ವರುಣಾ ಕ್ಷೇತ್ರದಲ್ಲಿ ವಿ ಸೋಮಣ್ಣ ಬೂತ್ ಪರಿಶೀಲನೆಗೆ ವಿರೋಧ; ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ

ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಇಂದು(ಮೇ.10) ಭರ್ಜರಿಯಾಗಿ ನಡೆದಿದೆ. ಮೊದಲ ಮತದಾನದವರಿಂದ ಹಿಡಿದು 95 ರ ಅಜ್ಜಿಯವರೆಗೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಅದರಂತೆ ಕುತೂಹಲ ಕೆರೆಳಿಸಿರುವ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

ವರುಣಾ ಕ್ಷೇತ್ರದಲ್ಲಿ ವಿ ಸೋಮಣ್ಣ ಬೂತ್ ಪರಿಶೀಲನೆಗೆ ವಿರೋಧ; ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ
ವರುಣಾ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 10, 2023 | 3:27 PM

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಮತದಾನ ಇಂದು(ಮೇ.10) ಭರ್ಜರಿಯಾಗಿ ನಡೆದಿದೆ. ಮೊದಲ ಮತದಾನದವರಿಂದ ಹಿಡಿದು 95 ರ ಅಜ್ಜಿಯವರೆಗೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಅದರಂತೆ ಕುತೂಹಲ ಕೆರೆಳಿಸಿರುವ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಬೂತ್ ಪರಿಶೀಲನೆಗೆ ಬಂದಂತಹ ಸಮಯದಲ್ಲಿ ಮತಗಟ್ಟೆ ಬಳಿಯೇ ಕಾರ್ಯಕರ್ತರು ತಡೆದು ಘೋಷಣೆ ಕೂಗಿದ್ದಾರೆ. ಈ ವೇಳೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡದಿರುವ ಘಟನೆ ನಡೆದಿದೆ.

ಪೊಲೀಸ್​ ಜೀಪು ಹತ್ತಿಸಿಕೊಳ್ಳುವ ವೇಳೆ ವ್ಯಕ್ತಿಯ ತಲೆಗೆ ಗಾಯ; ಗ್ರಾಮಸ್ಥರಿಂದ ಪೊಲೀಸ್ ಜೀಪ್​ಗೆ ಮುತ್ತಿಗೆ

ಕೋಲಾರ: ಇಂದು(ಮೇ.10) ವಿಧಾನಸಭೆ ಚುನಾವಣೆ ಮತದಾನ ಹಿನ್ನಲೆ ಮತದಾನ ಮಾಡಲು ಮತಗಟ್ಟೆಗೆ ಬಂದಿದ್ದಾರೆ. ಈ ವೇಳೆ ಮತಗಟ್ಟೆ ಬಳಿ ಕುಳಿತಿದ್ದವರನ್ನು 100 ಮೀ ದೂರದಲ್ಲಿ ಹೋಗುವಂತೆ ಮಹಿಳಾ ಪಿಎಸ್​ಐ ಹೇಳಿದ್ದಾರೆ. ಆದರೂ ಅವರ ಮಾತನ್ನು ಕೇಳದ ಕಾರಣ ಜೀಪು ಹತ್ತಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀಕೃಷ್ಣಪ್ಪ ಎಂಬುವರಿಗೆ ತಲೆಗೆ ಗಾಯವಾಗಿದೆ. ಇದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರ ವಿರುದ್ದ ತಿರುಗಿ ಬಿದ್ದಿದ್ದು, ಜೀಪ್​ಗೆ ಮುತ್ತಿಗೆ ಹಾಕಿರುವ ಘಟನೆ ತಾಲೂಕಿನ ಕೂಟೇರಿ ಗ್ರಾಮದಲ್ಲಿ ನಡೆದಿದೆ. ಬಳಿಕ ಗಾಯಾಳುವನ್ನ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:Karnataka Election 2023 Live: ಕರ್ನಾಟಕ ವಿಧಾನಸಭೆ ಚುನಾವಣೆ: ಮತದಾನ ನೇರಪ್ರಸಾರ

ಕೇಸರಿ ಶಾಲು ಧರಿಸಿ ನಿಂತು ಬಿಜೆಪಿ ಪರ ಪ್ರಚಾರ ಆರೋಪ; ಕಾಂಗ್ರೆಸ್ ಅಭ್ಯರ್ಥಿ, ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ

ಬೆಳಗಾವಿ: ಮತಗಟ್ಟೆ ಬಳಿ ಕೇಸರಿ ಶಾಲು ಧರಿಸಿ ನಿಂತು, ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಕುರಿತು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದೆ. ಹೌದು ಮತಗಟ್ಟೆ ಬಳಿ ಕೇಸರಿ ಶಾಲು ಧರಿಸಿ ನಿಂತಿದ್ದ ಕಾರ್ಯಕರ್ತರಿಗೆ ಡಾ.ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿರುವ ಘಟನೆ ಖಾನಾಪುರ ಕ್ಷೇತ್ರದ ದೇವಲತ್ತಿ ಗ್ರಾಮದಲ್ಲಿ ನಡೆದಿದೆ. ಈ ವೇಳೆ ಮಾತನಾಡಿದ ಅವರು ಹಿಂದೂ ಧರ್ಮದ ಬಗ್ಗೆ ನಮಗೂ ಗೌರವ ಇದೆ. ಗ್ಯಾಸ್ ಬೆಲೆ 1200 ರೂ. ಹೆಚ್ಚಾಗಿದೆ ಅದರ ಬಗ್ಗೆಯೂ ಗೌರವ ಇದೆ. ಆ 1200 ರೂ. ಕಾಣುತ್ತಿಲ್ಲ, ಧರ್ಮ ನಿಮಗೆ ಕಾಣುತ್ತಿದೆ. ಧರ್ಮದ ಬಗ್ಗೆ ನಿಮಗಿಂತ ಜಾಸ್ತಿ ನಮಗೆ ಅಭಿಮಾ‌ನ ಇದೆ ಎಂದು ಡಾ.ಅಂಜಲಿ ನಿಂಬಾಳ್ಕರ್ ಕೊರಳಲ್ಲಿದ್ದ ತಾಳಿ ತೋರಿಸಿದ್ದಾರೆ.

ನಿಮ್ಮ ಜೇಬಿನಲ್ಲಿ ಏನು ಇಟ್ಟುಕೊಂಡಿದ್ದೀರಾ? ಇದು ಧರ್ಮನಾ ಎಂದು ಕಾರ್ಯಕರ್ತರಿಗೆ ಪ್ರಶ್ನಿಸಿ, ಧರ್ಮದ ಬಗ್ಗೆ ನಮಗೆ ಏನು ನೀವು ಪಾಠ ಹೇಳುತ್ತಿದ್ದೀರಾ? ಓರ್ವ ಹೆಣ್ಣು ಮಗಳ ಮೇಲೆ ಮುಗಿ ಬೀಳುತ್ತಿದ್ದೀರಾ ಇದು ಧರ್ಮನಾ ಎಂದು ಪ್ರಶ್ನಿಸಿದ ಅವರು, ಜಾಸ್ತಿ ಮಾತನಾಡಿದ್ರೆ ನನಗೂ ಮಾತನಾಡಲು ಬರುತ್ತೆ. ನನಗೆ ದಬಾಯಿಸಬೇಡ ಗ್ಯಾಸ್ ಬೆಲೆ ಎಷ್ಟಾಗಿದೆ ಎಂದು ನಿಮ್ಮ ಹೆಂಡತಿಯನ್ನು ಹೋಗಿ ಕೇಳಿ ಎಂದು ಡಾ.ಅಂಜಲಿ ನಿಂಬಾಳ್ಕರ್ ಕುಟುಕಿದ್ದಾರೆ. ಬಳಿಕ ಅಂಜಲಿ ನಿಂಬಾಳ್ಕರ್ ತೆರಳುತ್ತಿದ್ದಂತೆ ಜೈ ಶ್ರೀರಾಮ, ಭಜರಂಗಿ ಭಜರಂಗಿ ಎಂದು ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ:ಹಾಸನ: ಮತದಾನ ಮಾಡಿ ಹೊರ ಬರುತ್ತಿದ್ದಂತೆ ಹೃದಯಾಘಾತದಿಂದ ವ್ಯಕ್ತಿ ಸಾವು

ಮತಗಟ್ಟೆ ಬಳಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಜಗಳ

ರಾಯಚೂರು: ಮತಗಟ್ಟೆ ಬಳಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಜಗಳವಾಗಿದೆ. ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಹರ್ವಾಪುರದಲ್ಲಿ ಈ ಘಟನೆ ನಡೆದಿದೆ. ಕಮಲ ಚಿನ್ಹೆ ಇರುವ ಮತ ಚೀಟಿ ನೀಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಇಬ್ಬರ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಕೂಡಲೇ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಬಳಿಕ ಎರಡೂ ಪಕ್ಷದ ಕಾರ್ಯಕರ್ತರನ್ನ ಸ್ಥಳದಿಂದ ವಾಪಸ್ ಕಳುಹಿಸಿದ್ದಾರೆ.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