AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಬಾರಿಗೆ 2 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದ ನಯನತಾರಾ; ‘ಟಾಕ್ಸಿಕ್’ ಚಿತ್ರಕ್ಕೆ ಪಡೆದಿದ್ದು ಎಷ್ಟು?

ಆರಂಭಿಕ ದಿನಗಳಲ್ಲಿ ಕೇವಲ 2,000 ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಟಿ ನಯನತಾರಾ, ಇಂದು ಸಿನಿಮಾವೊಂದಕ್ಕೆ 18 ಕೋಟಿ ರೂಪಾಯಿ ಪಡೆಯುವ ಹಂತಕ್ಕೆ ಬೆಳೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಅವರು ಅಭಿನಯಿಸಿರುವ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮೊದಲ ಬಾರಿಗೆ 2 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದ ನಯನತಾರಾ; ‘ಟಾಕ್ಸಿಕ್’ ಚಿತ್ರಕ್ಕೆ ಪಡೆದಿದ್ದು ಎಷ್ಟು?
ನಯನತಾರಾ-ಯಶ್
ರಾಜೇಶ್ ದುಗ್ಗುಮನೆ
|

Updated on: Aug 26, 2026 | 11:52 AM

Share

ಮುಖ್ಯಾಂಶಗಳು

  • ಫ್ಯಾಷನ್ ಶೋಗೆ 2 ಸಾವಿರ ರೂ. ಸಂಭಾವನೆ ಪಡಿತಿದ್ದ ನಯನತಾರಾ
  • ನಟಿ ನೆನಪಿಸಿಕೊಂಡ ಆ ದಿನಗಳು
  • 3,000 ರೂ. ಯಿಂದ 18 ಕೋಟಿ ರೂ. ವರೆಗೆ

ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಇಂದು ಸಿನಿಮಾರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಆದರೆ, ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಿಗುತ್ತಿದ್ದ ಹಣಕ್ಕೂ ಮತ್ತು ಇಂದು ಅವರು ಪಡೆಯುವ ಮೊತ್ತಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇತ್ತೀಚೆಗೆ ಸಂದರ್ಶನದಲ್ಲಿ ನಯನತಾರಾ ತಮ್ಮ ಮೊದಲ ಕೆಲಸ ಮತ್ತು ಅದಕ್ಕೆ ಸಿಕ್ಕ ಸಂಭಾವನೆಯನ್ನು ನೆನಪಿಸಿಕೊಂಡಿದ್ದಾರೆ.

ಮೊದಲ ಗಳಿಕೆ ಕೇವಲ 2,000 – 3,000 ರೂಪಾಯಿ

ತಮ್ಮ ಮೊದಲ ಸಂಪಾದನೆಯ ಕುರಿತು ಮಾತನಾಡಿದ ನಯನತಾರಾ, ‘ನನ್ನ ಮೊದಲ ಕೆಲಸ ‘ವನಿತಾ’ ಮ್ಯಾಗಜಿನ್‌ನ ಕವರ್ ಶೂಟ್ ಹಾಗೂ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಅದಕ್ಕೆ ನನಗೆ ಸಿಕ್ಕಿದ್ದು ಕೇವಲ 2,000 ರಿಂದ 3,000 ರೂಪಾಯಿ ಸಂಭಾವನೆ’ ಎಂದು ಹಳೆಯ ದಿನಗಳನ್ನು ಹಂಚಿಕೊಂಡಿದ್ದಾರೆ.

ಆಕಸ್ಮಿಕವಾಗಿ ಬೆಳ್ಳಿಪರದೆಗೆ ಬಂದ ನಟಿ

ನಯನತಾರಾ ಎಂದಿಗೂ ಚಿತ್ರರಂಗಕ್ಕೆ ಬರಬೇಕೆಂದು ಯೋಜನೆ ರೂಪಿಸಿದವರಲ್ಲ. ‘ವನಿತಾ’ ಮ್ಯಾಗಜಿನ್‌ನಲ್ಲಿ ಅವರ ಫೋಟೋ ನೋಡಿದ ನಿರ್ದೇಶಕ ಸತ್ಯನ್ ಅಂತಿಕ್ಕಾಡ್, 2003ರಲ್ಲಿ ಮೂಡಿಬಂದ ‘ಮನಸ್ಸಿನಕ್ಕರೆ’ ಮಲಯಾಳಂ ಸಿನಿಮಾ ಮೂಲಕ ಅವರಿಗೆ ನಟನೆಯ ಅವಕಾಶ ನೀಡಿದರು.

