AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್​​ನಲ್ಲಿ ನೋಡೋಕೆ ಒಂದೊಳ್ಳೆಯ ಕನ್ನಡ ವೆಬ್ ಸೀರಿಸ್; ಪ್ರತಿ ಹಂತದಲ್ಲೂ ಸಸ್ಪೆನ್ಸ್

ಜೀ5 ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಹೊಸ ಕನ್ನಡ ವೆಬ್ ಸೀರಿಸ್ ಒಂದು ಥ್ರಿಲ್ಲಿಂಗ್ ಮತ್ತು ಸಸ್ಪೆನ್ಸ್ ತುಂಬಿದ ಕಥೆಯನ್ನು ಹೊಂದಿದೆ. ಆರು ಸಣ್ಣ ಎಪಿಸೋಡ್‌ಗಳನ್ನು ಒಳಗೊಂಡಿರುವ ಈ ಸರಣಿಯಲ್ಲಿ, ವಿವಾಹವಾದ ನಾಯಕಿ ಆ ಮನೆಯಲ್ಲಿ ಅನುಭವಿಸುವ ವಿಚಿತ್ರ ಘಟನೆಗಳು ಕಥೆಯನ್ನು ಮುನ್ನಡೆಸುತ್ತದೆ. ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಸರಣಿ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.

ವೀಕೆಂಡ್​​ನಲ್ಲಿ ನೋಡೋಕೆ ಒಂದೊಳ್ಳೆಯ ಕನ್ನಡ ವೆಬ್ ಸೀರಿಸ್; ಪ್ರತಿ ಹಂತದಲ್ಲೂ ಸಸ್ಪೆನ್ಸ್
ಕನ್ನಡ ವೆಬ್ ಸರಣಿ
ರಾಜೇಶ್ ದುಗ್ಗುಮನೆ
|

Updated on:Apr 25, 2025 | 2:49 PM

Share

ವೀಕೆಂಡ್​ನಲ್ಲಿ ವೆಬ್ ಸೀರಿಸ್ ಅಥವಾ ಸಿನಿಮಾ ಸಿಕ್ಕರೆ ಟೈಮ್​ಪಾಸ್​ ಆಗುತ್ತದೆ. ಸಂಜೆ ಮೇಲೆ ಹೇಗೂ ಐಪಿಎಲ್ ಇರುತ್ತದೆ. ಬೆಳಿಗ್ಗೆ/ಮಧ್ಯಾಹ್ನವನ್ನು ದೂಡೋಕೆ ಒಂದೊಳ್ಳೆಯ ಸಿನಿಮಾ ಅಥವಾ ಸೀರಿಸ್ ಸಿಕ್ಕರೆ ಸಾಕು ಎಂದು ಕಾಯುತ್ತಾ ಕೂತವರಿಗೆ ಒಂದು ಸಿಹಿ ಸುದ್ದಿ. ಜೀ5 ಒಟಿಟಿಯಲ್ಲಿ ಈಗ ವೆಬ್ ಸೀರಿಸ್ (Web Series) ಒಂದು ಬಿಡುಗಡೆ ಕಂಡಿದೆ. ಈ ವೆಬ್ ಸೀರಿಸ್ ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್​ನಿಂದ ಕೂಡಿದೆ. ಇದನ್ನು ನೀವು ವೀಕೆಂಡ್​ ವಾಚ್​ಲಿಸ್ಟ್​ನಲ್ಲಿ ಇಟ್ಟುಕೊಳ್ಳಬಹುದು.

ಹಲವು ಹಿಟ್ ಧಾರಾವಾಹಿಗಳನ್ನು ನಿರ್ಮಿಸಿದ ಅನುಭವ ಇರುವ ಶ್ರುತಿ ನಾಯ್ಡು ನಿರ್ಮಾಣದಲ್ಲಿ ‘ಅಯ್ಯನ ಮನೆ’ ಸರಣಿ ಮೂಡಿ ಬಂದಿದೆ. ಇದು ವೆಬ್ ಸರಣಿ ಎನ್ನುವುದಕ್ಕಿಂತ ಮಿನಿ ವೆಬ್ ಸರಣಿ ಎನ್ನಬಹುದು. ಏಕೆಂದರೆ ಇದರಲ್ಲಿ ಇರೋದು ಕೇವಲ ಆರು ಎಪಿಸೋಡ್​ಗಳು ಮಾತ್ರ. ಅವೆಲ್ಲವೂ 18-20 ನಿಮಿಷಗಳ ಅಂತರ ಹೊಂದಿರುವವು. ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಈ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿನಿಂದ (ಏಪ್ರಿಲ್ 25) ಈ ಸರಣಿ ಜೀ5ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

