ಉತ್ತರದಿಂದ ಸಂದರ್ಶಕನನ್ನೇ ಕಂಗಾಲು ಮಾಡಿದ ಮೋಹನ್ಲಾಲ್
ಮೋಹನ್ಲಾಲ್ ಅವರ ಇತ್ತೀಚಿನ ಸಂದರ್ಶನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರ ಹಾಸ್ಯಮಯ ಉತ್ತರಗಳು ಸಂದರ್ಶಕರನ್ನು ಮತ್ತು ಪ್ರೇಕ್ಷಕರನ್ನು ಕಂಗಾಲು ಮಾಡಿವೆ. "ಲುಸಿಫರ್ 2" ಚಿತ್ರದ ಪ್ರಚಾರದ ಸಂದರ್ಭದಲ್ಲಿ ನಡೆದ ಈ ಸಂದರ್ಶನದಲ್ಲಿ, ತಮಿಳು ನಟಿಯರ ಬಗ್ಗೆ ಮತ್ತು ಶಾರುಖ್ ಖಾನ್ ಅವರೊಂದಿಗೆ ಚಿತ್ರೀಕರಿಸಿದ ದೃಶ್ಯದ ಬಗ್ಗೆ ಅವರ ಉತ್ತರಗಳು ವಿಶೇಷವಾಗಿ ಗಮನ ಸೆಳೆದಿವೆ.

ಸಾಮಾನ್ಯವಾಗಿ ಸಂದರ್ಶನಗಳಲ್ಲಿ ಕಲಾವಿದರು ಹಾಗೂ ತಂತ್ರಜ್ಞರು ಪ್ರೊಫೆಷನಲ್ ಆಗಿ ಉತ್ತರ ನೀಡುತ್ತಾರೆ. ಹಾಸ್ಯ ರೀತಿಯ ಉತ್ತರಗಳಿಂದ ಟ್ರೋಲ್ ಆಗಿ ಸಿನಿಮಾಗಳಿಗೆ ಹಿನ್ನಡೆ ಆಗಿಬಿಟ್ಟರೆ ಎನ್ನುವ ಭಯ ಇರುತ್ತದೆ. ಆದರೆ, ಮಲಯಾಳಂ ನಟ ಮೋಹನ್ಲಾಲ್ (Mohan Lal) ಅವರು ಆ ರೀತಿ ಅಲ್ಲವೇ ಅಲ್ಲ. ಅವರು ಇತ್ತೀಚಿಗಿನ ಸಂದರ್ಶನ ಒಂದರಲ್ಲಿ ಸಾಕಷ್ಟು ಫನ್ ಆಗಿ ಉತ್ತರಿಸಿದ್ದಾರೆ. ಮೋಹನ್ಲಾಲ್ ಉತ್ತರಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಸಂದರ್ಶಕನೂ ಒಮ್ಮೆ ಶಾಕ್ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಲುಸಿಫರ್’ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರಕ್ಕೆ ಪೃಥ್ವಿರಾಜ್ ಸುಕುಮಾರನ್ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಮೋಹನ್ಲಾಲ್ ನಟಿಸಿದ್ದರು. ಈಗ ಚಿತ್ರಕ್ಕೆ ಸೀಕ್ವೆಲ್ ಬಂದಿದೆ. ಈ ಚಿತ್ರವನ್ನು ಪೃಥ್ವಿರಾಜ್ ಅವರೇ ನಿರ್ದೇಶನ ಮಾಡಿದ್ದಾರೆ. ಮತ್ತಷ್ಟು ರಗಡ್ ಆಗಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರಕ್ಕಾಗಿ ಪೃಥ್ವಿರಾಜ್ ಹಾಗೂ ಮೋಹನ್ಲಾಲ್ ಸಂದರ್ಶನ ನೀಡುತ್ತಾ ಇದ್ದಾರೆ. ಈ ವೇಳೆ ಕೆಲವು ಫನ್ನಿ ಘಟನೆ ನಡೆದಿದೆ.
View this post on Instagram
ಮೋಹನ್ಲಾಲ್ ಅವರಿಗೆ ‘ತಮಿಳಿನ ಯಾವ ಹೀರೋ ಅಥವಾ ಹೀರೋಯಿನ್ ಇಷ್ಟ’ ಎಂದು ಕೇಳಲಾಯಿತು. ಇದಕ್ಕೆ ಮೋಹನ್ಲಾಲ್ ಅವರು ಹೀರೋಯಿನ್ ಇಷ್ಟ ಎಂದು ಹೇಳಿದ್ದಾರೆ. ಇದನ್ನು ಕೇಳಿ ಸಂದರ್ಶನ ಮಾಡುತ್ತಿರುವ ವ್ಯಕ್ತಿ ಕೂಡ ಒಮ್ಮೆ ದಂಗಾದರು. ಆ ಬಳಿಕ ಇದು ಕಾಮಿಡಿಗೆ ಹೇಳಿದ್ದು ಎನ್ನುವ ವಿಚಾರ ತಿಳಿದು ಹೊಟ್ಟೆ ಹುಣ್ಣಾಗುವಂತೆ ನಕ್ಕರು. ‘ಬೇರೆ ಲೆವೆಲ್ ಉತ್ತರ’ ಎಂದರು ಸಂದರ್ಶಕ.
ಇದನ್ನೂ ಓದಿ: ಮೋಹನ್ಲಾಲ್ ಜೊತೆ ಊಟ ಸವಿದ ರಾಗಿಣಿ ದ್ವಿವೇದಿ; ಕಾದಿದೆ ಸರ್ಪ್ರೈಸ್
‘ನಿಮ್ಮ ಇಷ್ಟದ ಹಾಬಿ’- ‘ಈ ರೀತಿ ಸಂದರ್ಶನ ನೀಡೋದು ’ ಎಂದು ಮೋಹನ್ಲಾಲ್ ಹೇಳಿದ್ದಾರೆ. ‘ಮುಂದಿನ ಪ್ರಶ್ನೆ’ ಎಂದು ಹೇಳಿದಾಗ ‘ಇದು ಪ್ರಶ್ನೆಯೇ’ ಮೋಹನ್ಲಾಲ್ ಮರು ಪ್ರಶ್ನೆ ಮಾಡಿದ್ದಾರೆ. ‘ನಿಮ್ಮ ಸಿನಿಮಾದಲ್ಲಿ ಶಾರುಖ್ ಖಾನ್ನಲ್ಲಿ ನಟಿಸಿದ್ದಾರಂತೆ ಹೌದೇ’ ಎಂದು ಕೇಳಲಾಯಿತು. ‘ಹೌದು ಶಾರುಖ್ ಖಾನ್ ಅವರು ನಟಿಸಿದ್ದರು. ಆದರೆ, ಪೃಥ್ವಿರಾಜ್ ಆ ದೃಶ್ಯವನ್ನು ಕತ್ತರಿಸಿದ್ದಾರೆ’ ಎಂದು ಫನ್ ಆಗಿ ಉತ್ತರ ನೀಡಿದ್ದಾರೆ. ಈ ವಿಡಿಯೋನ ಫ್ಯಾನ್ ಪೇಜ್ಗಳಲ್ಲಿ ವೈರಲ್ ಮಾಡಲಾಗುತ್ತಿದೆ. ‘ಲುಸಿಫರ್ 2’ ಚಿತ್ರ ಮಾರ್ಚ್ 27ರಂದು ಥಿಯೇಟರ್ನಲ್ಲಿ ಬಿಡುಗಡೆ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:59 am, Wed, 26 March 25