ನನಗೆ ಮಗು ಹೆರುವ ಶಕ್ತಿ ಇಲ್ಲ; ಶಾಕಿಂಗ್ ವಿಚಾರ ರಿವೀಲ್ ಮಾಡಿದ ಸ್ಟಾರ್ ಗಾಯಕಿ

Selena Gomez: ಸೆಲೆನಾ ಗೊಮೆಜ್ ಖ್ಯಾತ ಪಾಪ್ ತಾರೆ. ಭಾರಿ ನೆಟ್​ವರ್ತ್ ಹೊಂದಿರುವ ನಟಿ ಮತ್ತು ಗಾಯಕಿ. ಆದರೆ ತನಗೆ ತಾಯಿ ಆಗುವ ಶಕ್ತಿ ಇಲ್ಲವೆಂಬ ವಿಷಯವನ್ನು ಸೆಲೆನಾ ಗೊಮೆಜ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ನನಗೆ ಮಗು ಹೆರುವ ಶಕ್ತಿ ಇಲ್ಲ; ಶಾಕಿಂಗ್ ವಿಚಾರ ರಿವೀಲ್ ಮಾಡಿದ ಸ್ಟಾರ್ ಗಾಯಕಿ
Follow us
| Updated By: ಮಂಜುನಾಥ ಸಿ.

Updated on: Sep 10, 2024 | 6:38 PM

ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ವಿಚಾರ ಆಗಾಗ ಚರ್ಚೆ ಆಗುತ್ತಾ ಇರುತ್ತದೆ. ಸೆಲೆಬ್ರಿಟಿಗಳ ಪ್ರೀತಿ-ಪ್ರೇಮ ವಿಚಾರ, ಅವರ ಕುಟುಂಬದ ವಿಚಾರದ ಕುರಿತು ಚರ್ಚೆ ನಡೆಯುತ್ತದೆ. ಈಗ ಇಂಗ್ಲಿಷ್ ಗಾಯಕಿ ಸೆಲೆನಾ ಗೊಮೆಜ್ ಅವರ ವಿಚಾರ ಮುನ್ನೆಲೆಗೆ ಬಂದಿದೆ. ಅವರಿಗೆ ಮಗುವನ್ನು ಹೆರುವ ತಾಕತ್ತು ಇಲ್ಲವಂತೆ. ಇದಕ್ಕೆ ಅವರಿಗೆ ಇರೋ ಆರೋಗ್ಯ ತೊಂದರೆಗಳೇ ಕಾರಣ ಎಂದು ಹೇಳಿಕೊಂಡಿದ್ದಾರೆ.

ಸೆಲೆನಾ ಗೊಮೆಜ್ ಅವರಿಗೆ ಈಗ 32 ವರ್ಷ. ಈ ಮೊದಲು ಅವರು ಪಾಪ್ ಗಾಯಕ ಜಸ್ಟಿನ್ ಬೀಬರ್ ಜೊತೆ ಸುತ್ತಾಟ ನಡೆಸಿದ್ದರು. ಆದರೆ, ಇವರದ್ದು ಬ್ರೇಕಪ್ನಲ್ಲಿ ಕೊನೆ ಆಯಿತು. ಆ ಬಳಿಕ ಅವರು ಅನೇಕರ ಜೊತೆ ಸುತ್ತಾಟ ನಡೆಸಿದರು. ಈಗ ಅವರು ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ಅವರು ಈವರೆಗೆ ಮದುವೆ ಆಗದೆ ಇರಲು ಇದೇ ಕಾರಣವೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:ಬಾಲಿವುಡ್, ಸೌಥ್ ಬಳಿಕ ಹಾಲಿವುಡ್​ಗೆ ಹಾರಲಿದ್ದಾರೆ ಜಾನ್ಹವಿ ಕಪೂರ್

‘ನಾನು ಇದನ್ನು ಯಾವಾಗಲೂ ಹೇಳಿಕೊಂಡಿಲ್ಲ. ನನ್ನ ಮಗುವನ್ನು ನಾನು ಹೆರಲು ಸಾಧ್ಯವಿಲ್ಲ. ನಾನು ಅನೇಕ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಇದರಿಂದ ನನ್ನ ಹಾಗೂ ನನ್ನ ಮಗುವಿಗೆ ಅಪಾಯ. ನಾನು ಇದಕ್ಕಾಗಿ ದುಃಖಿಸುತ್ತೇನೆ’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೊದಲು ಸೆಲೆನಾ ಅವರು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದರು. ಅವರು ಆಟೋಇಮ್ಯೂನ್ ಡಿಸೀಸ್ನಿಂದ ಬಳಲುತ್ತಿದ್ದಾರಂತೆ. ಅದು ಬಾಡಿಯ ಇಮ್ಯೂನ್ ಸಿಸ್ಟಮ್ ಮೇಲೆ ತಮ್ಮದೇ ಟಿಶ್ಯೂ ಮೇಲೆ ದಾಳಿ ಮಾಡುತ್ತದೆಯಂತೆ.

2017ರಲ್ಲಿ ಸೆಲೆನಾ ಗೊಮೆಜ್ ಅವರು ಕಿಡ್ನಿ ಟ್ರಾನ್ಸ್ಪ್ಲಾಂಟ್ ಮಾಡಿಸಿಕೊಂಡಿದ್ದರು. ಈ ಬಗ್ಗೆ ಅವರು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ‘ಮೈ ಮೈಂಡ್ ಆ್ಯಂಡ್ ಮೀ’ನಲ್ಲಿ ಈ ಬಗ್ಗೆ ಅವರು ಹೇಳಿಕೊಂಡಿದ್ದರು.

ಹಾಗಾದರೆ ಮಗು ಪಡೆಯಲು ಮುಂದಿನ ದಾರಿ ಏನು? ಬಾಡಿಗೆ ತಾಯ್ತನ ಅಥವಾ ದತ್ತು ಪಡೆಯುವ ಮೂಲಕ ಮಗು ಹೊಂದಬೇಕು’ ಎಂದು ಅವರು ಹೇಳಿದ್ದರು. ‘ಇದು ಎಲ್ಲರಿಗೂ ಆಗುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ನಾನು ಈಗ ಉತ್ತಮ ಸ್ಥಾನದಲ್ಲಿದ್ದೇನೆ. ಬಾಡಿಗೆ ತಾಯ್ತನ ಮತ್ತು ದತ್ತು ಸ್ವೀಕಾರದಂತಹ ಆಯ್ಕೆಗಳಿವೆ’ ಎಂದು ಅವರು ಹೇಳಿಕೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು