AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NEET PG 2026: ವೈದ್ಯಕೀಯ ಅಭ್ಯರ್ಥಿಗಳ ಗಮನಕ್ಕೆ; NEET PG ಪರೀಕ್ಷಾ ವೇಳಾಪಟ್ಟಿ ಪ್ರಕಟ

ಪೋಸ್ಟ್‌ಗ್ರಾಜುಯೇಟ್ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಕಾಯುತ್ತಿರುವ ವೈದ್ಯಕೀಯ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. NEET PG ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಯನ್ನು NBEMS ಬಿಡುಗಡೆ ಮಾಡಿದೆ. ಜುಲೈ 1 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜುಲೈ 21 ಕೊನೆಯ ದಿನಾಂಕ. ಆಗಸ್ಟ್ 30 ರಂದು ಪರೀಕ್ಷೆ ನಡೆಯಲಿದ್ದು, ಸೆಪ್ಟೆಂಬರ್ 30 ರಂದು ಫಲಿತಾಂಶ ಪ್ರಕಟವಾಗಲಿದೆ. ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಲು ಸಲಹೆ ನೀಡಲಾಗಿದೆ.

NEET PG 2026: ವೈದ್ಯಕೀಯ ಅಭ್ಯರ್ಥಿಗಳ ಗಮನಕ್ಕೆ; NEET PG ಪರೀಕ್ಷಾ ವೇಳಾಪಟ್ಟಿ ಪ್ರಕಟ
NEET PG ಪರೀಕ್ಷಾ ವೇಳಾಪಟ್ಟಿ ಪ್ರಕಟ
ಅಕ್ಷತಾ ವರ್ಕಾಡಿ
|

Updated on: Jul 03, 2026 | 3:36 PM

Share

ಮುಖ್ಯಾಂಶಗಳು

  • ಪೋಸ್ಟ್‌ಗ್ರಾಜುಯೇಟ್ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಕಾಯುತ್ತಿರುವ ವೈದ್ಯಕೀಯ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ
  • NEET PG ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಯನ್ನು NBEMS ಬಿಡುಗಡೆ ಮಾಡಿದೆ.
  • ಜುಲೈ 1 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜುಲೈ 21 ಕೊನೆಯ ದಿನಾಂಕ.

ಪೋಸ್ಟ್‌ಗ್ರಾಜುಯೇಟ್ ಮೆಡಿಕಲ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಯುತ್ತಿರುವ ವೈದ್ಯಕೀಯ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS), ಬಹುನಿರೀಕ್ಷಿತ NEET PG 2026 ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ದೇಶಾದ್ಯಂತ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ (CBT) ಮೋಡ್‌ನಲ್ಲಿ ಪರೀಕ್ಷೆ ನಡೆಯಲಿದ್ದು, ಇದರೊಂದಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯೂ ಇಂದಿನಿಂದಲೇ ಆರಂಭವಾಗಿದೆ. ಬೋರ್ಡ್ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಪರೀಕ್ಷಾ ಕೇಂದ್ರದ ನಗರಗಳ ವಿವರ, ಫಲಿತಾಂಶದ ದಿನಾಂಕ ಮತ್ತು ಅರ್ಜಿ ಶುಲ್ಕದ ಸಂಪೂರ್ಣ ವಿವರ ಇಲ್ಲಿದೆ.

ಜುಲೈ 21ರ ಒಳಗೆ ಅರ್ಜಿ ಸಲ್ಲಿಸಲು ಕೊನೆಯ ಅವಕಾಶ:

NEET PG 2026 ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜುಲೈ 1, 2026 ರಿಂದ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಜುಲೈ 21, 2026 ರ ರಾತ್ರಿ 11:55 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೊನೆಯ ಕ್ಷಣದಲ್ಲಿ ವೆಬ್‌ಸೈಟ್‌ನಲ್ಲಿ ಉಂಟಾಗುವ ತಾಂತ್ರಿಕ ತೊಂದರೆ ಹಾಗೂ ಹೆವಿ ಟ್ರಾಫಿಕ್ ತಪ್ಪಿಸಲು ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸುವಂತೆ ಬೋರ್ಡ್ ಸಲಹೆ ನೀಡಿದೆ.

ಪರೀಕ್ಷಾ ನಗರದ ಮಾಹಿತಿ ಮತ್ತು ಫಲಿತಾಂಶದ ದಿನಾಂಕ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅವರು ಪರೀಕ್ಷೆ ಬರೆಯಲಿರುವ ನಗರದ (Exam City) ಮಾಹಿತಿಯನ್ನು ಆಗಸ್ಟ್ 11, 2026 ರಂದು ಲಭ್ಯಗೊಳಿಸಲಾಗುವುದು. ಇದರಿಂದ ಅಭ್ಯರ್ಥಿಗಳಿಗೆ ಪ್ರಯಾಣ ಮತ್ತು ವಸತಿ ವ್ಯವಸ್ಥೆಯನ್ನು ಮುಂಚಿತವಾಗಿಯೇ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಇನ್ನು ನಿಗದಿತ ವೇಳಾಪಟ್ಟಿಯಂತೆ ಆಗಸ್ಟ್ 30, 2026 ರಂದು ದೇಶಾದ್ಯಂತ ಪರೀಕ್ಷೆ ನಡೆಯಲಿದ್ದು, ಇದರ ಫಲಿತಾಂಶವು ಸೆಪ್ಟೆಂಬರ್ 30, 2026 ರಂದು ಪ್ರಕಟವಾಗಲಿದೆ.

