ಪ್ರವಾಸಕ್ಕೆ ಬುಕ್​ ಮಾಡಿದ್ದ ಕಾರು ಕಳವು ಕೇಸ್: ಕಿರುತೆರೆ ನಟ ಅರೆಸ್ಟ್​

ಪ್ರವಾಸಕ್ಕೆ ಬುಕ್​ ಮಾಡಿದ್ದ ಕಾರು ಕಳವು ಕೇಸ್: ಕಿರುತೆರೆ ನಟ ಅರೆಸ್ಟ್​

ಬೆಂಗಳೂರು: ಪ್ರವಾಸಕ್ಕೆ ಕಾರ್ ಬುಕ್ ಮಾಡಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಕನ್ನಡದ ಕಿರುತೆರೆ ನಟ ಕರಣ್‌ ಕುಮಾರ್(27) ಬಂಧಿತ ಆರೋಪಿ. ಮೊಬೈಲ್ ಲೊಕೇಷನ್ ಆಧರಿಸಿ ನಗರದ ಕತ್ರಿಗುಪ್ಪೆ ನಿವಾಸಿ ಕರಣ್​ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಜಸ್ಟ್ ಡಯಲ್ ಮೂಲಕ ಮೈಸೂರಿಗೆ ಪ್ರವಾಸಕ್ಕೆ ಹೋಗಲು ಆರೋಪಿ ಕರಣ್ ಕಾರು ಬುಕ್ ಮಾಡಿದ್ದ. ಸೌಮ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಪರ್ಕಿಸಿದ ಆರೋಪಿ 22 ಲಕ್ಷ ಮೌಲ್ಯದ ಇನೋವಾ ಕಾರು ಬುಕ್ ಮಾಡಿದ್ದ. ಟ್ರಾವೆಲ್ಸ್​ನವರು ಚಾಲಕ ಅರುಣ್​ಗೆ ಮೈಸೂರಿಗೆ ಹೋಗುವಂತೆ ಹೇಳಿದ್ರು. ನಾಯಂಡಹಳ್ಳಿ ಮೆಟ್ರೋ ಸ್ಟೇಷನ್​ ಬಳಿಯ ಹೋಟೆಲ್​ನಲ್ಲಿ ಸ್ನೇಹಿತನ ಬಳಿ 10 ಸಾವಿರ ಹಣ ತೆಗೆದುಕೊಳ್ಳಬೇಕೆಂದು ಕಾರು ಚಾಲಕನಿಗೆ ಹೇಳಿದ್ದ. ಚಾಲಕ ಹೋಟೆಲ್​ಗೆ ಹೋಗಿ ಬರುವಷ್ಟರಲ್ಲಿ ಕಾರು ಸಮೇತ ಆರೋಪಿ ಕರಣ್ ಎಸ್ಕೇಪ್ ಆಗಿದ್ದ.

ಅರೋಪಿ ಕರಣ್ ಕುಮಾರ್ ಕನ್ನಡದ ಹಲವಾರು ಧಾರವಾಹಿಗಳಲ್ಲಿ ನಟಿಸಿದ್ದಾನೆ. ಈ ಹಿಂದೆ ದಾವಣಗೆರೆಯಲ್ಲಿ ನಡೆದಿದ್ದ ಒಂದು ಕೊಲೆ ಕೇಸ್​ನಲ್ಲಿಯು ಕರಣ್ ಆರೋಪಿಯಾಗಿದ್ದಾನೆ. ಕಾರು ಕದ್ದ ದಿನವೇ ಮತ್ತೊಂದು ಕೃತ್ಯ ನಡೆಸಿರುವ ಬಗ್ಗೆಯೂ ಆರೋಪಿ ಕರಣ್ ಕುಮಾರ್ ಬಾಯ್ಬಿಟ್ಟಿದ್ದಾನೆ. ಆರೋಪಿಯಿಂದ ಕದ್ದ ಇನೋವಾ ಕಾರು ಸೇರಿ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Click on your DTH Provider to Add TV9 Kannada