ಕರ್ನಾಟಕದ ಹಳ್ಳಿಗರ ಅಭಿಮಾನಕ್ಕೆ ಸನ್ನಿ ಲಿಯೋನ್​ ಫಿದಾ; ಅನಾಥ ಮಕ್ಕಳ ತಾಯಿ ಎಂದ ಫ್ಯಾನ್ಸ್​

Sunny Leone: ಈ ಫೋಟೋ ಸನ್ನಿ ಲಿಯೋನ್​ ಅವರ ಕಣ್ಣಿಗೆ ಬಿದ್ದಿದೆ. ಕರ್ನಾಟಕದ ಹಳ್ಳಿ ಜನರ ಅಭಿಮಾನಕ್ಕೆ ಅವರು ಫಿದಾ ಆಗಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಕರ್ನಾಟಕದ ಹಳ್ಳಿಗರ ಅಭಿಮಾನಕ್ಕೆ ಸನ್ನಿ ಲಿಯೋನ್​ ಫಿದಾ; ಅನಾಥ ಮಕ್ಕಳ ತಾಯಿ ಎಂದ ಫ್ಯಾನ್ಸ್​
ಹಳ್ಳಿಯೊಂದರಲ್ಲಿ ಹಾಕಲಾಗಿರುವ ಸನ್ನಿ ಲಿಯೋನ್ ಫ್ಲೆಕ್ಸ್

ಖ್ಯಾತ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಅವರ ಜನಪ್ರಿಯತೆ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಮೇ 13ರಂದು ಅವರ ಜನ್ಮದಿನ. ವಿಶ್ಯಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಯಸ್ಸು ಎಷ್ಟೇ ಆಗಿದ್ದರೂ ಇಂದಿಗೂ ಅದೇ ಚಾರ್ಮ್​ ಉಳಿಸಿಕೊಂಡಿರುವ ಅವರಿಗೆ ಕರ್ನಾಟಕದಲ್ಲೂ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಸನ್ನಿ ಲಿಯೋನ್​ ಜನ್ಮದಿನದ ಸಲುವಾಗಿ ಕರುನಾಡಿನ ಹಳ್ಳಿಯೊಂದರಲ್ಲಿ ಹಾಕಲಾಗಿದ್ದ ಫ್ಲೆಕ್ಸ್​ ಗಮನ ಸೆಳೆದಿದೆ. ಹಳ್ಳಿ ಮಂದಿಯ ಪ್ರೀತಿಗೆ ಸ್ವತಃ ಸನ್ನಿ ಫಿದಾ ಆಗಿದ್ದಾರೆ.

ದಕ್ಷಿಣ ಭಾರತದಲ್ಲಿ ಸ್ಟಾರ್​ ನಟರ ಜನ್ಮದಿನದಂದು ಅಭಿಮಾನಿಗಳು ಎತ್ತರದ ಕಟೌಟ್ ನಿಲ್ಲಿಸಿ ಶುಭಕೋರುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈಗ ಆ ಗೌರವ ಸನ್ನಿ ಲಿಯೋನ್​ ಅವರಿಗೂ ಸಿಕ್ಕಿದೆ. ಲಕ್ಷಣವಾಗಿ ಸೀರೆ ಧರಿಸಿ ನಿಂತಿರುವ ಸನ್ನಿ ಲಿಯೋನ್ ಅವರ ಪೋಟೋ ಹೊಂದಿರುವ ಎತ್ತರದ ಬ್ಯಾನರ್​ ಅನ್ನು ಹಳ್ಳಿಯೊಂದರಲ್ಲಿ ನಿಲ್ಲಿಸಲಾಗಿದೆ. ಅದರ ಮೇಲಿರುವ ಬರಹ ಇನ್ನೂ ಅಚ್ಚರಿ ಮೂಡಿಸುವಂತಿದೆ. ‘ಅನಾಥ ಮಕ್ಕಳ ತಾಯಿ; ಅಭಿಮಾನಿಗಳ ದೇವತೆ. ಸನ್ನಿ ಲಿಯೋನ್​ಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆಯಲಾಗಿದೆ.

ಅನೇಕ ಸಂದರ್ಭಗಳಲ್ಲಿ ಸನ್ನಿ ಲಿಯೋನ್​ ಅವರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ದೇಣಿಗೆ ನೀಡಿದ ಬಗ್ಗೆಯೂ ಹಲವು ಬಾರಿ ವರದಿ ಆಗಿದೆ. ಅಲ್ಲದೆ, ಹೆಣ್ಣು ಮಗುವನ್ನು ದತ್ತು ಪಡೆದು ಅವರು ಸಾಕುತ್ತಿದ್ದಾರೆ. ಈ ಎಲ್ಲ ಕಾರಣದಿಂದಲೇ ಅಭಿಮಾನಿಗಳು ಅವರನ್ನು ‘ಅನಾಥ ಮಕ್ಕಳ ತಾಯಿ; ಅಭಿಮಾನಿಗಳ ದೇವತೆ’ ಎಂದೆಲ್ಲ ಹಾಡಿ ಹೊಗಳಿದ್ದಾರೆ. ವಿಶೇಷವೆಂದರೆ ಈ ಫೋಟೋ ಸನ್ನಿ ಲಿಯೋನ್​ ಅವರ ಕಣ್ಣಿಗೆ ಬಿದ್ದಿದೆ. ಕರ್ನಾಟಕದ ಹಳ್ಳಿ ಜನರ ಅಭಿಮಾನಕ್ಕೆ ಅವರು ಫಿದಾ ಆಗಿದ್ದಾರೆ. ಆ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

ನೀಲಿ ಸಿನಿಮಾಗಳ ಲೋಕಕ್ಕೆ ವಿದಾಯ ಹೇಳಿದ ಬಳಿಕ ಸನ್ನಿ ಲಿಯೋನ್​ ಅವರು ಬಾಲಿವುಡ್​ನಲ್ಲಿ ತೊಡಗಿಕೊಂಡರು. ಹಿಂದಿ ಸಿನಿಮಾಗಳಲ್ಲಿ ಹೀರೋಯಿನ್​ ಆಗಿ ನಟಿಸಿರುವುದು ಮಾತ್ರವಲ್ಲದೆ, ಅನೇಕ ಚಿತ್ರಗಳಲ್ಲಿ ಐಟಂ ಡ್ಯಾನ್ಸ್​ ಮಾಡುವ ಮೂಲಕವೂ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕನ್ನಡದ ‘ಡಿಕೆ’ ಮತ್ತು ‘ಲವ್​ ಯೂ ಆಲಿಯಾ’ ಚಿತ್ರಗಳಲ್ಲಿ ಸನ್ನಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್​ಗಳಿವೆ.

ಇದನ್ನೂ ಓದಿ:

ಸನ್ನಿ ಲಿಯೋನ್​ ಸಂಸಾರಕ್ಕೆ 10 ವರ್ಷ; ದಾಂಪತ್ಯದ 5 ಸೀಕ್ರೆಟ್​ ತೆರೆದಿಟ್ಟ ಮಾದಕ ನಟಿ

ಕನ್ನಡ ಹಾಡಿಗೆ ಮತ್ತೆ ಸೊಂಟ ಬಳುಕಿಸೋಕೆ ಬಂದ ಸನ್ನಿ ಲಿಯೋನ್​..