Friendship Teaser: ಫ್ರೆಂಡ್ಶಿಪ್ ಸಿನಿಮಾದಲ್ಲಿ ಹರ್ಭಜನ್ ಸಿಂಗ್ ಮಿಂಚಿಂಗ್! ತಮ್ಮ ನಟನೆಯ ಹೊಸ ಚಿತ್ರದ ಟೀಸರ್ ಹಂಚಿಕೊಂಡ ಭಜ್ಜಿ
Harbhajan Singh Friendship: ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಿನಿಮಾ ಲಿಂಕ್ ಶೇರ್ ಮಾಡಿರುವ ಭಜ್ಜಿ, ಹಿಂದಿ, ತಮಿಳು, ತೆಲುಗು ಭಾಷೆಯ ಟೀಸರ್ ಲಿಂಕ್ಗಳನ್ನೂ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.
ಹರ್ಭಜನ್ ಸಿಂಗ್ ಭಾರತ ಕಂಡ ಅತ್ಯುತ್ತಮ ಸ್ಪಿನ್ ಎಸೆತಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಕೈ ಅಗಲವಾಗಿಸಿ, ಒಂದು ನೆಗೆತ ಹಾಕಿ ಕೈ ತಿರುಗಿಸುತ್ತಾ ಬೌಲ್ ಮಾಡುವ ತಮ್ಮ ವಿಶಿಷ್ಟ ಶೈಲಿಯ ಮೂಲಕ ಭಾರತದ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದ ಆಟಗಾರ ಇವರು. ಭಾರತೀಯ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಮೂರನೇ ಸ್ಥಾನದಲ್ಲಿ ಹರ್ಭಜನ್ ಇದ್ದಾರೆ.
ಹರ್ಭಜನ್ ಸಿಂಗ್ 103 ಟೆಸ್ಟ್ ಪಂದ್ಯಗಳನ್ನಾಡಿ 417 ವಿಕೆಟ್ ಕಬಳಿಸಿದ್ದಾರೆ. ಏಕದಿನ ಪಂದ್ಯಾಟದಲ್ಲಿ ಹರ್ಭಜನ್ ಭಾರತದ 5ನೇ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ. 236 ಪಂದ್ಯಗಳಲ್ಲಿ 269 ವಿಕೆಟ್ ಪಡೆದಿದ್ದಾರೆ. ಹರ್ಭಜನ್ ಸಿಂಗ್ 2007ರಲ್ಲಿ ಟಿ20 ವಿಶ್ವಕಪ್ (ICC WT20) ಗೆದ್ದ ತಂಡದಲ್ಲಿ ಹಾಗೂ 2011 ವಿಶ್ವಕಪ್ (ICC World Cup) ಗೆದ್ದ ತಂಡದ ಸದಸ್ಯರಾಗಿದ್ದರು. 2000ದ ಮೊದಲ ಭಾಗದಲ್ಲಿ ಭಾರತದ ಟೆಸ್ಟ್ ಕ್ರಿಕೆಟ್ ತಂಡ ನಂಬರ್ 1 ರ್ಯಾಂಕಿಂಗ್ ಪಡೆದಿತ್ತು. ಆ ಪ್ರಶಂಸೆಗೆ ಪಾತ್ರವಾಗಲು ಕೂಡ ಹರ್ಭಜನ್ ಸಿಂಗ್ ಕಾರಣರಾಗಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹಿಂದೆ ಸರಿದ ಬಳಿಕ ಕಮೆಂಟೇಟರ್ ಆಗಿ ಹರ್ಭಜನ್ ಮಿಂಚಿದ್ದರು. ಈ ಬಾರಿಯ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಹರ್ಭಜನ್ ಆಯ್ಕೆಯಾಗಿದ್ದಾರೆ. ಕೇವಲ ಕ್ರಿಕೆಟ್ನಲ್ಲಿ ಮಾತ್ರವಲ್ಲ, ಸಿನಿಮಾ ವಿಭಾಗದಲ್ಲಿ ಕೂಡ ಹರ್ಭಜನ್ ತಮ್ಮ ಛಾಪು ಮೂಡಿಸಿದ್ದಾರೆ. ಸೋಮವಾರ (ಮಾರ್ಚ್ 1) ತಮ್ಮ ಮುಂದಿನ ಸಿನಿಮಾ ಫ್ರೆಂಡ್ಶಿಪ್ (Friendship) ಟೀಸರ್ ಹಂಚಿಕೊಂಡಿದ್ದಾರೆ. ಹಿಂದಿ ಭಾಷೆಯ ಫ್ರೆಂಡ್ಶಿಪ್ ಸಿನಿಮಾದಲ್ಲಿ ಹರ್ಭಜನ್ ಮಿಂಚಿದ್ದಾರೆ.
