‘ದೇವರ’: ಇದು ಭಯ-ಧೈರ್ಯದ ನಡುವಿನ ಯುದ್ಧ

Devera Trailer: ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಟ್ರೈಲರ್ ಬಿಡುಗಡೆ ಆಗಿದೆ. ಜೂ ಎನ್​ಟಿಆರ್ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಡಲ್ಗಳ್ಳರ ಕತೆಯುಳ್ಳ ಈ ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ.

‘ದೇವರ’: ಇದು ಭಯ-ಧೈರ್ಯದ ನಡುವಿನ ಯುದ್ಧ
Follow us
ಮಂಜುನಾಥ ಸಿ.
|

Updated on: Sep 11, 2024 | 11:49 AM

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾದ ಮೊದಲ ಭಾಗ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಮೊದಲ ಭಾಗದ ಟ್ರೈಲರ್ ಇಂದು (ಸೆಪ್ಟೆಂಬರ್ 11) ಬಿಡುಗಡೆ ಆಗಿದ್ದು, ಜೂ ಎನ್​ಟಿಆರ್ ‘ಕಿಲ್ಲಿಂಗ್ ಮಷಿನ್’ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ದೇವರ’ ಸಿನಿಮಾ ಭಯ ಹಾಗೂ ಧೈರ್ಯದ ನಡುವೆ ಕಡಲ ತೀರದಲ್ಲಿ ನಡೆಯುವ ಭೀಕರ ಯುದ್ಧದ ಕತೆಯನ್ನು ಒಳಗೊಂಡಿದೆ ಎಂಬುದು ಟ್ರೈಲರ್​ನಿಂದ ತಿಳಿದು ಬರುತ್ತಿದೆ.

ಇಂದು ಬಿಡುಗಡೆ ಆಗಿರುವ ಟ್ರೈಲರ್, ಸಿನಿಮಾದ ಸಣ್ಣ ಎಳೆಯನ್ನು ಬಿಟ್ಟುಕೊಡುತ್ತಿದೆ. ಭಯ ಎಂದರೇನು ಎಂದೇ ತಿಳಿಯದ ಕೇವಲ ಧೈರ್ಯ ಮಾತ್ರವೇ ಇರುವ ಕಡಲ್ಗಳರ ಸಮೂಹ, ಆ ಸಮೂಹಕ್ಕೆ ಭಯದ ಅರ್ಥ ತಿಳಿಸಿಕೊಡಲು ಬರುವ ‘ದೇವರ’. ಇಬ್ಬರ ನಡುವೆ ನಡೆಯುವ ರಕ್ತಸಿಕ್ತ ಯುದ್ಧದ ಕತೆ ದೇವರ. ಆದರೆ ಸಿನಿಮಾದ ಕತೆ ಇಷ್ಟು ಸರಳವಲ್ಲ, ಏಕೆಂದರೆ ‘ದೇವರ’ ಜೊತೆಗಿರುವವರು ಅವನನ್ನೇ ಕೊಲ್ಲಲು ಸರಿಯಾದ ಸಮಯ ಮಾತ್ರವಲ್ಲ ಸರಿಯಾದ ಆಯುಧಕ್ಕಾಗಿ ಕಾಯುತ್ತಿದ್ದಾರೆ.

