Sign In

By signing in or creating an account, you agree with Associated Broadcasting Company's Terms & Conditions and Privacy Policy.

PPF: ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ ಹೂಡಿಕೆ ಮಾಡಿ ಕೋಟಿ ಸಂಪಾದನೆ ಮಾಡುವುದು ಹೇಗೆ?

Public Provident Fund Investment Details: ಠೇವಣಿ ಯೋಜನೆಗಳಿಂದ ಹಿಡಿದು ಮ್ಯೂಚುವಲ್ ಫಂಡ್​ಗಳವರೆಗೆ ಹಲವು ರೀತಿಯ ಹೂಡಿಕೆ ಆಯ್ಕೆಗಳು ನಮ್ಮ ಮುಂದಿವೆ. ಅದರಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಒಂದು. ಇದು ದೀರ್ಘ ಕಾಲದ ಹೂಡಿಕೆಗೆ ಹೇಳಿ ಮಾಡಿಸಿದ ಯೋಜನೆ. ಸರ್ಕಾರೀ ಬೆಂಬಲಿತ ಯೋಜನೆ ಇದಾದ್ದರಿಂದ ದೀರ್ಘಕಾಲದ ಹೂಡಿಕೆಗೆ ಧೈರ್ಯ ಮಾಡಬಹುದು. ಸಾಮಾನ್ಯ ಎಫ್​ಡಿಗಳಿಗಿಂತಲೂ ಇದಕ್ಕೆ ಬಡ್ಡಿದರ ಹೆಚ್ಚು.

PPF: ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ ಹೂಡಿಕೆ ಮಾಡಿ ಕೋಟಿ ಸಂಪಾದನೆ ಮಾಡುವುದು ಹೇಗೆ?
ಪಬ್ಲಿಕ್ ಪ್ರಾವಿಡೆಂಟ್ ಫಂಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 05, 2023 | 11:02 AM

ಭವಿಷ್ಯದ ಜೀವನಕ್ಕೆ ಈಗಲೇ ಅಡಿಪಾಯ ಹಾಕುವುದು ಜಾಣತನ. ಅಂತೆಯೇ ಇವತ್ತಿನ ಅಗತ್ಯಗಳ ಜೊತೆಗೆ ನಾಳೆಯ ಜೀವನಕ್ಕೆ ಒಂದಷ್ಟು ಹಣ ಎತ್ತಿ ಇಡುವುದು (money savings) ಬಹಳ ಮುಖ್ಯ. ಹಣ ಉಳಿಸುವುದು ಮಾತ್ರವಲ್ಲ, ಆ ಹಣವನ್ನು ವಿವಿಧ ಹೂಡಿಕೆಗಳಲ್ಲಿ ಹಾಕಿ ಬೆಳೆಸುವುದು ಬಹಳ ಮುಖ್ಯ. ಠೇವಣಿ ಯೋಜನೆಗಳಿಂದ ಹಿಡಿದು ಮ್ಯೂಚುವಲ್ ಫಂಡ್​ಗಳವರೆಗೆ ಹಲವು ರೀತಿಯ ಹೂಡಿಕೆ ಆಯ್ಕೆಗಳು ನಮ್ಮ ಮುಂದಿವೆ. ಅದರಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ (PPF- public provident fund) ಒಂದು. ಇದು ದೀರ್ಘ ಕಾಲದ ಹೂಡಿಕೆಗೆ ಹೇಳಿ ಮಾಡಿಸಿದ ಯೋಜನೆ. ಸರ್ಕಾರೀ ಬೆಂಬಲಿತ ಯೋಜನೆ ಇದಾದ್ದರಿಂದ ದೀರ್ಘಕಾಲದ ಹೂಡಿಕೆಗೆ ಧೈರ್ಯ ಮಾಡಬಹುದು. ಸಾಮಾನ್ಯ ಎಫ್​ಡಿಗಳಿಗಿಂತಲೂ ಇದಕ್ಕೆ ಬಡ್ಡಿದರ ಹೆಚ್ಚು.

ಚಿಕ್ಕ ವಯಸ್ಸಿನಲ್ಲೇ (30 ವರ್ಷ ಆಸುಪಾಸಿನಲ್ಲಿ) ನೀವು ಪಿಪಿಎಫ್ ಮೇಲೆ ಹೂಡಿಕೆ ಆರಂಭಿಸಿದರೆ ಗುರಿ ಈಡೇರಿಕೆ ಸಾಧ್ಯ. ಸಾಧ್ಯವಾದರೆ ಪಿಪಿಎಫ್ ಮತ್ತು ಮ್ಯೂಚುವಲ್ ಫಂಡ್ ಎಸ್​ಐಪಿ ಎರಡರಲ್ಲೂ ಹೂಡಿಕೆಗಳಿದ್ದರೆ ಇನ್ನೂ ಉತ್ತಮ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ ವಿವರ

