AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್​ನಲ್ಲಿ ಹಣದುಬ್ಬರ ದರ ಶೇ. 5.54ಕ್ಕೆ ಏರಿಕೆ; ಆಹಾರ ಬೆಲೆ ಏರಿಕೆಯ ಪಾತ್ರವೇ ಹೆಚ್ಚು

2026ರ ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಮಾರಾಟ ದರ ಹಣದುಬ್ಬರ ಶೇ. 5.54ರಷ್ಟಾಗಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರ್​ಬಿಐ ಅಂದಾಜಿಸಿದಂತೆ ಹಣದುಬ್ಬರ ಶೇ. 4.9ರಷ್ಟಾಗಿದೆ. ಆಗಸ್ಟ್ ತಿಂಗಳಲ್ಲಿ ಶೇ. 4.82, ಜುಲೈನಲ್ಲಿ ಶೇ. 4.45 ಹಣದುಬ್ಬರ ದಾಖಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಈರುಳ್ಳಿ ಬೆಲೆ ಅತೀವ ಏರಿಕೆಯಾಗಿದೆ. ಹಲವು ಆಹಾರ ವಸ್ತುಗಳ ಬೆಲೆಯೂ ಹೆಚ್ಚಿದೆ.

ಸೆಪ್ಟೆಂಬರ್​ನಲ್ಲಿ ಹಣದುಬ್ಬರ ದರ ಶೇ. 5.54ಕ್ಕೆ ಏರಿಕೆ; ಆಹಾರ ಬೆಲೆ ಏರಿಕೆಯ ಪಾತ್ರವೇ ಹೆಚ್ಚು
ಹಣದುಬ್ಬರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 12, 2026 | 5:48 PM

Share

ನವದೆಹಲಿ, ಅಕ್ಟೋಬರ್ 12: ಭಾರತದ ಗ್ರಾಹಕ ಬೆಲೆ ಅನುಸೂಚಿ ಆಧಾರಿತವಾದ ರೀಟೇಲ್ ಹಣದುಬ್ಬರ ದರ ಸೆಪ್ಟೆಂಬರ್​ನಲ್ಲಿ ಶೇ. 5.54 ಎಂದು ದಾಖಲಾಗಿದೆ. ಆಗಸ್ಟ್​ನಲ್ಲಿ ಹಣದುಬ್ಬರ ಶೇ. 4.83 ಇತ್ತು. ಸೆಪ್ಟೆಂಬರ್​ನಲ್ಲಿ ಬೆಲೆ ಏರಿಕೆ ಮಟ್ಟ ತೀಕ್ಷ್ಣವಾಗಿ ಹೆಚ್ಚಲು ಆಹಾರ ಬೆಲೆಗಳ ಗಣನೀಯ ಏರಿಕೆಯೇ ಕಾರಣ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಈ ಮಾಹಿತಿ ಇದೆ.

ಆಗಸ್ಟ್​ನಲ್ಲಿ ಶೇ. 5.97 ಇದ್ದ ಆಹಾರ ಹಣದುಬ್ಬರ ಸೆಪ್ಟೆಂಬರ್​ನಲ್ಲಿ ಶೇ. 7.74ಕ್ಕೆ ಏರಿದೆ. ಈ ಆಹಾರ ಗುಂಪಿನಲ್ಲಿ ಹಲವು ಅಗತ್ಯ ಆಹಾರವಸ್ತುಗಳ ಬೆಲೆ ಹೆಚ್ಚಳವಾಗಿದೆ. ಅದರಲ್ಲೂ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು ನಿಂಬೆ ಹಣ್ಣುಗಳ ಬೆಲೆಯಲ್ಲಿ ಗಣನೀಯ ಏರಿಕೆ ಆಗಿದೆ.

ಗ್ರಾಮೀಣ ಭಾಗದಲ್ಲಿ ಹಣದುಬ್ಬರ ದರ ಹೆಚ್ಚಿನ ಮಟ್ಟದಲ್ಲಿರುವುದು ಮುಂದುವರಿದಿದೆ. ದತ್ತಾಂಶದ ಪ್ರಕಾರ ಗ್ರಾಮೀನ ಹಣದುಬ್ಬರ ಶೇ. 5.24ರಿಂದ ಶೇ. 6.08ಕ್ಕೆ ಏರಿದೆ. ನಗರ ಹಣದುಬ್ಬರ ಶೇ. 4.31ರಿಂದ ಶೇ. 4.88ಕ್ಕೆ ಏರಿದೆ.

