AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ನಿರ್ದೇಶಕನ ದೊಡ್ಡ ಕನಸಿಗೆ ಬೆಂಬಲವಾಗಿ ನಿಂತ ಕರಣ್ ಜೋಹರ್

ಸಚಿನ್ ಬಿ ರವಿ, ಶಿವರಾಜ್ ಕುಮಾರ್ ಜೊತೆಗೆ ಸಿನಿಮಾ ಮಾಡುವುದಾಗಿ ಘೋಷಿಸಿದರಾದರೂ ಆ ಸಿನಿಮಾ ಸೆಟ್ಟೇರಲಿಲ್ಲ. ಬಳಿಕ 2023ರಲ್ಲಿ ಸಚಿನ್ ಅವರು ಬಾಲಿವುಡ್​ಗೆ ಹಾರಿದ್ದು, ಅಲ್ಲಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು. ಆದರೆ ಇದೀಗ ಸಚಿನ್ ಅವರು ತಮ್ಮ ಮೊದಲ ಹಿಂದಿ ಸಿನಿಮಾ ಬಹುತೇಕ ಮುಗಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಎರಡನೇ ಬಾಲಿವುಡ್ ಸಿನಿಮಾದ ಕೆಲಸವನ್ನು ಈಗಾಗಲೇ ಪ್ರಾರಂಭ ಸಹ ಮಾಡಿದ್ದಾರೆ.

ಕನ್ನಡದ ನಿರ್ದೇಶಕನ ದೊಡ್ಡ ಕನಸಿಗೆ ಬೆಂಬಲವಾಗಿ ನಿಂತ ಕರಣ್ ಜೋಹರ್
Sachin Ravi Karan Johar
ಮಂಜುನಾಥ ಸಿ.
|

Updated on: Sep 11, 2026 | 1:50 PM

Share

ಮುಖ್ಯಾಂಶಗಳು

  • ಕನ್ನಡದ ನಿರ್ದೇಶಕನ ಹಿಂದಿ ಸಿನಿಮಾ
  • ‘ಅವನೇ ಶ್ರೀಮನ್ನಾರಾಯಣ‘ ನಿರ್ದೇಶಕ ಸಚಿನ್ ರವಿ
  • ಸಚಿನ್ ಎರಡನೇ ಹಿಂದಿ ಸಿನಿಮಾಕ್ಕೆ ಕರಣ್ ಜೋಹರ್ ಬಂಡವಾಳ

ಕನ್ನಡದ ಸಿನಿಮಾ ಕರ್ಮಿಗಳಿಗೆ ಪರಭಾಷೆಗಳಲ್ಲಿ ಅವಕಾಶ ಸಿಗುವುದು ತುಸು ಕಡಿಮೆ. ಸಿಕ್ಕವರು ಸಹ ಮಿಂಚುವುದು ಕಡಿಮೆಯೇ. ಈ ಹಿಂದೆ ಕನ್ನಡದ ಕೆಲ ನಿರ್ದೇಶಕರು ಪರಭಾಷೆಗಳಲ್ಲಿ ಅದೃಷ್ಟ ಪರೀಕ್ಷೆಗೆ ಹೋದವರಿಗೆ ಯಶಸ್ಸು ಸಿಕ್ಕಿರುವುದು ಬಹಳ ಕಡಿಮೆ. ಕೆಲ ತಿಂಗಳುಗಳ ಹಿಂದೆ ಕನ್ನಡದ ನಿರ್ದೇಶಕ ಎ ಹರ್ಷ ಅವರು ಬಾಲಿವುಡ್​​ಗೆ ಹೋಗಿ ಟೈಗರ್ ಶ್ರಾಫ್ ಜೊತೆಗೆ ‘ಭಾಗಿ 4’ ಸಿನಿಮಾ ಮಾಡಿದರು. ಸಿನಿಮಾ ದೊಡ್ಡ ಯಶಸ್ಸು ಗಳಿಸಲಿಲ್ಲ. ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ನಿರ್ದೇಶಕ ಸಚಿನ್ ರವಿ ಅವರು ಬಾಲಿವುಡ್​​ ಬಾಗಿಲು ತಟ್ಟಿದ್ದಾಗಿ ಮೂರು ವರ್ಷಗಳ ಹಿಂದೆಯೇ ಸುದ್ದಿ ಹರಡಿತ್ತು. ಅವರೀಗ ತಮ್ಮ ಮೊದಲ ಹಿಂದಿ ಸಿನಿಮಾ ಮುಗಿಸಿದ್ದು, ಎರಡನೇ ಸಿನಿಮಾ ಅನ್ನು ಕರಣ್ ಜೋಹರ್ ಜೊತೆಗೆ ಮಾಡಲಿದ್ದಾರೆ.

‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಮೂಲಕ ಗಮನ ಸೆಳೆದಿದ್ದ ಸಚಿನ್ ಬಿ ರವಿ ಅದಾದ ಬಳಿಕ ಕನ್ನಡದಲ್ಲಿ ಯಾವ ಸಿನಿಮಾ ಅನ್ನೂ ಮಾಡಲಿಲ್ಲ. ಶಿವರಾಜ್ ಕುಮಾರ್ ಜೊತೆಗೆ ಸಿನಿಮಾ ಮಾಡುವುದಾಗಿ ಘೋಷಿಸಿದರಾದರೂ ಆ ಸಿನಿಮಾ ಸೆಟ್ಟೇರಲಿಲ್ಲ. ಬಳಿಕ 2023ರಲ್ಲಿ ಸಚಿನ್ ಅವರು ಬಾಲಿವುಡ್​ಗೆ ಹಾರಿದ್ದು, ಅಲ್ಲಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು. ಆದರೆ ಇದೀಗ ಸಚಿನ್ ಅವರು ತಮ್ಮ ಮೊದಲ ಹಿಂದಿ ಸಿನಿಮಾ ಬಹುತೇಕ ಮುಗಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಎರಡನೇ ಬಾಲಿವುಡ್ ಸಿನಿಮಾದ ಕೆಲಸವನ್ನು ಈಗಾಗಲೇ ಪ್ರಾರಂಭ ಸಹ ಮಾಡಿದ್ದಾರೆ.

ಟೈಗರ್ ಶ್ರಾಫ್ ಜೊತೆಗೆ ರೊಮ್ಯಾಂಟಿಕ್ ಆಕ್ಷನ್ ಕತೆಯೊಂದನ್ನು ನಿರ್ದೇಶನ ಮಾಡಿರುವ ಸಚಿನ್ ಬಿ ರವಿ ಆ ಸಿನಿಮಾ ಮುಗಿಸಿದ್ದಾರೆ. ಸಚಿನ್ ನಿರ್ದೇಶನ ಮಾಡಲಿರುವ ಎರಡನೇ ಸಿನಿಮಾಕ್ಕೆ ಕರಣ್ ಜೋಹರ್ ಬಂಡವಾಳ ಹೂಡಲಿದ್ದು, ಅದೊಂದು ಪೌರಾಣಿಕ ಹಿನ್ನೆಲೆಯುಳ್ಳ ಕತೆಯಾಗಿದೆ. ಕೃಷ್ಣ ಹಾಗೂ ರಾಧೆಯ ಕುರಿತಾದ ಕತೆಯನ್ನು ಸಚಿನ್ ಬಿ ರವಿ ಹೆಣೆದಿದ್ದು, ಭಾರಿ ಬಜೆಟ್ ಬೇಡುವ ಕತೆ ಇದಾಗಿದೆ. ಕತೆ, ನಿರ್ಮಾಪಕ ಕರಣ್ ಜೋಹರ್ ಅವರಿಗೆ ಬಹಳ ಇಷ್ಟವಾಗಿದ್ದು, ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:ದಿನಕ್ಕೆ 20 ರೂಪಾಯಿ ಕೂಲಿ, ಈಗ ಪ್ರತಿ ಸಿನಿಮಾಕ್ಕೆ 25 ಕೋಟಿ ಸಂಭಾವನೆ, ಯಾರಿದು ಸೂರಿ?

ಸಚಿನ್ ಬಿ ರವಿ ಹೇಳಿರುವಂತೆ, ‘ಕೃಷ್ಣನ ಜನ್ಮದಿಂದ ಹಿಡಿದು ಆತ ಕಂಸನನ್ನು ಕೊಲ್ಲುವವರೆಗಿನ ಕತೆಯನ್ನು ಚಿತ್ರಕತೆ ಮಾಡಿಕೊಂಡಿದ್ದು, ಭಿನ್ನ ರೂಪದಲ್ಲಿ, ಸ್ವರೂಪದಲ್ಲಿ ಸಿನಿಮಾ ಕಟ್ಟುವ ಯೋಜನೆ ಇದೆ’ ಎಂದಿದ್ದಾರೆ. ಸಿನಿಮಾದ ಬಗ್ಗೆ ಈಗಲೇ ಹೆಚ್ಚಿನದ್ದು ಏನೂ ಹೇಳಲು ಸಾಧ್ಯವಿಲ್ಲ ಎಂದಿರುವ ಸಚಿನ್, ಇದೊಂದು ಬೃಹತ್ ಸಿನಿಮಾ ಆಗಲಿದೆ ಎಂದು ಮಾತ್ರ ಹೇಳಿದ್ದಾರೆ.

ಸಚಿನ್ ಅವರು ಕನ್ನಡದ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’, ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’ ಇನ್ನೂ ಕೆಲವು ಸಿನಿಮಾಗಳನ್ನು ಸಂಕಲನ ಮಾಡಿದ್ದರು. ಬಳಿಕ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ದೇಶನ ಮಾಡಿದರು. ಬಳಿಕ ಸುಮಾರು ಏಳು ವರ್ಷಗಳ ಗ್ಯಾಪ್ ಬಳಿಕ ಈಗ ಟೈಗರ್ ಶ್ರಾಫ್​​ ಜೊತೆಗೆ ಸಿನಿಮಾ ಮಾಡಿದ್ದಾರೆ. ಕರಣ್ ಜೊತೆಗೆ ಹೊಸ ಸಿನಿಮಾ ಪ್ರಾರಂಭಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