ ನಾವು ಹಾಕಿದ ಹಣ ಮಿಂಚಿನ ವೇಗದಲ್ಲಿ ಹಲವು ಪಟ್ಟು ಹೆಚ್ಚು ಬೆಳೆಯುತ್ತದೆ ಎಂದು ನಂಬಿಕೊಂಡು ಉತ್ಸಾಹದಿಂದ ಹಣ ಹಾಕಿದವರು ಕೈಸುಟ್ಟುಕೊಂಡಿರುವುದು ಹೌದು. ಇದೇ ವೇಳೆ ಷೇರುಪೇಟೆಗಳಲ್ಲಿ ಒಂದಾದ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಿಂದ (NSE- National Stock Exchange) ಒಂದು ಇಂಟರೆಸ್ಟಿಂಗ್ ಸಂಗತಿ ಬಯಲಿಗೆ ಬಂದಿದೆ. ಕಳೆದ 9 ತಿಂಗಳಲ್ಲಿ 53 ಲಕ್ಷ ಜನರು ಷೇರು ಟ್ರೇಡಿಂಗ್ (Share Trading) ಸಹವಾಸವೇ ಬೇಡ ಎಂದು ಬಿಟ್ಟುಬಂದಿದ್ದಾರಂತೆ.

ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ನಿರ್ಗಮಿಸಲು ಏನು ಕಾರಣ?

ಜೂನ್ 2022ರಲ್ಲಿ ಎನ್​ಎಸ್​ಇನಲ್ಲಿ ಷೇರು ಹೂಡಿಕೆದಾರರ ಸಂಖ್ಯೆ 3.8 ಕೋಟಿ ಇತ್ತು. 2023 ಮಾರ್ಚ್ ತಿಂಗಳಲ್ಲಿ ಇವರ ಸಂಖ್ಯೆ 3.27 ಕೋಟಿಗೆ ಇಳಿದುಹೋಗಿದೆ. ಅಂದರೆ 9 ತಿಂಗಳಲ್ಲಿ 53 ಲಕ್ಷದಷ್ಟು ಹೂಡಿಕೆದಾರರು ಷೇರುಪೇಟೆಯಿಂದಲೇ ಹೊರಬಿದ್ದಿದ್ದಾರೆ. ಇವರು ಟ್ರೇಡಿಂಗ್ ಸಹವಾಸ ಸಾಕು ಎಂದು ಹೊರಬಂದಿದ್ದು ಯಾಕೆ? ಇದಕ್ಕೆ ಎರಡು ಕಾರಣಗಳು ಮೇಲ್ನೋಟಕ್ಕೆ ಸಿಗುತ್ತವೆ. ಒಂದು, ಲಾಕ್​ಡೌನ್ ಸಂದರ್ಭದಲ್ಲಿ ವರ್ಕ್ ಫ್ರಂ ಹೋಮ್ ಇದ್ದಾಗ ಹೆಚ್ಚು ಯುವಕರು ಷೇರು ಟ್ರೇಡಿಂಗ್ ನಡೆಸುತ್ತಿದ್ದರು. ಯಾವಾಗ ಕಚೇರಿಗೆ ಹೋಗಿ ಕೆಲಸ ಮಾಡಬೇಕಾಗಿ ಬಂತೂ ಷೇರು ಟ್ರೇಡಿಂಗ್ ಅನ್ನು ಬಹಳ ಮಂದಿ ನಿಲ್ಲಿಸಿದ್ದಾರೆ. ಮೇಲ್ನೋಟಕ್ಕೆ ಕಾಣುವ ಇನ್ನೊಂದು ಕಾರಣ ಎಂದರೆ, ಷೇರುಪೇಟೆಯಲ್ಲಿ ಹೂಡಿಕೆದಾರರು ನಿರೀಕ್ಷಿಸಿದ ರೀತಿಯಲ್ಲಿ ಲಾಭ ಸಿಗದೇ ಇರುವುದು.