ಇದನ್ನೂ ಓದಿ
Image
ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಹಣ ಎಷ್ಟು?
Image
ನಟಿಯಾಗೋ ಪ್ಲ್ಯಾನ್ ಇರಲಿಲ್ಲ; ರಚಿತಾ ನಟಿ​ ಆಗಿರದಿದ್ದರೆ ಏನಾಗಿರುತ್ತಿದ್ದರು
Image
ಕಾರ್ತಿಕ್ ಖಾತೆಯಿಂದ ಫೋಟೋ ಕದ್ದು ಪೋಸ್ಟರ್ ಮಾಡಿದ ಕರಣ್ ಜೋಹರ್
Image
‘ಕೆಜಿಎಫ್ 2’ ಜೋಡಿನ ಬಾಲಿವುಡ್​ನಲ್ಲಿ ಒಟ್ಟಿಗೆ ತರಲು ನಡೆದಿತ್ತು ಪ್ಲ್ಯಾನ್

ವೆಬ್ ಸೀರಿಸ್​ಗಳನ್ನು ಜನರು ಹೆಚ್ಚೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ಸಸ್ಪೆನ್ಸ್ ಥ್ರಿಲ್ಲರ್ ವಿಚಾರಗಳು ಇದ್ದರೆ ಜನರಿಗೆ ಮತ್ತಷ್ಟು ಇಷ್ಟ ಆಗುತ್ತದೆ. ‘ಅಯ್ಯನ ಮನೆ’ ಕೂಡ ಇಂಥದ್ದೇ ಕಥಾ ಹಂದರವನ್ನು ಹೊಂದಿದೆ. ವಿವಾಹ ಆಗಿ ಬರುವ ಕಥಾ ನಾಯಕಿ ಆ ಮನೆಯಲ್ಲಿ ಸಾಕಷ್ಟು ವಿಚಿತ್ರಗಳನ್ನು ಅನುಭವಿಸುತ್ತಾಳೆ. ಇದರ ಜಾಡು ಹಿಡಿದು ಹೋಗುವಾಗ ಕಥೆ ತೆರೆದುಕೊಳ್ಳುತ್ತದೆ. ರಮೇಶ್ ಇಂದಿರಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಜೀ5ನಲ್ಲಿ ಬರ್ತಿದೆ ಕನ್ನಡ ಮಿನಿ ಸೀಸನ್; ‘ಅಯ್ಯನ ಮನೆ’ ಹೆಸರಿನ ಹೊಸ ಪ್ರಯತ್ನ

ಈ ಸೀರಿಸ್ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ. ‘ನಿರೂಪಣೆ ಗ್ರಿಪ್ಪಿಂಗ್ ಆಗಿದೆ’, ‘ನೋಡಲೇ ಬೇಕಾದ ಸೀರಿಸ್’ ಎಂಬಿತ್ಯಾದಿ ಪಾಸಿಟಿವ್ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಈ ಸರಣಿಯಲ್ಲಿ ಕರ್ನಾಟಕದ ಸಂಸ್ಕೃತಿಯ ಅನಾವರಣ ಕೂಡ ಆಗಿದೆ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:46 pm, Fri, 25 April 25

Follow Us
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ
ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ
ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ
ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ
ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಅಯೋಧ್ಯೆಯಲ್ಲಿ ಬಂದೂಕು ತೋರಿಸಿ ಆಭರಣದಂಗಡಿ ದೋಚಿದ ಬುರ್ಖಾಧಾರಿ ಮಹಿಳೆ
ಅಯೋಧ್ಯೆಯಲ್ಲಿ ಬಂದೂಕು ತೋರಿಸಿ ಆಭರಣದಂಗಡಿ ದೋಚಿದ ಬುರ್ಖಾಧಾರಿ ಮಹಿಳೆ
ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್
ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್
ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್
ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