AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post office MIS: ಕೆಲವೇ ಲಕ್ಷ ಹೂಡಿಕೆ, ತಿಂಗಳಿಗೆ 9,250 ರೂವರೆಗೆ ಆದಾಯ; ಇದು ಪೋಸ್ಟ್ ಆಫೀಸ್ MIS ಸ್ಕೀಮ್

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಸಣ್ಣ ಹೂಡಿಕೆದಾರರಿಗೆ ಸುರಕ್ಷಿತ ಮತ್ತು ಸ್ಥಿರವಾದ ಮಾಸಿಕ ವರಮಾನ ಒದಗಿಸುತ್ತದೆ. ಕೇಂದ್ರ ಸರ್ಕಾರ ಬೆಂಬಲಿತವಾದ ಈ ಯೋಜನೆಯಲ್ಲಿ 1,000 ರೂನಿಂದ 15 ಲಕ್ಷ ರೂವರೆಗೆ ಹೂಡಿಕೆ ಸಾಧ್ಯ. ಐದು ವರ್ಷದವರೆಗೆ ತಿಂಗಳಿಗೆ ನಿಗದಿತ ಮಾಸಿಕ ಆದಾಯ ನೀಡುತ್ತದೆ. ಈ ಮಾಸಿಕ ಆದಾಯ ಯೋಜನೆಯ ವಿವರ ಇಲ್ಲಿದೆ.

Post office MIS: ಕೆಲವೇ ಲಕ್ಷ ಹೂಡಿಕೆ, ತಿಂಗಳಿಗೆ 9,250 ರೂವರೆಗೆ ಆದಾಯ; ಇದು ಪೋಸ್ಟ್ ಆಫೀಸ್ MIS ಸ್ಕೀಮ್
ಅಂಚೆ ಕಚೇರಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 04, 2026 | 3:47 PM

Share

ಖಾಸಗಿ ಬ್ಯಾಂಕುಗಳ ಬಡ್ಡಿ ದರಗಳಲ್ಲಿ ಏರಿಳಿತ ಕಂಡುಬರುತ್ತಿರುವ ಈ ಸಮಯದಲ್ಲಿ, ಸುರಕ್ಷಿತ ಹಾಗೂ ಸ್ಥಿರ ಆದಾಯವನ್ನು ಬಯಸುವ ಮಧ್ಯಮ ವರ್ಗದ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ಅಂಚೆ ಕಚೇರಿಯ ‘ಮಾಸಿಕ ಆದಾಯ ಯೋಜನೆ’ (POMIS- Post Office Monthly Income Scheme) ಹೊಸ ಭರವಸೆಯಾಗಿದೆ.

ಕೇಂದ್ರ ಸರ್ಕಾರವು ಈ ಯೋಜನೆಗೆ ಪ್ರಸ್ತುತ ಶೇ. 7.4 ರಷ್ಟು ಆಕರ್ಷಕ ಬಡ್ಡಿ ದರವನ್ನು ನೀಡುತ್ತಿದ್ದು, ಹೂಡಿಕೆದಾರರು ತಮ್ಮ ಉಳಿತಾಯದ ಮೇಲೆ ಪ್ರತಿ ತಿಂಗಳು ಖಚಿತ ಆದಾಯ ಪಡೆಯಬಹುದಾಗಿದೆ. ಉದಾಹರಣೆಗೆ, ಜಂಟಿ ಖಾತೆಯಲ್ಲಿ ಗರಿಷ್ಠ ಮಿತಿಯಾದ ₹15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಸರಿಸುಮಾರು ₹9,250 ಗಳ ಮಾಸಿಕ ಬಡ್ಡಿಯನ್ನು ನಿಯಮಿತವಾಗಿ ಪಡೆಯಬಹುದು. 5 ವರ್ಷಗಳ ಪೂರ್ಣ ಅವಧಿಯ ನಂತರ ನಿಮ್ಮ ಮೂಲ ಹೂಡಿಕೆ ಮೊತ್ತ ಸುರಕ್ಷಿತವಾಗಿ ಹಿಂತಿರುಗುತ್ತದೆ.

ಸುರಕ್ಷಿತ ಹೂಡಿಕೆಯೊಂದಿಗೆ ಯಾವುದೇ ಮಾರುಕಟ್ಟೆ ಅಪಾಯವಿಲ್ಲದೆ (Market Risk) ಮಾಸಿಕ ಖರ್ಚುಗಳನ್ನು ನಿಭಾಯಿಸಲು ಬಯಸುವವರಿಗೆ ಈ ಯೋಜನೆ ಅತ್ಯಂತ ಸೂಕ್ತವಾಗಿದೆ. ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ್, ಪಾನ್ ಕಾರ್ಡ್ ಹಾಗೂ ಭಾವಚಿತ್ರ ನೀಡಿ ಸುಲಭವಾಗಿ ಈ ಖಾತೆಯನ್ನು ತೆರೆಯಬಹುದು.

ಇದನ್ನೂ ಓದಿ: ಸಾಲಕ್ಕೆ ಶೂರಿಟಿ ನೀಡುವುದರಿಂದ ಏನು ಸಮಸ್ಯೆ? ಸಾಲ ತೀರಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ?

