AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್​​ನಿಂದ ಕಳುವಾಯ್ತು ಬರೋಬ್ಬರಿ 66 ಹಾರ್ಡ್​​ ಡಿಸ್ಕ್

ಬಾಲಿವುಡ್‌ನ ಪ್ರಮುಖ ನಿರ್ಮಾಣ ಸಂಸ್ಥೆ ‘ಟೈಗರ್ ಬೇಬಿ ಡಿಜಿಟಲ್ ಎಲ್‌ಎಲ್‌ಪಿ’ಯಿಂದ 66 ಹಾರ್ಡ್ ಡಿಸ್ಕ್‌ಗಳು ಕಳವಾಗಿವೆ. ಜೋಯಾ ಅಖ್ತರ್ ಅವರ ಸಂಸ್ಥೆಯಲ್ಲಿ ನಡೆದ ಈ ಘಟನೆ ಚಿತ್ರರಂಗದಲ್ಲಿ ಆತಂಕ ಮೂಡಿಸಿದೆ. ಕಳ್ಳತನವಾದ ಡಿಸ್ಕ್‌ಗಳಲ್ಲಿ 'ಮೇಡ್ ಇನ್ ಹೆವನ್' ಸೇರಿದಂತೆ ಪ್ರಮುಖ ಚಿತ್ರಗಳ ರಾ ಫೂಟೇಜ್, ಎಡಿಟೆಡ್ ದೃಶ್ಯಗಳಿದ್ದವು. ಇಬ್ಬರು ಉದ್ಯೋಗಿಗಳ ಬಂಧನವಾಗಿದ್ದು, ಸೈಬರ್ ಕ್ರೈಂ ತನಿಖೆ ಮುಂದುವರಿದಿದೆ.

ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್​​ನಿಂದ ಕಳುವಾಯ್ತು ಬರೋಬ್ಬರಿ 66 ಹಾರ್ಡ್​​ ಡಿಸ್ಕ್
ಝೋಯಾ ಅಖ್ತರ್
ರಾಜೇಶ್ ದುಗ್ಗುಮನೆ
|

Updated on: May 27, 2026 | 7:32 AM

Share

ಬಾಲಿವುಡ್‌ನ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್‌ವೊಂದರಿಂದ ಬರೋಬ್ಬರಿ 66 ಹಾರ್ಡ್ ಡಿಸ್ಕ್‌ಗಳು ಕಳವಾಗಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಚಿತ್ರರಂಗದಲ್ಲಿ ಇಂತಹ ಹೈ-ಪ್ರೊಫೈಲ್ ಡೇಟಾ ಕಳ್ಳತನ ನಡೆಯುವುದು ತೀರಾ ಅಪರೂಪವಾಗಿದ್ದು, ಸದ್ಯ ಈ ಸುದ್ದಿ ಬಾಲಿವುಡ್ (Bollywood) ಅಂಗಳದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಸಾಕಷ್ಟು ಎಚ್ಚರಿಕೆ ಮಧ್ಯೆಯೂ ಈ ರೀತಿ ಆಗಿರೋದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಖ್ಯಾತ ನಿರ್ದೇಶಕಿಯರಾದ ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ಅವರಿಗೆ ಸೇರಿದ ‘ಟೈಗರ್ ಬೇಬಿ ಡಿಜಿಟಲ್ ಎಲ್‌ಎಲ್‌ಪಿ’ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಕಚೇರಿಯಲ್ಲಿದ್ದ ಒಟ್ಟು 119 ಹಾರ್ಡ್ ಡಿಸ್ಕ್‌ಗಳ ಪೈಕಿ 66 ಹಾರ್ಡ್ ಡಿಸ್ಕ್‌ಗಳು ನಾಪತ್ತೆಯಾಗಿದ್ದು, ಇವುಗಳಲ್ಲಿ ಶೂಟಿಂಗ್‌ನ ರಾ ಫೂಟೇಜ್, ಎಡಿಟ್ ಮಾಡಿದ ದೃಶ್ಯಗಳು, ಪೋಸ್ಟ್-ಪ್ರೊಡಕ್ಷನ್ ಫೈಲ್‌ಗಳು ಮತ್ತು ಇನ್ನೂ ಬಿಡುಗಡೆಯಾಗದ ಚಿತ್ರಗಳ ಅತ್ಯಂತ ಪ್ರಮುಖ ಡೇಟಾ ಇತ್ತು ಎಂದು ತಿಳಿದುಬಂದಿದೆ.

