ಜನರ ಮೂರ್ಖರ ಮಾಡುವ ಯತ್ನದಲ್ಲಿ ನಟಿ ಹೇಮಾ, ಮತ್ತೊಂದು ವಿಡಿಯೋ ಬಿಡುಗಡೆ
ಬೆಂಗಳೂರಿನಲ್ಲಿ ನಡೆದಿರುವ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಹೆಸರು ಕೇಳಿ ಬಂದಿದೆ. ಆದರೆ ಹೇಮಾ, ತಾವು ಪಾರ್ಟಿಯಲ್ಲಿ ಹಾಜರಿರಲಿಲ್ಲ ಎಂದು ಪ್ರೂವ್ ಮಾಡಲು ಫಾರಂ ಹೌಸ್ ಒಂದರಲ್ಲಿ ನಿಂತು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಆದರೆ ಪೊಲೀಸರು ಹೇಮಾ ಪಾರ್ಟಿಯಲ್ಲಿದ್ದರು ಎಂದು ಖಚಿತಪಡಿಸಿದ್ದಾರೆ. ನಟಿ ಹೇಮಾ, ಇಂದೂ ಬೇರೊಂದು ವಿಡಿಯೋ ಹರಿಬಿಟ್ಟಿದ್ದಾರೆ.
ಬೆಂಗಳೂರಿನ (Bengalore) ಎಲೆಕ್ಟ್ರಾನಿಕ್ ಸಿಟಿಯ ಜಿಆರ್ ಫಾರ್ಮ್ಸ್ನಲ್ಲಿ (GR Farms) ನಡೆಯುತ್ತಿದ್ದ ರೇವ್ ಪಾರ್ಟಿಯ (Rev Party) ಮೇಲೆ ಪೊಲೀಸರು ದಾಳಿ ನಡೆಸಿ, ಮಾದಕ ವಸ್ತು ವಶಪಡಿಸಿಕೊಂಡಿರುವುದಲ್ಲದೆ, ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ರೇವ್ ಪಾರ್ಟಿಯಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು ಎನ್ನಲಾಗುತ್ತಿದ್ದು, ಅದರಲ್ಲಿ ತೆಲುಗಿನ ಜನಪ್ರಿಯ ನಟಿ ಹೇಮಾ ಹೆಸರು ಸಹ ಕೇಳಿ ಬಂದಿದೆ. ಆದರೆ ಹೇಮಾ, ತಾವು ಪಾರ್ಟಿಯಲ್ಲಿ ಇಲ್ಲವೆಂದು ಸಾಬೀತು ಮಾಡಲು, ನಿನ್ನೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಮಾವನ ತೋಟದಲ್ಲಿ ಓಡಾಡುತ್ತಿರುವ ವಿಡಿಯೋ ಹಂಚಿಕೊಂಡು ನಾನು ಹೈದರಾಬಾದ್ನ ಫಾರಂ ಹೌಸ್ನಲ್ಲಿದ್ದೀನಿ ಎಂದಿದ್ದರು. ಆದರೆ ಪೊಲೀಸರು, ನಟಿ ಹೇಮಾ ಪಾರ್ಟಿಯಲ್ಲಿ ಇದ್ದಿದ್ದನ್ನು ಖಚಿತ ಪಡಿಸಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಹೇಮಾ ಇದೀಗ ಮತ್ತೊಂದು ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮನೆಯಲ್ಲಿ ಚಿಕನ್ ಬಿರಿಯಾನಿ ಮಾಡುತ್ತಿರುವ ವಿಡಿಯೋ ಒಂದನ್ನು ಹೇಮಾ ಇದೀಗ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಹೇಮಾ, ತಮ್ಮ ಮನೆಯಲ್ಲಿ ಚಿಕನ್ ಬಿರಿಯಾನಿ ಮಾಡುತ್ತಿದ್ದಾರೆ. ಆದರೆ ಈ ವಿಡಿಯೋನಲ್ಲಿ ಅವರು ಬೆಂಗಳೂರಿನ ರೇವ್ ಪಾರ್ಟಿ ವಿಷಯ ಮಾತನಾಡಿಲ್ಲ. ‘ನಾನು ಪಾರ್ಟಿಯಲ್ಲಿಲ್ಲ, ಮನೆಯಲ್ಲಿದ್ದೇನೆ’ ಎಂದು ಸಹ ಹೇಮಾ ಹೇಳಿಲ್ಲ. ಹಾಗಾಗಿ ಇದು ಹಳೆಯ ವಿಡಿಯೋ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಮುನ್ನ ಬಿಡುಗಡೆ ಮಾಡಿದ್ದ ವಿಡಿಯೋನಲ್ಲಿ ತಾವು ಬೆಂಗಳೂರಿನಲ್ಲಿಲ್ಲ, ಹೈದರಾಬಾದ್ನಲ್ಲಿರುವುದಾಗಿ ಹೇಮಾ ಹೇಳಿದ್ದರು.
