NEET-UG 2024 Re-exam Result: NEET-UG ಮರು ಪರೀಕ್ಷೆಯ ಫಲಿತಾಂಶ ಪ್ರಕಟ, ವಿವರ ಇಲ್ಲಿದೆ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಮರು ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಮರು ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಇಲ್ಲಿ ಪರಿಶೀಲಿಸಬಹುದು. ಜೂನ್ 23, 2024 ರಂದು ನಡೆದ ಪರೀಕ್ಷೆಗೆ ಗ್ರೇಸ್ ಅಂಕಗಳನ್ನು ಪಡೆದ 1563 ಅಭ್ಯರ್ಥಿಗಳಿಗೆ ಮರು ಪರೀಕ್ಷೆಯನ್ನು ಜೂನ್ 23 ರಂದು ನಡೆಸಲಾಯಿತು. ಈ ಅಭ್ಯರ್ಥಿಗಳಲ್ಲಿ ಕೇವಲ 813 ಅಭ್ಯರ್ಥಿಗಳು ಮಾತ್ರ NEET ಮರು-ಪರೀಕ್ಷೆಗೆ ಹಾಜರಾಗಿದ್ದರು.

NEET-UG 2024 Re-exam Result: NEET-UG ಮರು ಪರೀಕ್ಷೆಯ ಫಲಿತಾಂಶ ಪ್ರಕಟ, ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
|

Updated on: Jul 01, 2024 | 12:17 PM

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಭಾನುವಾರ (ಜೂ.30) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) ಮರು ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಮರು ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು exams.nta.ac.in/NEET ನಲ್ಲಿ ಪರಿಶೀಲಿಸಬಹುದು. ಜೂನ್ 23, 2024 ರಂದು ನಡೆದ ಪರೀಕ್ಷೆಗೆ ಗ್ರೇಸ್ ಅಂಕಗಳನ್ನು ಪಡೆದ 1563 ಅಭ್ಯರ್ಥಿಗಳಿಗೆ ಮರು ಪರೀಕ್ಷೆಯನ್ನು ಜೂನ್ 23 ರಂದು ನಡೆಸಲಾಯಿತು. ಈ ಅಭ್ಯರ್ಥಿಗಳಲ್ಲಿ ಕೇವಲ 813 ಅಭ್ಯರ್ಥಿಗಳು ಮಾತ್ರ NEET ಮರು-ಪರೀಕ್ಷೆಗೆ ಹಾಜರಾಗಿದ್ದರು.

ಇನ್ನು ಇದಕ್ಕೂ ಮುನ್ನ ಜೂನ್ 29 ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮರು ಪರೀಕ್ಷೆಯ ಉತ್ತರ ಕೀಗಳನ್ನು ಬಿಡುಗಡೆ ಮಾಡಿತ್ತು. ಅಭ್ಯರ್ಥಿಗಳು NEET ನ ಅಧಿಕೃತ ವೆಬ್‌ಸೈಟ್ exams.nta.ac.in ನಿಂದ ತಾತ್ಕಾಲಿಕ ಉತ್ತರ ಕೀಗಳನ್ನು ಡೌನ್‌ಲೋಡ್ ಮಾಡಲು ಅವಕಾಶವನ್ನು ನೀಡಲಾಗಿತ್ತು.

NEET UG ಪರೀಕ್ಷೆಯಲ್ಲಿ ಮೇ 5 ರಂದು, ಏಳು ಕೇಂದ್ರಗಳಲ್ಲಿ 1563 ಅಭ್ಯರ್ಥಿಗಳು ತಪ್ಪಾದ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿತ್ತು. ಇದಕ್ಕಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಗ್ರೇಸ್ ಅಂಕಗಳನ್ನು ನೀಡಲು ನಿರ್ಧರಿಸಿತು. ಆದರೆ ಈ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್​​​​ ಈ ಪರೀಕ್ಷೆಗೆ ಗ್ರೇಸ್ ಅಂಕ ನೀಡುವುದನ್ನು ರದ್ದು ಮಾಡಿತ್ತು. ಹಾಗೂ ಮರು ಪರೀಕ್ಷೆ ಮಾಡಲು ಆದೇಶವನ್ನು ನೀಡಿತ್ತು.

ಇದನ್ನೂ ಓದಿ: ಡಿಪ್ಲೊಮಾ ಪಾಲಿಟೆಕ್ನಿಕ್ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

ಈ ಎಲ್ಲ ಗೊಂದಲದ ನಡುವೆ ಮೇ 5 ರಂದು NTA ನಡೆಸಿದ NEET-UG ಪರೀಕ್ಷೆಯಲ್ಲಿ ಸರಿಸುಮಾರು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಜೂನ್ 4ರಂದು ಈ ಪರೀಕ್ಷೆ ಫಲಿತಾಂಶವನ್ನು ಘೋಷಣೆ ಮಾಡಲಾಗಿತ್ತು. ಬಿಹಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಮತ್ತು ವಿವಿಧ ರಾಜ್ಯಗಳಾದ್ಯಂತ ಇತರ ಅಕ್ರಮಗಳ ಬಗ್ಗೆ ವರದಿಯಾದವು, ಈ ಬಗ್ಗೆ ಕೇಂದ್ರ ಸರ್ಕಾರ ಒಂದು ತನಿಖೆಯನ್ನು ನಡೆಸಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ’; ವಿ ಮನೋಹರ್ ಹೇಳಿಕೆ
‘ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ’; ವಿ ಮನೋಹರ್ ಹೇಳಿಕೆ
ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ
ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ಈ ರಾಶಿಯವರು ಇಂದು ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವರು
ಈ ರಾಶಿಯವರು ಇಂದು ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವರು
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