Niharika Konidela: ನಿಹಾರಿಕಾ ಕೊನಿಡೆಲಾ ಡಿವೋರ್ಸ್ ಸುದ್ದಿಗೆ ಸಿಕ್ತು ಮತ್ತೊಂದು ಸಾಕ್ಷಿ; ಫೋಟೋ ನೋಡಿದ ಬಳಿಕ ಹೆಚ್ಚಿತು ಗುಮಾನಿ
Varun Tej | Lavanya Tripathi: ನಿಹಾರಿಕಾ ಕೊನಿಡೆಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಂಚಿಕೊಂಡ ಫೋಟೋದಲ್ಲಿ ಪತಿ ಚೈತನ್ಯ ಕಾಣಿಸದೇ ಇರುವುದು ಹೆಚ್ಚಿನ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳಾದ ಲಾವಣ್ಯ ತ್ರಿಪಾಠಿ (Lavanya Tripathi) ಮತ್ತು ವರುಣ್ ತೇಜ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರಿಬ್ಬರೂ ಸೇರಿ ಟಾಲಿವುಡ್ ಸೆಲೆಬ್ರಿಟಿಗಳಿಗಾಗಿ ಅದ್ದೂರಿಯಾಗಿ ಔತಣಕೂಟ ಏರ್ಪಡಿಸಿದ್ದಾರೆ. ಇದರಲ್ಲಿ ಅನೇಕ ನಟ-ನಟಿಯರು, ತಂತ್ರಜ್ಞರು ಆಗಮಿಸಿ ಎಂಜಾಯ್ ಮಾಡಿದ್ದಾರೆ. ಈ ಪಾರ್ಟಿಗೆ ನಟಿ ನಿಹಾರಿಕಾ ಕೊನಿಡೆಲಾ (Niharika Konidela) ಕೂಡ ಹಾಜರಿ ಹಾಕಿದ್ದರು. ಆ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳಲ್ಲಿ ನಿಹಾರಿಕಾ ಅವರ ಪತಿ ಚೈತನ್ಯ ಜೊನ್ನಲಗಡ್ಡ (Chaitanya Jonnalagadda) ಕಾಣಿಸಿಕೊಂಡಿಲ್ಲ. ನಿಹಾರಿಕಾ ಹಾಗೂ ಚೈತನ್ಯ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಲೇ ಇತ್ತು. ಈಗ ಈ ಫೋಟೋಗಳನ್ನು ನೋಡಿದ ಬಳಿಕ ಅಭಿಮಾನಿಗಳಲ್ಲಿ ಗುಮಾನಿ ಹೆಚ್ಚಿದೆ.
ನಿಹಾರಿಕಾ ಕೊನಿಡೆಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಂಚಿಕೊಂಡ ಫೋಟೋದಲ್ಲಿ ಚೈತನ್ಯ ಮಿಸ್ಸಿಂಗ್ ಆಗಿರುವುದು ಹೆಚ್ಚಿನ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇವರಿಬ್ಬರು ಜೊತೆಯಾಗಿ ಬಾಳುತ್ತಿಲ್ಲ ಎಂಬ ಗಾಸಿಪ್ಗೆ ಸಾಕ್ಷಿ ಸಿಕ್ಕಂತೆ ಆಗಿದೆ. ಶೀಘ್ರದಲ್ಲೇ ಇಬ್ಬರ ಡಿವೋರ್ಸ್ ವಿಷಯ ಖಚಿತ ಆಗಲಿದೆ ಎಂಬ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.
View this post on Instagram
‘ಮೆಗಾ ಸ್ಟಾರ್’ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಅವರ ಪುತ್ರಿಯಾದ ನಿಹಾರಿಕಾ ಅವರು 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆದರೆ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಒಂದಷ್ಟು ದಿನಗಳ ಹಿಂದೆ ಪತಿ ಜೊನ್ನಲಗಡ್ಡ ವೆಂಕಟ ಚೈತನ್ಯ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ನಿಹಾರಿಕಾ ಅನ್ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಗಂಡನಿಗೆ ಸಂಬಂಧಿಸಿದ ಎಲ್ಲ ಫೋಟೋಗಳನ್ನೂ ಡಿಲೀಟ್ ಮಾಡಿದ್ದಾರೆ. ವೆಂಕಟ ಚೈತನ್ಯ ಅವರು ನಿಹಾರಿಕಾರನ್ನು ಅನ್ಫಾಲೋ ಮಾಡಿ ಬಹಳ ದಿನ ಕಳೆದಿದೆ. ಮದುವೆ ಹಾಗೂ ಎಂಗೇಜ್ಮೆಂಟ್ ಫೋಟೋಗಳನ್ನೂ ಅವರು ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ: ‘ಬೆಡ್ನಲ್ಲಿ ರೋಷನ್, ಮನಸ್ಸಲ್ಲಿ ಭಾರ್ಗವ್’; ವೈರಲ್ ಆಯ್ತು ನಿಹಾರಿಕಾ ಕೊನಿಡೆಲಾ ಡೈಲಾಗ್
ತೆಲುಗು ಚಿತ್ರರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ನಿಹಾರಿಕಾ ಕೊನಿಡೆಲಾ ಅವರು ತೊಡಗಿಕೊಂಡಿದ್ದಾರೆ. ‘ಒಕ ಮನಸು’, ‘ಸೂರ್ಯಕಾಂತಂ’, ‘ಹ್ಯಾಪಿ ವೆಡ್ಡಿಂಗ್’ ಮುಂತಾದ ಸಿನಿಮಾಗಳಲ್ಲಿ ಅವರ ನಟಿಸಿದ್ದಾರೆ. 2015ರಲ್ಲಿ ಅವರು ‘ಪಿಂಕ್ ಎಲಿಫೆಂಟ್ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದರು. ಇದರ ಹೊಸ ಕಚೇರಿಯನ್ನು ಅವರು ಇತ್ತೀಚೆಗೆ ತೆರೆದಿದ್ದಾರೆ. ನಟಿಯಾಗಿ ಅವರು ಕಮ್ಬ್ಯಾಕ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.
‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರು ಮುಖ್ಯವಾದೊಂದು ಪಾತ್ರ ಮಾಡುತ್ತಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಸಾಯಿ ಪಲ್ಲವಿ ಬಣ್ಣ ಹಚ್ಚುತ್ತಾರೆ ಎಂದು ಈ ಮೊದಲು ಗಾಸಿಪ್ ಹಬ್ಬಿತ್ತು. ಆದರೆ ಆ ಪಾತ್ರ ಮಾಡಲು ಸಾಯಿ ಪಲ್ಲವಿ ಅವರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಈಗ ಅದೇ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.