ಇದನ್ನೂ ಓದಿ: 2026-27ರಲ್ಲಿ ಜಿಡಿಪಿ ಶೇ. 7.1; ಹಣದುಬ್ಬರ ಶೇ. 5.2: ಆರ್​ಬಿಐ ಅಂದಾಜು

ಆಹಾರ ಹಣದುಬ್ಬರದಲ್ಲಿ ಈರುಳ್ಳಿಯ ಪಾತ್ರ ಹೆಚ್ಚಿದೆ. ಆಗಸ್ಟ್​ನಲ್ಲಿ ಶೇ. 48.78ರಷ್ಟು ಏರಿದ್ದ ಈರುಳ್ಳಿ ಬೆಲೆ ಉಬ್ಬರ ಸೆಪ್ಟೆಂಬರ್​ನಲ್ಲಿ 108.09 ಪ್ರತಿಶತದಷ್ಟು ಏರಿದೆ. ಶುಂಠಿ ಶೇ. 62.85, ಬೆಳ್ಳುಳ್ಳಿ ಶೇ. 54.62 ಮತ್ತು ನಿಂಬೆ ಹಣ್ಣು ಶೇ. 36.41ರಷ್ಟು ಬೆಲೆ ಏರಿಕೆ ಆಗಿದೆ.

ಆಲೂಗಡ್ಡೆ, ಟೊಮೆಟೋ, ಬೆಂಡೆಕಾಯಿ ಮತ್ತು ತೆಂಗಿನ ಬೆಲೆಗಳು ಕಡಿಮೆಗೊಂಡಿರುವುದರಿಂದ ಹಣದುಬ್ಬರ ತೀರಾ ಅತಿಯಾಗಿ ಏರಿಕೆಯಾಗದಂತೆ ಉಳಿಯಲು ಸಹಾಯವಾಗಿದೆ.

ತಮಿಳುನಾಡಿನಲ್ಲಿ ಅತಿಹೆಚ್ಚು ಹಣದುಬ್ಬರ ದಾಖಲು

ತಮಿಳುನಾಡಿನಲ್ಲಿ ಸೆಪ್ಟೆಂಬರ್​ನಲ್ಲಿ ಶೇ. 6.81 ಹಣದುಬ್ಬರ ದಾಖಲಾಗಿದೆ. ಪ್ರಮುಖ ರಾಜ್ಯಗಳ ಪೈಕಿ ಅತಿಹೆಚ್ಚು ಹಣದುಬ್ಬರ ಇದು. ಒಡಿಶಾ ಶೇ. 6.7, ಮಧ್ಯಪ್ರದೇಶ ಶೇ. 6.68, ತೆಲಂಗಾಣ ಶೇ. 6.64, ಆಂದ್ರಪ್ರದೇಶ ಶೇ. 6.29 ಮತ್ತು ಉತ್ತರಪ್ರದೇಶ ಶೇ. 6.08 ಹಣದುಬ್ಬರ ದರ ಹೊಂದಿವೆ. ಮಹಾರಾಷ್ಟ್ರವೂ ಶೇ. 5ಕ್ಕಿಂತ ಹೆಚ್ಚು ಹಣದುಬ್ಬರ ದರ ದಾಖಲಿಸಿದೆ.

ಇದನ್ನೂ ಓದಿ: ಯುಪಿಐ ಎಂಡಿಆರ್ ಶುಲ್ಕ; ಶೇ. 0.40 ಬದಲು ಶೇ. 0.08 ಶುಲ್ಕ ವಿಧಿಸಬಹುದು: ಐಐಟಿ ಬಾಂಬೆ ವರದಿ ಸಲಹೆ

ಎರಡನೇ ಕ್ವಾರ್ಟರ್​ನಲ್ಲಿ ಶೇ. 4.9 ಹಣದುಬ್ಬರ

ಭಾರತೀಯ ರಿಸರ್ವ್ ಬ್ಯಾಂಕ್​ನ ಎಂಪಿಸಿ ತನ್ನ ಅಕ್ಟೋಬರ್ ಸಭೆಯಲ್ಲಿ ಮಾಡಿದ ಅಂದಾಜು ಪ್ರಕಾರ, 2026-27ರಲ್ಲಿ ಹಣದುಬ್ಬರ ಶೇ. 5.2ರಷ್ಟು ಇರಬಹುದು ಎಂದಿದೆ. ಜುಲೈ-ಸೆಪ್ಟೆಂಬರ್ ಕ್ವಾರ್ಟರ್​ನಲ್ಲಿ ಶೇ. 4.9ರಷ್ಟು ಹಣದುಬ್ಬರ ಇರಬಹುದು ಎಂದಿತ್ತು. ಅದು ಅಂದಾಜು ಮಾಡಿದ ಪ್ರಕಾರ ಈ ಎರಡನೇ ಕ್ವಾರ್ಟರ್​ನಲ್ಲಿ ಹಣದುಬ್ಬರ ಶೇ. 4.9ರಷ್ಟಿದೆ. ಜುಲೈನಲ್ಲಿ ಶೇ. 4.45, ಆಗಸ್ಟ್​ನಲ್ಲಿ ಶೇ. 4.82 ಮತ್ತು ಸೆಪ್ಟೆಂಬರ್​ನಲ್ಲಿ ಶೇ. 5.54ರಷ್ಟು ಹಣದುಬ್ಬರ ದಾಖಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More