ಸಂಭಾವನೆಯಲ್ಲಿ ಮಹಾ ಬದಲಾವಣೆ

ಮೊದಲ ಫೋಟೋ ಶೂಟ್‌ಗೆ ಕೇವಲ ಕೆಲವೇ ಸಾವಿರ ರೂಪಾಯಿ ಪಡೆದಿದ್ದ ನಯನತಾರಾ, ಇಂದು ದಕ್ಷಿಣ ಭಾರತದ ಅತ್ಯಂತ ದುಬಾರಿ ನಟಿ. ವರದಿಗಳ ಪ್ರಕಾರ, ‘ಟಾಕ್ಸಿಕ್’ ಸಿನಿಮಾಗೆ 12 ಕೋಟಿಯಿಂದ 18 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಕಥೆ ಕೇಳಿ ಮೊದಲು ‘ನೋ’ ಎಂದಿದ್ದ ನಯನತಾರಾ; ಬಳಿಕ ಒಪ್ಪಿದ್ದು ಯಾಕೆ?

ಇಂದಷ್ಟೇ ತೆರೆಕಂಡಿದೆ ‘ಟಾಕ್ಸಿಕ್’

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇಂದು (ಆಗಸ್ಟ್ 26) ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರೊಂದಿಗೆ ಆಗಸ್ಟ್ 28ಕ್ಕೆ ಅವರ ನಟನೆಯ ‘ಹಾಯ್’ ಎಂಬ ತಮಿಳು ರೊಮ್ಯಾಂಟಿಕ್ ಡ್ರಾಮಾ ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ ಸಚಿವ ನಾಗೇಂದ್ರ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ ಸಚಿವ ನಾಗೇಂದ್ರ
ಬಿಡದಿ ಟೌನ್​ಶಿಪ್, ಹೈಕೋರ್ಟ್​ನಿಂದ ಯಾವುದೇ ಸಾಮಾನ್ಯ ತಡೆ ಇಲ್ಲ: ಪ್ರಾಧಿಕಾರ
ಬಿಡದಿ ಟೌನ್​ಶಿಪ್, ಹೈಕೋರ್ಟ್​ನಿಂದ ಯಾವುದೇ ಸಾಮಾನ್ಯ ತಡೆ ಇಲ್ಲ: ಪ್ರಾಧಿಕಾರ
ಟಾಕ್ಸಿಕ್ ಸಿನಿಮಾ ಬಿಡುಗಡೆ; ರಾವಣ ವೇಷ ತೊಟ್ಟು ಥಿಯೇಟರ್​​ಗೆ ಬಂದ ಅಭಿಮಾನಿ
ಟಾಕ್ಸಿಕ್ ಸಿನಿಮಾ ಬಿಡುಗಡೆ; ರಾವಣ ವೇಷ ತೊಟ್ಟು ಥಿಯೇಟರ್​​ಗೆ ಬಂದ ಅಭಿಮಾನಿ
ಬೀದರ್‌ನಲ್ಲಿ 'ಟಾಕ್ಸಿಕ್' ಅಬ್ಬರ; ರಾರಾಜಿಸುತ್ತಿದೆ ರಾಕಿ ಭಾಯ್ ಕಟೌಟ್​ಗಳು
ಬೀದರ್‌ನಲ್ಲಿ 'ಟಾಕ್ಸಿಕ್' ಅಬ್ಬರ; ರಾರಾಜಿಸುತ್ತಿದೆ ರಾಕಿ ಭಾಯ್ ಕಟೌಟ್​ಗಳು
ಚಿಕ್ಕಬಳ್ಳಾಪುರ: ಟಾಕ್ಸಿಕ್ ಕ್ರೇಜ್, ಯಶ್ ಅಭಿಮಾನಿಗಳಿಂದ ಅದ್ಧೂರಿ ಸಂಭ್ರಮ
ಚಿಕ್ಕಬಳ್ಳಾಪುರ: ಟಾಕ್ಸಿಕ್ ಕ್ರೇಜ್, ಯಶ್ ಅಭಿಮಾನಿಗಳಿಂದ ಅದ್ಧೂರಿ ಸಂಭ್ರಮ
ಟಾಕ್ಸಿಕ್ ರಿಲೀಸ್​; ಬೆಂಗಳೂರು ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ
ಟಾಕ್ಸಿಕ್ ರಿಲೀಸ್​; ಬೆಂಗಳೂರು ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ
'ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದ್ದು ನಾನೇ' ಎಂದ ಮಾಜಿ ಸಿಎಂ!
'ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದ್ದು ನಾನೇ' ಎಂದ ಮಾಜಿ ಸಿಎಂ!
Toxic Release Live Streaming: ಟಾಕ್ಸಿಕ್’ಗೆ ಅದ್ದೂರಿ ಸ್ವಾಗತ
Toxic Release Live Streaming: ಟಾಕ್ಸಿಕ್’ಗೆ ಅದ್ದೂರಿ ಸ್ವಾಗತ
ಇಂದು ಋಗುಪಾಕರ್ಮ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಋಗುಪಾಕರ್ಮ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಸೂರ್ಯಕಾಂತಿ ಬೆಳೆ ನಷ್ಟದಿಂದ ರೈತರು ಕಂಗಾಲು
ಸೂರ್ಯಕಾಂತಿ ಬೆಳೆ ನಷ್ಟದಿಂದ ರೈತರು ಕಂಗಾಲು