‘ಮಗ’ಧೀರನ ಸ್ಟಾರ್ ಗಿರಿ ಕಾಪಾಡೋಕೆ ಪಣತೊಟ್ಟ ಮೆಗಾಸ್ಟಾರ್
ರಾಮ್ ಚರಣ್ ತೇಜ ಟಾಲಿವುಡ್ನ ಭರವಸೆಯ ಸ್ಟಾರ್ ನಟರಲ್ಲಿ ಒಬ್ರು. ಆದ್ರೆ ಅದ್ಯಾಕೋ ಕೆಲವೊಮ್ಮೆ ಈ ಸ್ಟಾರ್ ಗಿರಿ ವರ್ಕೌಟ್ ಆಗೋದಿಲ್ಲ. ಹಾಗಾಗಿ ಏನೇ ಆದ್ರು ಸರಿ ತಮ್ಮ ಮಗ ಗೆಲ್ಲಲೇ ಬೇಕು ಅಂತ ಮೆಗಾ ಸ್ಟಾರೇ ಕಣಕ್ಕಿಳಿದಿದ್ದಾರೆ. ಸಿನಿಮಾ ಆಯ್ಕೆಯಲ್ಲಿ ಎಡವುತ್ತಿದ್ದಾರಂತೆ ರಾಮ್ ಚರಣ್: ರಾಮ್ ಚರಣ್ ತೇಜ ದಶಕದಿಂದ ಸಾಲು ಸಾಲು ಹಿಟ್ ಸಿನಿಮಾಗಳನ್ನ ಕೊಟ್ಟ ಮಗಧೀರ. ಇಂಥ ಸ್ಟಾರ್ ನಟ ಯಾವುದೆ ಸಿನಿಮಾ ಮಾಡ್ತಾರೆ ಅಂದ್ರು ಅಲ್ಲಿ ನಿರೀಕ್ಷೆ ಕೋಂಚ ಹೆಚ್ಚಾಗಿಯೇ ಇರುತ್ತೆ. […]
ರಾಮ್ ಚರಣ್ ತೇಜ ಟಾಲಿವುಡ್ನ ಭರವಸೆಯ ಸ್ಟಾರ್ ನಟರಲ್ಲಿ ಒಬ್ರು. ಆದ್ರೆ ಅದ್ಯಾಕೋ ಕೆಲವೊಮ್ಮೆ ಈ ಸ್ಟಾರ್ ಗಿರಿ ವರ್ಕೌಟ್ ಆಗೋದಿಲ್ಲ. ಹಾಗಾಗಿ ಏನೇ ಆದ್ರು ಸರಿ ತಮ್ಮ ಮಗ ಗೆಲ್ಲಲೇ ಬೇಕು ಅಂತ ಮೆಗಾ ಸ್ಟಾರೇ ಕಣಕ್ಕಿಳಿದಿದ್ದಾರೆ.
ಸಿನಿಮಾ ಆಯ್ಕೆಯಲ್ಲಿ ಎಡವುತ್ತಿದ್ದಾರಂತೆ ರಾಮ್ ಚರಣ್: ರಾಮ್ ಚರಣ್ ತೇಜ ದಶಕದಿಂದ ಸಾಲು ಸಾಲು ಹಿಟ್ ಸಿನಿಮಾಗಳನ್ನ ಕೊಟ್ಟ ಮಗಧೀರ. ಇಂಥ ಸ್ಟಾರ್ ನಟ ಯಾವುದೆ ಸಿನಿಮಾ ಮಾಡ್ತಾರೆ ಅಂದ್ರು ಅಲ್ಲಿ ನಿರೀಕ್ಷೆ ಕೋಂಚ ಹೆಚ್ಚಾಗಿಯೇ ಇರುತ್ತೆ. ಆದ್ರೆ ಇತ್ತೀಚೆಗೆ ರಾಮ್ ಚರಣ್ ಸಿನಿಮಾಗಳ ಆಯ್ಕೆಯಲ್ಲಿ ಎಡವುತ್ತಿದ್ದಾರಂತೆ.
ರಾಮ್ ಚರಣ್ ಅಭಿನಯದ ಬ್ರೂಸ್ಲಿ, ಧ್ರುವ ಅಂದುಕೊಂಡ ಮಟ್ಟಿಗೆ ಯಶಸ್ಸು ಕಂಡಿಲ್ಲ. ನಂತ್ರ ಬಂದ ರಂಗಸ್ಥಳಂ ಸಿನಿಮಾ ಸೂಪರ್ ಹಿಟ್ ಆಯ್ತು. ರಂಗಸ್ಥಳಂನಿಂದ ಸಿಕ್ಕಾಪಟ್ಟೇ ಕ್ರೇಜ್ ಹುಟ್ಟಿಕೊಂಡಿದ್ದು, ವಿನಯ ವಿಧೇಯ ರಾಮ ಸಿನಿಮಾದ ಮೇಲೆ. ಆದು ಹೇಳ ಹೆಸರಿಲ್ಲದೇ ಹೋಯ್ತು. ಹಾಗಾಗಿ ಅಖಾಡಕ್ಕೆ ಮೆಗಾ ಸ್ಟಾರ್ ಇಳಿದು ಬಿಟ್ಟಿದ್ದಾರೆ.