ಷೇರುಪೇಟೆಗೆ ಹಣದ ಹರಿವು ಹೇಗೆ ಕಡಿಮೆ ಅಗುತ್ತಿದೆ ನೋಡಿ

ಕಳೆದ 3 ವರ್ಷಗಳ ಎನ್​ಎಸ್​ಇ ಡಾಟಾ ನೋಡಿದಾಗ 2023ರ ಹಣಕಾಸು ವರ್ಷದಲ್ಲಿ ರೀಟೇಲ್ ಒಳ ಹರಿವು ಅತಿ ಕಡಿಮೆ ಇದೆ. ರೀಟೇಲ್ ಒಳಹರಿವು ಎಂದರೆ ರೀಟೇಲ್ ಹೂಡಿಕೆದಾರರು ಹಾಕುವ ಬಂಡವಾಳ. ರೀಟೇಲ್ ಹೂಡಿಕೆದಾರರೆಂದರೆ ಸಾಂಸ್ಥಿಕ ಹೂಡಿಕೆದಾರರು ಮೊದಲಾದ ವಿಶೇಷ ಇನ್ವೆಸ್ಟರ್​ಗಳಲ್ಲದ ಸಾಮಾನ್ಯ ಹೂಡಿಕೆದಾರರು.

ಇದನ್ನೂ ಓದಿMukesh Ambani: ಅಂಬಾನಿ ಹುಟ್ಟಾ ಶ್ರೀಮಂತರಲ್ಲ; ಪೆಟ್ರೋಲ್ ಬಂಕ್ ಕಾರ್ಮಿಕನ ಮಗನಾಗಿ ಮುಕೇಶ್ ಅಂಬಾನಿ ಬೆಳೆದ ರೋಚಕ ಕಥೆ

ಕೋವಿಡ್ ಬಂದ ವರ್ಷ, ಅಂದರೆ 2021ರ ಹಣಕಾಸು ವರ್ಷದಲ್ಲಿ ರೀಟೇಲ್ ಹೂಡಿಕೆಗಳ ಮೊತ್ತ 68,400 ಕೋಟಿ ರೂ ಇತ್ತು. 2022ರ ಹಣಕಾಸು ವರ್ಷದಲ್ಲಿ ಈ ಮೊತ್ತ ಬರೋಬ್ಬರಿ 1.65 ಲಕ್ಷ ಕೋಟಿ ರುಪಾಯಿಗೆ ಏರಿತ್ತು. ಅದೇ 2023ರ ಹಣಕಾಸು ವರ್ಷದಲ್ಲಿ ರೀಟೇಲ್ ಹೂಡಿಕೆಯ ಮೊತ್ತ ಕೇವಲ 49,200 ಕೋಟಿ ರೂ ಮಾತ್ರ. ಅಂದರೆ 2022ರ ಹಣಕಾಸು ವರ್ಷದ ಸಂದರ್ಭದಲ್ಲಿ ಲಾಕ್​ಡೌನ್, ವರ್ಕ್ ಫ್ರಂ ಹೋಂ ಸಂಸ್ಕೃತಿ ಗಟ್ಟಿಯಾಗಿ ಜನಮಾನಸದಲ್ಲಿ ಬೇರೂರಿತ್ತು. ಜನರು ವರ್ಕ್ ಫ್ರಂ ಹೋಮ್​ನಲ್ಲಿದ್ದಾಗ ನಿರ್ಭೀಡೆಯಿಂದ ಷೇರು ಟ್ರೇಡಿಂಗ್ ಮಾಡಲು ಸಾಧ್ಯವಾಗಿಸಿತ್ತು. ಆಫೀಸ್ ಕೆಲಸದ ಜೊತೆಗೆ ಟ್ರೇಡಿಂಗ್ ನಡೆಸುವುದು ಫ್ಯಾಷನ್ ಆಗಿ ಹೋಗಿತ್ತು. ಅಂತೆಯೇ, 2021-22ರ ವರ್ಷದಲ್ಲಿ ಬಹಳ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಗಳಾಗಿದ್ದವು.

2023ರ ಹಣಕಾಸು ವರ್ಷದಲ್ಲಿ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಕರೆಸಿ ಕೆಲಸ ಮಾಡಿಸತೊಡಗಿವೆ. ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಬಾಸ್​ನ ಕಣ್ಣೆದುರು ಷೇರು ಟ್ರೇಡಿಂಗ್ ಮಾಡಲು ಆಗುತ್ತದೆಯೇ? ಅಂತೆಯೇ ರೀಟೇಲ್ ಹೂಡಿಕೆ ಮೊತ್ತ ಕಡಿಮೆ ಆಗಿರುವುದು. ಇದು ಷೇರುಪೇಟೆ ಮಂದಿಯ ಅಭಿಪ್ರಾಯ.