NEET PG 2026 ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿ:

  • ಆನ್‌ಲೈನ್ ಅರ್ಜಿ ಆರಂಭ ಜುಲೈ 1, 2026 (ಸಂಜೆ 5 ಗಂಟೆಯಿಂದ)
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 21, 2026 (ರಾತ್ರಿ 11:55 ರವರೆಗೆ)
  • ಪರೀಕ್ಷಾ ನಗರದ ಮಾಹಿತಿ ಲಭ್ಯತೆ ಆಗಸ್ಟ್ 11, 2026
  • ಪರೀಕ್ಷೆ ನಡೆಯುವ ದಿನಾಂಕ ಆಗಸ್ಟ್ 30, 2026
  • ಫಲಿತಾಂಶ ಪ್ರಕಟಣೆ ಸೆಪ್ಟೆಂಬರ್ 30, 2026

ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಶುಲ್ಕ ಎಷ್ಟು?

ವಿವಿಧ ವರ್ಗದ ಅಭ್ಯರ್ಥಿಗಳಿಗೆ ಪರೀಕ್ಷಾ ಮಂಡಳಿಯು ಈ ಕೆಳಗಿನಂತೆ ಅರ್ಜಿ ಶುಲ್ಕವನ್ನು ನಿಗದಿಪಡಿಸಿದೆ:

  • ಸಾಮಾನ್ಯ (General), OBC ಮತ್ತು EWS ಅಭ್ಯರ್ಥಿಗಳಿಗೆ: 3,500 ರೂಪಾಯಿಗಳು.
  • SC, ST ಮತ್ತು PWD ಅಭ್ಯರ್ಥಿಗಳಿಗೆ: 2,500 ರೂಪಾಯಿಗಳು.

ಇದನ್ನೂ ಓದಿ: ನೀಟ್ ಇಲ್ಲದೆಯೂ ವೈದ್ಯಕೀಯ ಲೋಕಕ್ಕೆ ಎಂಟ್ರಿ; 12ನೇ ತರಗತಿ ಅಂಕಗಳ ಆಧಾರದ ಮೇಲೆ ಸಿಗಲಿದೆ ಅಡ್ಮಿಷನ್!

ಶೈಕ್ಷಣಿಕ ಅರ್ಹತೆ ಏನಿರಬೇಕು?

ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆಯಿಂದ MBBS ಪದವಿ ಅಥವಾ ಪ್ರಾವಿಷನಲ್ MBBS ಉತ್ತೀರ್ಣ ಪ್ರಮಾಣಪತ್ರವನ್ನು ಹೊಂದಿರಬೇಕು. ಇದರೊಂದಿಗೆ NMC, ಹಳೆಯ MCI ಅಥವಾ ರಾಜ್ಯ ವೈದ್ಯಕೀಯ ಮಂಡಳಿಯಿಂದ (State Medical Council) ನೀಡಲಾದ ಕಾಯಂ ಅಥವಾ ತಾತ್ಕಾಲಿಕ ನೋಂದಣಿ (Registration Number) ಹೊಂದಿರುವುದು ಕಡ್ಡಾಯವಾಗಿದೆ.

NEET PG ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  • ಮೊದಲು NBEMS ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣಿಸುವ NEET PG 2026 ಅಥವಾ Application Link ಮೇಲೆ ಕ್ಲಿಕ್ ಮಾಡಿ.
  • ‘New Registration’ ಆಯ್ಕೆ ಮಾಡಿ ನಿಮ್ಮ ಪ್ರಾಥಮಿಕ ವಿವರಗಳನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಿ.
  • ಈಗ ನಿಮ್ಮ ಇಮೇಲ್‌ಗೆ ಬರುವ User ID ಮತ್ತು Password ಬಳಸಿ ಲಾಗಿನ್ ಆಗಿ.
  • ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ನಿಮ್ಮ ವರ್ಗಕ್ಕೆ ಅನುಗುಣವಾಗಿ ಆನ್‌ಲೈನ್ ಮೂಲಕ ಪರೀಕ್ಷಾ ಶುಲ್ಕವನ್ನು ಪಾವತಿಸಿ.
  • ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿದ ನಂತರ ಫಾರ್ಮ್ ಸಬ್ಮಿಟ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:

Follow Us
ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಬೆಳಗಾವಿಯಲ್ಲಿ ಭೀಕರ ಬರದ ಛಾಯೆ: ಬರಿದಾದ ಹಿಡಕಲ್ ಡ್ಯಾಂ
ಬೆಳಗಾವಿಯಲ್ಲಿ ಭೀಕರ ಬರದ ಛಾಯೆ: ಬರಿದಾದ ಹಿಡಕಲ್ ಡ್ಯಾಂ
ಕೋಲಾರದ ಕುರುಬರಪೇಟೆಯಲ್ಲಿ ದೇಗುಲದ ಆವರಣದಲ್ಲಿ ಎಸ್​ಐಆರ್​​ ಪ್ರಕ್ರಿಯೆ!
ಕೋಲಾರದ ಕುರುಬರಪೇಟೆಯಲ್ಲಿ ದೇಗುಲದ ಆವರಣದಲ್ಲಿ ಎಸ್​ಐಆರ್​​ ಪ್ರಕ್ರಿಯೆ!
ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ
ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್