ಹೇಮಾ ಸಹ ಜಿಆರ್ ಫಾರ್ಮ್ಸ್ ನಲ್ಲಿ ನಡೆದ ಪಾರ್ಟಿಯಲ್ಲಿ ಹಾಜರಿದ್ದರು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸ್ಪಷ್ಟಪಡಿಸಿದ್ದಾರೆ. ಹೇಮಾ, ನಿನ್ನೆ ಬಿಡುಗಡೆ ಮಾಡಿದ್ದ ವಿಡಿಯೋವನ್ನು ಪಾರ್ಟಿ ನಡೆದ ಜಿಆರ್ ಫಾರ್ಮ್ಸ್ ನಲ್ಲಿಯೇ ಮೊಬೈಲ್ನಲ್ಲಿ ಶೂಟ್ ಮಾಡಿ ಬಿಡುಗಡೆ ಮಾಡಿದ್ದರು ಎನ್ನಲಾಗುತ್ತಿದೆ. ಯಾವ ಸಮಯದಲ್ಲಿ ಅವರು ಹೀಗೆ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆಂದು ತನಿಖೆ ನಡೆಸಲಿದ್ದೇವೆ ಎಂದು ಸಹ ಆಯುಕ್ತ ದಯಾನಂದ್ ಹೇಳಿದ್ದಾರೆ.
ಇದನ್ನೂ ಓದಿ:ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾ ಅಸಲಿ ಮುಖ ತೆರೆದಿಟ್ಟ ಪೊಲೀಸರು
ಮೇ 19ರ ತಡ ರಾತ್ರಿ ಪಾರ್ಟಿ ನಡೆದಿತ್ತು, ‘ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ’ ಎಂದು ಈ ರೇವ್ ಪಾರ್ಟಿಗೆ ಹೆಸರಿಡಲಾಗಿತ್ತು. ಸಂಜೆಯಿಂದ ಮುಂಜಾನೆವರೆಗೆ ಪಾರ್ಟಿ ಮಾಡಿಸುವುದು ಆಯೋಕರ ಉದ್ದೇಶವಾಗಿತ್ತು. ಮೇ 20ರ ಬೆಳಿಗ್ಗೆ ಪೊಲೀಸರು ಪಾರ್ಟಿ ಮೇಲೆ ದಾಳಿ ಮಾಡಿದ್ದರು. ಪಾರ್ಟಿಯಲ್ಲಿ ಎಂಡಿಎಂಎ ಪಿಲ್ಸ್, ಹೈಡ್ರೋ ಗಾಂಜಾ, ಕೊಕೇನ್ ಸೇರಿ ಅನೇಕ ಮಾದಕವಸ್ತುಗಳ ಬಳಕೆ ಆಗಿರುವುದು ಪತ್ತೆಯಾಗಿದೆ. ಪಾರ್ಟಿಯಲ್ಲಿ ಸಿದ್ದಿಕ್, ರಣ್ ದೀರ್, ರಾಜ್ ಭಾವ ಡ್ರಗ್ಸ್ ಮಾರಾಟ ಮಾಡಿದ್ದರು ಎನ್ನಲಾಗಿದ್ದು. ಪಾರ್ಟಿಯ ಆಯೋಜಕ ವಾಸು ಸೇರಿದಂತೆ ನಾಲ್ಕು ಮಂದಿ ಡ್ರಗ್ ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ಮಂದಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಎಲ್ಲರ ರಕ್ತದ ಮಾದರಿಗಳನ್ನು ಪಡೆದು ಪರೀಕ್ಷೆಗೆ ಕಳಿಸಲಾಗಿದೆ.
ತೆಲುಗು ನಟ ಶ್ರೀಕಾಂತ್ ಸಹ ಈ ಪಾರ್ಟಿಯಲ್ಲಿದ್ದರು ಎಂಬ ಸುದ್ದಿ ಹರಿದಾಡಿತ್ತು. ಆದರೆ ಶ್ರೀಕಾಂತ್ ತಮ್ಮದೇ ಮನೆಯಿಂದ ವಿಡಿಯೋ ಮಾಡಿ, ತಾವು ಮನೆಯಲ್ಲಿಯೇ ಇರುವುದಾಗಿ ಹೇಳಿದ್ದು, ತಮಗೆ ಇಂಥಹಾ ಪಾರ್ಟಿಗಳಿಗೆ ಹೋಗುವ ಅಭ್ಯಾಸವಿಲ್ಲ, ನನ್ನದು ಅಂಥಹಾ ಸಂಸ್ಕೃತಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