ಪಿಪಿಎಫ್​ನಲ್ಲಿ ಸದ್ಯ ವಾರ್ಷಿಕ ಬಡ್ಡಿ ದರ ಶೇ. 7.1ರಷ್ಟಿದೆ. ಈ ದರವನ್ನು ಸರ್ಕಾರ ಪ್ರತೀ ವರ್ಷ ಪರಿಷ್ಕರಿಸುತ್ತದೆ. ಪಿಪಿಎಫ್​ನಲ್ಲಿ ನೀವು ಒಂದು ವರ್ಷದಲ್ಲಿ ಕನಿಷ್ಠ 500 ರೂನಿಂದ ಆರಂಭಿಸಿ 1.5 ಲಕ್ಷ ರೂವರೆಗೆ ಹಣ ಹಾಕಬಹುದು.

ಇದನ್ನೂ ಓದಿ: ಬ್ಯಾಂಕ್ ಸಾಲ ಸಿಗುತ್ತಿಲ್ಲವಾ? ಪರ್ಸನಲ್ ಲೋನ್​ಗಿಂತಲೂ ಕಡಿಮೆ ದರಕ್ಕೆ ನಿಮಗೆ ಸುಲಭವಾಗಿ ಸಿಗುತ್ತದೆ ಈ ಸಾಲ

ಈ ಸ್ಕೀಮ್ 15 ವರ್ಷದ ಅವಧಿಯದ್ದಾಗಿರುತ್ತದೆ. ನಿಮಗೆ ಬೇಕೆಂದರೆ 15 ವರ್ಷದ ಬಳಿಕ ಪ್ರತೀ ಐದು ವರ್ಷಕ್ಕೆ ಯೋಜನೆ ವಿಸ್ತರಿಸಿಕೊಂಡು ಹೋಗಬಹುದು. ಪಿಪಿಎಫ್​ನ ಇನ್ನೊಂದು ಅನುಕೂಲವೆಂದರೆ ಇದರಲ್ಲಿರುವ ಹೂಡಿಕೆಯ ಹಣಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ.

ಒಂದು ಕೋಟಿ ರೂ ಗಳಿಸುವುದು ಹೇಗೆ?

ಈ ಸ್ಕೀಮ್​ನಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಸಾಧ್ಯ. ಅಂದರೆ ತಿಂಗಳಿಗೆ 12,500 ರೂ ಹೂಡಿಕೆ ಮಾಡಬಹುದು. ನೀವು ಈ ರೀತಿ 25 ವರ್ಷ ಕಾಲ ಇಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತಾ ಹೋದರೆ ಒಟ್ಟು ಮೊತ್ತ 37.5 ಲಕ್ಷ ರೂ ಹೂಡಿಕೆ ಮಾಡಿದಂತಾಗುತ್ತದೆ. ಇದಕ್ಕೆ ಈಗಿನ ಶೇ. 7.1ರ ಬಡ್ಡಿದರದ ಪ್ರಕಾರ ಲೆಕ್ಕಹಾಕಿದರೆ ಒಟ್ಟು ಬಡ್ಡಿಮೊತ್ತ 65 ಲಕ್ಷ ರೂಗೂ ಹೆಚ್ಚಾಗುತ್ತದೆ. ನಿಮಗೆ ಸಿಗುವ ರಿಟರ್ನ್ 1.03 ಕೋಟಿ ರೂ ಆಗುತ್ತದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಮಿತಿಮೀರಿ ಬಳಸಿದರೆ ಏನಾಗುತ್ತದೆ? ಬಳಕೆ ಮಾಡದೇ ಬಿಟ್ಟರೆ ಏನಾಗುತ್ತದೆ? ಈ ಮಾಹಿತಿ ತಿಳಿದಿರಿ

ಇದರ ಜೊತೆಗೆ ಪ್ರತೀ ವರ್ಷ ನಿಮಗೆ ಸಿಗುವ ತೆರಿಗೆ ವಿನಾಯಿತಿಯನ್ನೂ ಸೇರಿಸಿದರೆ ವಾಸ್ತವಿಕ ಲಾಭ ಇನ್ನೂ ಹೆಚ್ಚಾಗುತ್ತದೆ. ಒಂದು ಸರಾಸರಿ ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ ಸಿಗುವ ರಿಟರ್ನ್​ಗೆ ಹೋಲಿಸಿದರೆ ಪಿಪಿಎಫ್ ತುಸು ಕಡಿಮೆ ರಿಟರ್ನ್ ಕೊಡುತ್ತದಾದರೂ ರಿಸ್ಕ್ ಇರುವುದಿಲ್ಲ. ನಿಮ್ಮ ಹೂಡಿಕೆ ಸುರಕ್ಷಿತವಾಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