ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಶಾಕ್; ಆರು ವರ್ಷದಲ್ಲೇ ಹೆಚ್ಚು ಕುಸಿತ
Indian Smartphone Market Declines 3% in Q1 2026: ಕೌಂಟರ್‌ಪಾಯಿಂಟ್ ರಿಸರ್ಚ್ ವರದಿಯ ಪ್ರಕಾರ, 2026ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಶೇ.3ರಷ್ಟು ಕುಸಿತ ಕಂಡಿದೆ. ಕಳೆದ ಆರು ವರ್ಷಗಳಲ್ಲೇ ಇದು ಅತ್ಯಂತ ಕನಿಷ್ಠ ಮಾರಾಟವಾಗಿದೆ. ಪ್ರಮುಖವಾಗಿ, ಸ್ಮಾರ್ಟ್‌ಫೋನ್ ಬೆಲೆಗಳಲ್ಲಿ ಸರಾಸರಿ ಶೇ.15ರಷ್ಟು ಏರಿಕೆ ಮತ್ತು ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿರುವುದು ಈ ಕುಸಿತಕ್ಕೆ ನೇರ ಕಾರಣಗಳು. Vivo ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ, ಆದರೂ Apple ಮತ್ತು Google ಬ್ರ್ಯಾಂಡ್‌ಗಳು ಬೆಳವಣಿಗೆ ಸಾಧಿಸಿವೆ. ಮುಂಬರುವ ತ್ರೈಮಾಸಿಕಗಳಲ್ಲೂ ಮಾರುಕಟ್ಟೆ ಒತ್ತಡವನ್ನು ಎದುರಿಸುವ ನಿರೀಕ್ಷೆಯಿದೆ.

ನವದೆಹಲಿ, ಏಪ್ರಿಲ್ 17: ಕೌಂಟರ್‌ಪಾಯಿಂಟ್ ರಿಸರ್ಚ್ (Counterpoint Research) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ (smartphone shipments) ಗಣನೀಯ ಕುಸಿತ ಕಂಡುಬಂದಿದೆ. 2026ರ ಮೊದಲ ಕ್ವಾರ್ಟರ್ ಆದ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಸ್ಮಾರ್ಟ್‌ಫೋನ್ ತಯಾರಿಕೆ ಮತ್ತು ವಿತರಣೆಯಲ್ಲಿ ಶೇ. 3ರಷ್ಟು ಇಳಿಕೆ ಆಗಿದೆ. ಕಳೆದ ಆರು ವರ್ಷದಲ್ಲಿ ಯಾವುದೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ಇಷ್ಟು ಕುಸಿದಿರಲಿಲ್ಲ.
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಕುಸಿತ
2026ರ ಮೊದಲ ತ್ರೈಮಾಸಿಕದಲ್ಲಿ (Q1) ಭಾರತದ ಸ್ಮಾರ್ಟ್‌ಫೋನ್ ಪೂರೈಕೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 3 ರಷ್ಟು ಕುಸಿದಿದೆ. ಇದು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕಡಿಮೆ ಮಾರಾಟದ ಪ್ರಮಾಣವಾಗಿದೆ ಎಂದು ವರದಿ ತಿಳಿಸಿದೆ.
ಸುಮಾರು 80ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್ ಮಾಡಲ್ಗಳ ಸರಾಸರಿ ಬೆಲೆಯಲ್ಲಿ ಶೇ. 15 ರಷ್ಟು ಏರಿಕೆಯಾಗಿದೆ. ಎರಡನೇ ತ್ರೈಮಾಸಿಕದಲ್ಲಿ (Q2) ಬೆಲೆಗಳು ಇನ್ನೂ ಶೇ. 15 ರಿಂದ ಶೇ. 20 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ಬೆಲೆಗಳು ಮತ್ತು ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.
ಇದನ್ನೂ ಓದಿ: ಚಿನ್ನ ಮತ್ತು ಬೆಳ್ಳಿ ಆಮದಿಗೆ 15 ಬ್ಯಾಂಕುಗಳಿಗೆ ಸರ್ಕಾರದಿಂದ 3 ವರ್ಷ ಅನುಮತಿ
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವವರು
- Vivo (ವಿವೋ): ಶೇ. 21 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ.
- Samsung ಮತ್ತು Oppo: ಇವು ವಿವೋ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
- Apple (ಆಪಲ್): ಐಫೋನ್ 17 ಸರಣಿಯ ಬೇಡಿಕೆಯಿಂದಾಗಿ ಆಪಲ್‌ನ ಮಾರುಕಟ್ಟೆ ಪಾಲು ಶೇ. 9 ಕ್ಕೆ ತಲುಪಿದೆ.
- Google (ಗೂಗಲ್): ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ವೈಶಿಷ್ಟ್ಯಗಳಿಂದಾಗಿ ಗೂಗಲ್ ಪ್ರೀಮಿಯಂ ವಿಭಾಗದಲ್ಲಿ ಶೇ. 39 ರಷ್ಟು ಪ್ರಗತಿ ಸಾಧಿಸಿ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.
ಕೌಂಟರ್‌ಪಾಯಿಂಟ್ ರಿಸರ್ಚ್ನ ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ಅವರ ಪ್ರಕಾರ, ಮುಂದಿನ ದಿನಗಳಲ್ಲಿಯೂ ಮಾರುಕಟ್ಟೆ ಒತ್ತಡಕ್ಕೆ ಒಳಗಾಗಲಿದೆ. 2026ರ ಎರಡನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್ ಮಾರಾಟವು ಎರಡಂಕಿ (double-digit) ಕುಸಿತವನ್ನು ಕಾಣುವ ಸಾಧ್ಯತೆಯಿದೆ.
80ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್ ಮಾಡಲ್ಗಳು ಸರಾಸರಿಯಾಗಿ ಶೇ. 15ರಷ್ಟು ಬೆಲೆ ಏರಿಕೆ ಪಡೆದಿವೆ. ಎರಡನೇ ಕ್ವಾರ್ಟರ್ನಲ್ಲೂ ಶೇ. 15-20ರಷ್ಟು ಬೆಲೆ ಏರಿಸಬಹುದು.
ಇದನ್ನೂ ಓದಿ: ಏಷ್ಯಾದ ನಂ. 1 ಶ್ರೀಮಂತ ಅಂಬಾನಿಯಲ್ಲ, ಅದಾನಿ; ಟಾಪ್-20ಯಲ್ಲಿ ಅಮೆರಿಕನ್ನರನ್ನು ಬಿಟ್ಟರೆ ಭಾರತೀಯರೇ ಹೆಚ್ಚು
‘ಮೆಮೊರಿ ಚಿಪ್ ದುಬಾರಿಯಾಗಿದ್ದರಿಂದ ಮತ್ತು ಕರೆನ್ಸಿ ಒತ್ತಡದಿಂದಾಗಿ ಒಇಎಂಗಳು (ಸ್ಮಾರ್ಟ್‌ಫೋನ್ ತಯಾರಕರು) ಪ್ರಮುಖ ಫೋನ್ ಮಾಡಲ್ಗಳ ಬೆಲೆ ಏರಿಸುವುದು ಅನಿವಾರ್ಯವಾಯಿತು. ಮಾರುಕಟ್ಟೆಗೂ ಇದು ಒತ್ತಡ ತಂದಿದೆ’ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ನ ಸೀನಿಯರ್ ಅನಾಲಿಸ್ಟ್ ಪ್ರಚಿರ್ ಸಿಂಗ್ ಹೇಳುತ್ತಾರೆ.
ಬೆಲೆ ಏರಿಕೆ ಮತ್ತು ಜನರ ಅಗತ್ಯತೆಗಳು ಬದಲಾಗುತ್ತಿರುವುದು ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತಿರುವುದೂ ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




