ಕಾರ್ತಿ ಹೀರೋನಾ, ಡರ್ಟಿ ವಿಲನ್ನಾ, ಕಾಮಿಡಿಯನ್ನಾ? ಇದು ಮೇಡ್ ಇನ್ ಇಂಡಿಯಾ ‘ಜಪಾನ್’
ಕಾರ್ತಿ ಅವರ ‘ಕೈದಿ’ ಮೊದಲಾದ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈಗ ಅವರು ‘ಜಪಾನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಕಾರ್ತಿ ಮಾಡಿರುವ ಜಪಾನ್ ಪಾತ್ರ ಸಾಕಷ್ಟು ಗಮನ ಸೆಳೆದಿದೆ.
ತಮಿಳು ನಟ ಕಾರ್ತಿಗೆ (Karthi) ಇಂದು (ಮೇ 25) ಜನ್ಮದಿನದ ಸಂಭ್ರಮ. ಕಾಲಿವುಡ್ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಅವರು ಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಈಗ ಅವರು ‘ಜಪಾನ್’ (Japan Movie) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಬರ್ತ್ಡೇ ಪ್ರಯುಕ್ತ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಕಾರ್ತಿ ಮಾಡಿರೋ ಪಾತ್ರ ಎಲ್ಲರ ಗಮನ ಸೆಳೆದಿದೆ. ಈ ಜಪಾನ್ ಹೀರೋನಾ, ವಿಲನ್ನಾ ಅಥವಾ ಕಾಮಿಡಿಯನ್ನಾ ಎನ್ನುವ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದೆ. ಕನ್ನಡ ವರ್ಷನ್ ಟೀಸರ್ನ ರಿಷಬ್ ಶೆಟ್ಟಿ ರಿಲೀಸ್ ಮಾಡಿ ಶುಭಕೋರಿದ್ದಾರೆ.
2007ರಿಂದ ಕಾರ್ತಿ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ರೀತಿಯ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಅವರ ನಟನೆಯ ‘ಕೈದಿ’ ಮೊದಲಾದ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈಗ ಅವರು ‘ಜಪಾನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಕಾರ್ತಿ ಮಾಡಿರುವ ಜಪಾನ್ ಪಾತ್ರ ಸಾಕಷ್ಟು ಗಮನ ಸೆಳೆದಿದೆ.
ಜಪಾನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ತಮಿಳು, ಕನ್ನಡ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ರಿಷಬ್ ಶೆಟ್ಟಿ ಅವರು ಟೀಸರ್ ಬಿಡುಗಡೆ ಮಾಡಿದ್ದಾರೆ. ‘ಜಪಾನ್.. ಪ್ರೀತಿಯ ಸ್ನೇಹಿತ ಕಾರ್ತಿ 25ನೆ ಚಿತ್ರದ ಟೀಸರ್. ಒಂದು ಅದ್ಭುತ ಜಗತ್ತಿನ ಸಣ್ಣ ತುಣುಕು. ಹುಟ್ಟು ಹಬ್ಬದ ಶುಭಾಶಯಗಳು ಕಾರ್ತಿ’ ಎಂದು ರಿಷಬ್ ಬರೆದುಕೊಂಡಿದ್ದಾರೆ.
ಕಾರ್ತಿ ಎಂಟ್ರಿ ಸಖತ್ ಆಗಿದೆ. ಡಬಲ್ ಶೇಡ್ನಲ್ಲಿ ಅವರು ನಟಿಸಿದ್ದಾರೆ ಎನ್ನಲಾಗಿದೆ. ಸ್ಟೈಲಿಶ್ ಆಗಿ ಗ್ಲಾಸ್ ಹಾಕಿ, ಗುಂಗರು ಕೂದಲೊಂದಿಗೆ ಅವರು ಎಂಟ್ರಿ ಕೊಟ್ಟಿದ್ದಾರೆ. ‘ಜೋಕರ್’ ಸಿನಿಮಾ ಮೂಲಕ ನ್ಯಾಷನಲ್ ಅವಾರ್ಡ್ಗೆ ಮುತ್ತಿಟ್ಟಿದ್ದ ನಿರ್ದೇಶಕ ರಾಜು ಮುರುಗನ್, ನಿರ್ಮಾಪಕರಾದ ಎಸ್.ಆರ್. ಪ್ರಕಾಶ್ ಬಾಬು ಹಾಗೂ ಎಸ್.ಆರ್. ಪ್ರಭು ‘ಜಪಾನ್’ ಸಿನಿಮಾ ಮೂಲಕ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಮೂಲಕ ಈ ಚಿತ್ರ ನಿರ್ಮಿಸಲಾಗುತ್ತಿದೆ.
” ಜಪಾನ್” ಪ್ರೀತಿಯ ಸ್ನೇಹಿತ ಕಾರ್ತಿ ೨೫ನೆ ಚಿತ್ರದ ಟೀಸರ್. ಒಂದು ಅದ್ಭುತ ಜಗತ್ತಿನ ಸಣ್ಣ ತುಣುಕು . ಹುಟ್ಟು ಹಬ್ಬದ ಶುಭಾಶಯಗಳು ಕಾರ್ತಿ #HBDKarthi #JapanTheMovie #Karthi25 @Karthi_Offl
“Japan” Dear friend Karthi’s 25th film teaser is here. A small glimpse of a beautiful world. Happy birthday Karthi… pic.twitter.com/gqFEsRYw3u
— Rishab Shetty (@shetty_rishab) May 25, 2023
ಇದನ್ನೂ ಓದಿ: ‘ಕೈದಿ 2’ ಚಿತ್ರದ ಬಗ್ಗೆ ಸಿಕ್ತು ಹೊಸ ಅಪ್ಡೇಟ್; ನಟ ಕಾರ್ತಿ ನೀಡಿದ್ರು ವಿಶೇಷ ಮಾಹಿತಿ
ಟಾಲಿವುಡ್‌ನ ಹಾಸ್ಯನಟನಾಗಿ ಸುನಿಲ್ ಈ ಚಿತ್ರದ ಮೂಲಕ ತಮಿಳುಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಫಿಲೋಮಿನ್ ರಾಜ್ ಸಂಕಲನ, ರವಿವರ್ಮನ್ ಛಾಯಾಗ್ರಹಣ ಇದೆ. ಶೂಟಿಂಗ್ ಹಂತದಲ್ಲಿರುವ ‘ಜಪಾನ್’ ಸಿನಿಮಾವನ್ನು ದೀಪಾವಳಿಗೆ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:15 pm, Thu, 25 May 23