ಟ್ರೈಲರ್​ನಲ್ಲಿ ಎರಡು ಶೇಡ್​ಗಳಲ್ಲಿ ಜೂ ಎನ್​ಟಿಆರ್ ಕಾಣಿಸಿಕೊಂಡಿದ್ದಾರೆ. ಧೈರ್ಯವಂತರಿಗೇ ಭಯ ಮೂಡಿಸುವ ‘ದೇವರ’ ರೂಪದಲ್ಲಿ ಹಾಗೂ ಭಯದ ಹೊರತಾಗಿ ಇನ್ನೇನೂ ಅರಿಯದ ದೇವರನ ಮಗನಾಗಿಯೂ ಜೂ ಎನ್​ಟಿಆರ್ ನಟಿಸಿದ್ದಾರೆ. ಈ ‘ದೇವರ’ ಯಾರು? ಅವನೇಕೆ ಕಡಲ್ಗಳ್ಳರ ವಿರುದ್ಧ ನಿಂತಿದ್ದಾನೆ. ಅವರೊಂದಿಗೆ ಏಕೆ ಕೈ ಜೋಡಿಸಿದ್ದಾನೆ. ಅವನೊಟ್ಟಿಗೆ ಇರುವವರು ಏಕೆ ಅವನ್ನು ಕೊಲ್ಲಲು ಹೊಂಚು ಹಾಕಿದ್ದಾರೆ. ಕೊಲ್ಲಲು ಯಶಸ್ವಿಯಾದರಾ? ‘ದೇವರ’ ಮಗನೇಕೆ ಅಷ್ಟು ಭಯಸ್ತ? ಅವನ ಭವಿಷ್ಯ ಏನು? ಹೀಗೆ ಹಲವು ಪ್ರಶ್ನೆಗಳನ್ನು ಸಹ ‘ದೇವರ’ ಟ್ರೈಲರ್ ಮೂಡಿಸುತ್ತಿದೆ.

ಇದನ್ನೂ ಓದಿ:ಅಮೆರಿದಲ್ಲಿ ದೂಳೆಬ್ಬಿಸುತ್ತಿದೆ ಜೂ ಎನ್​ಟಿಆರ್ ‘ದೇವರ’

ಸಿನಿಮಾದ ಟ್ರೈಲರ್​ನಲ್ಲಿ ಗಮನ ಸೆಳೆಯುತ್ತಿರುವ ಪ್ರಮುಖ ವಿಷಯವೆಂದರೆ ಆಕ್ಷನ್. ಟ್ರೈಲರ್ ಆರಂಭದಿಂದ ಅಂತ್ಯದವರೆಗೂ ಹಲವು ಆಕ್ಷನ್ ದೃಶ್ಯದ ತುಣುಕುಗಳಿವೆ. ಜೂ ಎನ್​ಟಿಆರ್ ಅಭಿಮಾನಿಗಳಂತೂ ಹುಚ್ಚೆದ್ದು ಕುಣಿಯುವಂತ ಆಕ್ಷನ್ ದೃಶ್ಯಗಳನ್ನು ಕಂಪೋಸ್ ಮಾಡಿರುವುದು ಟ್ರೈಲರ್​ನಿಂದ ಗೊತ್ತಾಗುತ್ತಿದೆ. ತಿಮಿಂಗಲದ ಬೆನ್ನೇರಿ ಬರುವ ಜೂ ಎನ್​ಟಿಆರ್ ದೃಶ್ಯಕ್ಕಂತೂ ಚಿತ್ರಮಂದಿರದಲ್ಲಿ ಶಿಳ್ಳೆ-ಚಪ್ಪಾಳೆಗಳ ಮಳೆ ಬೀಳುವುದಂತೂ ಪಕ್ಕಾ. ಟ್ರೈಲರ್​ನಲ್ಲಿ ಜೂ ಎನ್​ಟಿಆರ್ ಜೊತೆಗೆ ಸೈಫ್ ಅಲಿ ಖಾನ್ ಸಹ ಗಮನ ಸೆಳೆಯುತ್ತಾರೆ. ‘ದೇವರ’ಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಸೈಫ್ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಕಾಶ್ ರೈ, ರಾವ್ ರಮೇಶ್, ನಾಯಕಿ ಜಾನ್ಹವಿಯ ಕೆಲ ದೃಶ್ಯಗಳ ತುಣುಕಗಳು ಸಹ ಟ್ರೈಲರ್​ನಲ್ಲಿವೆ.

‘ದೇವರ’ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಜೂ ಎನ್​ಟಿಆರ್ ಸಹೋದರ ಕಲ್ಯಾಣ್ ರಾಮ್. ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 27ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