ಹೊಸದಾಗಿ ಷೇರು ವ್ಯವಹಾರಕ್ಕೆ ಬಂದ ಸಾಮಾನ್ಯ ವ್ಯಕ್ತಿಯ ಮನಸ್ಸಿನಲ್ಲಿ ಏನು ಓಡುತ್ತಿರುತ್ತದೆ?

ಷೇರುಗಳಿಗೆ ಲಕ್ಷ ರೂ ಹಣ ಹಾಕಿ ಕೆಲವೇ ವರ್ಷದಲ್ಲಿ ಕೋಟಿ ಹಣ ರಿಟರ್ನ್ ಪಡೆಯಬಹುದು ಎಂದೋ, ಕೆಲವೇ ತಿಂಗಳಲ್ಲಿ ಹಣ 10 ಪಟ್ಟು ಹೆಚ್ಚಾಗುತ್ತದೋ ಎಂದೋ ನಿದರ್ಶನಗಳನ್ನು ಕಂಡು ಹಲವು ಯುವಕರು ಷೇರು ವ್ಯವಹಾರಕ್ಕೆ ಬರುತ್ತಾರೆ. ಕೆಳಗೆ ಬಿದ್ದ ಷೇರುಪೇಟೆ ವಿವಿಧ ಕಾರಣಕ್ಕೆ ದಿಢೀರನೆ ಪುಟಿದೇಳಬಹುದು. ಇಂತಹ ಸಂದರ್ಭದಲ್ಲಿ ಷೇರುಗಳು ಅಸಾಧಾರಣ ರೀತಿಯಲ್ಲಿ ಬೆಳೆಯುತ್ತವೆ. ಇದನ್ನು ಕಂಡು ಯಾರಿಗಾದರೂ ಆಸೆ ಆಗದೇ ಇರದು.

ಇದನ್ನೂ ಓದಿHurun Global Unicorn Index 2023: ಬೈಜುಸ್, ಸ್ವಿಗ್ಗಿ, ಡ್ರೀಮ್11 ಅಗ್ರಮಾನ್ಯ ಭಾರತೀಯ ಯೂನಿಕಾರ್ನ್ಸ್; ಗ್ಯಾಜೆಲೆಸ್ ಸ್ಟಾರ್ಟಪ್​ಗಳೂ ಭಾರತದಲ್ಲಿ ಹೆಚ್ಚಿವೆ

ಇದೇ ಹುಮ್ಮಸ್ಸಿನಲ್ಲಿ ಷೇರುಪೇಟೆಗೆ ಮೊದಲ ಬಾರಿಗೆ ಬರುವ ರೀಟೇಲ್ ಹೂಡಿಕೆದಾರರು ಬ್ರೋಕರ್​ಗಳ ಸಲಹೆ ಪಡೆದು ನಿರ್ದಿಷ್ಟ ಕಂಪನಿಗಳ ಷೇರುಗಳಿಗೆ ಹಣ ಹೂಡಿಕೆ ಮಾಡುತ್ತಾರೆ. ಆದರೆ, ಎಷ್ಟು ದಿನವಾದರೂ ಆ ಷೇರುಗಳು ಬೆಳೆಯುವುದೇ ಇಲ್ಲ. ದಿಢೀರ್ ಬೆಲೆ ಹೆಚ್ಚುತ್ತದೆ. ನೋಡನೋಡುತ್ತಿದ್ದಂತೆಯೇ ಕೋಟ್ಯಾಧಿಪತಿ ಆಗುತ್ತೇನೆ ಎಂದು ಕನಸು ಕಾಣುತ್ತಿದ್ದವರಿಗೆ ಭ್ರಮ ನಿರಸನ ಆಗುತ್ತದೆ. ಈ ಷೇರು ವ್ಯವಹಾರದ ಸಹವಾಸವೇ ಬೇಡ ಎಂದು ಹೊರಬೀಳಬಹುದು.

ಷೇರುಪೇಟೆಗೆ ಬರದ ಹಣ ಎಲ್ಲೆಲ್ಲಿಗೆ ಹರಿದುಹೋಗುತ್ತದೆ?