ಅಪ್ಪನ ಸಲಹೆಯಂತೆ ನಡೆದುಕೊಳ್ಳಲಿರುವ ಚರಣ್: ಮೆಗಾ ಸ್ಟಾರ್ ಚಿರಂಜೀವಿ ಮಗನ ಸ್ಟಾರ್ ಗಿರಿಯನ್ನ ಕಾಪಾಡೋಕೆ ಪಣತೊಟ್ಟಿದ್ದಾರೆ. ರಾಮ್ ಚರಣ್ ಯಾರ್ಯಾರ ನಿರ್ದೇಶನದಲ್ಲಿ ಕೆಲಸ ಮಾಡ್ಬೇಕು, ಯಾರ ಜೊತೆಗೆ ಸಿನಿಮಾ ಮಾಡಿದ್ರೆ ಸಕ್ಸಸ್ ಕಾಣ್ತಾರೆ ಅನ್ನೋ ಲೆಕ್ಕಾಚಾರ ಹಾಕ್ತಿದ್ದಾರಂತೆ. ಸದ್ಯ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದಲ್ಲಿ ರಾಮ್ಚರಣ್ ಬ್ಯುಸಿಯಾಗಿದ್ದು, ಈ ಚಿತ್ರದ ನಂತ್ರ ಅಪ್ಪನ ಸಲಹೆಯಂತೆಯೇ ನಡೆದುಕೊಳ್ಳಲಿದ್ದಾರಂತೆ.
ಮಗನಿಗಾಗಿ ಮೆಗಾಸ್ಟಾರ್, ಸ್ಟಾರ್ ನಿರ್ದೇಶಕರ ಮೇಲೆ ಕಣ್ಣು ಇಟ್ಟಿದ್ದಾರೆ. ರಾಜಮೌಳಿ ಸಿನಿಮಾದ ನಂತ್ರ ಟಾಲಿವುಡ್ನ ಹೆಸರಾಂತ ನಿರ್ದೇಶಕ ಅನಿಲ್ ರವಿಪುಡಿ ಜೊತೆಗೆ ರಾಮ್ಚರಣ್ ಕೈ ಜೋಡಿಸಬೇಕಂತೆ. ನಂತ್ರ ಅರ್ಜುನ್ರೆಡ್ಡಿ ಡೈರೆಕ್ಟರ್ ಸಂದೀಪ್ ವಂಗಾ ಜೊತೆಗೆ ರಾಮ್ ಚರಣ್ ಸಿನಿಮಾ ಮಾಡಬೇಕಂತೆ.
ಈ ಇಬ್ಬರು ನಿರ್ದೇಶಕರ ಸಿನಿಮಾದಲ್ಲಿ ಅಭಿನಯಿಸುವಂತೆ ಚಿರು ತಮ್ಮ ಪುತ್ರನಿಗೆ ಸಲಹೆ ನೀಡಿದ್ದಾರಂತೆ. ಚಿರು ಹೀಗೊಂದು ಹೆಜ್ಜೆ ಇಡೋಕೆ ಕಾರಣ ರಾಮ್ ಚರಣ್ ಗೊಂದಲ್ಲಿ ಕಥೆಗಳನ್ನ ಆಯ್ಕೆ ಮಾಡ್ತಾರೆ ಹಾಗು ಜೊತೆಗೆ ಬರೋ ನಿರ್ದೇಶಕರನೆಲ್ಲಾ ವಾಪಸ್ ಕಳಿಸ್ತಾರೆ ಅಂತಿದೆ ಟಾಲಿವುಡ್. ಅದೇನೆ ಇದ್ರು ರಾಮ್ ಚರಣ್ ಅಪ್ಪನ ಮಾತಿನಂತೆಯೇ, ಅವ್ರ ಸಲಹೆಯಂತೆಯೇ ನಡೆದುಕೊಳ್ತಾರಾ? ಅಥವಾ ತಮ್ಮದೇ ಕಥೆಯನ್ನ, ನಿರ್ದೇಶಕರನ್ನ ಆಯ್ಕೆ ಮಾಡಿಕೊಳ್ತಾರಾ? ನೋಡ್ಬೇಕು.
Published On - 3:04 pm, Sat, 7 December 19