ಹದಗೆಟ್ಟಿದೆ ರಾಕೇಶ್ ರೋಷನ್ ಆರೋಗ್ಯ? ಮೂಡಿದೆ ಅನುಮಾನ
ಈಗ ರಾಕೇಶ್ ರೋಷನ್ಗೆ 75 ವರ್ಷ ವಯಸ್ಸು. ಅವರಲ್ಲಿ ಈಗ ಮೊದಲಿನಷ್ಟು ಚೈತನ್ಯ ಉಳಿದುಕೊಂಡಿಲ್ಲ. ಅವರು ಕೊನೆಯದಾಗಿ ನಿರ್ದೇಶನ ಮಾಡಿದ್ದು ‘ಕ್ರಿಷ್ 3’ ಚಿತ್ರವನ್ನು. ಈ ಸಿನಿಮಾ ರಿಲೀಸ್ ಆಗಿದ್ದು 2013ರಲ್ಲಿ. ಅಂದರೆ, 11 ವರ್ಷಗಳಿಂದ ಅವರು ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ.
ಖ್ಯಾತ ಬಾಲಿವುಡ್ ನಟ ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ಗೆ ಇಂದು (ಸೆಪ್ಟೆಂಬರ್ 5) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್ಗಳು ಬರುತ್ತಿವೆ. ಅವರು ಇತ್ತೀಚೆಗೆ ಸಿನಿಮಾ ಘೋಷಣೆ ಮಾಡಿಲ್ಲ. ಮಾಡಿದ ಸಿನಿಮಾಗಳ ಕೆಲಸಗಳು ನಡೆಯುತ್ತಿಲ್ಲ. ಇದರಿಂದ ಅವರಿಗೆ ಅನಾರೋಗ್ಯ ಉಂಟಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಮೊದಲು ರಾಕೇಶ್ ಅವರಿಗೆ ಕ್ಯಾನ್ಸರ್ ಆಗಿತ್ತು. ಅದನ್ನು ಅವರು ಗೆದ್ದು ಬಂದಿದ್ದರು. ತದನಂತರ ಅವರು ಸಿನಿಮಾ ಕೆಲಸಗಳನ್ನು ಮಾಡುತ್ತಿಲ್ಲ.
ರಾಕೇಶ್ ರೋಷನ್ಗೆ ಈಗ 75 ವರ್ಷ ವಯಸ್ಸು. ಅವರಲ್ಲಿ ಈಗ ಮೊದಲಿನಷ್ಟು ಚೈತನ್ಯ ಉಳಿದುಕೊಂಡಿಲ್ಲ. ಅವರು ಕೊನೆಯದಾಗಿ ನಿರ್ದೇಶನ ಮಾಡಿದ್ದು ‘ಕ್ರಿಷ್ 3’ ಚಿತ್ರವನ್ನು. ಈ ಸಿನಿಮಾ ರಿಲೀಸ್ ಆಗಿದ್ದು 2013ರಲ್ಲಿ. ಅಂದರೆ, 11 ವರ್ಷಗಳಿಂದ ಅವರು ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ. ‘ಕ್ರಿಷ್ 4’ ಚಿತ್ರವನ್ನು ರಾಕೇಶ್ ಘೋಷಣೆ ಮಾಡಿ ಬಹಳ ಸಮಯ ಕಳೆದಿದೆ. ಆದರೆ, ಈ ಚಿತ್ರದ ಕೆಲಸಗಳು ಆರಂಭ ಆಗಿಲ್ಲ.
ಹೃತಿಕ್ ಅವರು ಬೇರೆ ಸಿನಿಮಾಗಳ ಕೆಲಸಗಳ ಕಾರಣದಿಂದ ಬ್ಯುಸಿ ಇದ್ದ ಕಾರಣಕ್ಕೆ ‘ಕ್ರಿಶ್ 4’ ಸೆಟ್ಟೇರದೇ ಇದ್ದರೂ ಇರಬಹುದು ಎಂಬುದು ಕೆಲವರ ವಾದ. ಆದರೆ, ಏನೇ ಮಾಡಿದರೂ ಸಿನಿಮಾ ಘೋಷಣೆ ಆಗಿ ಸಿನಿಮಾ ಕೆಲಸ ಆರಂಭಿಸಲು ಇಷ್ಟೆಲ್ಲ ಸಮಯ ಬೇಡ. ಅದರಲ್ಲೂ ಮಗನ ಚಿತ್ರಕ್ಕೆ ಇಷ್ಟೆಲ್ಲ ವಿಳಂಬ ಏಕೆ ಎನ್ನುವ ಪ್ರಶ್ನೆಯೂ ಇದೆ.
ಇದನ್ನೂ ಓದಿ: ಬಿಗ್ ಬಾಸ್ ನಿರೂಪಣೆಗೆ ಹೊಸ ಹೋಸ್ಟ್ ಬಂದಾಯ್ತು; ಪ್ರೋಮೋ ರಿಲೀಸ್
ರಾಕೇಶ್ ಅವರು ಅನಾರೋಗ್ಯ ಕಾರಣದಿಂದ ‘ಕ್ರಿಶ್ 4’ ಚಿತ್ರ ಕೈ ಬಿಟ್ಟಿದ್ದು, ಅದು ಈಗ ಸಿದ್ದಾರ್ಥ್ ಆನಂದ್ ಅವರ ಪಾಲಾಗಿದೆ ಎನ್ನುವ ಮಾತೂ ಇದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. 2022ರಕ್ಕು ರಾಕೇಶ್ ಅವರಿಗೆ ಗಂಟಲ ಕ್ಯಾನ್ಸರ್ ಆಗಿತ್ತು. ಈ ವಿಚಾರವನ್ನು ಹೃತಿಕ್ ರೋಷನ್ ಅವರು ಈ ಮೊದಲು ಶೇರ್ ಮಾಡಿಕೊಂಡಿದ್ದರು. ನಂತರ ರಾಕೇಶ್ ಅವರು ಕ್ಯಾನ್ಸರ್ನಿಂದ ಚೇತರಿಸಿಕೊಂಡರು. ಹೃತಿಕ್ ರೋಷನ್ ಅವರು ಸದ್ಯ ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಕೂಡ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.