AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಮುಖ ಬ್ಯಾಂಕುಗಳಲ್ಲಿ ಶೇ. 7.75ರವರೆಗೆ ಫಿಕ್ಸೆಡ್ ಡೆಪಾಸಿಟ್ ದರಗಳು

India's commercial banks and FD rates: ಭಾರತದ ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಶೇ. 7ರ ಆಸುಪಾಸಿನಷ್ಟು ಠೇವಣಿ ದರಗಳನ್ನು ಆಫರ್ ಮಾಡಲಾಗಿದೆ. ಯೆಸ್ ಬ್ಯಾಂಕ್​ನಲ್ಲಿ ಎಫ್​ಡಿ ದರಗಳು ಶೇ. 7.75ರವರೆಗೆ ಇವೆ. ಎನ್​ಬಿಎಫ್​ಸಿಗಳು, ಸಹಕಾರಿ ಬ್ಯಾಂಕುಗಳು, ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಹೆಚ್ಚಿನ ದರಗಳನ್ನು ಆಫರ್ ಮಾಡುವುದು ಹೌದು. ಆದರೆ, ಸುರಕ್ಷತೆ ದೃಷ್ಟಿಯಿಂದ ಗ್ರಾಹಕರಿಗೆ ವಾಣಿಜ್ಯ ಬ್ಯಾಂಕುಗಳು ಹೆಚ್ಚು ವಿಶ್ವಾಸಾರ್ಹ ಎನಿಸಬಹುದು.

ಪ್ರಮುಖ ಬ್ಯಾಂಕುಗಳಲ್ಲಿ ಶೇ. 7.75ರವರೆಗೆ ಫಿಕ್ಸೆಡ್ ಡೆಪಾಸಿಟ್ ದರಗಳು
ಡೆಪಾಸಿಟ್Image Credit source: iStock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 07, 2026 | 4:07 PM

Share

ಕೆಲವೇ ವರ್ಷಗಳಿಗೆ ಹಣವನ್ನು ಇರಿಸಬೇಕೆನ್ನುವವರಿಗೆ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ಗಳು (Fixed Deposit) ಉತ್ತಮ ಎನಿಸುತ್ತವೆ. ಆರ್​ಬಿಐನ ರಿಪೋ ದರ ಬದಲಾವಣೆಗೆ ಅನುಗುಣವಾಗಿ ಎಫ್​ಡಿ ದರಗಳೂ ಬದಲಾಗಬಹುದು. ಸಾಮಾನ್ಯವಾಗಿ 1 ವರ್ಷ ಮೇಲ್ಪಟ್ಟ ಅವಧಿಗಳ ಠೇವಣಿಗಳಿಗೆ ಶೇ. 6ಕ್ಕಿಂತಲೂ ಹೆಚ್ಚು ಬಡ್ಡಿ ಸಿಗುತ್ತದೆ. ಕೆಲ ಬ್ಯಾಂಕುಗಳು ಕೆಲ ಅವಧಿಗಳ ಠೇವಣಿಗಳಿಗೆ ಗರಿಷ್ಠ ಬಡ್ಡಿ ಆಫರ್ ಮಾಡುತ್ತವೆ. ಕಮರ್ಷಿಯಲ್ ಬ್ಯಾಂಕುಗಳು ಇಂದು ಶೇ. 7.75ರವರೆಗೆ ಎಫ್​ಡಿ ದರಗಳನ್ನು ಹೊಂದಿವೆ. ಕೆಲ ಪ್ರಮುಖ ಬ್ಯಾಂಕುಗಳಲ್ಲಿನ ಡೆಪಾಸಿಟ್ ರೇಟ್​ಗಳ ವಿವರ ಈ ಕೆಳಕಂಡಂತಿದೆ:

ಎಸ್​ಬಿಐನಲ್ಲಿ ಎಫ್​ಡಿ ದರಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಮಾನ್ಯ ಗ್ರಾಹಕರ 2-3 ವರ್ಷದ ಠೇವಣಿಗಳಿಗೆ ಶೇ. 6.45 ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 6.95 ಬಡ್ಡಿ ಇರುತ್ತದೆ. 1 ವರ್ಷದ ಮೇಲ್ಪಟ್ಟ ಎಲ್ಲಾ ಅವಧಿ ಠೇವಣಿಗಳಿಗೂ ಶೇ. 6ಕ್ಕಿಂತಲೂ ಹೆಚ್ಚು ಬಡ್ಡಿಯನ್ನು ಎಸ್​ಬಿಐ ನೀಡುತ್ತದೆ. ಹಿರಿಯ ನಾಗರಿಕರಿಗೆ 5ರಿಂದ 10 ವರ್ಷದ ಠೇವಣಿಗೆ ಶೇ. 7.05ರಷ್ಟು ಬಡ್ಡಿ ಸಿಗುತ್ತದೆ. ಇದು ವೃದ್ಧರಿಗೆ ಎಸ್​ಬಿಐ ನೀಡುತ್ತಿರುವ ದೊಡ್ಡ ಗಿಫ್ಟ್.

ಇದನ್ನೂ ಓದಿ: ಇಪಿಎಫ್, ಎನ್​ಪಿಎಸ್ ಮತ್ತು ಮ್ಯೂಚುವಲ್ ಫಂಡ್; ರಿಟೈರ್ಮೆಂಟ್ ಪ್ಲಾನಿಂಗ್​ಗೆ ಯಾವುದು ಉತ್ತಮ?