Friendship ಸಿನಿಮಾ ಪೋಸ್ಟರ್ಗಳು
Get Ready Folks #FriendshipMovie Teaser is Ready. All set to entertain you all From Tomorrow.#FriendShipSummer it is!! @ImSaravanan_P @JPRJOHN1 @akarjunofficial @shamsuryastepup #Losliya @actorsathish @JSKfilmcorp pic.twitter.com/toWK3t3Afi
— Harbhajan Turbanator (@harbhajan_singh) February 28, 2021
Friendship ಸಿನಿಮಾ ಟೀಸರ್
Sharp,Crisp,Intense #FriendShipMovieTeaser of my Movie is Here.Enjoy it,Guys!
Tamil –https://t.co/LSUImD7xUG Telugu-https://t.co/unECTwvJK5 Hindi-https://t.co/BSzIWz05iG
@JPRJOHN1 @akarjunofficial @shamsuryastepup #Losliya @actorsathish @JSKfilmcorp @ImSaravanan_P
— Harbhajan Turbanator (@harbhajan_singh) March 1, 2021
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಿನಿಮಾ ಲಿಂಕ್ ಶೇರ್ ಮಾಡಿರುವ ಭಜ್ಜಿ, ಹಿಂದಿ, ತಮಿಳು, ತೆಲುಗು ಭಾಷೆಯ ಟೀಸರ್ ಲಿಂಕ್ಗಳನ್ನೂ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ನನ್ನ ಸಿನಿಮಾದ ಟೀಸರ್ ಇಲ್ಲಿದೆ. ಎಂಜಾಯ್ ಮಾಡಿ ಎಂದು ಬರೆದುಕೊಂಡಿದ್ದಾರೆ.
ಹರ್ಭಜನ್ ಈ ಹಿಂದೆಯೂ ಕೂಡ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಮುಜ್ಸೆ ಶಾದಿ ಕರೋಗಿ, ಸೆಕೆಂಡ್ ಹ್ಯಾಂಡ್ ಹಸ್ಬೆಂಡ್, ಪಂಜಾಬಿ ಸಿನಿಮಾ ಭಜ್ಜಿ ಇನ್ ಪ್ರಾಬ್ಲೆಂಗಳಲ್ಲಿ ಅವರು ವಿಶೇಷ ಪಾತ್ರಗಳಲ್ಲಿ ನಟಿಸಿದ್ದರು. ಈಗ ಫ್ರೆಂಡ್ಶಿಪ್ ಸಿನಿಮಾ ಟೀಸರ್ ಹಂಚಿಕೊಂಡಿರುವ ಭಜ್ಜಿ, ಅಭಿಮಾನಿಗಳ ಶುಭಹಾರೈಕೆಗಳಿಂದ ಸಂತಸಗೊಂಡಿದ್ದಾರೆ. ಭಜ್ಜಿ ಕ್ರಿಕಟ್ ಜತೆಗಾರರು ಕೂಡ ಶುಭಕೋರಿದ್ದಾರೆ.
ಸುರೇಶ್ ರೈನಾ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಟ್ವೀಟ್
This is epic Bhajju pa @harbhajan_singh. Can’t wait to watch the entire movie. Wishing you lots of success with this new endeavour.#FriendShipMovieTeaser ?
Tamil –https://t.co/oJYZZOnmKp Telugu-https://t.co/zWrdy6hESt Hindi-https://t.co/HkxCyyAOZj
— Suresh Raina?? (@ImRaina) March 1, 2021
#FriendShipMovieTeaser looks awesome @harbhajan_singh Cant wait to see my multi-talented friend, Bhajji in action. Good luck??
Tamil –https://t.co/GXJgar6J2q Telugu-https://t.co/1DlEpMjkSe Hindi-https://t.co/M5Tz9MXhNg pic.twitter.com/WH8sZFSQlg
— VVS Laxman (@VVSLaxman281) March 1, 2021
Rajeev Profile: CCL ಕ್ರಿಕೆಟ್ನಲ್ಲಿ ಮಿಂಚಿದ್ದ ರಾಜೀವ್ ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಾರಾ?
Published On - 11:59 am, Tue, 2 March 21