ಕಳ್ಳತನ ಬಯಲಾಗಿದ್ದು ಹೇಗೆ?

ಮೇ 21 ರಂದು ಕಚೇರಿಯ ಸಿಬ್ಬಂದಿ ಪರಿಶೀಲಿಸಿದಾಗ ಹಾರ್ಡ್ ಡಿಸ್ಕ್ ಬಾಕ್ಸ್‌ಗಳು ಹರಿದಿರಿವುದು ಮತ್ತು ಅವು ಖಾಲಿ ಇರುವುದು ಪತ್ತೆಯಾಗಿದೆ. ತಕ್ಷಣವೇ ಮುಂಬೈನ ಬಾಂದ್ರಾ ಪೊಲೀಸರಿಗೆ ದೂರು ನೀಡಲಾಗಿದ್ದು, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಶಾಹಿದ್ ಅಜೀಂ ಖಾನ್ ಮತ್ತು ರಿತೇಶ್ ಸುರೇಶ್ ಶಾ ಎಂಬ ಇಬ್ಬರು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಡಿಮೆ ಬೆಲೆಗೆ ಮಾರಾಟ:

ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳು ಕಳೆದ ಐದು ತಿಂಗಳಲ್ಲಿ 24 ಹಾರ್ಡ್ ಡಿಸ್ಕ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವುಗಳನ್ನು ತಲಾ 15,000 ದಿಂದ 20,000 ರೂಪಾಯಿಗಳಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಾರ್ಡ್ ಡಿಸ್ಕ್‌ಗಳಲ್ಲಿ ಅಮೆಜಾನ್ ಪ್ರೈಮ್‌ನ ಸೂಪರ್ ಹಿಟ್ ಸರಣಿ ‘ಮೇಡ್ ಇನ್ ಹೆವನ್’ ಮತ್ತು ‘ಘೋಸ್ಟ್ ಸ್ಟೋರೀಸ್’ ಸೇರಿದಂತೆ ಹಲವು ಪ್ರಮುಖ ಸಿನಿಮಾಗಳ ಬ್ಯಾಕಪ್ ಡೇಟಾ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: ಎರಡನೇ ಮದುವೆ ಮಾಡಿಕೊಂಡ ಫರ್ಹಾನ್​ ಅಖ್ತರ್​; ಪ್ರೇಯಸಿ ಶಿಬಾನಿ​ ಜತೆ ಸಿಂಪಲ್​ ವಿವಾಹ

ಆನ್‌ಲೈನ್ ಲೀಕ್ ಆತಂಕ:

ಸಿನಿಮಾ ಬಿಡುಗಡೆಗೂ ಮುನ್ನವೇ ಇಷ್ಟೊಂದು ದೊಡ್ಡ ಮಟ್ಟದ ಡೇಟಾ ಕಳವಾಗಿರುವುದು ನಿರ್ಮಾಣ ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಕದ್ದಿರುವ ಡೇಟಾವನ್ನು ಆನ್‌ಲೈನ್‌ನಲ್ಲಿ ಎಲ್ಲಾದರೂ ಲೀಕ್ ಮಾಡಲಾಗಿದೆಯೇ ಅಥವಾ ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಬಾಂದ್ರಾ ಪೊಲೀಸರು ಸದ್ಯ ಸೈಬರ್ ಕ್ರೈಮ್ ತಜ್ಞರ ನೆರವು ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಈ ಕೃತ್ಯದಲ್ಲಿ ಸಂಸ್ಥೆಯ ಇತರ ಉದ್ಯೋಗಿಗಳ ಕೈವಾಡವಿದೆಯೇ ಎಂಬ ಕೋನದಲ್ಲೂ ತನಿಖೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂಡೋನೇಷ್ಯಾದ 1,000 ವರ್ಷದ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
ಇಂಡೋನೇಷ್ಯಾದ 1,000 ವರ್ಷದ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