ಆಗಲೇ ಹೇಳಿದಂತೆ ಷೇರು ಮಾರುಕಟ್ಟೆಗೆ ಹರಿದುಬರುವ ಹೂಡಿಕೆ ಕಡಿಮೆ ಆಗುತ್ತಿದೆ. ಹೊಸದಾಗಿ ವ್ಯವಹಾರಕ್ಕೆ ಬರುವವರ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಷೇರುಪೇಟೆಗೆ ಕೈತಪ್ಪುತ್ತಿರುವ ಸಾವಿರಾರು ಕೋಟಿ ರೂ ಮೊತ್ತದ ರೀಟೇಲ್ ಹೂಡಿಕೆಗಳ ಹಣ ಎಲ್ಲಿಗೆ ಹೋಗುತ್ತದೆ? ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಿದ್ದ ಹಣವನ್ನು ಜನರು ಎಲ್ಲೆಲ್ಲಿ ಹೂಡಿಕೆ ಮಾಡುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರವನ್ನು ರೈಟ್ ರೀಸರ್ಚ್​ನ ಸೋನಮ್ ಶ್ರೀವಾಸ್ತವ ನೀಡುತ್ತಾರೆ.

ಇದನ್ನೂ ಓದಿCoca Cola: ಸ್ವಿಗ್ಗಿ, ಜೊಮಾಟೋಗೆ ಸೆಡ್ಡು ಹೊಡೆಯಲು ಬರುತ್ತಿದೆಯಾ ಕೋಕಾ ಕೋಲ? ಥ್ರೈವ್ ಜೊತೆ ನಿಂತ ಕೋಲಾ

ಕ್ರಿಪ್ಟೋ, ಮ್ಯೂಚುವಲ್ ಫಂಡ್, ಎಸ್​ಐಪಿ, ರಿಯಲ್ ಎಸ್ಟೇಟ್​ನತ್ತ ಆಕರ್ಷಣೆ

ರೈಟ್ ರಿಸರ್ಚ್​ನ ಸ್ಥಾಪಕಿ ಸೋನಮ್ ಶ್ರೀವಾಸ್ತವ ಅವರ ಪ್ರಕಾರ ಕಡಿಮೆ ರಿಸ್ಕ್ ಇರುವ, ಸ್ಥಿರ ಲಾಭ ತರುವ, ನಿಶ್ಚಿತ ಆದಾಯದ ಹೂಡಿಕೆಗಳತ್ತ ಜನರು ಆಕರ್ಷಿತರಾಗಿದ್ದಾರೆ. ಬಾಂಡ್ ಮತ್ತು ಎಫ್​ಡಿಗಳ ಮೇಲೆ ಹೂಡಿಕೆಗಳು ಹೆಚ್ಚುತ್ತಿವೆಯಂತೆ.

ಪರ್ಯಾಯ ಆಸ್ತಿಗಳೆನಿಸಿರುವ ಬಿಟ್​ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆ ಹೆಚ್ಚುತ್ತಿದೆ. ರಿಯಲ್ ಎಸ್ಟೇಟ್​​ನಲ್ಲಿ ಹಣದ ಹರಿವು ಹೆಚ್ಚುತ್ತಿದೆ. ಅಂದರೆ ಜನರು ಸೈಟು, ಫ್ಲ್ಯಾಟುಗಳ ಮೇಲೆ ಹಣ ಹಾಕುವುದು ಮತ್ತೆ ಹೆಚ್ಚುತ್ತಿದೆ. ಎಲ್ಲಕ್ಕಿಂತ ಗಮನಾರ್ಹವೆಂದರೆ ಎಸ್​ಐಪಿ ಮತ್ತು ಮ್ಯೂಚುವಲ್ ಫಂಡ್​ಗಳದ್ದು. ಎಸ್​ಐಪಿ ಯೋಜನೆಗಳ ಮೇಲೆ ಮಾರ್ಚ್ ತಿಂಗಳಲ್ಲಿ 14,300 ಕೋಟಿ ರೂ ಹೂಡಿಕೆ ಆಗಿದೆ. ಇದೇ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಜನರು 20,190 ಕೋಟಿ ರೂ ಹಣ ಹಾಕಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:47 am, Thu, 20 April 23

ತಾಜಾ ಸುದ್ದಿ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್