ಕೋಟಕ್ ಮಹೀಂದ್ರ ಬ್ಯಾಂಕ್ ಎಫ್​ಡಿ ದರಗಳು

ಕೋಟಕ್ ಮಹೀಂದ್ರ ಬ್ಯಾಂಕ್​ನಲ್ಲಿ ಎಫ್​ಡಿಗಳು 7 ದಿನದಿಂದ ಹಿಡಿದು 10 ವರ್ಷದವರೆಗೆ ಇವೆ. ಸಾಮಾನ್ಯ ಗ್ರಾಹಕರಿಗೆ 15 ತಿಂಗಳಿಂದ 3 ವರ್ಷದವರೆಗಿನ ಠೇವಣಿಗಳಿಗೆ ಶೇ 6.70 ಬಡ್ಡಿ ಸಿಗುತ್ತದೆ. ಇದು ಇವರಿಗೆ ಈ ಬ್ಯಾಂಕ್ ನೀಡುವ ಬೆಸ್ಟ್ ಪ್ರೈಸ್. ಹಿರಿಯ ನಾಗರಿಕರಿಗೆ ಶೇ. 7.20ರವರೆಗೂ ಬಡ್ಡಿ ಇದೆ.

ಎಚ್​ಡಿಎಫ್​ಸಿ ಬ್ಯಾಂಕ್ ಎಫ್​ಡಿ ದರಗಳು

ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಎಫ್​ಡಿ ದರಗಳು ಸಾಮಾನ್ಯ ಗ್ರಾಹಕರಿಗೆ ಶೇ. 2.75ರಿಂದ ಶೇ. 6.50ರವರೆಗೆ ಇವೆ. 1 ವರ್ಷ ಮೇಲ್ಪಟ್ಟ ಠೇವಣಿಗಳೆಲ್ಲವಕ್ಕೂ ಬಡ್ಡಿದರ ಶೇ. 6 ಹಾಗೂ ಹೆಚ್ಚು ಇದೆ. 3 ವರ್ಷದಿಂದ 4 ವರ್ಷ 7 ತಿಂಗಳವರೆಗಿನ ಠೇವಣಿಗೆ ಗರಿಷ್ಠ ಶೇ. 6.50 ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ ಎಲ್ಲಾ ಠೇವಣಿಗಳಿಗೆ ರೆಗ್ಯುಲರ್ ಕಸ್ಟಮರ್​ಗಳಿಗಿಂತ ಶೇ. 0.5ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.

ಯೆಸ್ ಬ್ಯಾಂಕ್​ನಲ್ಲಿ ಎಫ್​ಡಿ ದರಗಳು

ಕಮರ್ಷಿಯಲ್ ಬ್ಯಾಂಕುಗಳ ಪೈಕಿ ಯೆಸ್ ಬ್ಯಾಂಕ್ ಅತಿಹೆಚ್ಚು ಎಫ್​ಡಿ ದರಗಳನ್ನು ಆಫರ್ ಮಾಡುತ್ತಿದೆ. ಸಾಮಾನ್ಯ ಗ್ರಾಹಕರಿಗೆ ಶೇ. 7ರವರೆಗೆ ಬಡ್ಡಿ ಇದ್ದರೆ, ಹಿರಿಯ ನಾಗರಿಕರಿಗೆ ಬರೋಬ್ಬರಿ ಶೇ. 7.75 ಬಡ್ಡಿ ಆಫರ್ ಮಾಡಲಾಗಿದೆ. 36 ತಿಂಗಳಿಂದ 60 ತಿಂಗಳ (3-5 ವರ್ಷ) ಠೇವಣಿಗಳಿಗೆ ಹಿರಿಯ ನಾಗರಿಕರು ಶೇ. 7.75 ಬಡ್ಡಿ ಪಡೆಯುತ್ತಾರೆ. 12 ತಿಂಗಳ ಮೇಲ್ಪಟ್ಟ ಎಲ್ಲಾ ಠೇವಣಿಗಳಿಗೆ ಸಾಮಾನ್ಯ ಗ್ರಾಹಕರೂ ಕೂಡ ಶೇ. 6.75ಕ್ಕಿಂತ ಹೆಚ್ಚು ಬಡ್ಡಿ ಪಡೆಯಲು ಅವಕಾಶ ಇದೆ.

ಇದನ್ನೂ ಓದಿ: ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ

ಐಸಿಐಸಿಐ ಬ್ಯಾಂಕ್ ಎಫ್​ಡಿ ದರಗಳು

ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಎನಿಸಿದ ಐಸಿಐಸಿಐ ಬ್ಯಾಂಕ್​ನಲ್ಲಿ ಸಾಮಾನ್ಯ ಗ್ರಾಹಕರು ಎಫ್​ಡಿಗಳಲ್ಲಿ ಶೇ. 6.50ರವರೆಗೆ ಬಡ್ಡಿ ಪಡೆಯಬಹುದು. 3 ವರ್ಷ ಮೇಲ್ಪಟ್ಟ ಠೇವಣಿಗಳಿಗೆ ಗರಿಷ್ಠ ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ 3-5 ವರ್ಷದ ಠೇವಣಿಗೆ ಶೇ. 7.10ರಷ್ಟು ಬಡ್ಡಿ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