ಪೋಸ್ಟ್ ಆಫೀಸ್ ಎಂಐಎಸ್ ಸ್ಕೀಮ್​ನ ಪ್ರಮುಖ ವಿವರಗಳು ಹಾಗೂ ಫೀಚರ್​ಗಳು

  • ಹೂಡಿಕೆ ಅವಧಿ: 5 ವರ್ಷಗಳು
  • ಬಡ್ಡಿ ದರ: ಶೇ. 7.4% (ವಾರ್ಷಿಕ ಬಡ್ಡಿ ದರ)
  • ಕನಿಷ್ಠ ಹೂಡಿಕೆ: ₹1,000 ಹಾಗೂ ಅದಕ್ಕೂ ಹೆಚ್ಚು
  • ಗರಿಷ್ಠ ಹೂಡಿಕೆ ಮಿತಿ: ವೈಯಕ್ತಿಕ ಖಾತೆಯಾದರೆ ಗರಿಷ್ಠ ₹9 ಲಕ್ಷ, ಜಂಟಿ ಖಾತೆಯಾದರೆ ಗರಿಷ್ಠ ₹15 ಲಕ್ಷ ಹೂಡಿಕೆಗೆ ಅವಕಾಶ
  • ಅರ್ಹತೆ: ಭಾರತೀಯ ಪ್ರಜೆಯಾಗಿರಬೇಕು. 10 ವರ್ಷ ಮೇಲ್ಪಟ್ಟ ಅಪ್ರಾಪ್ತರ ಹೆಸರಿನಲ್ಲಿಯೂ ಖಾತೆ ತೆರೆಯಬಹುದು.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಪ್ರಯೋಜನಗಳು

  • ಸಂಪೂರ್ಣ ಸುರಕ್ಷತೆ: ಇದು ಭಾರತ ಸರ್ಕಾರದಿಂದ ನಡೆಸಲ್ಪಡುವ ಯೋಜನೆಯಾಗಿರುವುದರಿಂದ ಹೂಡಿಕೆಗೆ 100% ಸುರಕ್ಷತೆ ಇರುತ್ತದೆ.
  • ಖಚಿತ ಮಾಸಿಕ ಆದಾಯ: ನಿಗದಿತ ಬಡ್ಡಿ ಹಣ ಪ್ರತಿ ತಿಂಗಳು ನೇರವಾಗಿ ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಗೆ ಜಮಾ ಆಗುತ್ತದೆ.
  • ಖಾತೆ ವರ್ಗಾವಣೆ ಸೌಲಭ್ಯ: ದೇಶದ ಯಾವುದೇ ಅಂಚೆ ಕಚೇರಿಗೆ ಖಾತೆಯನ್ನು ಸುಲಭವಾಗಿ ವರ್ಗಾಯಿಸಬಹುದು.

ಎಂಐಎಸ್ ಬಡ್ಡಿಹಣದ ಮರುಹೂಡಿಕೆ ಮಾಡಿ…

ಅಂಚೆ ಕಚೇರಿ ಎಂಐಎಸ್ ಯೋಜನೆಯಲ್ಲಿ ಸಿಗುವ ಮಾಸಿಕ ಬಡ್ಡಿ ಹಣದಲ್ಲಿ ಸ್ವಲ್ಪ ಭಾಗವನ್ನೋ ಅಥವಾ ಪೂರ್ತಿ ಭಾಗವನ್ನೋ ಅಂಚೆ ಕಚೇರಿಯ ಆರ್‌ಡಿ (RD – Recurring Deposit) ಖಾತೆಗೆ ಮರುಹೂಡಿಕೆ ಮಾಡಿ ಹೆಚ್ಚುವರಿ ಲಾಭ ಪಡೆಯಬಹುದು. ಇದರಿಂದ ಉಳಿತಾಯದಲ್ಲಿ ಉಳಿತಾಯ ಸಾಧನೆ ಮಾಡಬಹುದು. ಆ ಆರ್​ಡಿ ಅಕೌಂಟ್ ಮೆಚ್ಯೂರ್ ಆದಾಗ, ಅದರ ಹಣ ಹಾಗೂ ಎಂಐಎಸ್​ನ ಮೂಲ ಠೇವಣಿ ಹಣ ಎರಡನ್ನೂ ಸೇರಿಸಿ ಹೊಸದಾಗಿ ಎಂಐಎಸ್ ಸ್ಕೀಮ್​ನಲ್ಲಿ ಡೆಪಾಸಿಟ್ ಇಡಬಹುದು.

ಇದನ್ನೂ ಓದಿ:ಹತ್ತು ವರ್ಷದಲ್ಲಿ 5 ಕೋಟಿ ರೂ ಗುರಿ ಮುಟ್ಟಲು ತಿಂಗಳಿಗೆ ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಲೆಕ್ಕಾಚಾರ

ಎಂಐಎಸ್ ಯೋಜನೆ: ಅವಧಿಗೂ ಮುನ್ನ ಖಾತೆ ಬಂದ್ ಮಾಡುವುದು

  • ಖಾತೆ ತೆರೆದ 1 ವರ್ಷದವರೆಗೆ ಹಣ ಹಿಂಪಡೆಯಲು ಅವಕಾಶವಿಲ್ಲ.
  • 1 ರಿಂದ 3 ವರ್ಷಗಳ ಒಳಗೆ ಖಾತೆ ಬಂದ್ ಮಾಡಿದರೆ, ಠೇವಣಿ ಮೊತ್ತದಿಂದ 2% ಕಡಿತಗೊಳಿಸಲಾಗುತ್ತದೆ.
  • 3 ರಿಂದ 5 ವರ್ಷಗಳ ಒಳಗೆ ಖಾತೆ ಬಂದ್ ಮಾಡಿದರೆ, ಠೇವಣಿ ಮೊತ್ತದಿಂದ 1% ಕಡಿತಗೊಳಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