ಶ್ರಿಯಾ ಶರಣ್ ಪತಿ ಎದುರೇ ನಟಿಯ ಖಾಸಗಿ ಅಂಗದ ಬಗ್ಗೆ ಮಾತನಾಡಿದ ಅಭಿಮಾನಿ; ಮುಂದೇನಾಯ್ತು?
ನಟಿ ಶ್ರಿಯಾ ಶರಣ್ ಲೈವ್ ಚಾಟ್ ವೇಳೆ ಅಭಿಮಾನಿಯೊಬ್ಬ ಅಸಭ್ಯ ಕಾಮೆಂಟ್ ಮಾಡಿದ್ದರು. ಇದನ್ನು ಅವರ ಪತಿ ಆ್ಯಂಡ್ರಿ ಕೊಶ್ಚೀವ್ ಕೋಪಗೊಳ್ಳದೆ ಅದನ್ನು ಲಘುವಾಗಿ ಮತ್ತು ಹಾಸ್ಯದ ಧಾಟಿಯಲ್ಲಿ ಉತ್ತರಿಸಿದ್ದರು. ಅವರು ಪರಿಸ್ಥಿತಿಯನ್ನು ಅತ್ಯಂತ ಪ್ರಬುದ್ಧವಾಗಿ ನಿಭಾಯಿಸಿರುವ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆದಿದೆ.

ನಟಿ ಶ್ರಿಯಾ ಶರಣ್ ಅವರು ಈಗ ಬಣ್ಣದ ಲೋಕದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರಿಗೆ ಕನ್ನಡ ಚಿತ್ರರಂಗದ ಜೊತೆಯೂ ನಂಟಿದೆ. ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರ ಅಭಿಮಾನಿ ತುಂಬಾನೇ ಕೆಟ್ಟದಾಗಿ ಕಮೆಂಟ್ ಮಾಡಿದ್ದು ಇದೆ. ಇದನ್ನು ಅವರ ಪತಿ ಗಂಭೀರವಾಗಿ ಸ್ವೀಕರಿಸಿ ಬೇರೆ ರೀತಿಯಲ್ಲಿ ತೆಗೆದುಕೊಂಡು ಹೋಗಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ.
ಶ್ರಿಯಾ ಶರಣ್ ಅವರು ಕೆಲ ವರ್ಷಗಳ ಹಿಂದೆ ಲೈವ್ ಬಂದಿದ್ದರು. ಲೈವ್ ಚ್ಯಾಟ್ನಲ್ಲಿ ಬರುವ ಕಮೆಂಟ್ಗಳನ್ನು ಅವರು ಓದುತ್ತಿದ್ದರು. ಸಾಮಾನ್ಯವಾಗಿ ಹೀರೋಯಿನ್ಗಳ ಫೋಟೋಗೆ ಅಶ್ಲೀಲ ಕಮೆಂಟ್ ಹಾಕೋದು ಸಾಮಾನ್ಯ ಎಂಬಂತಾಗಿದೆ. ಶ್ರಿಯಾಗೂ ಇದೇ ರೀತಿಯ ಅನುಭವ ಆಯಿತು. ಅವರು ಒಂದು ಮುಜುಗರದ ಪರಿಸ್ಥಿತಿ ಎದುರಿಸಿದರು.
‘ನಿಮ್ಮ ದೇಹದ ಮೇಲ್ಭಾಗದ ಖಾಸಗಿ ಅಂಗ ತುಂಬಾನೇ ಸುಂದರವಾಗಿದೆ’ ಎಂದು ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದ. ಅವನು ನೇರವಾಗಿದೆ ದೇಹದ ಅಂಗದ ಹೆಸರನ್ನೇ ಉಲ್ಲೇಖಿಸಿ ಹೇಳಿದ್ದ. ಈ ವೇಳೆ ಅವರ ಪತಿ ಆ್ಯಂಡ್ರಿ ಕೊಶ್ಚೀವ್ ಕೂಡ ಅಲ್ಲಿಯೇ ಇದ್ದರು. ಮನಸ್ಸು ಮಾಡಿದ್ದರೆ ಅವರು ಕೋಪಗೊಳ್ಳಬಹುದಿತ್ತು. ಕಮೆಂಟ್ ಹಾಕಿದ ಅಭಿಮಾನಿಯನ್ನು ಹುಡುಕಿ ಕ್ಲಾಸ್ ತೆಗೆದುಕೊಳ್ಳಬಹುದಿತ್ತು. ಆದರೆ, ಅವರು ಹಾಗೆ ಮಾಡಿರಲಿಲ್ಲ.
View this post on Instagram
‘ನೀವು ಹೇಳಿದ್ದು ನಿಜಕ್ಕೂ ಸತ್ಯ’ ಎಂದರು. ಈ ಮೂಲಕ ಅಭಿಮಾನಿಯ ಮಾತನ್ನು ಒಪ್ಪಿದರು. ‘ನೀವು ಹೇಳಿದ್ದು ನಿಜ’ ಎಂದರು. ಈ ಮೂಲಕ ಗಂಭೀರ ವಿಷಯವನ್ನು ಹಾಸ್ಯಕ್ಕೆ ತಿರುಗಿಸಿದ್ದರು. ಸೆಲೆಬ್ರಿಟಿಗಳು ಎಂದರೆ ಅಶ್ಲೀಲವಾಗಿ ಕಮೆಂಟ್ ಮಾಡೋದು ಸಾಮಾನ್ಯ. ಇದು ಶ್ರಿಯಾ ಪತಿಗೆ ಅರ್ಥವಾದಂತೆ ಇದೆ. ಶ್ರಿಯಾ ಹಾಗೂ ಆ್ಯಂಡ್ರಿ 2018ರಲ್ಲಿ ವಿವಾಹ ಆದರು. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗೆ ಒಂದು ಮಗು ಇದೆ.
ಇದನ್ನೂ ಓದಿ: ‘ದೃಶ್ಯಂ 3’ ಸಿನಿಮಾ ಸೆಟ್ನಲ್ಲಿ ಮಗಳೊಟ್ಟಿಗೆ ನಟಿ ಶ್ರಿಯಾ ಶರಣ್
ಶ್ರಿಯಾ ಶರಣ್ ಅವರು ‘ಅರಸು’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದರು. ಆ ಬಳಿಕ ‘ಚಂದ್ರ’, ‘ಕಬ್ಜ’ ಚಿತ್ರದಲ್ಲಿ ಕಾಣಿಸಿಕೊಂಡರು. ಅವರು ಹಿಂದಿ ‘ದೃಶ್ಯಂ: ದಿ ಕನ್ಕ್ಲೂಷನ್’ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




